ವಿಂಡೋಸ್‌ 8 ಚಾಲಿತ ಸೋನಿ ಅಲ್ಟ್ರಾಬುಕ್‌ ಬಿಡುಗಡೆ

Posted By: Vijeth

ವಿಂಡೋಸ್‌ 8 ಚಾಲಿತ ಸೋನಿ ಅಲ್ಟ್ರಾಬುಕ್‌ ಬಿಡುಗಡೆ

ಮೈಕ್ರೋಸಾಫ್ಟ್‌ನ ನೂತನ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಮಾರುಕಟ್ಟೆಗೆ ಬಿಡುಗಡೆಯಾಗುವ ದಿನ ಸಮೀಪಿಸುತ್ತಿದಂತೆಯೇ ತಾಂತ್ರಿಕ ಉಪಕರಣಗಳ ತಯಾರಕರುಗಳು ಒಂದರ ನಂತರ ಒಂದರಂತೆ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂಗೆ ಸಹಕರಿಸಬಲ್ಲ ನೂತನ ಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದ್ದಾರೆ, ಆಂದಹಾಗೆ ಈ ಸಾಲಿಗೆ ಸೋನಿ ಕೆಲ ದಿನಗಳ ಹಿಂದೆಯಷ್ಟೇ ನೂತನ ವಯೋ ಅಲ್ಟ್ರಾಬುಕ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸೋನಿ ಸಂಸ್ಥೆಯ ನೂತನ ಅಲ್ಟ್ರಾ ಬುಕ್‌ 11.6-,14- ಹಾಗೂ 15.5-ಇಂಚಿನ ಮಾದರಿಗಳಲ್ಲಿ ಲಭ್ಯವಿದೆ. ಹಾಗೂ ನೂತನ ಅಲ್ಟ್ರಾ ವಯೋ ಲೋಗೋದೊಂದಿಗೆ ಮಾರುಕಟ್ಟೆಗೆ ಬರಲಿದೆ. 11.6-ಇಂಚಿನ ಮಾದರಿಯು AMD ಪ್ರೊಸೆಸರ್‌, 14-ಇಂಚಿನ ಮಾದರಿಯುಲ್ಲಿ ಸೆಕೆಂಡ್‌ ಗೆನೆರೇಷನ್‌ ಇಂಟೆಲ್‌ ಕೋರ್‌ ಪ್ರೊಸೆಸರ್‌ ಹಾಗೂ 15.5-ಇಂಚಿನ ಮಾದರಿಯು 2 ಜೆನೆರೇಷನ್ ಹಾಗೂ 3 ಜೆನೆರೇಷನ್‌ಇಂಟೆಲ್‌ ಕೋರ್‌ಪ್ರೊಸೆಸರ್‌ ಹೊಂದಿದೆ.

ಮೂರೂ ಮಾದರಿಗಳಲ್ಲಿ AMD ರೇಡಾನ್‌ ಗ್ರಾಫಿಕ್ಸ್‌ ಹೊಂದಿದ್ದು, ಅದೇ ಬಣ್ಣದ ಮ್ಯಾಚಿಂಗ್‌ ಕೀಬೋರ್ಡ್‌ ಹಾಗೂ ಮೌಸ್‌ ಸಹಾ ಪಡೆಯಬಹುದಾಗಿದೆ

ಸೋನಿ ಸಂಸ್ಥೆಯ T ಸೀರೀಸ್‌ನ T13 ಹಾಗೂ T14 ಅಲ್ಟ್ರಾಬುಕ್‌ ಬಿಡುಗಡೆ ಮಾಡಿದೆ. T13 ನಲ್ಲಿ ಟಚ್‌ಸ್ಕ್ರೀನ್‌ ಫ್ಲಾಟ್‌ ದರ್ಶಕ ಹಾಗೂ. T14 ನಲ್ಲಿಯೂ ಕೂಡ ಟಚ್‌ಸ್ಕ್ಋಈನ್‌ ಹೊಂದಿದೆ. ಅಲ್ಲದೆ T13 ನಲ್ಲಿ ಬಿಲ್ಟ್‌ ಇನ್‌ ಬ್ಲೂ ರೇ ಹಾಗೂ ಡಿವಿಡಿ ಪ್ಲೇಯರ್‌ ಹೊಂದಿದೆ.

ಸೋನಿ ವಯೋ E14A ಸೀರೀಸ್‌ ಲ್ಯಾಪ್‌ಟಾಪ್‌ ಹಾಗೂ ವಯೋ ಟಿ ಸೀರೀಸ್‌ ಅಲ್ಟ್ರಾಬುಕ್‌ ರೂ. 74,990 ಹಾಗೂ ರೂ. 64,990 ಬೆಲೆಯಲ್ಲಿ ಲಭ್ಯವಾಗಲಿದೆ. ವಿಂಡೋಸ್‌ 8 ಚಾಲಿತ ವಯೋ ಮಾದರಿಗಳು ಇದೇತಿಂಗಳ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ.

ಒಟ್ಟಾರೆ ಮಾರುಕಟ್ಟೆಗೆ ಈಗಾಗಲೇ ಕಾಲಿರಿಸಿರುವ ಲೆನೋವೋದ ಅಲ್ಟ್ರಾಬುಕ್‌ಗಳಿಗೆ ಸೆಡ್ಡಿ ಹೊಡೆಯಲು ಸೋನಿ ತನ್ನಯ ನೂತ ಅಲ್ಟ್ರಾಬುಕ್‌ಗಳನ್ನು ಬಿಡುಗಡೆ ಮಾಡಿದ್ದು ಯಾವ ರೀತಿ ಪ್ರತಿಕ್ರಿಯೆಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read In English...

HCL ನಿಂದ ಮೊದಲ ಅಲ್ಟ್ರಾಬುಕ್‌ ಬಿಡುಗಡೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot