Home
ಸುದ್ದಿಜಾಲ

ಸೋನಿ ಎಕ್ಸ್‌ಪೀರಿಯಾ 1V ಮೂಲಕ ಮತ್ತೊಮ್ಮೆ ಸಂಚಲನ ಸೃಷ್ಟಿಸಲಿದೆಯಾ ಸೋನಿ!

ಒಂದು ಕಾಲದಲ್ಲಿ ಟೆಕ್‌ ವಲಯದ ಸನ್ಸೇಷನ್‌ ಎನಿಸಿಕೊಂಡಿದ್ದ ಸೋನಿ ಕಂಪೆನಿ ಇದೀಗ ಮತ್ತೊಮ್ಮೆ ಸೌಂಡ್‌ ಮಾಡುವ ಸೂಚನೆ ನೀಡಿದೆ. ತನ್ನ ಹೊಸ ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ತಯಾರಿ ನಡೆಸಿದ್ದು, ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ ಮೂಲಕ ಸಂಚಲನ ಸೃಷ್ಟಿಸಿದೆ. ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ.

ಸೋನಿ ಎಕ್ಸ್‌ಪೀರಿಯಾ 1V ಮೂಲಕ ಮತ್ತೊಮ್ಮೆ ಸಂಚಲನ ಸೃಷ್ಟಿಸಲಿದೆಯಾ ಸೋನಿ!

ಹೌದು, ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದರ ಫೀಚರ್ಸ್‌ ಇದೀಗ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಕಾರ್ಯಕ್ಷತೆ ಹಾಗೂ ಕ್ಯಾಮೆರಾ ಸೆಟ್‌ಅಪ್‌ ವಿನ್ಯಾಸ ಸಾಕಷ್ಟು ಗಮನಸೆಳೆದಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಬರಲಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಎಕ್ಸ್‌ಪೀರಿಯಾ 1V ಡಿಸ್‌ಪ್ಲೇ ಹೇಗಿರಲಿದೆ?

ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ 6.5-ಇಂಚಿನ QHD+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1Hz ನಿಂದ 120 Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್‌ ಬೆಂಬಲಿಸುವ ಸಾಧ್ಯತೆಯಿದೆ. ಜೊತೆಗೆ ಈ ಡಿಸ್‌ಪ್ಲೇ E6 ಅಮೋಲೆಡ್‌ ಡಿಸ್‌ಪ್ಲೇ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಸೋನಿ ಎಕ್ಸ್‌ಪೀರಿಯಾ 1V ಮೂಲಕ ಮತ್ತೊಮ್ಮೆ ಸಂಚಲನ ಸೃಷ್ಟಿಸಲಿದೆಯಾ ಸೋನಿ!

ಸೋನಿ ಎಕ್ಸ್‌ಪೀರಿಯಾ 1V ಪ್ರೊಸೆಸರ್‌ ಯಾವುದು?

ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen2 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ 12 GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ಹೊಂದಿರುವ ಸಾಧ್ಯತೆಯಿದೆ.

ಸೋನಿ ಎಕ್ಸ್‌ಪೀರಿಯಾ 1V ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸೆಲ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಸೆಟ್‌ಅಪ್‌ ಅನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಸೋನಿ ಎಕ್ಸ್‌ಪೀರಿಯಾ 1V ಮೂಲಕ ಮತ್ತೊಮ್ಮೆ ಸಂಚಲನ ಸೃಷ್ಟಿಸಲಿದೆಯಾ ಸೋನಿ!

ಸೋನಿ ಎಕ್ಸ್‌ಪೀರಿಯಾ 1V ಬ್ಯಾಟರಿ ಬ್ಯಾಕ್‌ಅಪ್‌ ನಿರೀಕ್ಷೆ ಏನು?

ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ವೇಗದ ಚಾರ್ಜಿಂಗ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಜ್ಯಾಕ್, ಮೈಕ್ರೋ SD ಸ್ಲಾಟ್, USB 4.0, IP68 ಪ್ರಮಾಣೀಕರಣವನ್ನು ಹೊಂದಿದೆ ಎನ್ನಲಾಗಿದೆ. ಹೆಡ್‌ಫೋನ್ ಜ್ಯಾಕ್, ಶಟರ್ ಬಟನ್ ಮತ್ತು ಇನ್‌ಬಿಲ್ಟ್ ಫಿಂಗರ್‌ಪ್ರಿಂಟ್ ರೀಡರ್ ಹೊಂದಿರುವ ಪವರ್ ಬಟನ್ ಡಿವೈಸ್‌ ಹೊಂದಿರಲಿದೆ.

ಸೋನಿ ಕಂಪೆನಿಯ ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸ್ಮಾರ್ಟ್‌ಫೋನ್‌ ತನ್ನ ಸೊಗಸಾದ ನೋಟ, ಶಕ್ತಿಯುತ ಕಾರ್ಯಕ್ಷಮತೆ ಮತ್ತು ಪ್ರಭಾವಶಾಲಿ ಛಾಯಾಗ್ರಹಣ ಸಾಮರ್ಥ್ಯದಿಂದ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಸಾದ್ಯತೆಯಿದೆ. ಈ ಮೂಲಕ ಒಂದು ಕಾಲದಲ್ಲಿ ತನ್ನ ಮೊಬೈಲ್‌ ಫೋನ್‌ಗಳ ಮೂಲಕ ಹೊಸ ಅಲೆಯನ್ನೇ ಎಬ್ಬಿಸಿದ್ದ ಸೋನಿ ಕಂಪೆನಿ ಮತ್ತೊಮ್ಮೆ ತನ್ನ ಗತವೈಭವಕ್ಕೆ ಮರಳುವ ಸೂಚನೆ ನೀಡಿದೆ. ಈ ನಿರೀಕ್ಷೆ ನಿಜವಾಗಲಿದೆಯಾ ಅನ್ನೊದನ್ನ ಸ್ಮಾರ್ಟ್‌ಫೋನ್‌ ಲಾಂಚ್‌ ಆದ ನಂತರ ತಿಳಿಯಲಿದೆ.

Best Mobiles in India

English summary
The design of the Sony Xperia 1V is the first thing that stands out. The gadget has a sleek and modern appearance, with minimal bezels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+