Home
ಸುದ್ದಿಜಾಲ

ಸೋನಿ ಇಯರ್‌ ಎಂಡ್‌ ಸೇಲ್‌: ಸೋನಿ ಪ್ರಾಡಕ್ಟ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

ಟೆಕ್‌ ವಲಯದಲ್ಲಿ ಜನಪ್ರಿಯ ಸೋನಿ ಕಂಪೆನಿ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ತನ್ನ ವೈವಿಧ್ಯಮಯ ಡಿವೈಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಸದ್ಯ ಇದೀಗ ಸೋನಿ ಕಂಪೆನಿ ಇಯರ್‌ ಎಂಡ್‌ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಸೋನಿ ಕಂಪೆನಿಯ ಬ್ರಾವಿಯಾ ಸ್ಮಾರ್ಟ್ ಟಿವಿಗಳು ಮತ್ತು ಆಡಿಯೊ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಸೋನಿ ಸಂಸ್ಥೆಯ ಒಟ್ಟು 22 ಬ್ರಾವಿಯಾ ಟಿವಿಗಳು ರಿಯಾಯಿತಿಯಲ್ಲಿ ಲಭ್ಯವಿವೆ.

ಸೋನಿ

ಹೌದು, ಸೋನಿ ಕಂಪೆನಿ ಭಾರತದಲ್ಲಿ ತನ್ನ ಇಯರ್‌ ಎಂಡ್‌ ಸೇಲ್‌ ಅನ್ನು ಪ್ರಾರಂಭಿಸಿದೆ. ಈ ಸೇಲ್‌ನಲ್ಲಿ ನಿರ್ಧಿಷ್ಟವಾಗಿ ಬ್ರಾವಿಯಾ ಟಿವಿಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಜೊತೆಗೆ ಕ್ಯಾಶ್‌ಬ್ಯಾಕ್ ಆಫರ್‌ ಅನ್ನು ಸಹ ನೀಡುತ್ತಿದೆ. ಅದೇ ರೀತಿ, ಸೋನಿ ತನ್ನ ಆಡಿಯೋ ಉತ್ಪನ್ನಗಳಾದ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌, ಹೆಡ್‌ಫೋನ್‌ಗಳು ಮತ್ತು ಬ್ಲೂಟೂತ್ ಸ್ಪೀಕರ್‌ಗಳು ಸೇರಿದಂತೆ ಇತರೆ ಪ್ರಾಡಕ್ಟ್‌ಗಳ ಮೇಲೆ 60% ವರೆಗೆ ರಿಯಾಯಿತಿಯನ್ನು ನೀಡಿದೆ. ಈ ಸೇಲ್‌ ಆಫ್‌ಲೈನ್ ಮತ್ತು ಎಲೆಕ್ಟ್ರಾನಿಕ್ ಸ್ಟೋರ್‌ಗಳು, ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಜನವರಿ 3 ರವರೆಗೆ ಲಭ್ಯವಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ ಬ್ರಾವಿಯಾ ಟಿವಿ ಆಫರ್‌ಗಳು

ಸೋನಿ ಬ್ರಾವಿಯಾ ಟಿವಿ ಆಫರ್‌ಗಳು

ಸೋನಿ ಇಯರ್‌ ಎಂಡ್‌ ಸೇಲ್‌ನಲ್ಲಿ ಸೋನಿ ಬ್ರಾವಿಯಾ ಟಿವಿಗಳ ಮೇಲೆ ಆಫರ್‌ ನೀಡಲಾಗಿದೆ. ಇದರಲ್ಲಿ ಸೋನಿ ಸಂಸ್ಥೆಯ ಒಟ್ಟು 22 ಬ್ರಾವಿಯಾ ಟಿವಿಗಳು ರಿಯಾಯಿತಿಯಲ್ಲಿ ಲಭ್ಯವಿವೆ. ರಿಯಾಯಿತಿ ಪಡೆದಿರುವ ಸಾಲಿನಲ್ಲಿ ಸೋನಿಯ XR ಸರಣಿಯ ಸ್ಮಾರ್ಟ್ ಟಿವಿಗಳು, 4K ಅಲ್ಟ್ರಾ HD ಸರಣಿಗಳು, ಪೂರ್ಣ HD ಸರಣಿಗಳು ಮತ್ತು LED ಟಿವಿಗಳು ಸ್ಥಾನವನ್ನು ಪಡೆದುಕೊಂಡಿವೆ. ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಮುಂಗಡ ರಿಯಾಯಿತಿಗಳು, ಹಾಗೆಯೇ ಕ್ಯಾಶ್‌ಬ್ಯಾಕ್ ಮತ್ತು ವಿಸ್ತೃತ ವಾರಂಟಿಯನ್ನು ಪಡೆದುಕೊಂಡಿವೆ. ಈ ಆಫರ್‌ಗಳು ಸೋನಿ ಸೆಂಟರ್‌ನಲ್ಲಿ 30% ರಷ್ಟು ರಿಯಾಯಿತಿ ಪಡೆದಿವೆ. ಜೊತೆಗೆ ICICI ಬ್ಯಾಂಕ್ ಮತ್ತು Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 10% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಕೆಲವು ಸೋನಿ ಬ್ರಾವಿಯಾ ಟಿವಿ ಮಾದರಿಗಳಲ್ಲಿ ಎರಡು ವರ್ಷಗಳ ವಾರಂಟಿಯನ್ನು ಸಹ ನೀಡುತ್ತಿದೆ.

ಸೋನಿ ಆಡಿಯೋ ಪ್ರಾಡಕ್ಟ್‌ಗಳ ಆಫರ್‌ಗಳು

ಸೋನಿ ಆಡಿಯೋ ಪ್ರಾಡಕ್ಟ್‌ಗಳ ಆಫರ್‌ಗಳು

ಸೋನಿ ಕಂಪೆನಿಯ ಆಡಿಯೊ ಪ್ರಾಡಕ್ಟ್‌ಗಳ ಮೇಲೂ ಕೂಡ ಈ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ನಿಡಲಾಗ್ತಿದೆ. ಇದರಲ್ಲಿ ಹೆಡ್‌ಫೋನ್‌ಗಳು, ಟ್ರೂಲಿ ವಾಯರ್‌ಲೆಸ್ ಇಯರ್‌ಬಡ್ಸ್ ವೈರ್ಡ್ ಇಯರ್‌ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಹಾಗೆಯೇ ಸೌಂಡ್‌ಬಾರ್‌ಗಳು ಮತ್ತು ಹೋಮ್ ಥಿಯೇಟರ್ ಸಿಸ್ಟಮ್‌ಗಳನ್ನು ಒಳಗೊಂಡಿದೆ. ಈ ಎಲ್ಲಾ ಪ್ರಾಡಕ್ಟ್‌ಗಳು 50% ರಿಯಾಯಿತಿ ಪಡೆದುಕೊಂಡಿವೆ ಎನ್ನಲಾಗಿದೆ. ಜೊತೆಗೆ ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ಯಾಂಕ್ ಆಫರ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಸೋನಿ ಆಡಿಯೊ ಪ್ರಾಡಕ್ಟ್‌ಗಳ ಮೇಲೆ ನೊ ಕಾಸ್ಟ್‌ EMI ಆಯ್ಕೆಗಳನ್ನು ನೀಡಲಾಗ್ತಿದೆ. ಸೋನಿಯ ವೆಬ್‌ಸೈಟ್ ಪ್ರಕಾರ, Sony WH-1000XM4 ಹೆಡ್‌ಫೋನ್‌ ನಿಮಗೆ ರಿಯಾಯಿತಿ ದರದಲ್ಲಿ 24,990ರೂ.ಗಳಿಗೆ ದೊರೆಯಲಿದೆ.

ಸೋನಿ

ಇದಲ್ಲದೆ ಸೋನಿ ಕಂಪೆನಿಯ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಲಾಗ್ತಿದೆ. ಸೋನಿ ಕಂಪೆನಿಯ WF-1000XM3 TWS ಇಯರ್‌ಬಡ್ಸ್‌ ಪ್ರಸ್ತುತ 9,990ರೂ.ಬೆಲೆಗೆ ದೊರೆಯಲಿದೆ. ಹಾಗೆಯೇ ಸೋನಿ WF-SP800N TWS ಇಯರ್‌ಬಡ್ಸ್‌ 10,990ರೂ.ಗಳಷ್ಟು ಕಡಿಮೆ ಆಗಿದೆ. ಇನ್ನು ಸೋನಿ ಕಂಪೆನಿಯ SRS-XB13 ವಾಯರ್‌ಲೆಸ್ ಬ್ಲೂಟೂತ್ ಸ್ಪೀಕರ್ ಅನ್ನು 3,590ರೂ.ಬೆಲೆಗೆ ಖರೀದಿಸಬಹುದಾಗಿದೆ. ಇದಲ್ಲದೆ ಸೋನಿ ಕಂಪನಿಯು ತನ್ನ ವೈರ್‌ಲೆಸ್ ಬ್ಲೂಟೂತ್ ಹೆಡ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಇದು Sony WH-CH510 ಬ್ಲೂಟೂತ್‌ ಸ್ಪೀಕರ್ ನಿಮಗೆ 2,990ರೂ.ಗಳಿಗೆ ಲಭ್ಯವಾಗಲಿದೆ. ಜೊತೆಗೆ ಸೋನಿ WI-XB400 2,790ರೂ.ಬೆಲೆಗೆ ದೊರೆಯಲಿದೆ. ಒಟ್ಟಿನಲ್ಲಿ ಸೋನಿ ತನ್ನ ಇಯರ್‌ ಎಂಡ್‌ ಸೇಲ್‌ನಲ್ಲಿ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌, ಹೆಡ್‌ಫೋನ್‌ಗಳು ಮತ್ತು ಬ್ಲೂಟೂತ್ ಸ್ಪೀಕರ್‌ಗಳು ಸೇರಿದಂತೆ ಇತರೆ ಪ್ರಾಡಕ್ಟ್‌ಗಳ ಮೇಲೆ 60% ವರೆಗೆ ರಿಯಾಯಿತಿಯನ್ನು ನೀಡಿದೆ.

Best Mobiles in India

English summary
Sony india year end sale With Discounts on Bravia TVs, Audio Products.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+