ಸೋನಿ ಕಂಪೆನಿಯಿಂದ WF-XB700 TWS ಇಯರ್‌ಬಡ್ ಬಿಡುಗಡೆ!

|

ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ ಫೋನ್‌ಗಳನ್ನ ಕೊಡುವ ಕಾಲ ಮುಗಿದು ಹೋಗಿದೆ. ಈಗ ಏನಿದ್ದರೂ ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ನಾನಾ ಬಗೆಯ ಇಯರ್‌ಫೋನ್‌ಗಳನ್ನ ಖರೀದಿಸುತ್ತಿದ್ದಾರೆ. ಇದಕ್ಕಾಗಿ ನಾನಾ ಕಂಪೆನಿಗಳು ವಿಭಿನ್ನ ಮಾದರಿಯ ಇಯರ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿವೆ. ಬಳಕೆದಾರರ ಆಶಯಕ್ಕೆ ತಕ್ಕಂತೆ ಇಯರ್‌ಫೋನ್‌ಗಳನ್ನ ವಿನ್ಯಾಸಗೊಳಿಸುವಲ್ಲಿ ಸೋನಿ ಕಂಪೆನಿ ಕೂಡ ಒಂದಾಗಿದ್ದು, ಇದೀಗ ತನ್ನ ಹೊಸ ವಿನ್ಯಾಸದ ಇಯರ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಜಾಗತಿಕ

ಹೌದು, ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಮಾರುಕಟ್ಟೆಯನ್ನ ಹೊಂದಿರುವ ಸೋನಿ ಕಂಪೆನಿ ತನ್ನ ಹೊಸ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು ಟ್ರೂಲಿ ವಾಯರ್‌ಲೆಸ್‌ ಇಯರ್ ಬಡ್ಸ್‌ ಆಗಿದ್ದು, ಇದನ್ನ ಸೋನಿ WF-700 ಎಂದು ಹೆಸರಿಸಲಾಗಿದೆ. ಇನ್ನು ಈ ಟ್ರೂಲಿ ವಾಯರ್‌ಲೆಸ್ ಇಯರ್‌ಬಡ್ಸ್‌ ಹೆಚ್ಚುವರಿ ಬಾಸ್ ಅನುಭವವನ್ನು ನೀಡುಲಿದೆ ಎಂದು ಕಂಪೆನಿ ಹೇಳಿದೆ. ಜೊತೆಗೆ ಇದು WH-CH710N ಹೆಡ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಕೈಗೆಟಕುವ ಬೆಲೆಯಲ್ಲಿ ಲಬ್ಯವಾಗಲಿದೆ. ಹಾಗಾದ್ರೆ ಇದರ ವಿನ್ಯಾಸ ಹೇಗಿರಲಿದೆ ಅನ್ನುವದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಸೋನಿ

ಸದ್ಯ ಸೋನಿ ಕಂಪೆನಿ ಬಿಡುಗಡೆ ಮಾಡಿರುವ WF-XB700 ಇಯರ್‌ಬಡ್ಸ್‌ ಹೊಸ ಮಾದರಿಯ ಇಯರ್‌ಬಡ್ಸ್‌ ಆಗಿದ್ದು, ಇದು WF-1000XM3 ನ ಮುಮದುವರೆದ ಆವೃತ್ತಿಯ ಆಗಿಲ್ಲ, ಆದರೆ ಸೋನಿಯ ಹೆಚ್ಚುವರಿ ಬಾಸ್ ಸರಣಿಯ ಭಾಗವಾಗಿದೆ. ಇನ್ನು ವಿನ್ಯಾಸದ ದೃಷ್ಟಿಯಿಂದ, ನೋಡುವುದಾದರೆ ಇದು ಸೋನಿಯ ಹಿಂದಿನ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳನ್ನ ಹೋಲುತ್ತದೆ. ಇನ್ನು ಈ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್‌ಗಳು IPX4 ರೇಟಿಂಗ್‌ನೊಂದಿಗೆ ಬರುತ್ತವೆ. ಆದರೆ ಈ ಇಯರ್‌ಬಡ್‌ಗಳನ್ನು ಸುರಕ್ಷಿತವಾಗಿರಿಸಲು ಅವುಗಳಿಗೆ ನಿರ್ದಿಷ್ಟ ಕುಣಿಕೆಗಳನ್ನ ನಿಡಲಾಗಿಲ್ಲ.

WF

ಇನ್ನು ಸೋನಿಯ ಹೊಸ WF-XB700 ಇಯರ್‌ಬಡ್‌ ಮತ್ತು WF-1000XM3 ನಡುವಿನ ದೊಡ್ಡ ವ್ಯತ್ಯಾಸವು ಬಳಕೆದಾರರಿಗೆ ಅನುಭವದಲ್ಲಿ ತಿಳಿಯಲಿದೆ. WF-XB700 ಹೆಚ್ಚುವರಿ ಬಾಸ್ ಅನ್ನು ನೀಡುತ್ತದೆ ಆದರೆ ನಾಯಿಸ್‌ ಕ್ಯಾನ್ಸೆಲಿಂಗ್‌ಗೆ ಬೆಂಬಲವನ್ನು ನೀಡುವುದಿಲ್ಲ. ಆದರೆ WF-1000XM3 ಬೆಂಬಲಿಸುತ್ತದೆ. ಜೊತೆಗೆ ಇದು ಗೆಸ್ಚರ್ ಬೆಂಬಲವನ್ನು ಹೊಂದಿಲ್ಲ ಮತ್ತು ಬದಲಿಗೆ ಭೌತಿಕ ಗುಂಡಿಗಳನ್ನು ಅವಲಂಬಿಸಿದೆ. ಅಲ್ಲದೆ ಚಾರ್ಜಿಂಗ್‌ ವಿಚಾರದಲ್ಲಿ WF-1000XM3 ನಲ್ಲಿ ಒಟ್ಟಾರೆ ಬ್ಯಾಟರಿ ಅವಧಿಯನ್ನು 24 ಗಂಟೆಗಳಿಗೆ ಹೊಂದಿಸಲಾಗಿದೆ.

ಇಯರ್‌ಬಡ್‌ಗಳು

ಅಲ್ಲದೆ ಈ ಇಯರ್‌ಬಡ್‌ಗಳು ಒಂದೇ ಚಾರ್ಜ್‌ನಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ಇರುತ್ತವೆ ಎಂದು ಸೋನಿ ಹೇಳಿಕೊಂಡಿದೆ. ಇದು WF-1000XM3 ಇಯರ್‌ಬಡ್‌ಗಳು ನೀಡುವ ಆರು ಗಂಟೆಗಳಿಗಿಂತ ಹೆಚ್ಚು. ಇನ್ನು ಈ ಇಯರ್‌ಬಡ್ಸ್‌ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ. ಜೊತೆಗೆ ಉತ್ತಮ ಬಾಸ್‌ ಮತ್ತು ಸೌಂಡ್‌ ಸಿಸ್ಟಂ ಅನ್ನು ಹೊಂದಿಸಲಿದೆ. ಇದರಿಮದ ಬಳಕೆದಾರರಿಗೆ ಪ್ಲೇ ಬ್ಯಾಕ್‌ ಮ್ಯೂಸಿಕ್‌ ಮತ್ತು ಕರೆ ಸ್ವೀಕಾರ ಮತ್ತು ಕರೆ ತಿರಸ್ಕರಿಸುವಾಗ ಉತ್ತಮ ಅನುಭವ ನೀಡಲಿದೆ. ಸದ್ಯ WF-XB700 ಬೆಲೆ $ 130 (ಸುಮಾರು 9,900.ರೂ,)ಆಗಿದ್ದು, ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Sony WF-XB700 TWS earbuds and WH-CH710N headphones launched: Price, Features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X