ಸೋನಿ ಸಂಸ್ಥೆಯಿಂದ 'WH-CH710N' ಇಯರ್‌ಫೋನ್‌ ಬಿಡುಗಡೆ!

|

ಸ್ಮಾರ್ಟ್‌ಫೋನ್‌ ಜೊತೆಗೆ ಮ್ಯೂಸಿಕ ಅನುಭವ ಸವಿಯಲು ಉತ್ತಮ ಇಯರ್‌ಫೋನ್‌ ಇದ್ದರೆ ಒಳ್ಳೆಯದು ಅಂತಾ ಬಹುತೇಕ ಬಳಕೆದಾರರು ಇಷ್ಟ ಪಡುತ್ತಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಬ್ಯವಿರುವಂತೆ ನಾನಾ ಬಗೆಯ ಇಯರ್‌ಫೋನ್‌ಗಳು ಕೂಡ ಲಭ್ಯವಿವೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಸದ್ಯದ ಮಟ್ಟಿಗೆ ಯಾವುದೇ ಸ್ಮಾರ್ಟ್‌ಫೊನ್‌ ಬಾಕ್ಸ್‌ ಜೊತೆಗೆ ಇಯರ್‌ಫೋನ್‌ ಲಬ್ಯವಾಗುತ್ತಿಲ್ಲ. ಆದರೆ ಗ್ರಾಹಕರು ತಮಗೆ ಬೇಕಾದ ಇಯರ್‌ಫೋನ್‌ಗಳನ್ನ ಪ್ರತ್ಯೇಕವಾಗಿ ಖರೀದಿಸುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ಇಯರ್‌ಫೋನ್‌ಗಳನ್ನ ಪರಿಚಯಿಸಿದ್ದು, ಇದರಲ್ಲಿ ಸೋನಿ ಕಂಪೆನಿ ಕೂಡ ಒಂದಾಗಿದೆ.

ಸೋನಿ

ಹೌದು, ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿರುವ ಸೋನಿ ಕಂಪೆನಿ ತನ್ನ ಹೊಸ ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಸೋನಿ WH-CH710N ವಾಯರ್‌ಲೆಸ್‌ ಆಕ್ಟಿವ್ ನಾಯ್ಸ್‌ ಕ್ಯಾನ್ಸಲೇಶನ್‌ ಹೆಡ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ ಸೋನಿ WH-CH710N WH-CH700N ವಾಯರ್‌ಲೆಸ್ ನಾಯ್ಸ್‌ ಕ್ಯಾನ್ಸಲೇಶನ್‌ ಹೆಡ್‌ಫೋನ್‌ನ ಮುಂದುವರೆದ ಆವೃತ್ತಿಯಾಗಿದ್ದು, ಉತ್ತಮ ಬ್ಯಾಟರಿ ಬಾಳಿಕೆಯನ್ನ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಇಯರ್‌ಫೋನ್‌ ವಿನ್ಯಾಸ ಹಾಗೂ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸೋನಿ

ಸದ್ಯ ಸೋನಿ WH-CH710N ಇಯರ್‌ಫೋನ್‌ 2019 ರಲ್ಲಿ ಬಿಡುಗಡೆಯಾದ ಸೋನಿ WH-CH700Nನ ಮುಂದುವರೆದ ಆವೃತ್ತಿಯಾಗಿದೆ. ಇನ್ನು ಈ ಹೊಸ ಹೆಡ್‌ಸೆಟ್ ಸುಧಾರಿತ ಮಟ್ಟದ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಅವಧಿಯ ಭರವಸೆಯನ್ನು ಕಂಪೆನಿ ನೀಡಿದೆ. ಜೊತೆಗೆ ಸಿಂಗಲ್‌ ಚಾರ್ಜ್‌ಗೆ 35 ಗಂಟೆಗಳವರೆಗೆ ಬಾಳಿಕೆ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಈ ಇಯರ್‌ಫೋನ್‌ ಇನ್ಸ್‌ಟಂಟ್‌ ಚಾರ್ಜಿಂಗ್ ವ್ಯವಸ್ಥೆಯನ್ನ ಹೊಂದಿದೆ. ಅಲ್ಲದೆ 10 ನಿಮಿಷಗಳ ಚಾರ್ಜ್ ಒಂದು ಗಂಟೆ ಬಳಕೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಹೆಡ್‌ಫೋನ್

ಇನ್ನು ಈ ಹೆಡ್‌ಫೋನ್‌ಗಳು 30mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನ ಒಳಗೊಂಡಿರಲಿದೆ. ಇದಲ್ಲದೆ ಸೋನಿ WH-CH710N ನಲ್ಲಿ ಗೂಗಲ್ ಅಸಿಸ್ಟೆಂಟ್‌ಗೆ ಬೆಂಬಲವನ್ನು ಸಹ ನೀಡಲಿದೆ. ಜೊತೆಗೆ ಈ ಹೆಡ್‌ಫೋನ್‌ ಓವರ್-ಇಯರ್ ಫಿಟ್ ಆರಾಮವನ್ನು ನೀಡುತ್ತದೆ. ಇದಲ್ಲದೆ ಈ ಇಯರ್‌ಫೋನ್‌ ಕ್ರಿಯಾತ್ಮಕ ಸಕ್ರಿಯ ಶಬ್ದ ರದ್ದತಿ ಧ್ವನಿ ಗುಣಮಟ್ಟವನ್ನು ಸುಧಾರಿಸಲು ಮತ್ತು ವಿಶಿಷ್ಟ ಪರಿಸರದಲ್ಲಿ ಕೆಲವು ಶಬ್ದಗಳನ್ನು ಕಡಿತಗೊಳಿಸಲು ಸಹಾಯ ಮಾಡಲಿದೆ. SBC ಮತ್ತು AAC ಬ್ಲೂಟೂತ್ ಕೋಡೆಕ್‌ಗಳನ್ನು ಹೆಡ್‌ಫೋನ್‌ಗಳಲ್ಲಿ ಬೆಂಬಲಿಸುತ್ತದೆ. ಇದು WH-CH700N ಹೆಡ್‌ಫೋನ್‌ ಗಿಂತ ಉತ್ತಮ ಗುಣಮಟ್ಟತೆಯನ್ನ ಹೊಂದಿದೆ. ಅಲ್ಲದೆ ಇದು ಆಪ್ಟ್‌ಎಕ್ಸ್ ಮತ್ತು ಆಪ್ಟಿಎಕ್ಸ್ ಎಚ್‌ಡಿ ಬ್ಲೂಟೂತ್ ಕೋಡೆಕ್‌ಗಳನ್ನು ಸಹ ಬೆಂಬಲಿಸುತ್ತದೆ.

ಸೋನಿ

ಸೋನಿ WH-CH710N ಇಯರ್‌ಫೋನ್‌ 9,990,ರೂ ಬೆಲೆಯನ್ನ ಹೊಂದಿದೆ. ಇನ್ನು ಈ ಇಯರ್‌ಫೋನ್‌ ಸೆನ್ಹೈಸರ್ ಮತ್ತು ಪ್ಲೇಗೊ BH70 ನಂತಹ ಭಾರತೀಯ ಉತ್ಪನ್ನಗಳಿಂದ ಪೈಫೋಟಿಯನ್ನು ಸಹ ಎದುರಿಸಲಿದೆ ಎಂದು ಹೆದರಿಸಲಿದೆ. ಜೊತೆಗೆ ಕಳೆದ ವರ್ಷ ರೂ. 12,990, ಮತ್ತು ಕಡಿಮೆ ಬೆಲೆಗೆ ಸುಧಾರಿತ ಕಾರ್ಯಕ್ಷಮತೆ ಮತ್ತು ಉತ್ತಮ ಬ್ಯಾಟರಿ ಅವಧಿಯನ್ನು ಭರವಸೆ ನೀಡುತ್ತದೆ.

Best Mobiles in India

English summary
Sony WH-CH710N wireless active noise cancelling headphones have been launched in India, priced at Rs. 9,990.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X