ಸೋನಿ ಎಕ್ಸ್ಪೀರಿಯಾ ಎಕ್ಸ್ಎ 1ಅಲ್ಟ್ರಾ ಭಾರತದಲ್ಲಿ ಲಾಂಚ್
4ಜಿಬಿ ರಾಮ್ ಹಾಗೂ 23ಎಂಪಿ ಕ್ಯಾಮೆರಾ ಹೊಂದಿರುವ ಸೋನಿ ಎಕ್ಸ್ಪೀರಿಯಾ ಎಕ್ಸ್ಎ 1ಅಲ್ಟ್ರಾ ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ದೇಶದ ಎಲ್ಲಾ ರೀಟೇಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.
ಹಲವಾರು ಅತ್ಯಾಕರ್ಷಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆವಿಷ್ಕರಿಸುವ ಮೂಲಕ ಗ್ರಾಹಕರ ವಿಶ್ವಾಸಾರ್ಹತೆ ಗಿಟ್ಟಿಸಿಕೊಂಡಿರುವ ಸೋನಿ ಕಂಪನಿ ಇದೀಗ ತನ್ನ ಹೊಸ ಸೋನಿ ಎಕ್ಸ್ಪೀರಿಯಾ ಎಕ್ಸ್ಎ 1ಅಲ್ಟ್ರಾ ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇದರ ಖರೀದಿ ಬೆಲೆ 29,990ರೂ. ಗಳಾಗಿದ್ದು, ದೇಶದ ಎಲ್ಲಾ ರೀಟೇಲ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಕಪ್ಪು, ಬಿಳಿ ಹಾಗೂ ಗೋಲ್ಡ್ ಬಣ್ಣದ ಮೂರು ಬಗೆಯ ವಿನ್ಯಾಸದಲ್ಲಿ ಬಿಡುಗಡೆ ಮಾಡಲಾಗಿದೆ.

ಸೋನಿ ಎಕ್ಸ್ಪೀರಿಯಾ ಎಕ್ಸ್ಎ 1 ಅಲ್ಟ್ರಾವನ್ನು ಖರೀದಿಸಲು ಆಕರ್ಷಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡಿದೆ. ರೂ.1,490 ಬೆಲೆಯ ತ್ವರಿತ ಚಾರ್ಜರ್ ಯುಸಿಎಚ್ 12 ಬಾಕ್ಸ್ ಹಾಗೂ ಮೂರು ತಿಂಗಳು ಉಚಿತ ಸೋನಿ ಲೈವ್ ಆಫರ್ ಕೊಡುಗೆಯಾಗಿ ನೀಡುತ್ತಿದೆ. ಜೊತೆಗೆ ಸ್ಟೈಲ್ ಕವರ್ ಸ್ಟ್ಯಾಂಡ್ ಖರೀದಿಸಿದರೆ ರೂ.1,000 ರಿಯಾಯಿತಿಯನ್ನು ನೀಡುತ್ತಿದೆ.
ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುವ ಸಲುವಾಗಿ ಸೋನಿ ಎಕ್ಸ್ಪೀರಿಯಾ ಎಕ್ಸ್ಎ1 ಅಲ್ಟ್ರಾ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಮತ್ತೆ ಅನಾವರಣಗೊಳಿಸಿದೆ.
ಈ ಸ್ಮಾರ್ಟ್ಫೋನ್ ಮೆಟಲ್ ಯುನಿಬೋಡಿಯೊಂದಿಗೆ ವಿನ್ಯಾಸ ಮಾಡಲಾಗಿದೆ. ಇದರ ಡಿಸ್ಪ್ಲೆ ಸುತ್ತಲೂ ಇರುವ ಬೆಜೆಲ್ಸ್ ಕಿರಿದಾಗಿದ್ದರೂ, ಮೇಲೆ ಮತ್ತು ಕೆಳಭಾಗದ ಬೆಜೆಲ್ಸ್ ತುಂಬಾ ದಪ್ಪವಾಗಿರುತ್ತದೆ. ಭೌತಿಕ ಹೋಮ್ ಬಟನ್ ಒಳಗೊಂಡಿಲ್ಲ. ಹಿಂಬದಿಯಲ್ಲಿ ಎಲ್ಇಡಿ ಫ್ಲಾಷ್ ಜೊತೆಗೆ ಒಂದೇ ಕ್ಯಾಮರಾ ಲೆನ್ಸ್ ಹೊಂದಿದೆ.
ಈ ಸ್ಮಾರ್ಟಫೋನ್ ವಿಶೇಷತೆ ಬಗ್ಗೆ ಹೇಳುವುದಾದರೆ, ಸೋನಿ ಎಕ್ಸ್ಪೀರಿಯಾ ಎಕ್ಸ್ಎ 1 ಅಲ್ಟ್ರಾ 6 ಇಂಚು ಎಫ್ಎಚ್ಡಿ ಡಿಸ್ಪ್ಲೇ ಜೊತೆಗೆ 1080×1920 ಪಿಕ್ಸೆಲ್ಸ್ ರೆಸಲ್ಯೂಶನ್ ಹೊಂದಿದೆ. ಒಳಭಾಗದಲ್ಲಿ ಮೇಲಿ ಟಿ880 ಎಂಪಿ2 900MHz ಜಿಪಿಯು ಯೊಂದಿಗೆ ಜೋಡಿಯಾಗಿರುವ ಒಂದು ಆಕ್ಟಾ-ಕೋರ್ 64-ಬಿಟ್ ಮೀಡಿಯಾ ಟೆಕ್ ಹೆಲಿಯೊ ಪ್ರೊಸೆಸರ್ ಅನ್ನು ಪ್ಯಾಕ್ ಮಾಡಲಾಗಿದೆ.
ಈ ಸ್ಮಾರ್ಟ್ಫೋನ್ ಮೆಮೊರಿಯು 4ಜಿಬಿ ರಾಮ್ ಮತ್ತು 64ಜಿಬಿ ಆಂತರಿಕ ಸಾಮರ್ಥ್ಯ ಒಳಗೊಂಡಿದೆ. ಇದು ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮೂಲಕ 256ಜಿಬಿ ವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ.
ಸೋನಿ ಎಕ್ಸ್ಪೀರಿಯಾ ಎಕ್ಸ್ಎ 1 ಅಲ್ಟ್ರಾದ ಹೈಲೈಟ್ ವಿಚಾರಗಳೆಂದರೆ, ಹಿಂದಿನ ಮತ್ತು ಮುಂಭಾಗದಲ್ಲಿ ಶಕ್ತಿಯುತ ಕ್ಯಾಮರಾ ಹೊಂದಿದೆ. ಹಿಂಬದಿ ಕ್ಯಾಮೆರಾವು ಫ್ಲಾಂಟ್ಸ್ 23ಎಂಪಿ ಎಕ್ಸ್ಮೋರ್ ಆರ್ಎಸ್ ಲೆನ್ಸ್ ನೊಂದಿಗೆ ಹೈಬ್ರಿಡ್ ಆಟೋಫೋಕಸ್, 24ಎಂಎಂ ವಿಶಾಲ ಕೋನಿನ ಲೆನ್ಸ್, ಎಫ್/2.0 ದ್ಯುತಿರಂಧ್ರ, 5ಎಕ್ಸ್ ಜೂಮ್, ಮತ್ತು ಎಚ್ಡಿಆರ್ ಮೋಡ್ ಒಳಗೊಂಡಿದೆ.
ಅಂತೆಯೇ, ಮುಂಭಾಗದ ಕ್ಯಾಮೆರಾವು 16ಎಂಪಿ ಎಕ್ಸ್ಮೋರ್ ಆರ್ಎಸ್ ಸೆನ್ಸಾರ್ ಹೊಂದಿದೆ. ಇದು 23 ಎಂಎಂ ವಿಶಾಲ ಆಂಗಲ್ ಲೆನ್ಸ್, ಎಫ್/2.0 ಅಪರ್ಚರ್, ಒಐಎಸ್, ಮತ್ತು ಆಟೋಫೋಕಸ್ ಹೊಂದಿದೆ. ಮುಂಭಾಗದ ಕ್ಯಾಮೆರಾ ಕೂಡ ಎಲ್ಇಡಿ ಫ್ಲಾಶ್ ಒಳಗೊಂಡಿದೆ.
ಸ್ಮಾರ್ಟ್ಫೋನ್ 2700ಎಂಎಎಚ್ ಬ್ಯಾಟರಿಯಿಂದ ಅದರ ಶಕ್ತಿಯನ್ನು ಸೆಳೆಯುತ್ತಿದೆ. ಇದು ಆಂಡ್ರಾಯ್ಡ್ 7.0 ನೌಗಾಟ್ ನೊಂದಿದೆ ಕಾರ್ಯನಿರ್ವಹಿಸುತ್ತದೆ. ಸೋನಿ ಎಕ್ಸ್ಪೀರಿಯಾ ಎಕ್ಸ್ಎ 1 ಅಲ್ಟ್ರಾ ಎಲ್ಟಿಇ(4ಜಿ), ಎಲ್ಟಿಇ ಕ್ಯಾಟ್ 6/4, ಜಿಎಸ್ಎಂ ಜಿಪಿಆರ್ಎಸ್/ಎಡ್ಜ್(2ಜಿ) ಮತ್ತು ಯುಎಂಟಿಎಸ್ ಎಚ್ಎಸ್ಪಿಎ+(3ಜಿ) ಸೇವೆ ನೀಡಲಿದೆ.


Click it and Unblock the Notifications








