Just In
- 17 min ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 37 min ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
- 51 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- 2 hrs ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
Don't Miss
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Movies
'ಕಿರಿಕ್ ಪಾರ್ಟಿ 2'ನಲ್ಲಿ ರಕ್ಷಿತ್ ಶೆಟ್ಟಿ ಇರ್ತಾರಾ ಇಲ್ವಾ? ಸಿಂಪಲ್ ಸ್ಟಾರ್ ಬಿಚ್ಚಿಟ್ಟ ಗುಟ್ಟೇನು?
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೋನಿ ZV-1 4K ಡಿಜಿಟಲ್ ಕ್ಯಾಮೆರಾ ಬಿಡುಗಡೆ!..3 ಕ್ಯಾಪ್ಸುಲ್ ಮೈಕ್ರೊಫೋನ್ ವಿಶೇಷ!
ಟೆಕ್ ವಲಯದಲ್ಲಿ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಂದಲೇ ಸೋನಿ ಕಂಪೆನಿ ಪ್ರಸಿದ್ದಿಯಾಗಿದೆ. ಈಗಾಗಲೇ ಹಲವು ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಸೋನಿ ಕಂಪೆನಿ ಇತರೆ ಸ್ಮಾರ್ಟ್ ಪ್ರಾಡಕ್ಟ್‌ಗಳ ಮಾರುಕಟ್ಟೆಯಲ್ಲೂ ತನ್ನ ಕಮಾಲ್ ಅನ್ನ ತೊರಿದೆ. ಅಷ್ಟು ಮಾತ್ರವಲ್ಲ ಕ್ಯಾಮೆರಾ ವಲಯದಲ್ಲೂ ಕೂಡ ಸೋನಿ ಪ್ರಾಡಕ್ಟ್‌ಗಳು ತುಂಬಾನೆ ಪ್ರಖ್ಯಾತಿಯನ್ನ ಪಡೆದುಕೊಂಡಿವೆ. ಕ್ಯಾಮೆರಾ ಲೋಕದಲ್ಲಿ ಜಾಗತಿಕವಾಗಿ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ಸೋನಿ ಇದೀಗ ತನ್ನ ಮತ್ತೊಂದು ಹೊಸ ಮಾದರಿಯ ಕಾಂಪ್ಯಾಕ್ಟ್ ಕ್ಯಾಮೆರಾವನ್ನ ಬಿಡುಗಡೆ ಮಾಡಿದೆ.

ಹೌದು, ಜನ್ರಪಿಯ ಸೋನಿ ಕಂಪೆನಿ ತನ್ನ ತನ್ನ ಕಾಂಪ್ಯಾಕ್ಟ್ ಕ್ಯಾಮೆರಾ ಶ್ರೇಣಿಗೆ ಹೊಸ ಸಬ್ ಕ್ಯಾಟಗರಿಯ ಕ್ಯಾಮೆರಾವನ್ನ ಪರಿಚಯಿಸಿದೆ. ಈ ಕ್ಯಾಮೆರಾವನ್ನ ವಿಶೇಷವಾಗಿ ವ್ಲಾಗ್ಗರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸದ್ಯ ಈ ಕ್ಯಾಮೆರಾವನ್ನ ಸೋನಿ ZV-1 ಕಾಂಪ್ಯಾಕ್ಟ್ ಕ್ಯಾಮೆರಾ ಎಂದು ಹೆಸರಿಸಲಾಗಿದ್ದು, ಇದು ಸೋನಿ RX100 ಸರಣಿಯನ್ನು ಹೋಲುತ್ತಿದೆ. ಆದರೆ ತಿರುಚಿದ ವಿನ್ಯಾಸವನ್ನ ಹೊಂದಿರುವ ರಿಯರ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊರಕ್ಕೆ ತಿರುಗಿಸಬಹುದಾಗಿದ್ದು, ಒಂದು ಕಡೆಯಿಂದ 180 ಡಿಗ್ರಿಗಳನ್ನು ತಿರುಗಿಸಬಹುದಾಗಿದೆ. ಹಾಗಾದ್ರೆ ಈ ಕ್ಯಾಮೆರಾದ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸೋನಿ ಬಿಡುಗಡೆ ಮಾಡಿರುವ ಸೋನಿ ZV-1 ಕಾಂಪ್ಯಾಕ್ಟ್ ಕ್ಯಾಮೆರಾ ಮುಖದ ಆದ್ಯತೆಯ ಆಟೋಫೋಕಸ್ ಮತ್ತು ಉತ್ತಮ ಆಡಿಯೊ ಗುಣಮಟ್ಟದ ಭರವಸೆಯನ್ನ ನೀಡಿದೆ. ಇದಲ್ಲದೆ ಈ ಕ್ಯಾಮೆರಾ ದಿಕ್ಕಿನ ಮೂರು-ಕ್ಯಾಪ್ಸುಲ್ ಮೈಕ್ರೊಫೋನ್‌ಗಳನ್ನ ಒಳಗೊಂಡಿದೆ. ಜೊತೆಗೆ ಈ ಕ್ಯಾಮೆರಾ RX100 ಸರಣಿಯ ಮಾದರಿಯಂತೆಯೇ, ZV-1 ನಲ್ಲಿ 4K ರೆಸಲ್ಯೂಶನ್ ವೀಡಿಯೊವನ್ನು ಶೂಟ್ ಮಾಡಬಹುದಾಗಿದೆ. ಅಲ್ಲದೆ ಬ್ಲ್ಯಾಕ್ ಶೇಡ್ ಅನ್ನು ಸರಿಹೊಂದಿಸಲು ಸೋನಿ ವಿಶೇಷ ವಿಧಾನಗಳನ್ನು ಕೂಡ ಸೇರಿಸಿದೆ.

ಸೋನಿ ZV-1 ಕ್ಯಾಮೆರಾ 20.1-ಮೆಗಾಪಿಕ್ಸೆಲ್, 1-ಇಂಚಿನ ಸೆನ್ಸಾರ್ ಮತ್ತು 2.7x ಆಪ್ಟಿಕಲ್ ಜೂಮ್ ಬೆಂಬಲವನ್ನು ಹೊಂದಿದೆ. ಇನ್ನು ರಿಯರ್ ಸೆಟ್‌ಅಪ್‌ನಲ್ಲಿ 3-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನ ಕಡೆಯಿಂದ ಮುಂದಕ್ಕೆ ಎಲ್ಲಾ ರೀತಿಯಲ್ಲಿ ನಿರೂಪಿಸಬಹುದಾಗಿದೆ. ಇದರಿಂದಾಗಿ ಶೂಟಿಂಗ್ ಮಾಡುವಾಗ ಬಳಕೆದಾರರಿಗೆ ಉತ್ತಮ ನಮ್ಯತೆಯನ್ನು ನೀಡುತ್ತದೆ. ಇದು ಕಣ್ಣು ಮತ್ತು ಮುಖಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಚಿತ್ರೀಕರಣ ಮಾಡುವಾಗ ನೀವು ಯಾವಾಗಲೂ ಐಡೆಂಟಿಟಿ ಆಗುತ್ತಲೇ ಇರುತ್ತಾರೆ.

ಇನ್ನು ವ್ಲಾಗ್‌ಗಳನ್ನು ಚಿತ್ರೀಕರಿಸುವಾಗ ಬ್ಯಾಕ್‌ಗ್ರೌಂಡ್ ಬೊಕೆ ಹೊಂದಿಸಲು ZV-1 ಮೀಸಲಾದ ಬಟನ್ ಹೊಂದಿದೆ. ಇದಲ್ಲದೆ ನಿಮ್ಮ ಮುಖದಿಂದ ಸ್ವಯಂಚಾಲಿತವಾಗಿ ಗಮನವನ್ನು ಕ್ಯಾಮರಾಕ್ಕೆ ತೋರಿಸುವ ವಸ್ತುವಿಗೆ ಸ್ವಯಂಚಾಲಿತವಾಗಿ ಬದಲಾಯಿಸುವ ಹೊಸ ‘ಪ್ರಾಡಕ್ಟ್ ಶೋಕೆಸ್' ಸೆಟ್ಟಿಂಗ್ ಅನ್ನು ಸಹ ಒಳಗೊಂಡಿದೆ.ಇನ್ನು ಇದರಲ್ಲಿ ಮೂರು-ಕ್ಯಾಪ್ಸುಲ್ ಮೈಕ್ ಒಳಗೊಂಡಿದ್ದು, ಉತ್ತಮವಾದ ಆಡಿಯೊ ಭರವಸೆ ನೀಡುತ್ತದೆ. ಜೊತೆಗೆ 3.5 ಎಂಎಂ ಸಾಕೆಟ್ ಅನ್ನು ಹೊಂದಿರಲಿದೆ.

ಸೋನಿ ZV-1 $749 (ಸುಮಾರು 56,800 ರೂ.) ಪ್ರಾರಂಭಿಕ ಬೆಲೆಯನ್ನ ಹೊಂದಿದ್ದು, ಜೂನ್ 28 ರ ನಂತರ, ಇದರ ಬೆಲೆ $799 (ಸುಮಾರು 60,600 ರೂ.) ಆಗಿರಲಿದೆ. ಇದಲ್ಲದೆ ಸೋನಿ ವ್ಲಾಗ್ಗರ್ ಕಿಟ್ ಅನ್ನು $149 (ಸುಮಾರು ರೂ. 11,300)ಗೆ ಮಾರಾಟ ಮಾಡಲಿದ್ದು, ಇದರಲ್ಲಿ 64GB ಮೆಮೊರಿ ಕಾರ್ಡ್ ಮತ್ತು GP-VPT2BT ಶೂಟಿಂಗ್ ಗ್ರಿಪ್ ಅನ್ನು ಸಹ ಒಳಗೊಂಡಿರಲಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470