Home
ಸುದ್ದಿಜಾಲ

ಸೋನಿಯಿಂದ ಪ್ಯಾಕೆಟ್‌ ಸೈಜ್‌ ವಿನ್ಯಾಸದ ಹೊಸ ಕ್ಯಾಮೆರಾ ಲಾಂಚ್‌!

ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾದ ಸೋನಿ ಕಂಪೆನಿ ತನ್ನ ಪ್ಯಾಕೆಟ್‌ ಸೈಜ್‌ ಕ್ಯಾಮೆರಾವನ್ನ ಬಿಡುಗಡೆ ಮಾಡಿದೆ. ಇನ್ನುಈ ಕ್ಯಾಮೆರಾವನ್ನು ಸೋನಿ ZV-1 ಕಂಪ್ಯಾಕ್ಟ್‌ ಕ್ಯಾಮೆರಾ ಎಂದು ಹೆಸರಿಸಲಾಗಿದ್ದು, ಇದು ವ್ಲಾಗ್‌ಗರ್‌ಗಳಿಗಾಗಿ ವಿಶೇಷವಾಗಿ ತಯಾರಿಸಿದ ಕ್ಯಾಮೆರಾ ಎಂದು ಹೇಳಿಕೊಂಡಿದೆ. ಸದ್ಯ ಈ ಕ್ಯಾಮೆರಾ ಇದೀಗ ಭಾರತದಲ್ಲಿ ಬಿಡುಗಡೆ ಆಗಿದ್ದು, ಇದರ ಬೆಲೆ 77,990 ರೂ ಆಗಿದೆ. ಇನ್ನು ಈ ಕ್ಯಾಮೆರಾ ಅಮೆಜಾನ್ ಇಂಡಿಯಾ ಮೂಲಕ ಆನ್‌ಲೈನ್‌ನಲ್ಲಿ ಪ್ರತ್ಯೇಕವಾಗಿ ಖರೀದಿಸಲು ಲಭ್ಯವಿರಲಿದೆ.

ಸೋನಿ

ಹೌದು, ಸೋನಿ ಕಂಪೆನಿ ತನ್ನ ಹೊಸ ಸೋನಿ ZV-1 ಕ್ಯಾಮೆರಾವನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಕ್ಯಾಮೆರಾ ಈ ಕ್ಯಾಮೆರಾ ಪ್ಯಾಕೆಟ್‌ ಸೈಜ್‌ ಶೈಲಿಯನ್ನ ಹೊಂದಿದ್ದು, ಸುಲಭವಾಗ ಕ್ಯಾರಿ ಮಾಡಬಹುದಾಗಿದೆ. ವಿಶೇಷವಾಗಿ ಇದನ್ನ ವ್ಲಾಗರ್‌ಗಳಿಗಾಗಿಯೇ ತಯಾರಿಸಲಾಗಿದೆ ಎನ್ನಲಾಗ್ತಿದೆ. ಇದರ ತೂಕ ಕೇವಲ 294 ಗ್ರಾಂ ಇದ್ದು, ಇದು ಫ್ಲಿಪ್-ಔಟ್‌ ಟಿಲ್ಟೆಬಲ್‌ ಎಲ್‌ಸಿಡಿ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಕ್ಯಾಮೆರಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸೋನಿ ZV-1 ಕ್ಯಾಮೆರಾ

ಸೋನಿ ZV-1 ಕ್ಯಾಮೆರಾ ಪ್ರವಾಸಿ ಪ್ರಿಯರಿಗೆ ಉತ್ತಮ ಕ್ಯಾಮೆರಾ ಆಯ್ಕೆ ಆಗಿರಲಿದೆ. ಸುಲಭವಾಗಿ ಕ್ಯಾರಿ ಮಾಡಬಹುದಾದ ಪ್ಯಾಕೆಟ್‌ ಸೈಜ್‌ ಕ್ಯಾಮೆರಾ ಇದಾಗಿದೆ. ಇನ್ನು ಫ್ಲಿಪ್-ಔಟ್,ಟೆಲ್ಟೆಬಲ್‌ ಎಲ್‌ಸಿಡಿ ಸ್ಕ್ರೀನ್‌ ಹೊಂದಿರುವ ಸೋನಿಯ ಮೊದಲ ಕಾಂಪ್ಯಾಕ್ಟ್ ಕ್ಯಾಮೆರಾ ಇದಾಗಿದೆ. ನೀವು ಮೌಂಟಿಂಗ್‌ ಮಾಡುವಾಗ ಬ್ರಾಕೆಟ್ ಬಳಸದೆ ಬಾಹ್ಯ ಮೈಕ್ರೊಫೋನ್‌ಗಳನ್ನು ಲಗತ್ತಿಸಲು ಇದರಲ್ಲಿ ನೀವು ಎಂಐ (ಮಲ್ಟಿ ಇಂಟರ್ಫೇಸ್) ಶೂ ಅನ್ನು ಪಡೆಯಬಹುದಾಗಿದೆ.

ಕ್ಯಾಮೆರಾ

ಇದಲ್ಲದೆ ಎಚ್‌ಡಿ (ಆಕ್ಟಿವ್ ಮೋಡ್) ಯಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡುವಾಗ, ಕ್ಯಾಮೆರಾ 11 ಪಟ್ಟು ಹೆಚ್ಚು ಸ್ಥಿರವಾದ ವೀಡಿಯೊವನ್ನು ತಲುಪಿಸಲು ಆಪ್ಟಿಕಲ್ ಮತ್ತು ಎಲೆಕ್ಟ್ರಾನಿಕ್ ಸ್ಥಿರೀಕರಣ ವಿಧಾನಗಳನ್ನು ಹೊಂದಿದೆ. ಆದರೂ, ಆಪ್ಟಿಕಲ್ ಸ್ಟೆಡಿಶಾಟ್ (ಆಕ್ಟಿವ್ ಮೋಡ್) ಬಳಸಿ 4K ವಿಡಿಯೋ ಚಿತ್ರೀಕರಣ ಮಾಡುವಾಗ, ಸ್ಥಿರೀಕರಣವು 8 ಪಟ್ಟು ಸುಧಾರಿಸುತ್ತದೆ ಎಂದು ಸೋನಿ ಹೇಳಿಕೊಂಡಿದೆ. ಇನ್ನು ಸೋನಿ ZV-1 1.0 ಮಾದರಿಯ ಟೈಪ್ಡ್ ಎಕ್ಸ್‌ಮೋರ್ ಆರ್ಎಸ್ ಸಿಎಮ್‌ಒಎಸ್ ಇಮೇಜ್ ಸೆನ್ಸಾರ್ ಅನ್ನು ಹೊಂದಿದೆ.

ಕ್ಯಾಮೆರಾ

ಇದಲ್ಲದೆ ಇದರಲ್ಲಿ drmm ಚಿಪ್ ಮತ್ತು 24-70 ಎಂಎಂ f1.8-2.8 zeiss ವೇರಿಯೊ-ಸೊನ್ನಾರ್ ಟಿ ದೊಡ್ಡ-ಅಪರ್ಚರ್ ಲೆನ್ಸ್ ಅನ್ನು ನೀಡಲಾಗಿದೆ. ಅಲ್ಲದೆ ಸಬ್ಜೆಕ್ಟ್‌ ಟ್ರ್ಯಾಕಿಂಗ್ ಮತ್ತು ವೇಗದ ಆಟೋಫೋಕಸ್ ಜೊತೆಗೆ ಫ್ರಂಟ್-ಎಂಡ್ LSIನೊಂದಿಗೆ BIONZ X ಇಮೇಜ್ ಪ್ರೊಸೆಸರ್ ಅನ್ನು ಸಹ ಒಳಗೊಂಡಿದೆ. ಇನ್ನು ಆಡಿಯೊಗೆ ಸಂಬಂಧಿಸಿದಂತೆ, ಕಾಂಪ್ಯಾಕ್ಟ್ ಕ್ಯಾಮೆರಾ ಸೋನಿಯ ಇತ್ತೀಚಿನ ಡೈರೆಕ್ಷನಲ್ 3-ಕ್ಯಾಪ್ಸುಲ್ ಮೈಕ್ ಅನ್ನು ಹೊಂದಿದ್ದು, ಇದನ್ನು ವಿಶೇಷವಾಗಿ ಸೆಲ್ಫಿ ಮೋಡ್‌ಗಾಗಿ ಕ್ರಿಯೆಟ್‌ ಮಾಡಲಾಗಿದೆ. ಅಲ್ಲದೆ ಇದರಲ್ಲಿ ಸ್ಟ್ಯಾಂಡರ್ಡ್ 3.5mm ಮೈಕ್ ಜ್ಯಾಕ್ ಮತ್ತು MI ಶೂ ಬಳಸಲು ಅವಕಾಶ ನೀಡಲಾಗಿದೆ.

Best Mobiles in India

English summary
With this, Sony seems to be tapping on to a market for those who have been sitting at homes and are making videos.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+