ಸೋನಿ ಎಕ್ಸ್‌ಪೀರಿಯಾ xz ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತ!
ನೀವು ಖರೀದಿಸಬೇಕು ಎಂದುಕೊಳ್ಳುವ ಮೊಬೈಲ್ ಒಂದರ ಬೆಲೆಯು ಗಣನೀಯವಾಗಿ ಇಳಿಮುಖವಾಗಿದೆ ಎಂದರೆ ಎಷ್ಟು ಖುಷಿಯಾಗುತ್ತದೆ ಅಲ್ಲವೇ? ಅಥವಾ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ, ಆಫರ್ ಇದೆ ಎಂದರೆ ಅದರಷ್ಟು ಪರಮಾನಂದವಾಗುವ ವಿಚಾರ ಗೆಜೆಟ್ ಪ್ರಿಯರಿಗೆ ಮತ್ತೊಂದಿಲ್ಲ. ಅಂತಹದ್ದೇ ಒಂದು ಖುಷಿಯ ಸಮಾಚಾರವನ್ನು ನಾವಿವತ್ತು ನಿಮಗೆ ನೀಡುತ್ತಿದ್ದೇವೆ.
ಹೌದು ಇದು ಸೋನಿ ಮೊಬೈಲ್ ಪ್ರಿಯರಿಗೆ ಸಿಗುತ್ತಿರುವ ಸಿಹಿಸುದ್ದಿ..ಸೋನಿಯ ಎಕ್ಸ್ ಪೀರಿಯಾ XZ ಮೊಬೈಲಿನ ಬೆಲೆಯು ದೊಡ್ಡ ಮೊತ್ತದಲ್ಲಿ ಅಂದರೆ 10,000 ರುಪಾಯಿ ಕಡಿಮೆಯಾಗುತ್ತಿದೆ. 39,990 ರುಪಾಯಿ ಇದ್ದ ಈ ಮೊಬೈಲ್ ಈಗ 29,990 ರುಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.

ಕಳೆದ ವರ್ಷ ಸೋನಿ ಎಕ್ಸ್ ಪೀರಿಯಾ XZ ಮೊಬೈಲ್ 49,990 ರುಪಾಯಿಯ ಮುಖಬೆಲೆಗೆ ಬಿಡುಗಡೆಗೊಂಡಿತ್ತು. ಸೋನಿಯು ಇತರೆ ಎರಡು ಫೋನ್ ಗಳಾದ ಎಕ್ಸ್ ಪೀರಿಯಾ ಎಲ್ 2 ಮತ್ತು ಎಕ್ಸ್ ಪೀರಿಯಾ ಆರ್1 ಫೋನಿನ ಬೆಲೆಯನ್ನೂ ಕಡಿಮೆ ಮಾಡಿದ್ದು 5000 ರುಪಾಯಿ ಮತ್ತು 1000 ರುಪಾಯಿ ಕ್ರಮವಾಗಿ ಇಳಿಮುಖ ಮಾಡಲಾಗಿದೆ. ಅಂದರೆ ಎಕ್ಸ್ ಪೀರಿಯಾ ಎಲ್ 2 ಬೆಲೆ 19,990 ರುಪಾಯಿ ಇದ್ದದ್ದು ಈಗ 14,990 ರುಪಾಯಿಗೆ ಮತ್ತು 10,990 ರುಪಾಯಿ ಇದ್ದ ಎಕ್ಸ್ ಪೀರಿಯಾ ಆರ್ 1 ಬೆಲೆ 9,990 ರುಪಾಯಿಗೆ ಲಭ್ಯವಾಗುತ್ತದೆ.
ಎಕ್ಸ್ ಪೀರಿಯಾ XZ ಒಂದು ವರ್ಷ ಹಿಂದಿನ ಫೋನ್ ಆಗಿದೆ, ಆದರೆ ಅದರಲ್ಲಿರುವ ಕೆಲವು ತಂತ್ರಜ್ಞಾನಗಳೂ ಇಂದಿಗೂ ಪ್ರಸ್ತುತವಾಗಿದೆ.ಇದರಲ್ಲಿ 19-ಮೆಗಾ ಪಿಕ್ಸಲ್ ನ ಮೋಷನ್ ಐ ಕ್ಯಾಮರಾ ಸಿಸ್ಟಮ್ ಇದ್ದು ಲೇಸರ್ ಅಟೋ ಫೋಕಸ್ ಮತ್ತು ಪ್ರಿಡಿಕ್ಟೀವ್ ಪೇಸ್ ಡಿಟೆಕ್ಷನ್ ಜೊತೆಗಿದೆ. ಆದರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಷನ್ ಇಲ್ಲ.. ಸ್ಲೋ ಮೋಷನ್ ವೀಡಿಯೋಗಳನ್ನು ತೆಗೆಯಲು ಅವಕಾಶ ಇದರಲ್ಲಿ ಅವಕಾಶವಿದೆ.
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಯಾವುದೇ ಫೋನ್ ಗಿಂತ 4 ಪಟ್ಟು ಕಡಿಮೆ ಸ್ಲೋಮೋಷನ್ ಮೋಡ್ ನಲ್ಲಿ ವೀಡಿಯೋ ಚಿತ್ರೀಕರಣ ಮಾಡಲು ಇದರಲ್ಲಿ ಸಾಧ್ಯವಿದೆ.. ಸೋನಿ ಇದನ್ನು ಸಾಧಿಸಲು ಸಾಧ್ಯವಾಗಿದ್ದು 128ಎಂಬಿಯ ಡ್ರ್ಯಾಮ್ ಲೇಯರ್ ನ ಮೆಮೊರಿಯನ್ನು ಹೊಂದಿಸುವ ಸಹಾಯದಿಂದಾಗಿ ಇದನ್ನು ಸಾಧಿಸಲಾಗಿದೆ. ಇದರ ಜೊತೆಗೆ 4ಕೆ ವೀಡಿಯೋಗಳನ್ನು ರೆಕಾರ್ಡ್ ಮಾಡಲು ಇದರಲ್ಲಿ ಸಾಧ್ಯವಿದೆ,
ಎಕ್ಸ್ ಪೀರಿಯಾ XZ 5.2 ಫುಲ್-HD 1080p ಡಿಸ್ಪ್ಲೇ ಯನ್ನು ಹೊಂದಿದೆ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 820 ಪ್ರೊಸೆಸರ್ ಜೊತೆಗೆ 4ಜಿಬಿ RAM ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ಇದ್ದು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮತ್ತಷ್ಟು ಹಿಗ್ಗಿಸಿಕೊಳ್ಳುವ ಅವಕಾಶವಿದೆ. 13 ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾ ಕೂಡ ಇದೆ.

ಡುಯಲ್ ಸಿಮ್ ಗೆ ಈ ಫೋನ್ ಅವಕಾಶ ನೀಡುತ್ತದೆ. ಆಂಡ್ರಾಯ್ಡ್ 7.1.1 Nougat ನಲ್ಲಿ ರನ್ ಆಗುತ್ತದೆ. ಕಂಪೆನಿಯು ಹೇಳುವಂತೆ ಇದರಲ್ಲಿ ಅಡಪ್ಟೀವ್ ಚಾರ್ಜಿಂಗ್ ಗೆ ಅವಕಾಶವಿದ್ದು, ಬ್ಯಾಟರಿ ಸಮಸ್ಯೆ ಆಗದಂತೆ ತಡೆಯುವ ಸಾಮರ್ಥ್ಯವನ್ನು ಇದು ಹೊಂದಿದೆ ಎನ್ನಲಾಗುತ್ತದೆ. ಫೋನಿನ ಬ್ಯಾಟರಿಯ ಸಾಮರ್ಥ್ಯ 2,900mAh ಆಗಿದೆ.ಇದು ಕ್ವಾಲ್ಕಂ ಕ್ವಿಕ್ ಚಾರ್ಜ್ 3.0 ವನ್ನು ಬೆಂಬಲಿಸುತ್ತದೆ. 45 ನಿಮಿಷಕ್ಕೆ ಶೇಕಡಾ 60 ರಷ್ಟು ಚಾರ್ಜ್ ಆಗುತ್ತದೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಇಂತಹ ಒಂದು ಫೋನಿನ ಬೆಲೆಯಲ್ಲಿ ಭಾರೀ ದೊಡ್ಡ ಮಟ್ಟದ ಇಳಿಕೆಯ ಗ್ರಾಹಕರನ್ನು ಎಷ್ಟರ ಮಟ್ಟಿಗೆ ಸೆಳೆಯಲು ಸಾಧ್ಯವಾಗುತ್ತೋ ಗೊತ್ತಿಲ್ಲ. ಯಾಕೆಂದರೆ ಹೊಸದಾಗಿ ಅದೆಷ್ಟೋ ಮೊಬೈಲ್ ಗಳು ಮಾರುಕಟ್ಟೆಗೆ ಹೊಸ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆಗೆ ಬಂದಿರುವಾಗ ಎರಡು ವರ್ಷ ಹಳೆಯ ಮಾಡೆಲ್ ಗೆ ಇಷ್ಟು ಹಣ ಕೊಡಲು ಗ್ರಾಹಕರು ಸಿದ್ಧರಿರಬಹುದೇ? ನೀವೆನಂತೀರಿ.. ಕಮೆಂಟ್ ಮಾಡಿ ತಿಳಿಸಿ..


Click it and Unblock the Notifications