Home
ಸುದ್ದಿಜಾಲ

ಸೋನಿಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! 3 ನಿಮಿಷದ ಚಾರ್ಜ್‌ನಲ್ಲಿ 1ಗಂಟೆಯ ಪ್ಲೇಬ್ಯಾಕ್ ಟೈಂ!

ಜನಪ್ರಿಯ ಇಯರ್‌ಬಡ್ಸ್ ಬ್ರ್ಯಾಂಡ್‌ಗಳಲ್ಲಿ ಸೋನಿ ಕಂಪೆನಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಸೋನಿ ಸಂಸ್ಥೆಯ ಇಯರ್‌ಬಡ್ಸ್‌ಗಳು ತಮ್ಮ ಗುಣಮಟ್ಟ ಹಾಗೂ ಟೆಕ್ನಾಲಜಿಯಿಂದಾಗಿ ಟೆಕ್‌ ವಲಯದಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಸಾಧಿಸಿವೆ. ಇದೀಗ ಭಾರತದಲ್ಲಿ ಸೋನಿ WF-1000XM5 TWS ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಹೌದು, ಸೋನಿ WF-1000XM5 TWS ಇಯರ್‌ಬಡ್ ಭಾರತದಲ್ಲಿ ಲಾಂಚ್‌ ಆಗಿದೆ. ಈ ಇಯರ್‌ಬಡ್ಸ್‌ಗಳು ಸೋನಿಯ ಇಂಟಿಗ್ರೇಟೆಡ್ ಪ್ರೊಸೆಸರ್ V2 ಮತ್ತು HD ನಾಯ್ಸ್ ಕ್ಯಾನ್ಸಲಿಂಗ್ ಪ್ರೊಸೆಸರ್ QN2e ಅನ್ನು ಹೊಂದಿವೆ. ಇದಲ್ಲದೆ ಇಯರ್‌ಬಡ್ಸ್‌ಗಳ ಪ್ರತಿ ಇಯರ್‌ಬಡ್ಸ್‌ನಲ್ಲಿಯೂ ಮೂರು ಇನ್‌ಬಿಲ್ಟ್‌ ಮೈಕ್ರೊಫೋನ್‌ಗಳನ್ನು ನೀಡಲಾಗಿದೆ. ಇನ್ನುಳಿದಂತೆ ಈ ಸೋನಿ WF-1000XM5 TWS ಇಯರ್‌ಬಡ್ಸ್‌ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಇಯರ್‌ಬಡ್ಸ್‌ ಲಾಂಚ್‌! 3 ನಿಮಿಷದ ಚಾರ್ಜ್‌ನಲ್ಲಿ 1 ಗಂಟೆಯ ಪ್ಲೇಬ್ಯಾಕ್ ಟೈಂ!

ಸೋನಿ WF-1000XM5 TWS ಇಯರ್‌ಬಡ್ಸ್‌ ಫೀಚರ್ಸ್‌ ಹೇಗಿದೆ?
ಸೋನಿ WF-1000XM5 TWS ಇಯರ್‌ಬಡ್ಸ್‌ ಹಲವು ಅನುಕೂಲಕರ ಫೀಚರ್ಸ್‌ಗಳ ರೇಂಜ್‌ ಅನ್ನು ಹೊಂದಿದೆ. ಇದರಲ್ಲಿ ತಲ್ಲೀನಗೊಳಿಸುವ ಆಲಿಸುವಿಕೆಗಾಗಿ ಹೆಡ್-ಟ್ರ್ಯಾಕಿಂಗ್ ತಂತ್ರಜ್ಞಾನ, ಅಸಾಧಾರಣ ಕರೆ ಗುಣಮಟ್ಟಕ್ಕಾಗಿ AI-ಆಧಾರಿತ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಬಡ್ಸ್‌ಗಳು 25% ಚಿಕ್ಕದಾಗಿದ್ದು, 20% ಹಗುರವಾದ ವಿನ್ಯಾಸವನ್ನು ಪಡೆದುಕೊಂಡಿದೆ.

ಸೋನಿ WF-1000XM5 TWS ಇಯರ್‌ಬಡ್ಸ್‌ ಸೋನಿಯ ಇಂಟಿಗ್ರೇಟೆಡ್ ಪ್ರೊಸೆಸರ್ V2 ಮತ್ತು HD ನಾಯ್ಸ್ ಕ್ಯಾನ್ಸಲಿಂಗ್ ಪ್ರೊಸೆಸರ್ QN2e ಅನ್ನು ಹೊಂದಿದೆ. ಇದರ ವರ್ಧಿತ ಶಬ್ದ ರದ್ದತಿಯು ಅಸಾಧಾರಣ ಅಪ್ಡೇಟ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಉತ್ಕೃಷ್ಟವಾದ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಒದಗಿಸಲು ಈ ಯೂನಿಟ್‌ಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಜೊತೆಗೆ ಆಂಬಿಯೆಂಟ್‌ ನಾಯ್ಸ್‌ನಿಂದ ನಿಮ್ಮ ಆಲಿಸುವ ಅನುಭವವನ್ನು ತೊಂದರೆಯಾಗದಂತೆ ಮಾಡಲಿದೆ.

ಇನ್ನು ಇಯರ್‌ಬಡ್ಸ್‌ನ ಪ್ರತಿ ಬಡ್ಸ್‌ ಕೂಡ ಮೂರು ಇನ್‌ಬಿಲ್ಟ್‌ ಮೈಕ್ರೋಫೋನ್‌ಗಳನ್ನು ಹೊಂದಿದೆ. ಈ ಇನ್‌ಬಿಲ್ಟ್‌ ಮೈಕ್ರೊಫೋನ್‌ಗಳನ್ನು ಬಳಸಿಕೊಂಡು ಲೋ ಫ್ರೀಕ್ವೆನ್ಸಿ ನಾಯ್ಸ್‌ ಅನ್ನು ನಿವಾರಿಸಲಿದೆ. ಇಯರ್‌ಬಡ್ಸ್‌ ಸೋನಿ ಸಂಸ್ಥೆಯ ಹೊಸ ಡೈನಾಮಿಕ್‌ ಡ್ರೈವರ್‌ X ಅನ್ನು ಹೊಂದಿದೆ, ಇದು ಸೌಂಡ್‌ ಕ್ವಾಲಿಟಿಯನ್ನು ಬೂಸ್ಟ್‌ ಮಾಡಲಿದೆ. ಇನ್ನು ಈ ಆಡಿಯೋ ಡ್ರೈವರ್‌ ವೈಡ್‌ ರೇಂಜ್‌ ಫ್ರಿಕ್ವೆನ್ಸಿ, ಡೀಪರ್‌ ಬಾಸ್ ಮತ್ತು ಕ್ಲಿಯರ್‌ ವೋಕಲ್ಸ್‌ ಅನ್ನು ನೀಡಲಿದೆ.

ಇದು LDAC ಮೂಲಕ ಹೈ-ರೆಸಲ್ಯೂಶನ್ ಆಡಿಯೊ ವಾಯರ್‌ಲೆಸ್ ಅನ್ನು ಕೂಡ ಬೆಂಬಲಿಸಲಿದೆ. ಹಾಗೆಯೇ DSEE ಎಕ್ಸ್‌ಟ್ರೀಮ್‌ನೊಂದಿಗೆ ರಿಯಲ್‌-ಟೈಂ ಮ್ಯೂಸಿಕ್‌ ಅನ್ನು ಕೂಡ ಹೆಚ್ಚಿಸಲಿದೆ. ಇದರಲ್ಲಿ ಅಡಾಪ್ಟಿವ್ ಸೌಂಡ್ ಕಂಟ್ರೋಲ್, ಸ್ಪೀಕ್-ಟು-ಚಾಟ್, ಎರಡು ಡಿವೈಸ್‌ಗಳಿಗೆ ಮಲ್ಟಿಪಾಯಿಂಟ್ ಕನೆಕ್ಟಿವಿಟಿ, ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲ ಮತ್ತು 8 ಗಂಟೆಗಳ ಬ್ಯಾಟರಿ ಬಾಳಿಕೆಯಂತಹ ಹೆಚ್ಚುವರಿ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ. ಈ ಫೀಚರ್ಸ್‌ಗಳು ಇಯರ್‌ಬಡ್ಸ್‌ಗಳನ್ನು ಬಹುಮುಖ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುತ್ತದೆ.

ಸೋನಿ WF-1000XM5 TWS ಇಯರ್‌ಬಡ್ಸ್‌ ತ್ವರಿತ 3 ನಿಮಿಷದ ಚಾರ್ಜ್‌ನಲ್ಲಿ ಒಂದು ಗಂಟೆಯ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಇದು IPX4 ರೇಟಿಂಗ್‌ ಪಡೆದಿದ್ದು, ನೀರು ಮತ್ತು ದೂಳಿನಿಂದ ರಕ್ಷಣೆ ನಿಡಲಿದೆ. ಜೊತೆಗೆ Qi ವೈರ್‌ಲೆಸ್ ಚಾರ್ಜಿಂಗ್ ಹೊಂದಾಣಿಕೆಯೊಂದಿಗೆ ಸಹ ಬರುತ್ತವೆ.

ಬೆಲೆ ಮತ್ತು ಲಭ್ಯತೆ
ಸೋನಿ WF-1000XM5 ಇಯರ್‌ಬಡ್ಸ್‌ ಭಾರತದಲ್ಲಿ 24,990ರೂ. ಬೆಲೆಗೆ ಲಭ್ಯವಾಗಲಿದೆ. ಇದು ಕಪ್ಪು ಮತ್ತು ಪ್ಲಾಟಿನಂ ಬೆಳ್ಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದನ್ನು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 15 ರವರೆಗೆ ಪ್ರಿ ಬುಕಿಂಗ್‌ ಮಾಡುವುದಕ್ಕೆ ಅವಕಾಶವಿದೆ. ಪ್ರಿ ಬುಕಿಂಗ್‌ ಮಾಡಿದವರು ಇದನ್ನು ರಿಯಾಯಿತಿ ದರದಲ್ಲಿ ಕೇವಲ 21,990ರೂ.ಗಳಿಗೆ ಖರೀದಿಸಬಹುದಾಗಿದೆ. ಅಂದರೆ ಬರೋಬ್ಬರಿ 3,000ರೂ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ.

Best Mobiles in India

English summary
Sony WF-1000XM5 earbuds launched in India: Specs and Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+