Home
ಸುದ್ದಿಜಾಲ

ಸೋನಿ ಸಂಸ್ಥೆಯಿಂದ ಹೊಸ ಇಯರ್‌ಫೋನ್‌ ಲಾಂಚ್‌! ವಾವ್ಹ್‌ ಎನಿಸುವ ಫೀಚರ್ಸ್‌!

ಸೋನಿ ಕಂಪೆನಿಯ ಡಿವೈಸ್‌ಗಳೆಂದರೆ ಗುಣಮಟ್ಟಕ್ಕೆ ಹೆಸರುವಾಸಿ. ಅದರಲ್ಲೂ ಸೋನಿ ಸಂಸ್ಥೆಯ ಇಯರ್‌ಫೋನ್‌ಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿಯ ಇಯರ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಸದ್ಯ ಇದೀಗ ಸೋನಿ ಕಂಪೆನಿ ಮತ್ತೊಂದು ಹೊಸ ಸೋನಿ WF-1000XM5 ಇಯರ್‌ಫೋನ್‌ ಬಿಡುಗಡೆ ಮಾಡಿದೆ.

ಹೌದು, ಸೋನಿ WF-1000XM5 ಇಯರ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಇಯರ್‌ಫೋನ್‌ ಸಾಕಷ್ಟು ಹೊಸ ಮಾದರಿಯ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಅದರಂತೆ ಇದು ಇಂಟಿಗ್ರೇಟೆಡ್ ಪ್ರೊಸೆಸರ್ V2 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ನಾಯ್ಸ್‌ ಕ್ಯಾನ್ಸಲೇಶನ್‌ QN2e ಪ್ರೊಸೆಸರ್‌ನೊಂದಿಗೆ ಜೋಡಿಯಾಗಿದೆ. ಇನ್ನುಳಿದಂತೆ ಈ ಹೊಸ ಇಯರ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಸಂಸ್ಥೆಯಿಂದ ಹೊಸ ಇಯರ್‌ಫೋನ್‌ ಲಾಂಚ್‌! ವಾವ್ಹ್‌ ಎನಿಸುವ ಫೀಚರ್ಸ್‌!

ಸೋನಿ WF-1000XM5 ಇಯರ್‌ಫೋನ್‌ ಫೀಚರ್ಸ್‌ ಹೇಗಿದೆ?
ಸೋನಿ WF-1000XM5 ಇಯರ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಬೆಂಬಲವನ್ನು ಹೊಂದಿದೆ. ಇದು ಹೊಸ ಡೈನಾಮಿಕ್ ಡ್ರೈವರ್ X ಅನ್ನು ಒಳಗೊಂಡಿದ್ದು, ಸುಧಾರಿತ ಕರೆ ಗುಣಮಟ್ಟಕ್ಕಾಗಿ ಡೀಪ್‌ ನ್ಯೂರಲ್ ನೆಟ್‌ವರ್ಕ್ (DNN) ಪ್ರಕ್ರಿಯೆಗೆ ಬೆಂಬಲವನ್ನು ನಿಡಲಿದೆ. ಇದರಲ್ಲಿ ಕಿವಿಯೋಲೆಗಳು ನಾಲ್ಕು ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಇವುಗಳು ಪಾಲಿಯುರೆಥೇನ್ ಫೋಮ್ ವಸ್ತುಗಳಿಂದ ಮಾಡಲ್ಪಟ್ಟಿದೆ.

ಇನ್ನು ಈ ಹೊಸ ಇಯರ್‌ಫೋನ್‌ಗಳು ಸೋನಿಯ ಇಂಟಿಗ್ರೇಟೆಡ್ ಪ್ರೊಸೆಸರ್ V2 ಚಿಪ್ ಅನ್ನು ಒಳಗೊಂಡಿದೆ. ಇದಲ್ಲದೆ ಸುಧಾರಿತ ANC ಕಾರ್ಯಕ್ಷಮತೆಗಾಗಿ QN2e ಪ್ರೊಸೆಸರ್‌ಗಳನ್ನು ಅಳವಡಿಸಲಾಗಿದೆ. ಈ ಇಯರ್‌ಫೋನ್‌ಗಳು ಕಂಪನಿಯ ಡೈನಾಮಿಕ್ ಡ್ರೈವರ್ ಎಕ್ಸ್‌ನೊಂದಿಗೆ ಬರಲಿದ್ದು, 24-ಬಿಟ್ ಆಡಿಯೊ ಪ್ರೊಸೆಸಿಂಗ್, DSEE ಎಕ್ಸ್‌ಟ್ರೀಮ್ ಅಪ್‌ಸ್ಕೇಲಿಂಗ್ ಟೆಕ್ನಾಲಜಿಯನ್ನು ನೀಡಲಿವೆ. ಹಾಗೆಯೇ SBC ಮತ್ತು AAC ಆಡಿಯೊ ಕೊಡೆಕ್‌ಗಳ ಜೊತೆಗೆ, ಸೋನಿಯ LDAC ಕೊಡೆಕ್ ಅನ್ನು ಸಹ ಬೆಂಬಲಿಸುತ್ತದೆ.

ಸೋನಿ ಕಂಪೆನಿ ಹೇಳಿರುವಂತೆ ಈ ಇಯರ್‌ಫೋನ್‌ಗಳು ಸ್ಪೀಕ್ ಟು ಚಾಟ್, ಅಡಾಪ್ಟಿವ್ ಸೌಂಡ್ ಕಂಟ್ರೋಲ್, ಮಲ್ಟಿಪಾಯಿಂಟ್ ಕನೆಕ್ಟ್, ಫಾಸ್ಟ್ ಪೇರ್, ಬ್ಲೂಟೂತ್ 5.3 ಮತ್ತು ಗೂಗಲ್ ಮತ್ತು ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನು ಒಳಗೊಂಡಿವೆ. ಇನ್ನು ಇಯರ್‌ಫೋನ್‌ಗಳು ಸಾಮಾನ್ಯ ಬಳಕೆಯಲ್ಲಿ 12 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದ್ದು, ANC ಸಕ್ರಿಯಗೊಳಿಸಿದಾಗ 8 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ ಎನ್ನಲಾಗಿದೆ. ಇವುಗಳನ್ನು ನೀವು ಯುಎಸ್‌ಬಿ ಟೈಪ್-ಸಿ ಕೇಬಲ್ ಅಥವಾ ವೈರ್‌ಲೆಸ್ ಮೂಲಕ ಚಾರ್ಜ್ ಮಾಡಬಹುದಾಗಿದೆ.

ಇನ್ನು ಈ ಇಯರ್‌ಫೋನ್‌ ನೀರು ಮತ್ತು ದೂಳಿನಿಂದ ರಕ್ಷಣೆ ನೀಡುವುದಕ್ಕಾಗಿ IPX4 ರೇಟಿಂಗ್ ಅನ್ನು ಹೊಂದಿದೆ. ಇದರಿಂದ ನೀವು ಇಯರ್‌ಫೋನ್‌ ಅನ್ನು ಪ್ರತಿ ಸಮಯದಲ್ಲಿಯೂ ಕೂಡ ಬಳಸಬಹುದಾಗಿದೆ. ಇನ್ನು ಇದರ ಚಾರ್ಜಿಂಗ್ ಕೇಸ್ 64.6 x 40.0 x 26.5 mm ಮತ್ತು 39g ತೂಕವನ್ನು ಹೊಂದಿರುವುದು ವಿಶೇಷವಾಗಿದೆ.

ಸೋನಿ WF-1000XM5 ಬೆಲೆ ಮತ್ತು ಲಭ್ಯತೆ
ಸೋನಿ WF-1000XM5 ಇಯರ್‌ಫೋನ್‌ ಪ್ರಸ್ತುತ $299 (ಸುಮಾರು 24,447ರೂ)ಬೆಲೆಯನ್ನು ಹೊಂದಿದೆ. ಇದನ್ನು ನೀವು ಸೋನಿ US ಆನ್‌ಲೈನ್ ಸ್ಟೋರ್‌ನಲ್ಲಿ ಕಪ್ಪು ಮತ್ತು ಬೆಳ್ಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಇನ್ನು ಇತ್ತೀಚಿಗೆ ಸೋನಿ ಕಂಪೆನಿ ಭಾರತದಲ್ಲಿ ಹೊಸದಾಗಿ ಸೋನಿ WF-C700N ಇಯರ್‌ಫೋನ್‌ ಬಿಡುಗಡೆ ಮಾಡಿದೆ. ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌(ANC) ಮತ್ತು ಆಂಬಿಯೆಂಟ್ ಸೌಂಡ್ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಡಿವೈಸ್‌ನ ಕಂಟ್ರೋಲ್‌ಗಳನ್ನು ಬಳಸಿಕೊಂಡು ಟಾಗಲ್ ಮಾಡುವುದಕ್ಕೆ ಕೂಡ ಅವಕಾಶ ನೀಡಲಿದೆ.

Best Mobiles in India

English summary
Sony WF-1000XM5 TWS Earbuds Launched: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+