ಶೀಘ್ರದಲ್ಲೇ ಸೋನಿ ಎಕ್ಸ್‌ಪೀರಿಯಾ L4 ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ನೇಮ್‌ ಪಡೆದುಕೊಂಡಿದ್ದ ಸೋನಿ ಕಂಪೆನಿ ತನ್ನ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಂದ ಗ್ರಾಹಕರ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದೆ. ತನ್ನ ವೈವಿಧ್ಯಮಯ ಫೀಚರ್ಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಆಗಿರುವ ಸೋನಿ ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಿರಲಿಲ್ಲ. ಇದೀಗ ಸೋನಿ ಮತ್ತೆ ಸಿಹಿ ಸುದ್ದಿ ನೀಡಿದ್ದು ಹೊಸ ಮಾದರಿಯ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸಿರುವುದಾಗಿ ಘೋಷಿಸಿದೆ.

ಹೌದು

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಲಯದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಸೋನಿ ಕಂಪೆನಿ ತನ್ನ ಹೊಸ ಎಕ್ಸ್‌ಪೀರಿಯಾ L4 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯನ್ನ ಹೊಂದಿದ್ದು, ಇದು ಎಂಟರ್‌ಟೈನ್‌ಮೆಂಟ್‌ ಡಿವೈಸ್‌ ಆಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ವಿನ್ಯಾಸ ಹೇಗಿರಲಿದೆ ಇದರ ಫೀಚರ್ಸ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ ಮಾದರಿ

ಡಿಸ್‌ಪ್ಲೇ ಮಾದರಿ

ಈ ಸ್ಮಾರ್ಟ್‌ಫೋನ್‌ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗದಿದ್ದರೂ ಈ ಸ್ಮಾರ್ಟ್‌ಫೋನ್‌ ಎಂಟರ್‌ಟೈನ್‌ಮೆಂಟ್‌ ಡಿವೈಸ್‌ ಆಗಿರುವುದರಿಂದ ಇದು 6.2 ಇಂಚಿನ ಡಿಸ್‌ಪ್ಲೇ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಡಿಸ್‌ಪ್ಲೇಯು 21: 9 ಆಸ್ಪೆಕ್ಟ್‌ ರೆಶೀಯೋ ಹೊಂದಿರಲಿದೆ. ಇನ್ನು ಈ ಡಿಸ್‌ಪ್ಲೇ ವಿನ್ಯಾಸ ಉತ್ತಮವಾಗಿದ್ದು ಮೂವೀಸ್‌, ಗೇಮಿಂಗ್‌, ವೀಕ್ಷಣೆಯಲ್ಲಿ ಉತ್ತಮ, ಅನುಭವ ನೀಡಲಿದೆ. ಇನ್ನು ಸೋನಿಯ ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿಂಡೋ ಫೀಚರ್ಸ್‌ ಎಂದರೆ ಎರಡು ಅಪ್ಲಿಕೇಶನ್‌ಗಳನ್ನು ಏಕಕಾಲದಲ್ಲಿ ಓಪನ್‌ ಮಾಡಬಹುದಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂಧು ಹೇಳಲಾಗ್ತಿದೆ. ಅಲ್ಲದೆ ಈ ಸ್ಮಾರ್ಟಫೋನ್‌ 3GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದ್ದು, ಮೆಮೊರಿ ಕಾರ್ಡ್‌ ಮೂಲಕ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ಕಂಪೆನಿ ಇನ್ನು ಬಿಟ್ಟುಕೊಟ್ಟಿಲ್ಲ.

ಕ್ಯಾಮೆರಾ

ಕ್ಯಾಮೆರಾ

ಸೋನಿ ಎಕ್ಸ್‌ಪೀರಿಯಾ L4 ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ರಿಯರ್‌ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ , ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಹಾಗೂ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 3,580mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿರಲಿದ್ದು, ಉತ್ತಮ ವೇಗದ ಚಾರ್ಜಿಂಗ್‌ ಸಾಮರ್ಥ್ಯವನ್ನ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಅನ್ನು ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಇದು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದೆ ಎಂದು ಹೇಳಲಾಗ್ತಿದ್ದು, ಬೆಲೆಯ ಬಗ್ಗೆ ಯಾವುದೇ ಮಾಹಿತಿ ಇನ್ನು ತಿಳಿದು ಬಂದಿಲ್ಲ.

Best Mobiles in India

English summary
Sony has officially launched the budget-friendly Xperia L4 which might actually be an interesting entry into the affordable Android smartphone space.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X