ಸೋನಿ ಎಕ್ಸ್‌ಪಿರಿಯಾ ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ!..4K OLED ಡಿಸ್‌ಪ್ಲೇ!
ಸೋನಿ ಕಂಪನಿಯು ಜನಪ್ರಿಯ ಎಕ್ಸಪಿರಿಯಾ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹಲವು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಸಂಸ್ಥೆಯು ಈ ಹಿಂದೆ ಎಕ್ಸ್‌ಪಿರಿಯಾ 5 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿ ಗಮನ ಸೆಳೆದಿತ್ತು. ಇದೀಗ ಅದೇ ಸರಣಿಯಲ್ಲಿ ಮತ್ತೆ ಹೊಸದಾಗಿ ಸೋನಿ ಎಕ್ಸ್‌ಪಿರಿಯಾ ಪ್ರೊ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ.

ಹೌದು, ಜನಪ್ರಿಯ ಸೋನಿ ಸಂಸ್ಥೆಯು ಇದೀಗ ಎಕ್ಸ್‌ಪಿರಿಯಾ ಪ್ರೊ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಇನ್ನು ಈ ಫೋನ್ ಮೈಕ್ರೋ HDMI ಕನೆಕ್ಟರ್ ಆಯ್ಕೆ ಒಳಗೊಂಡಿದ್ದು, ಕ್ಯಾಮೆರಾಗೆ ಫೋನ್ ಕನೆಕ್ಟ್ ಮಾಡಲು ಪ್ರೊಫೇಶನಲ್ ಪೋಟೋಗ್ರಾಫರ್‌ಗಳಿಗೆ ಈ ಆಯ್ಕೆ ಅನುಕೂಲವಾಗಲಿದೆ. ಜೊತೆಗೆ OLED ಡಿಸ್‌ಪ್ಲೇ, ಹಾಗೂ ಅಧಿಕ RAM ಆಯ್ಕೆಗಳನ್ನು ಹೊಂದಿದೆ. ಇನ್ನುಳಿದಂತೆ ಸೋನಿ ಎಕ್ಸ್‌ಪಿರಿಯಾ ಪ್ರೊ ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

OLED ಡಿಸ್‌ಪ್ಲೇ ರಚನೆ
ಎಕ್ಸ್‌ಪಿರಿಯಾ ಪ್ರೊಸ್ಮಾರ್ಟ್‌ಫೋನ್ 1,644x3,840 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ ಡಿಸ್‌ಪ್ಲೇಯ ಅನುಪಾತವು 21:9 ಇದ್ದು, ಅಧಿಕ ರೀಫ್ರೇಶ್ ರೇಟ್ ಒಳಗೊಂಡಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್ 6 ರಕ್ಷಣೆಯನ್ನು ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ
ಎಕ್ಸ್‌ಪಿರಿಯಾ ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಆಂಡ್ರಾಯ್ಡ್ 10 ಓಎಸ್ ಹಾಗೂ 12GB RAM ಮತ್ತು 512GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 1TB ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ ವಿಶೇಷತೆ
ಎಕ್ಸ್‌ಪಿರಿಯಾ ಪ್ರೊ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್ ಅನ್ನು ಪಡೆದಿದೆ. ಹಾಗೆಯೇ ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು ಸಹ 12ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಫ್ರಂಟ್ ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಸೌಲಭ್ಯಗಳು
ಎಕ್ಸ್‌ಪಿರಿಯಾ ಪ್ರೊ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಇದರೊಂದಿಗೆ ಮೈಕ್ರೋ HDMI, ಬ್ಲೂಟೂತ್ 5, ಎನ್‌ಎಫ್‌ಸಿ, ಯುಎಸ್‌ಬಿ 3.1, ಯುಎಸ್‌ಬಿ ಟೈಪ್-ಸಿ ಪೋರ್ಟ್, ಎನ್‌ಎಫ್‌ಸಿ, ಫಿಂಗರ್‌ಪ್ರಿಂಟ್ ಸೆನ್ಸಾರ್, ಡಾಲ್ಬಿ ಸೌಂಡ್, ಆಡಿಯೊ ಜಾಕ್ ಸೇರಿದಂತೆ ಸ್ಟಿರಿಯೊ ಸ್ಪಿಕರ್ಸ್‌ಗಳ ಸೌಲಭ್ಯಗಳಿವೆ. ಈ ಸ್ಮಾರ್ಟ್‌ಫೋನ್ ಬೆಲೆಯು $2,499.99 ಆಗಿರಲಿದೆ. (ಭಾರತದಲ್ಲಿ ಅಂದಾಜು 1,82,500ರೂ. ಎನ್ನಲಾಗಿದೆ).


Click it and Unblock the Notifications