ಭಾರತದಲ್ಲಿ ಸೋನಿ WF-C700N ಇಯರ್‌ಫೋನ್ ಬಿಡುಗಡೆ! ಇದರ ಗುಣಮಟ್ಟಕ್ಕೆ ಸರಿಸಾಟಿಯಿಲ್ಲ!
ಇಯರ್‌ಫೋನ್ ಖರೀದಿಸಬೇಕೆಂದುಕೊಂಡವರಿಗೆ ಮೊದಲು ನೆನಪಿಗೆ ಬರೋದೇ ಸೋನಿ ಬ್ರ್ಯಾಂಡ್. ಸೋನಿ ಕಂಪೆನಿಯ ಇಯರ್‌ಫೋನ್‌ಗಳೆಂದರೆ ಗುಣಮಟ್ಟ ಹಾಗೂ ಸ್ಪಷ್ಟತೆಗೆ ಪ್ರಸಿದ್ಧಿ ಪಡೆದುಕೊಂಡಿವೆ. ಇದಕ್ಕೆ ಅನುಗುಣವಾಗಿ ಸೋನಿ ಕಂಪೆನಿ ಮತ್ತೊಂದು ಹೊಸ ಸೋನಿ WF-C700N ಟ್ರೂಲಿ ವಾಯರ್‌ಲೆಸ್ ಸ್ಟಿರಿಯೊ ಇಯರ್‌ಫೋನ್ ಲಾಂಚ್ ಮಾಡಿದೆ.
ಹೌದು, ಭಾರತದಲ್ಲಿ ಸೋನಿ WF-C700N ಇಯರ್‌ಫೋನ್ ಬಿಡುಗಡೆಯಾಗಿದೆ. ಇದು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್(ANC) ಮತ್ತು ಆಂಬಿಯೆಂಟ್ ಸೌಂಡ್ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಡಿವೈಸ್‌ನ ಕಂಟ್ರೋಲ್‌ಗಳನ್ನು ಬಳಸಿಕೊಂಡು ಟಾಗಲ್ ಮಾಡುವುದಕ್ಕೆ ಕೂಡ ಅವಕಾಶ ನೀಡಲಿದೆ. ಇನ್ನುಳಿದಂತೆ ಈ ಹೊಸ ಇಯರ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ WF-C700N ಇಯರ್‌ಫೋನ್ ಫೀಚರ್ಸ್ ಹೇಗಿದೆ?
ಸೋನಿ WF-C700N ಇಯರ್‌ಫೋನ್ 5mm ಆಡಿಯೋ ಡ್ರೈವರ್ ಅನ್ನು ಹೊಂದಿದೆ. ಇದು ANC ಮತ್ತು ಆಂಬಿಯೆಂಟ್ ಸೌಂಡ್ ಮೋಡ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ಇಯರ್‌ಫೋನ್ 360 ರಿಯಾಲಿಟಿ ಆಡಿಯೋ ಪ್ರಮಾಣೀಕರಿಸಲ್ಪಟ್ಟಿದೆ. ಇದು ಸೋನಿಯ 360 Spatial Sound ಪರ್ಸನಲೈಸರ್ ಅಪ್ಲಿಕೇಶನ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಫೋಕಸ್ ಆನ್ ಚಾಟ್ ಫೀಚರ್ಸ್ ಬಳಸಿಕೊಂಡು ನಿಮ್ಮ ಇಯರ್‌ಫೋನ್‌ಗಳ ಮೂಲಕವೇ ಚಾಟ್ ಮಾಡಬಹುದಾಗಿದೆ.
ಇನ್ನು ಸೋನಿಯ ಡಿಜಿಟಲ್ ಸೌಂಡ್ ಎನ್‌ಹಾನ್ಸ್‌ಮೆಂಟ್ ಎಂಜಿನ್ (DSEE) ಬಳಸಿಕೊಂಡು ಕಂಪ್ರೆಸ್ಡ್ ಟ್ರ್ಯಾಕ್‌ಗಳಿಂದ ಆಡಿಯೊ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ. ಇದಲ್ಲದೆ ಎಲ್ಲಾ ಇಯರ್‌ಫೋನ್‌ಗಳ ಮಾದರಿಯಲ್ಲಿಯೇ ಇದು ಕೂಡ ನಿಮ್ಮ ಸ್ಮಾರ್ಟ್‌ಫೋನ್ ಕರೆಗಳನ್ನು ಸ್ವಿಕರಿಸುವ ಮತ್ತು ತಿರಸ್ಕರಿಸುವ ಆಯ್ಕೆಯನ್ನು ಹೊಂದಿದೆ. ಇದಕ್ಕಾಗಿ ಮೈಕ್ರೋಫೋನ್ ಅನ್ನು ಕೂಡ ಒಳಗೊಂಡಿದೆ. ಈ ಎರಡೂ ಇಯರ್‌ಪೀಸ್‌ಗಳು ಮೆಶ್ ರಚನೆಯನ್ನು ಒಳಗೊಂಡಿದ್ದು, ಗಾಳಿಯ ಶಬ್ದವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
ಸೋನಿ WF-C700N ಇಯರ್‌ಫೋನ್ ಬ್ಲೂಟೂತ್ 5.2 ಅನ್ನು ಬೆಂಬಲಿಸಲಿದೆ. ಈ ಇಯರ್‌ಫೋನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಲು ಕಡಿಮೆ-ಲೇಟೆನ್ಸಿ ಮೋಡ್ ಅನ್ನು ನೀಡಲಾಗಿದೆ. ಜೊತೆಗೆ ಆಂಡ್ರಾಯ್ಡ್ ಫೋನ್‌ಗಳಿಗೆ ವೇಗವಾಗಿ ಕನೆಕ್ಟ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ Windows 11 ಮತ್ತು Windows 10 ಕಂಪ್ಯೂಟರ್‌ಗಳಿಗೆ Swift-Pair ಬೆಂಬಲವನ್ನು ನೀಡುತ್ತದೆ. ಇದರಲ್ಲಿ ಮೀಡಿಯಾ ಪ್ಲೇಬ್ಯಾಕ್‌ಗಾಗಿ SBC ಮತ್ತು AAC ಬ್ಲೂಟೂತ್ ಕೊಡೆಕ್‌ಗಳನ್ನು ಬೆಂಬಲಿಸುವ ಆಯ್ಕೆಯನ್ನು ಅಳವಡಿಸಲಾಗಿದೆ.
ಇನ್ನು ಸೋನಿ WF-C700N TWS ಇಯರ್‌ಫೋನ್ ಆಂಡ್ರಾಯ್ಡ್ ಇಲ್ಲವೇ ಐಫೋನ್‌ನಲ್ಲಿ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿಯನ್ನು ಬಳಸಿಕೊಂಡು ವಾಯ್ಸ್ ಕಂಟ್ರೋಲ್‌ಗಳನ್ನು ಬೆಂಬಲಿಸಲಿದೆ ಎಂದು ಸೋನಿ ಕಂಪೆನಿ ಹೇಳಿದೆ. ಇದರೊಂದಿಗೆ ಸೋನಿ WF-C700N TWS ಇಯರ್‌ಫೋನ್‌ಗಳು 7.5 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ANC ಬಳಕೆಯಲ್ಲಿ ಇಲ್ಲದೆ ಇದ್ದಾಗ ನೀಡಲಿದೆ. ಆದರೆ ಚಾರ್ಜಿಂಗ್ ಕೇಸ್ ಮೂಲಕ ಮತ್ತೊಂದು 7.5 ಗಂಟೆಗಳವರೆಗೆ ಬಾಳಿಕೆಯನ್ನು ನೀಡಲಿದೆ. ಅಂದರೆ 10 ನಿಮಿಷಗಳ ಚಾರ್ಜ್ ಒಂದು ಗಂಟೆಯ ಪ್ಲೇಬ್ಯಾಕ್ ಅನ್ನು ನೀಡಲಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಇಯರ್‌ಬಡ್ಸ್ IPX4 ರೇಟಿಂಗ್ ಹೊಂದಿರುವುದರಿಂದ ಬೆವರು ಮತ್ತು ಸ್ಪ್ಲಾಶ್ ನಿಂದ ರಕ್ಷಣೆಯನ್ನು ನೀಡಲಿದೆ.

ಭಾರತದಲ್ಲಿ ಸೋನಿ WF-C700N ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಸೋನಿ WF-C700N ಇಯರ್‌ಫೋನ್ 8,990ರೂ. ಬೆಲೆಯನ್ನು ಹೊಂದಿದೆ. ಈ ಇಯರ್‌ಫೋನ್ ಇದೇ ಜುಲೈ 15 ರಂದು ಸೋನಿ ರಿಟೇಲ್ ಸ್ಟೋರ್,ShopatSC ವೆಬ್‌ಸೈಟ್ ಮತ್ತು ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಖರೀದಿಸಬಹುದಾಗಿದೆ. ಇದು ಕಪ್ಪು, ಲ್ಯಾವೆಂಡರ್, ಸೇಜ್ ಗ್ರೀನ್ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








