Home
ಸುದ್ದಿಜಾಲ

ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಸೋನಿ WF-LS900N ಇಯರ್‌ಬಡ್ಸ್‌! ಬೆಲೆ ಎಷ್ಟು? ಫೀಚರ್ಸ್‌ ಹೇಗಿದೆ?

ಸೋನಿ ಕಂಪೆನಿಯ WF-LS900N ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ತನ್ನ ವಿಭಿನ್ನ ಶೈಲಿಯ ಡಿಸೈನ್‌ ಹಾಗೂ ಗುಣಮಟ್ಟದ ಕಾರಣಕ್ಕೆ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ. ಸದ್ಯ ಇದೀಗ ಸೋನಿ WF-LS900N ಇಯರ್‌ಬಡ್ಸ್‌ ಹೊಸ ಬಣ್ಣದ ಆಯ್ಕೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಹೌದು, ಸೋನಿ WF-LS900N ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಅರ್ಥ್‌ ಬ್ಲೂ ಬಣ್ಣದ ಆಯ್ಕೆಯಲ್ಲಿ ಎಂಟ್ರಿ ನೀಡಿರುವ ಇಯರ್‌ಬಡ್ಸ್‌ ಮೂಲ ಇಯರ್‌ಬಡ್ಸ್‌ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ WF-LS900N ಹೊಸ ಬಣ್ಣದ ಆಯ್ಕೆಯ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಸೋನಿ WF-LS900N ಇಯರ್‌ಬಡ್ಸ್‌! ಬೆಲೆ ಎಷ್ಟು?

ಸೋನಿ WF-LS900N TWS ಇಯರ್‌ಬಡ್ಸ್‌ ಅರ್ಥ್‌ ಬ್ಲೂ ಬಣ್ಣದ ಆಯ್ಕೆ ಇದೀಗ ಲಭ್ಯವಿದೆ. ಇದು ವಿಶಿಷ್ಟವಾದ ಮಾರ್ಬಲ್ ಮಾದರಿಯನ್ನು ಹೊಂದಿದ್ದು, ಸೋನಿ ವಿಶೇಷ ತಂತ್ರವನ್ನು ಆಧರಿಸಿ ಈ ಮಾದರಿಯನ್ನು ವಿನ್ಯಾಸಗೊಳಿಸಿದೆ. ಇನ್ನು ಈ ಇಯರ್‌ಬಡ್ಸ್‌ ಪ್ಯಾಕೇಜಿಂಗ್ ಪ್ಲಾಸ್ಟಿಕ್ ಮುಕ್ತವಾಗಿದ್ದು, ಪರಿಸರ ಸ್ನೇಹಿಯಾಗಿದೆ. ರೋಡ್ ಟು ಝೀರೋ ಉಪಕ್ರಮದಲ್ಲಿ ಈ ಇಯರ್‌ಬಡ್ಸ್‌ ಅನ್ನು ಪರಿಚಯಿಸಲಾಗಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ.

ಇನ್ನು ಸೋನಿ WF-LS900N TWS ಹೊಸ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಮಲ್ಟಿಪಾಯಿಂಟ್ ಕನೆಕ್ಟಿವಿಟಿಯನ್ನು ಹೊಂದಿದೆ. ಇದರಿಂದ ಇಯರ್‌ಬಡ್ಸ್‌ಗಳನ್ನು ಏಕಕಾಲದಲ್ಲಿ ಎರಡು ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಲು ಅವಕಾಶ ನೀಡಲಿದೆ. ಜೊತೆಗೆ ಸಂಪರ್ಕಗಳನ್ನು ಹಸ್ತಚಾಲಿತವಾಗಿ ಬದಲಾಯಿಸುವ ಒತ್ತಡವಿಲ್ಲದೆ ಡಿವೈಸ್‌ಗಳ ನಡುವೆ ತಡೆರಹಿತ ಪರಿವರ್ತನೆಗೆ ಇದು ಅನುಮತಿಸಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ಗಳು ಇನ್‌-ಇಯರ್‌ ವಿನ್ಯಾಸವನ್ನು ಹೊಂದಿದ್ದು, ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಬೆಂಬಲಿಸಲಿವೆ.

ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಸೋನಿ WF-LS900N ಇಯರ್‌ಬಡ್ಸ್‌! ಬೆಲೆ ಎಷ್ಟು?

ಇದಲ್ಲದೆ ಈ ಇಯರ್‌ಬಡ್ಸ್‌ IPX4-ರೇಟೆಡ್ ಮತ್ತು ಡಾಲ್ಬಿ ಅಟ್ಮೋಸ್‌ + 360º ಪ್ರಾದೇಶಿಕ ಧ್ವನಿಯನ್ನು ಬೆಂಬಲಿಸುತ್ತದೆ. ಜೊತೆಗೆ ಇಯರ್‌ಬಡ್ಸ್‌ ಗೂಗಲ್‌ ಅಸಿಸ್ಟೆಂಟ್‌, ಅಲೆಕ್ಸಾ ಮತ್ತು ಆಪಲ್‌ ಸಿರಿ ವಾಯ್ಸ್‌ ಅಸಿಸ್ಟೆಂಟ್‌ಗಳನ್ನು ಬೆಂಬಲಿಸಲಿದೆ. ಇದರೊಂದಿಗೆ ನಾಲ್ಕು ಇಯರ್ ಟಿಪ್ ಗಾತ್ರಗಳನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ಅಲ್ಲದೆ ಇಯರ್‌ಬಡ್ಸ್‌ಗಳು 6 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್ ನಲ್ಲಿ 20 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಭಾರತಕ್ಕೆ ಎಂಟ್ರಿ ನೀಡಿರುವ ಅರ್ಥ್ ಬ್ಲೂ ಬಣ್ಣದ ಸೋನಿ LS5900N TWS ಇಯರ್‌ಬಡ್ಸ್‌ 16,859ರೂ. ಬೆಲೆಯನ್ನು ಹೊಂದಿದೆ. ಇದು ಅಮೆಜಾನ್‌ ಮೂಲಕ ಖರೀದಿಗೆ ಲಭ್ಯವಾಗಲಿದೆ.

ಇದಲ್ಲದೆ ಸೋನಿ ಕಂಪೆನಿ ಇತ್ತೀಚಿಗೆ ಸೋನಿ ಬ್ರಾವಿಯಾ X70L TV ಸರಣಿ ಪರಿಚಯಿಸಿದೆ. 4k ಅಲ್ಟ್ರಾ HD LED ಡಿಸ್‌ಪ್ಲೇಯೊಂದಿರುವ ಈ ಸರಣಿಯು ನವೀನ ಮಾದರಿಯ ವಿನ್ಯಾಸದೊಂದಿಗೆ ಗಮನಸೆಳೆದಿದೆ. ಇನ್ನು ಸ್ಮಾರ್ಟ್‌ಟಿವಿಗಳು ಗೂಗಲ್‌ ಟಿವಿ, ಆಪಲ್‌ ಏರ್‌ಪ್ಲೇ, ಆಪಲ್‌ ಹೋಮ್‌ಕಿಟ್‌ ಅನ್ನು ಬೆಂಬಲಿಸಲಿದೆ. ಸೋನಿ ಬ್ರಾವಿಯಾ X70L TV ಟಿವಿಗಳು ಬಳಕೆದಾರರಿಗೆ ಹೆಚ್ಚು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವ ನೀಡಲಿವೆ. ಇದಕ್ಕಾಗಿ ಕಿರಿದಾದ ಬೆಜೆಲ್ ಅನ್ನು ಒಳಗೊಂಡಿವೆ. ಇನ್ನು ಈ ಸ್ಮಾರ್ಟ್‌ಟಿವಿಗಳು 43-ಇಂಚಿನ ಮತ್ತು 50-ಇಂಚಿನ ಆಯ್ಕೆಯಲ್ಲಿ ಬರಲಿವೆ. ಸ್ಮಾರ್ಟ್‌ಟಿವಿಗಳು X1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇದಲ್ಲದೆ ಸ್ಮಾರ್ಟ್‌ಟಿವಿಗಳಲ್ಲಿ ವಿವರಗಳನ್ನು ಹೆಚ್ಚಿಸಲು ಸುಧಾರಿತ ಅಲ್ಗಾರಿದಮ್‌ಗಳನ್ನು ಬಳಸಲಾಗಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ.

ಸೋನಿ ಸಂಸ್ಥೆಯ ಈ ಹೊಸ TV ಯು ರಿಯಾಲಿಟಿ ಪ್ರೊ ಫೀಚರ್ಸ್‌ ಹೊಂದಿದೆ. ಇದರಿಂದ 2K ಮತ್ತು ಫುಲ್‌ HD ಯಿಂದ 4K ರೆಸಲ್ಯೂಶನ್‌ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳನ್ನು ಕಾಣಬಹುದಾಗಿದೆ. ಇದರೊಂದಿಗೆ ಮೊಷನ್‌ಫ್ಲೋ XR ಟೆಕ್ನಾಲಜಿಯು ಸುಗಮವಾದ ಪ್ಲೇಬ್ಯಾಕ್‌ ಅನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ರಿಮೋಟ್‌ನಲ್ಲಿ ನೆಟ್‌ಫ್ಲಿಕ್ಸ್‌, ಅಮೆಆನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಸೋನಿಲೈವ್‌, ಯೂಟ್ಯೂಬ್‌ಗಾಗಿ ಬಟನ್‌ಗಳನ್ನು ಸಹ ನೀಡಲಾಗಿದೆ.

Best Mobiles in India

English summary
Sony WF-LS900N TWS earbuds Earth Blue color variant launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+