ಸೋನಿಯಿಂದ ಬರಲಿದೆ 4K OLED ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌!

|

ಜಪಾನ್‌ ಮೂಲದ ಟೆಕ್‌ ದೈತ್ಯ ಸೋನಿ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಇದೇ ಫೆಬ್ರವರಿಯಲ್ಲಿ ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ 2020ರ ಸಮ್ಮೆಳನದಲ್ಲಿ ಸೋನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ 4K ರೆಸಲ್ಯೂಶನ್‌ ಹೊಂದಿರುವ ಡಿಸ್‌ಪ್ಲೇ ಹೊಂದಿರಲಿದ್ದು, ಸ್ನಾಪ್‌ ಡ್ರಾಗನ್‌ 865ಎಸ್‌ಒಸಿ ಪ್ರೊಸೆಸರ್‌ ಹೊಂದಿರಲಿದೆ ಎಂದು ಹೇಳಲಾಗ್ತಿದೆ.

ಸ್ಮಾರ್ಟ್‌ಫೋನ್‌

ಹೌದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯಿಂದ ಜನಪ್ರಿಯತೆ ಪಡೆದಿರುವ ಸೋನಿ ಕಂಪೆನಿ, ಇದೀಗ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗೆ ಯಾವುದೇ ಹೆಸರು ಅಂತಿಮ ಗೊಳಿಸಿಲ್ಲವಾದರೂ, ಈ ಸ್ಮಾರ್ಟ್‌ಫೋನ್‌ ಫೆಬ್ರವರಿ 24ರಂದು ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಗೆ ಸಂಬಂಧಿಸಿದ ಮಾಹಿತಿ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ, ಲೀಕ್‌ ಮಾಹಿತಿ ಪ್ರಕಾರ ಸೋನಿಯಾ ಹೊಸ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಡಿಸ್‌ಪ್ಲೇ ಮಾದರಿ

ಡಿಸ್‌ಪ್ಲೇ ಮಾದರಿ

ಸದ್ಯದಲ್ಲೇ ಸೋನಿ ಹೊರತರಲಿರುವ ಹೊಸ ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇಯನ್ನ ಹೊಂದರಿಲಿದ್ದು, 21: 9 ಆಸ್ಪೆಕ್ಟ್‌ ರೇಶಿಯೋ ಹೊಂದಿರಲಿದೆ ಎನ್ನಲಾಗ್ತಿದೆ. ಅಲ್ಲದೆ ಇದು ಒಎಲ್ಇಡಿ ಪ್ಯಾನಲ್ ಹೊಂದಿದ್ದು, ಎಚ್‌ಡಿಆರ್ ಅನ್ನು ಬೆಂಬಲಿಸಲಿದೆ. ಈ ಹೊಸ ಸ್ಮಾರ್ಟ್‌ಫೋನ್‌ 4k ರೆಸಲ್ಯೂಶನ್‌ ಹೊಂದಿರುವ ಡಿಸ್‌ಪ್ಲೆ ಆಗಿರುವುದರಿಂದ ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಸೋನಿ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್‌ ಸ್ನಾಪ್ ಡ್ರಾಗನ್‌ 865 ಎಸ್‌ಒಸಿ ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಸ್ನಾಪ್‌ಡ್ರಾಗನ್ X55 5G ಮೋಡೆಮ್‌ ಹೊಂದಿದ್ದು, ಡ್ಯುಯಲ್-ಮೋಡ್ 5 ಜಿ ನೆಟ್‌ವರ್ಕ್‌ಗಳನ್ನು ಈ ಮೋಡೆಮ್ ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿರಲಿದ್ದು, ಮೊದಲನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಥವಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಮತ್ತು ನಾಲ್ಕನೇ ಕ್ಯಾಮೆರಾ 8ಮೆಗಾ ಪಿಕ್ಸೆಲ್‌ ಡೆಪ್‌ ಸೆನ್ಸಾರ್‌ ಹೊಂದಿರಲಿದ ಎಂದು ನಿರೀಕ್ಷಿಸಲಾಗಿದ್ದು, ಸೆಲ್ಫಿ ಕ್ಯಾಮೆರಾ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇತರೆ

ಇತರೆ

ಸದ್ಯ ಸೋನಿ ಬಿಡುಗಡೆ ಮಾಡಲಿರುವ ಈ ಹೊಸ ಹೈ ಎಂಡ್‌ ಸ್ಮಾರ್ಟ್‌ಫೋನ್‌, ಸ್ನಾಪ್‌ ಡ್ರಾಗನ್‌ 865ಎಸ್‌ಒಸಿ ಪ್ರೊಸೆಸರ್‌ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದ್ದು, ಬ್ಯಾಟರಿ ಪ್ಯಾಕ್‌ಆಪ್‌ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಆದರೆ ಈ ಸ್ಮಾರ್ಟ್‌ಫೋನ್‌ನ ಬೆಲೆ $849 (ಅಂದಾಜು 60,500 ರೂ) ಆಗಿರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
The Sony smartphone will reportedly be the first Snapdragon 865 powered device to feature a 4K display and 5G connectivity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X