ಸೋನಿ WH-CH520 ಹೆಡ್‌ಫೋನ್ ಲಾಂಚ್! ಬೆಲೆ ಎಷ್ಟು? ಫೀಚರ್ಸ್ ಹೇಗಿದೆ?
ಸೋನಿ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಭಾರಿ ತನ್ನ ಹೊಸ ಹೆಡ್‌ಫೋನ್ ಸೋನಿ WH-CH520 ಮೂಲಕ ಅನ್ನೊದು ವಿಶೇಷವಾಗಿದೆ. ಸದ್ಯ ಭಾರತದಲ್ಲಿ ಲಾಂಚ್ ಆಗಿರುವ ಸೋನಿ WH-CH520 ಹೆಡ್‌ಸೆಟ್ 50 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ ಅನ್ನೊದು ಮೇನ್ ಹೈಲೈಟ್ ಆಗಿದೆ.
ಹೌದು, ಸೋನಿ ಕಂಪೆನಿ ಭಾರತದಲ್ಲಿ ಹೊಸ ಸೋನಿ WH-CH520 ಹೆಡ್‌ಫೋನ್ ಬಿಡುಗಡೆ ಮಾಡಿದೆ. ಇದು ಆನ್-ಇಯರ್ ಬಜೆಟ್ ವಾಯರ್‌ಲೆಸ್ ಹೆಡ್‌ಫೋನ್ ಎನಿಸಿಕೊಂಡಿದೆ. ಇನ್ನು ಈ ಹೆಡ್‌ಫೋನ್ Digital Sound Enhancement Engine Ultimate ನಂತಹ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದ್ರೆ ಈ ಹೊಸ ಹೆಡ್‌ಫೋನ್ ಫೀಚರ್ಸ್ ಹೇಗಿದೆ? ಇದರ ಬೆಲೆ ಎಷ್ಟಿದೆ? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ WH-CH520 ಹೆಡ್‌ಫೋನ್ ಹೊಸ ಮಾದರಿಯ ಫೀಚರ್ಸ್ ಅನ್ನು ಒಳಗೊಂಡಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 50 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಟೈಂ ಅನ್ನು ನೀಡಲಿದೆ. ಅಷ್ಟೇ ಅಲ್ಲ ಕೇವಲ ಮೂರು ನಿಮಿಷಗಳ ಚಾರ್ಜ್‌ನಲ್ಲಿ 1.5 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಟೈಂ ನೀಡಲಿದೆ ಅನ್ನೊದು ವಿಶೇಷ. ಇದಲ್ಲದೆ ಈ ಹೆಡ್‌ಫೋನ್ ಮಲ್ಟಿಪಾಯಿಂಟ್ ಕನೆಕಟಿವಿಟಿಯನ್ನು ಬೆಂಬಲಿಸಲಿದ್ದು, ನೀವು ಎರಡು ಡಿವೈಸ್‌ಗಳ ನಡುವೆ ಕನೆಕ್ಟಿವಿಟಿಯನ್ನು ಬದಲಾಯಿಸಬಹುದಾಗಿದೆ.
ಸೋನಿ WH-CH520 ಹೆಡ್‌ಫೋನ್ ಮೂರು ಭೌತಿಕ ಬಟನ್‌ಗಳನ್ನು ಹೊಂದಿದೆ. ಇದರಿಂದ ನೀವು ವಾಲ್ಯೂಮ್ ಲೆವೆಲ್, ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಸಿರಿ ಅಥವಾ ಗೂಗಲ್ ಅಸಿಸ್ಟೆಂಟ್‌ನಂತಹ ವಾಯ್ಸ್ ಅಸಿಸ್ಟೆಂಟ್ ಅನ್ನು ಕಂಟ್ರೋಲ್ ಮಾಡಬಹುದಾಗಿದೆ. ಜೊತೆಗೆ ಈ ಹೆಡ್‌ಫೋನ್ ಕನೆಕ್ಟಿವಿಟಿ ಅಪ್ಲಿಕೇಶನ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಹೆಡ್‌ಫೋನ್ ಕಸ್ಟಮ್ ಈಕ್ವಲೈಜರ್ ಅನ್ನು ಬೆಂಬಲಿಸಲಿದ್ದು, ಬ್ರೈಟ್, ಉತ್ಸುಕ, ಮಧುರ, ಶಾಂತ, ಗಾಯನ ಸೇರಿದಂತೆ ಹಲವು ಪ್ರಿಸೆಟ್‌ಗಳೊಂದಿಗೆ ಬರಲಿದೆ.

ಸೋನಿ WH-CH520 ಹೆಡ್‌ಫೋನ್ ಫಾಸ್ಟ್ಪೇರ್ ಮತ್ತು ಸ್ವಿಫ್ಟ್ ಪೇರ್ ಅನ್ನು ಬೆಂಬಲಿಸಲಿದೆ. ಇದು ಬಳಕೆದಾರರಿಗೆ ವಿಂಡೋಸ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳಿಗೆ ಕನೆಕ್ಟಿವಿಟಿ ಮಾಡುವುದು ಸುಲಭವಾಗಲಿದೆ. ಇನ್ನು ಈ ಹೆಡ್‌ಫೋನ್ ಪ್ಯಾಡಿಂಗ್, ಸಾಫ್ಟ್ ಇಯರ್‌ಪ್ಯಾಡ್‌ಗಳನ್ನು ಹೊಂದಿದ್ದು, ಸೋನಿಯ ನಿಖರವಾದ ವಾಯ್ಸ್ ಪಿಕಪ್ ಟೆಕ್ನಾಲಜಿಯೊಂದಿಗೆ ಹೊಂದಾಣಿಕೆ ಮಾಡಬಹುದಾದ ಹೆಡ್‌ಬ್ಯಾಂಡ್‌ನೊಂದಿಗೆ ಬರಲಿದೆ.
ಇದರೊಂದಿಗೆ ಸೋನಿ ಹೆಡ್‌ಫೋನ್ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್‌ಗಳನ್ನು ಪಡೆದಿದೆ. ಇದರಿಂದ ವಿವಿಧ ರೀತಿಯ ಪರಿಸರದಲ್ಲಿ ಬಳಕೆದಾರರ ಧ್ವನಿಯನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಸದ್ಯ ಭಾರತದಲ್ಲಿ ಸೋನಿ WH-CH520 ಹೆಡ್‌ಫೋನ್ 4,490ರೂ. ಬೆಲೆಗೆ ಲಭ್ಯವಾಗಲಿದೆ. ಇದನ್ನು ನೀವು ಸೋನಿ ಸೆಂಟರ್ ಮತ್ತು ಸೋನಿ ಎಕ್ಸ್‌ಕ್ಲೂಸಿವ್ ಸ್ಟೋರ್, ShopatSC ವೆಬ್‌ಸೈಟ್, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಎಲ್ಲಾ ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ.

ಇದಲ್ಲದೆ ಸೋನಿ ಕಂಪೆನಿ ಇತ್ತೀಚಿಗೆ ಸೋನಿ WH-CH720N (Sony WH-CH720N ) ಹೆಡ್‌ಫೋನ್ ಬಿಡುಗಡೆ ಮಾಡಿದೆ. ಈ ಹೆಡ್‌ಫೋನ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದೆ. ಇನ್ನು ಹೆಡ್‌ಫೋನ್ ಸ್ಪಷ್ಟವಾದ ಶಬ್ಧದೊಂದಿಗೆ ಸಮತೋಲಿತ ಶ್ರುತಿಯನ್ನು ನೀಡಲಿದೆ. ಅಂದರೆ ಯಾವುದೇ ಹಾಡನ್ನು ಆಲಿಸುವಾಗ ಅದರಲ್ಲಿ ಬಳಕೆ ಮಾಡಲಾದ ಎಲ್ಲಾ ರೀತಿಯ ಸೌಂಡ್‌ಗಳು ನಿಮಗೆ ಸ್ಪಷ್ಟವಾಗಿ ಕೇಳುತ್ತವೆ. ಇದರಲ್ಲಿ ಯಾವ ಸೌಂಡ್ ಸಹ ನಿಮ್ಮ ಕಿವಿ ತಲುಪದೆ ಹೋಗುವುದಿಲ್ಲ. ಈ ಮೂಲಕ ಉನ್ನತ ಗುಣಮಟ್ಟದ ಆಡಿಯೊ ಅನುಭವವನ್ನು ಒದಗಿಸಲು ಹೆಡ್‌ಫೋನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಕರೆ ಸಮಯದಲ್ಲಿಈ ಹೆಡ್‌ಫೋನ್ ಮೂಲಕ ಬಳಕೆದಾರರು ವಿಶೇಷವಾದ ಅನುಭವ ಪಡೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ವಾಯ್ಸ್ ಪಿಕಪ್ ಟೆಕ್ನಾಲಜಿ ಅಳವಡಿಸಲಾಗಿದೆ.


Click it and Unblock the Notifications








