ಸೋನಿ ಸಂಸ್ಥೆಯಿಂದ ಸೋನಿ WH-1000XM4 ಬ್ಲೂಟೂತ್ ಹೆಡ್‌ಫೋನ್ ಬಿಡುಗಡೆಗೆ ಸಿದ್ದತೆ!
ಟೆಕ್ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಪ್ರಾಡಕ್ಟ್‌ಗಳು ಲಭ್ಯವಿವೆ. ಅದರಲ್ಲು ಭಿನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಇನ್ನು ಸ್ಮಾರ್ಟ್‌ಫೋನ್‌ಗಳ ಭರಾಟೆ ಜಾಸ್ತಿ ಆದಷ್ಟು ಇಯರ್‌ಫೋನ್‌ಗಳು,ಹೆಡ್‌ಫೋನ್‌ಗಳೂ ಕುಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸಾಕಷ್ಟು ವೈವಿಧ್ಯಮಯ ಇಯರ್‌ಫೋನ್‌ಗಳನ್ನ ನಾವಿಂದು ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಆದರೆ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್ ಕಂಪೆನಿಗಳ ಇಯರ್‌ಫೋನ್‌ಗಳನ್ನೇ ಖರೀದಿ ಮಾಡುತ್ತಾರೆ. ಸದ್ಯ ಇದರಲ್ಲಿ ಸೋನಿ ಕಂಪೆನಿ ಕೂಡ ಒಂದಾಗಿದ್ದು, ಸೋನಿ ಇದೀಗ ತನ್ನ ಹೊಸ ಮಾದರಿಯ ಬ್ಲೂಟೂತ್ ಹೆಡ್‌ಫೋನ್‌ಗಳ ಬಿಡುಗಡೆಗೆ ಸಿದ್ದತೆ ನಡೆಸಿದೆ.

ಹೌದು, ಸೋನಿ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬ್ರ್ಯಾಂಡ್ ಎಂದು ಪ್ರಸಿದ್ಧಿಯನ್ನ ಪಡೆದುಕೊಂಡಿದೆ. ಸೋನಿ ಕಂಪೆನಿ ಇದೀಗ ತನ್ನ ಹೊಸ WH-1000XM4 ಬ್ಲೂಟೂತ್ ಹೆಡ್‌ಫೋನ್‌ಗಳನ್ನು ಓವರ್ ಇಯರ್ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಈ ಹೊಸ ಮಾದರಿಯ ಹೆಡ್‌ಫೋನ್ ಜನಪ್ರಿಯ ಸೋನಿ WH-1000XM3 ಹೆಡ್‌ಫೋನ್‌ನ ಮುಂದುವರೆದ ಆವೃತ್ತಿ ಆಗಿದೆ. ಸದ್ಯ ಈ ಹೆಡ್‌ಫೋನ್ ಬಡಿಗಡೆಗೆ ಸೋನಿ ಸಿದ್ದತೆ ನಡೆಸಿದ್ದು, ಇದರ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊ ಮಾಹಿತಿ ಸೋರಿಕೆ ಆಗಿದೆ. ಲಬ್ಯವಿರುವ ಮಾಹಿತಿ ಪ್ರಕಾರ ಈ ಹೆಡ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ WH-1000XM4 ಬ್ಲೂಟೂತ್ ಹೆಡ್‌ಫೋನ್ ಬಳಕೆದಾರರಿಗೆ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಡಿವೈಸ್‌ಗಳನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಪ್ರತಿ ಬಾರಿಯೂ ಬ್ಲೂಟೂತ್ ಕನೆಕ್ಟಿವಿಟಿಯನ್ನು ಕಡಿತ ಮಾಡದೆ ಈ ಹೆಡ್‌ಸೆಟ್ ಅನ್ನು ತ್ವರಿತವಾಗಿ ಇನ್ನೊಂದು ಡಿವೈಸ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಇದರಿಂದಾಗಿ ಕೇವಲ ಒಂದು ಕ್ಲಿಕ್‌ನಲ್ಲಿ ಸ್ಮಾರ್ಟ್‌ಫೋನ್‌ನಿಂದ ಪಿಸಿಗೆ ಕನೆಕ್ಟ್ ಆನ್ನ ಬದಲಾಯಿಸಬಹುದು. ಆದಾಗ್ಯೂ, ಈ ಏಕಕಾಲಿಕ ಬಹು-ಜೋಡಣೆ ಮೋಡ್ ಸಕ್ರಿಯವಾಗಿದ್ದರೆ, ನೀವು ಉತ್ತಮ-ಗುಣಮಟ್ಟದ LDAC ಕೊಡೆಕ್ ಅನ್ನು ಬಳಸಲಾಗುವುದಿಲ್ಲ ಎಂದು ಹೇಳಲಾಗ್ತಿದೆ.

ಇದಲ್ಲದೆ, WH-1000XM4 ಸಹ "ಸ್ಮಾರ್ಟ್ ಟಾಕಿಂಗ್" ಎಂಬ ಹೊಸ ಫೀಚರ್ಸ್ ಅನ್ನು ಹೊಂದಿದೆ ನಿರೀಕ್ಷಿಸಲಾಗಿದೆ. ಇನ್ನು ಫೀಚರ್ಸ್ ಜೊತೆಗೆ ಹೆಡ್‌ಫೋನ್‌ಗಳು ಆಂಬಿಯೆಂಟ್ ನಾಯ್ಸ್ ಅನ್ನು ನಿಷ್ಕ್ರಿಯಗೊಳಿಸುತ್ತದೆ. ಇನ್ನು ಧ್ವನಿಗಳು ಪತ್ತೆಯಾದಾಗ ಬಳಕೆದಾರರು ಸುತ್ತುವರಿದ ಶಬ್ದವನ್ನು ಗ್ರಹಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಬಳಕೆದಾರನು ತನ್ನ ಹೆಡ್‌ಸೆಟ್ ತೆಗೆಯದೆ ಸಂಭಾಷಣೆಯನ್ನು ಕೇಳಲು ಇದರಲ್ಲಿ ಅವಕಾಶವಿದ್ದು, ಪ್ರತಿಕ್ರಿಯೆಯನ್ನು ಕೇಳದೆ ಕೆಲವು ಸೆಕೆಂಡುಗಳ ನಂತರ, ನಾಯ್ಸ್ ರಿಡಕ್ಷನ್ ಮೋಡ್ ಅನ್ನು ಮತ್ತೆ ಸಕ್ರಿಯಗೊಳಿಸಬಹುದಾಗಿದೆ.

ಇದಲ್ಲದೆ ನಾಯ್ಡ್ ಕ್ಯಾನ್ಸಲೆಶನ್ ಅನ್ನು ನಿಷ್ಕ್ರಿಯಗೊಳಿಸಿದ ಅವಧಿಯ ಅವಧಿಯನ್ನು ಸಹವರ್ತಿ ಅಪ್ಲಿಕೇಶನ್ ಮೂಲಕ ಕಾನ್ಫಿಗರ್ ಮಾಡಬಹುದಾಗಿದೆ. ಅಲ್ಲದೆ ಆಯ್ಕೆಯ ಸೂಕ್ಷ್ಮತೆಯು ಸಂಪೂರ್ಣವಾಗಿ ಮಾಲೀಕರ ಆಯ್ಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ಜೊತೆಗೆ ಆಡಿಯೋ ಸೆನ್ಸಾರ್ ಅನ್ನು ಹೆಚ್ಚು ಅಥವಾ ಕಡಿಮೆ ನಡುವೆ ಹೊಂದಿಸಲು ಸಹ ಅವಕಾಶ ನೀಡಲಾಗಿದೆ. ಗೂಗಲ್ ನಕ್ಷೆಗಳ ಮೂಲಕ ಸಂಗ್ರಹಿಸಲಾದ ನಿಮ್ಮ ಲೋಕೆಶನ್ ಆಧರಿಸಿ ಹೆಡ್‌ಸೆಟ್ ಕೆಲವು ಆಡಿಯೊ ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಬದಲಾಯಿಸುತ್ತದೆ. ಉದಾಹರಣೆಗೆ, ನೀವು ಗ್ರಂಥಾಲಯಕ್ಕೆ ಹೋದರೆ, ಹೆಡ್‌ಫೋನ್‌ಗಳು ಸ್ವಯಂಚಾಲಿತವಾಗಿ ಶಬ್ದ ಕಡಿತವನ್ನು ಸಕ್ರಿಯಗೊಳಿಸುತ್ತದೆ. ಇನ್ನು ಈ ಹೆಡ್‌ಸೆಟ್ DSEE HX ಹೆಸರಿನಫಿಚರ್ಸ್ ಅನ್ನು ಹೊಂದಿದ್ದು, ಟ್ರೀಮ್ ಎಐ ಮೂಲಕ ಉತ್ತಮ ಗುಣಮಟ್ಟಕ್ಕೆ ಧ್ವನಿ ಮೂಲವನ್ನು ಅಳೆಯಲು ಸಾಧ್ಯವಾಗಲಿದೆ.


Click it and Unblock the Notifications




