Home
ಸುದ್ದಿಜಾಲ

ಸೋನಿ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ವಿಶೇಷತೆ ಏನು?

ಟೆಕ್‌ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿಯ ಡಿವೈಸ್‌ಗಳಿಗೆ ಸಿಕ್ಕಾಪಟ್ಟೆ ಕ್ರೇಜ್‌ ಇದೆ. ಅದರಲ್ಲೂ ಸೋನಿ ಕಂಪೆನಿಯ ಹೆಡ್‌ಫೋನ್‌ಗಳು ಮ್ಯೂಸಿಕ್‌ ಪ್ರಿಯರ ಹಾಟ್‌ ಫೇವರಿಟ್ ಎನಿಸಿಕೊಂಡಿವೆ. ಇದೇ ಕಾರಣಕ್ಕೆ ಸೋನಿ ಕಂಪೆನಿ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅನೇಕ ಹೆಡ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಹೊಸ ಸೋನಿ WH-CH720N ಹೆಡ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು ಹೊಸ ಓವರ್-ಇಯರ್ ಹೆಡ್‌ಫೋನ್‌ ಆಗಿದೆ.

ಸೋನಿ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ವಿಶೇಷತೆ ಏನು?

ಹೌದು, ಸೋನಿ ಕಂಪೆನಿ ಹೊಸದಾಗಿ ಸೋನಿ WH-CH720N ಹೆಡ್‌ಫೋನ್‌ ಲಾಂಚ್‌ ಮಾಡಿದೆ. ಇದು ಬ್ಲೂಟೂತ್ 5.2 ಮತ್ತು ಮಲ್ಟಿಪಾಯಿಂಟ್ ಕನೆಕ್ಟಿವಿಟಿಗೆ ಬೆಂಬಲವನ್ನು ಪಡೆದಿದೆ. ಇದರಿಂದ ಬಳಕೆದಾರರು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲು ಅನುಮತಿಸಲಿದೆ. ಜೊತೆಗೆ ಪ್ಲೇಬ್ಯಾಕ್‌ ಮತ್ತು ವಾಲ್ಯೂಮ್‌ ಹೊಂದಾಣಿಕೆಗಳಿಗಾಗಿ ವಾಯ್ಸ್‌ ಕಂಟ್ರೋಲ್‌ ಅನ್ನು ಒಳಗೊಂಡಿದೆ. ಹಾಗಾದ್ರೆ ಸೋನಿ WH-CH720N ಹೆಡ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ WH-CH720N ಹೆಡ್‌ಫೋನ್‌ ಫೀಚರ್ಸ್‌ ಹೇಗಿದೆ?

ಸೋನಿ WH-CH720N ಹೆಡ್‌ಫೋನ್‌ ಯುವಜನತೆಗೆ ಸೂಕ್ತವಾದ ಡಿಸೈನ್‌ ಹೊಂದಿದೆ. ಈ ಹೆಡ್‌ಫೋನ್‌ ಪ್ಲೇಬ್ಯಾಕ್ ಮತ್ತು ವಾಲ್ಯೂಮ್ ಹೊಂದಾಣಿಕೆಗಳಿಗಾಗಿ ವಾಯ್ಸ್‌ ಕಂಟ್ರೋಲ್‌ ಅನ್ನು ಹೊಂದಿದೆ. ಇನ್ನು ಈ ಹೆಡ್‌ಫೋನ್‌ ಓವರ್‌ ಇಯರ್‌ ಹೆಡ್‌ಫೋನ್‌ ಆಗಿದ್ದು, V1 ಇಂಟಿಗ್ರೇಟೆಡ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಹೆಡ್‌ಫೋನ್‌ ಕ್ಲಾಸ್-ಲೀಡಿಂಗ್ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು DSEE ಅಪ್‌ಸ್ಕೇಲಿಂಗ್‌ನಲ್ಲಿ ಚಿಪ್ ಪ್ರಮುಖ ಪಾತ್ರವನ್ನು ವಹಿಸಲಿದೆ.

ಸೋನಿ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ವಿಶೇಷತೆ ಏನು?

ಇನ್ನು ಹೆಡ್‌ಫೋನ್‌ ಪ್ರತಿ ಇಯರ್‌ಕಪ್‌ನಲ್ಲಿ ಎರಡು ಮೈಕ್‌ಗಳನ್ನು ಹೊಂದಿದೆ. ಇದರಿಂದ ವಾಯ್ಸ್‌ ಕಂಟ್ರೋಲ್‌ ಮಾಡಲು ಸೋನಿಯ ಡ್ಯುಯಲ್ ನಾಯ್ಸ್ ಸೆನ್ಸರ್ ಅಲ್ಗಾರಿದಮ್‌ಗಳನ್ನು ಬಳಸಲಾಗುತ್ತದೆ. ಇದು ವಿಭಿನ್ನ ಸ್ಥಳಗಳು ಅಥವಾ ಚಟುವಟಿಕೆಗಳಿಗಾಗಿ ವಿಭಿನ್ನ ANC ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ. ಇದಕ್ಕಾಗಿ ಅಡಾಪ್ಟಿವ್ ಸೌಂಡ್ ಕಂಟ್ರೋಲ್ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಈ ಹೆಡ್‌ಫೋನ್‌ 35 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದ್ದು, ಇದು ಕಪ್ಪು, ನೀಲಿ, ಬಿಳಿ ಮತ್ತು ಬೀಜ್ ಬಣ್ಣದ ನಾಲ್ಕು ಆಯ್ಕೆಗಳಲ್ಲಿ ಬರಲಿದೆ. ಇದರ ಬೆಲೆ $150 (ಅಂದಾಜು 12,426ರೂ) ಬೆಲೆಯಲ್ಲಿ ಲಭ್ಯವಾಗಲಿದೆ.

ಸೋನಿ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ವಿಶೇಷತೆ ಏನು?

ಇದಲ್ಲದೆ ಸೋನಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ವಾಕ್‌ಮ್ಯಾನ್‌ NW-ZX707 ಪರಿಚಯಿಸಿದೆ. ಇಂದಿನ ಯುವಜನತೆಯನ್ನು ಆಕರ್ಷಿಸುವ ವಿನ್ಯಾಸ ಪಡೆದಿರುವ ಈ ವಾಕ್‌ಮ್ಯಾನ್‌ DSD ರೀಮಾಸ್ಟರಿಂಗ್ ಎಂಜಿನ್‌ ಅನ್ನು ಒಳಗೊಂಡಿದೆ. ಇದು ಆಡಿಯೊಫೈಲ್ಸ್ ಮತ್ತು ಹೈ-ಫೈ ಉತ್ಸಾಹಿಗಳಿಗೆ ಸೂಕ್ತವಾದ ಡಿಸೈನ್‌ ಹೊಂದಿದೆ. ಜೊತೆಗೆ ಈ ವಾಕ್‌ಮ್ಯಾನ್‌ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಸೋನಿ ವಾಕ್‌ಮ್ಯಾನ್ NW-ZX707 5 ಇಂಚಿನ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಹೊಂದಿದ್ದು, ಅಲ್ಯೂಮಿನಿಯಂ ಫ್ರೇಮ್‌ ಪಡೆದುಕೊಂಡಿದೆ. ಇನ್ನು ಈ ವಾಕ್‌ಮ್ಯಾನ್‌ ವೈಫೈ ಕನೆಕ್ಟಿವಿಟಿಯನ್ನು ನೀಡಲಿದ್ದು, ಪ್ರಯಾಣ ಮಾಡುವಾಗಲೂ ಮ್ಯೂಸಿಕ್‌ ಅನ್ನು ಸ್ಟ್ರೀಮಿಂಗ್‌ ಮಾಡಲು ಅವಕಾಶ ಸಿಗಲಿದೆ. ಇದರಲ್ಲಿ ಹಾಡುಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, ಆಫ್‌ಲೈನ್‌ನಲ್ಲಿಯೂ ಸಹ ಮ್ಯೂಸಿಕ್‌ ಆಲಿಸಬಹುದಾಗಿದೆ. ಇನ್ನು ಇದರಲ್ಲಿರುವ DSD ರೀಮಾಸ್ಟರಿಂಗ್ ಇಂಜಿನ್ ಆಡಿಯೋವನ್ನು 11.2MHz DSD ಗೆ ರಿ ಸ್ಯಾಂಪಲ್ಸ್‌ ಮಾಡಲಿದೆ. ಇದರಿಂದ ಹಾಡುಗಳನ್ನು ಕೇಳುವವರಿಗೆ ಇದು ಹೆಚ್ಚು ಪರಿಷ್ಕೃತ ಅನುಭವವನ್ನು ನೀಡಲಿದೆ.

ಸೋನಿ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ವಿಶೇಷತೆ ಏನು?

ಸೋನಿ ವಾಕ್‌ಮ್ಯಾನ್‌ NW-ZX707 ಎಸ್‌-ಮಾಸ್ಟರ್‌ HX ಡಿಜಿಟಲ್ amp ಮತ್ತು AI-ಚಾಲಿತ ಸೌಂಡ್ ಎಂಜಿನ್ ಡಿಜಿಟಲ್ ಸೌಂಡ್ ಎನ್‌ಹಾನ್ಸ್‌ಮೆಂಟ್ ಎಂಜಿನ್ ಅಲ್ಟಿಮೇಟ್‌ನೊಂದಿಗೆ ಬರಲಿದೆ. ಇದರಿಂದ ರಿಯಲ್‌ ಟೈಂನಲ್ಲಿ ಮ್ಯೂಸಿಕ್‌ ಅನ್ನು ಹೈ ಎಂಡ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಇದರಲ್ಲಿರುವ CD ಗುಣಮಟ್ಟ 16-ಬಿಟ್ ಯಾವುದೇ ನಷ್ಟವಿಲ್ಲದ ಕೊಡೆಕ್ ಆಡಿಯೊವನ್ನು ಹೆಚ್ಚಿಸುವುದಕ್ಕೆ ಅವಕಾಶ ಕಲ್ಪಿಸಲಿದೆ. ಇನ್ನು ಈ ಡಿವೈಸ್‌ ಲಾಂಗ್‌ ಬ್ಯಾಟರಿ ಬ್ಯಾಕ್‌ ಅಪ್‌ ಅನ್ನು ನೀಡಲಿದೆ. ಸಿಂಗಲ್‌ ಚಾರ್ಜ್‌ನಲ್ಲಿ 23 ಗಂಟೆಗಳ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ.

Best Mobiles in India

English summary
Sony WH-CH720N Over-ear Headphones Launched: specs and price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+