ಸೋನಿಯಿಂದ ಹೊಸ ವಾಯರ್‌ಲೆಸ್‌ ನಾಯಿಸ್‌ ಕ್ಯಾನ್ಸೆಲೇಶನ್‌ ಹೆಡ್‌ಫೋನ್‌ ಬಿಡುಗಡೆ!

|

ಬಹುತೇಕ ಮ್ಯೂಸಿಕ್ ಪ್ರಿಯರು ಸೋನಿ ಕಂಪನಿಯ ಆಡಿಯೊ ಡಿವೈಸ್‌ಗಳಿಗೆ ಫಿದಾ ಆಗಿದ್ದು, ಹೀಗಾಗಿ ಸೋನಿ ಹೆಡ್‌ಫೋನ್‌ಗಳು, ಇಯರ್‌ಫೋನ್ಸ್‌ಗಳು ಹಾಗೂ ಸ್ಪೀಕರ್‌ಗಳಿಗೆ ಡಿಮ್ಯಾಂಡ್‌ ಇದ್ದೆ ಇದೆ. ಈ ನಿಟ್ಟಿನಲ್ಲಿ ಸೋನಿ ಕಂಪನಿಯು ಹೊಸದಾಗಿ WH-1000XM4 ವಾಯರ್‌ಲೆಸ್‌ ನಾಯಿಸ್‌ ಕ್ಯಾನ್ಸ್‌ಲಿಂಗ್ ಹೆಡ್‌ಫೋನ್‌ ಡಿವೈಸ್‌ ಅನ್ನು ಪರಿಚಯಿಸಿದೆ.

ಸೋನಿ

ಹೌದು, ಜನಪ್ರಿಯ ಸೋನಿ ಕಂಪೆನಿ ಹೊಸ WH-1000XM4 ವಾಯರ್‌ಲೆಸ್‌ ನಾಯಿಸ್‌ ಕ್ಯಾನ್ಸ್‌ಲಿಂಗ್ ಹೆಡ್‌ಫೋನ್‌ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಹೆಡ್‌ಫೋನ್ ಈ ಹಿಂದಿನ WH-1000XM3 ಸರಣಿಯ ಮುಂದುವರೆದ ಅಪ್‌ಗ್ರೇಡ್‌ ಆವೃತ್ತಿ ಆಗಿದೆ. ಗೂಗಲ್ ಅಸಿಸ್ಟಂಟ್ ಸೌಲಭ್ಯ ಪಡೆದಿದ್ದು, ಸುಮಾರು 30 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ನಾಯಿಸ್‌ಲೆಸ್‌

WH-1000XM4 ವೈರ್‌ಲೆಸ್ ನಾಯಿಸ್‌ಲೆಸ್‌ ಹೆಡ್‌ಫೋನ್‌ ಅತ್ಯುತ್ತಮ ನಾಯಸ್‌ ಸೆನ್ಸರ್' ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದರೊಂದಿಗೆ ಗೆಸ್ಚರ್ ಆಯ್ಕೆಗಳನ್ನು ಈ ಡಿವೈಸ್‌ ಪಡೆದುಕೊಂಡಿದೆ. ಇದರೊಂದಿಗೆ ಪ್ರಿಶಿಯಸ್‌ ವಾಯಿಸ್‌ ಪಿಕ್‌ಅಪ್‌ ತಂತ್ರಜ್ಞಾನ ಹೊಂದಿದ್ದು, 360 ರಿಯಾಲಿಟಿ ಆಡಿಯೊ ವ್ಯವಸ್ಥೆಯನ್ನು ಪಡೆದಿದೆ. ಸ್ಪೀಕ್‌ ಟು ಚಾಟ್‌ ವಿಶೇಷ ಆಯ್ಕೆಯನ್ನು ಹೊಂದಿದ್ದು, ಬಳಕೆದಾರರ ವಾಯಿಸ್‌ ಗುರುತಿಸಿಲು ನೆರವಾಗಲಿದೆ.

ಬ್ಲೂಟೂತ್

ಸೋನಿ WH-1000XM4 ಹೆಡ್‌ಫೋನ್‌ಗಳನ್ನು ಏಕಕಾಲದಲ್ಲಿ ಎರಡು ಬ್ಲೂಟೂತ್ ಸಾಧನಗಳಿಗೆ ಸಂಪರ್ಕಿಸಬಹುದು, ಬಳಕೆದಾರರಿಗೆ ಸಂಗೀತವನ್ನು ಕೇಳಲು ಮತ್ತು ಅವರ ಸ್ಮಾರ್ಟ್‌ಫೋನ್‌ನಿಂದ ತಕ್ಷಣ ಕರೆಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಹೊಸ ಹೆಡ್‌ಫೋನ್‌ಗಳು 30 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿವೆ ಎಂದು ಸೋನಿ ಬಹಿರಂಗಪಡಿಸಿದೆ.

ಹೆಡ್‌ಫೋನ್

ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾದ ಸೋನಿ WH-1000XM4 ಹೆಡ್‌ಫೋನ್‌ಗಳ ಸೆಪ್ಟೆಂಬರ್ 2020 ರ ವೇಳೆಗೆ ಹೆಡ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೆಡ್‌ಫೋನ್‌ಗಳ ಬೆಲೆ $ 350 ಬೆಲೆ ಆಗಿದ್ದು, (ಭಾರತದಲ್ಲಿ ಅಂದಾಜು 26,236 ರೂ. ಆಗಿರಲಿದೆ) ಈ WH-1000XM4 ಹೆಡ್‌ಫೋನ್‌ ನೇರವಾಗಿ ಬೋಸ್ ಶಬ್ದ ರದ್ದತಿ ಹೆಡ್‌ಫೋನ್‌ಗಳೊಂದಿಗೆ ಸ್ಪರ್ಧಿಸಲಿದೆ.

Most Read Articles
Best Mobiles in India

English summary
Sony WH-1000XM4 wireless noise-cancelling headphones have been launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X