ಸೋನಿ WH-H910N ವೈರ್‌ಲೆಸ್ ನಾಯಿಸ್‌ ಕ್ಯಾನ್ಸೆಲೇಶನ್‌ ಹೆಡ್‌ಫೋನ್‌ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈ ಗಳಲ್ಲೂ ಸ್ಮಾರ್ಟ್‌ಫೋನ್‌ಗಳು ಕಾಣಸಿಗುತ್ತವೆ. ಆದರೆ ಮೊದಲಿನಂತೆ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಫೋನ್‌ ಆಗಲಿ ಹೆಡ್‌ಫೋನ್‌ ಆಗಲಿ ಬರುವುದಿಲ್ಲ. ಬದಲಿಗೆ ಸ್ಮಾರ್ಟ್‌ಫೋನ್‌ಗಳಿಗೆ ತಕ್ಕಂತೆ ವೈವಿಧ್ಯಮಯ ಫೀಚರ್ಸ್‌ಗಳನ್ನ ಹೊಂದಿರುವ ಹಲವು ಕಂಪೆನಿಗಳ ಹೆಡ್‌ಫೋನ್‌ಗಳು ಕೂಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರು ತಮಗಿಷ್ಟವಾದ ಹೆಡ್‌ಫೋನ್‌ಗಳನ್ನ ಖರೀದಿಸುತ್ತಾರೆ. ಈಗಾಗ್ಲೆ ಸೋನಿ ಕಂಪೆನಿ ಕೂಡ ಹಲವು ಹೆಡ್‌ಫೋನ್‌ಗಳನ್ನ ಪರಿಚಯಿಸಿದ್ದು ಇದೀಗ ಹೊಸ ಹೆಡ್‌ಫೊನ್‌ ಅನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ.

ಹೌದು

ಹೌದು, ಜನಪ್ರಿಯ ಸೋನಿ ಕಂಪೆನಿ ಹೊಸ WH-H910N ವೈರ್‌ಲೆಸ್ ನಾಯಿಸ್‌ ಕ್ಯಾನ್ಸೆಲೇಶನ್‌ ಹೆಡ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಹೆಡ್‌ಫೋನ್‌ಗಳ ಆನ್‌ಲೈನ್ ಎಕ್ಸ್‌ಕ್ಲೂಸಿವ್ ಮಾರಾಟಕ್ಕಾಗಿ ಕಂಪನಿಯು ಫ್ಲಿಪ್‌ಕಾರ್ಟ್ ಜೊತೆ ಪಾಲುದಾರಿಕೆ ಹೊಂದಿದೆ. ಅಲ್ಲದೆ ಇಂದಿನಿಂದಲೇ ಗ್ರಾಹಲರು ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಹೆಡ್‌ಫೋನ್‌ಗಳನ್ನು ಖರೀದಿಸ ಬಹುದಾಗಿದ್ದು, 21,990 ರೂ ಗಳಿಗೆ ಲಭ್ಯವಾಗಲಿದೆ.

WH-H910N ಹೆಡ್‌ಫೋನ್‌ ವಿಶೇಷ

WH-H910N ಹೆಡ್‌ಫೋನ್‌ ವಿಶೇಷ

WH-H910N ವೈರ್‌ಲೆಸ್ ನಾಯಿಸ್‌ಲೆಸ್‌ ಹೆಡ್‌ಫೋನ್‌ ‘ಡ್ಯುಯಲ್ ನಾಯ್ಸ್ ಸೆನ್ಸರ್' ಟೆಕ್ನಾಲಜಿಯನ್ನ ಹೊಂದಿದ್ದು, ಇದರಿಂದ ನೀವು ಸಂಗೀತದ ಬಗ್ಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗಲಿದೆ. ಅಲ್ಲದೆ ಇದು ನಮ್ಮ ಸುತ್ತಮುತ್ತಲಿನ ಶಬ್ಧವನ್ನು ಕೇಳದಂತೆ ಮಾಡುತ್ತದೆ. ಇ ಕಾರಣಕ್ಕಾಗಿ ನಿಮಗೆ ಈ ಹೆಡ್‌ಫೋನ್‌ನಿಂದ ಪರಿಣಾಮಕಾರಿಯಾದ ಸಂಗೀತದ ಅನುಭವ ಸಿಗಲಿದೆ. ಅಲ್ಲದೆ ವಾಲ್ಯೂಮ್‌ ಅನ್ನು ಸರಿದೂಗಿಸಲು ‘ಕ್ವಿಕ್‌ ಅಟೆನ್ಷನ್‌' ಮೋಡ್ ಇದೆ. ಇದರಿಂದ ನಿಮಗೆ ಬೇಕಾದಂತೆ ವಾಲ್ಯೂಮ್‌ ಅನ್ನು ಸರಿದೂಗಿಸಿಕೊಳ್ಳಬಹುದು.

ಫೀಚರ್ಸ್‌

ಫೀಚರ್ಸ್‌

ಸೋನಿ WH-H910N ವೈರ್‌ಲೆಸ್ ನಾಯಿಸ್‌ಲೆಸ್‌ ಹೆಡ್‌ಫೋನ್‌ನಲ್ಲಿ ಶಕ್ತಿಯುತ 25mm ಆಡಿಯೋ ಡ್ರೈವರ್‌ಗಳನ್ನು ನೀಡಲಾಗಿದ್ದು, ಧ್ವನಿ ಒತ್ತಡವನ್ನ ನಿಯಂತ್ರಿಸುವಲ್ಲಿ ಉತ್ತಮವಾಗಿವೆ. ಅಲ್ಲದೆ ಇವುಗಳಲ್ಲಿ ಟಚ್ ಸೆನ್ಸರ್‌ಗಳನ್ನ ನೀಡಲಾಗಿದ್ದು, ಇದರಿಂದ ನಿಮ್ಮ ಹೆಡ್‌ಫೋನ್‌ಗಳನ್ನು ನಿಯಂತ್ರಿಸಲು ನಿಮಗೆ ಅವಕಾಶ ಸಿಗಲಿದೆ. ಇದಲ್ಲದೆ ಫೋನ್ ಕರೆಗಳಿಗೆ ಉತ್ತರಿಸಲು, ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡಲು ಗೂಗಲ್‌ ಅಸಿಸ್ಟೆಂಟ್‌ ಹಾಗೂ ಸಿರಿ ಆಪ್ಲಿಕೇಶನ್‌ ಅನ್ನು ಸಕ್ರಿಯಗೊಳಿಸಲು ಇದು ನಿಮಗೆ ಅವಕಾಶ ಕಲ್ಪಿಸಿದೆ.

ವಿನ್ಯಾಸ

ವಿನ್ಯಾಸ

ಸೋನಿ ಕಂಪೆನಿಯ ಹೊಸ ಹೆಡ್‌ಫೋನ್‌ ಉತ್ತಮ ವಿನ್ಯಾಶವನ್ನು ಹೊಂದಿದ್ದು, ಇಂದಿನ ಯುವಜನತೆಯ ಆಶಯಕ್ಕೆ ತಕ್ಕಂತ ವಿನ್ಯಾಸವನ್ನ ಹೊಂದಿದೆ. ಗ್ರಾಹಕರ ಕಿವಿಗಳಿಗೆ ಸರಿಹೊಂದುವಂತೆ ರೂಪುಗೊಳಿಸಲಾಗಿದ್ದು, ಉತ್ತಮವಾದ ಸಂಗೀತವನ್ನ ಆಲಿಸಬಹುದಾಗಿದೆ. ಅಷ್ಟೇ ಅಲ್ಲ ಈ ಹೆಡ್‌ಫೊನ್‌ಗಳು ಬೆವರು ನಿರೋಧಕವಾಗಿದ್ದು ಉತ್ತಮ ಸೌಂಡ್‌ ಸಿಸ್ಟಂ ಅನ್ನು ಸಹ ಹೊಂದಿದೆ. ಜೊತೆಗೆ ಈ ಹೆಡ್‌ಫೋನ್‌ಗಳು ಟಚ್‌ ಸೆನ್ಸಾರ್‌ ಹೊಂದಿರುವುದರಿಂದ ಟಚ್‌ ಮೂಲಕವೇ ಕರೆಗಳಿಗೆ ಉತ್ತರಿಸಬಹುದಾಗಿದೆ.

ಬ್ಯಾಟರಿ ಮತ್ತು ಬೆಲೆ

ಬ್ಯಾಟರಿ ಮತ್ತು ಬೆಲೆ

ಸೋನಿ WH-H910N ಹೆಡ್‌ಫೋನ್‌ 35 ಗಂಟೆಗಳವರೆಗೆ ಪವರ್‌ ನೀಡುವ ಬ್ಯಾಟರಿ ಪ್ಯಾಕ್‌ ಅಪ್‌ಅನ್ನು ಹೊಂದಿದೆ. ಅಲ್ಲದೆ ಈ ಹೆಡ್‌ಫೋನ್‌ಗಳು ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದ್ದು, ಇದು 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 2.5 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್‌ ಅನ್ನು ನೀಡುತ್ತದೆ. ಸದ್ಯ ಇದರ ಬೆಲೆ 21,990 ರೂ ಆಗಿದ್ದು, ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
Sony has launched its latest WH-H910N wireless noise cancellation headphones in India for Rs 21,990. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X