ಇನ್ಮುಂದೇ ಕಾಲೇಜುಗಳಲ್ಲಿಯೇ ವಿತರಣೆಯಾಗಲಿದೆ ಡ್ರೈವಿಂಗ್ ಲೈಸೆನ್ಸ್!!

Written By:

  ಇನ್ಮುಂದೇ ಕಾಲೇಜು ವಿಧ್ಯಾರ್ಥಿಗಳು ಕಾಲೇಜಿನಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸಮಯ ದೂರವಿಲ್ಲಾ.! ಹೌದು, ದೆಹಲಿ ಸರ್ಕಾರದ ಪ್ರಸ್ತಾಪದ ಪ್ರಕಾರ ಇನ್ಮುಂದೆ ಕಾಲೇಜಿನ ಪ್ರಾಂಶುಪಾಲರು ಮತ್ತು ಯುನಿವರ್ಸಿಟಿ ರಿಜಿಸ್ಟರ್ ಅವರೇ ಕಾಲೇಜು ವಿಧ್ಯಾರ್ಥಿಗಳಿಗೆ ಡ್ರೈವಿಂಗ್ ಲೈಸೆನ್ಸ್ ವಿತರಿಸಬೇಕಾಗುತ್ತದೆ.!!

  ಪ್ರತಿವರ್ಷವೂ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿಸಲ್ಲಿಸುವರಲ್ಲಿ ಬಹುತೇಕ ವಿಧ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. 18 ತಿಂದ 25 ವಯಸ್ಸಿನ ಶೇ 53% ಯುವಕರು ಪ್ರತಿ ವರ್ಷ ಅರ್ಜಿಸಲ್ಲಿಸುತ್ತಿದ್ದಾರೆ ಹಾಗಾಗಿ, ಕಾಲೇಜಿನಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ನೀಡಬೇಕು ಎಂದು ದೆಹಲಿ ಸರ್ಕಾರ ತನ್ನ ಪ್ರಸ್ತಾಪದಲ್ಲಿ ತಿಳಿಸಿದೆ.!!

  ಇನ್ನು ಕರ್ನಾಟಕದಲ್ಲಿ ಇಂತಹ ಯಾವುದೇ ಪ್ರಸ್ತಾಪಗಳು ಈ ವರೆಗೂ ನಡೆದಿಲ್ಲ.! ಆದರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಎರಡು ವಿಧದಲ್ಲಿ  ಡಿಎಲ್ ಪಡೆಯಬಹುದಾಗಿದ್ದು, ಇಂದಿನ ಲೇಖನದಲ್ಲಿ, ಕರ್ನಾಟಕದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ ಕೇವಲ 30 ರೂಪಾಯಿಗಳಿಗೆ ಡ್ರೈವಿಂಗ್ ಲೈಸೆನ್ಸ್ ಹೇಗೆ ಮಾಡಿಸುವುದು ಎಂದು ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  #1 ಆನ್‌ಲೈನ್‌ನಲ್ಲಿ ಡಿಎಲ್ ಮಾಡಿಸುವುದು ಹೇಗೆ?

  ಡಿಎಲ್ ಪಡೆಯಲು ಕೇವಲ ಚಾಲನೆ ಹಂತದ ಪರೀಕ್ಷೆಗಷ್ಟೆ ಆರ್‌ಟಿಒ ಕಚೇರಿಗೆ ಹೋಗಬೇಕಿದ್ದು, ಮತ್ತೆಲ್ಲಾ ಕಾರ್ಯಗಳು ಆನ್‌ಲೈನ್‌ನಲ್ಲಿಯೇ ನಡೆಯುತ್ತದೆ. ಇದರಿಂದ ನೀವು ಡಿಎಲ್ ಮಾಡಿಸುವುದು ಬಹಳಷ್ಟು ಸರಳವಾಗಿದ್ದು, ಇಂದಿನ ಲೇಖನದಲ್ಲಿ ಕೇವಲ 30 ರೂಪಾಯಿಗಳಿಗೆ ಡಿಎಲ್‌ ಹೇಗೆ ಮಾಡಿಸುವುದು ಎಂದು ತಿಳಿಯಿರಿ.

  #2 ನಮೂನೆ -2 (CMVR-2): ಅರ್ಜಿ ತುಂಬಿರಿ.

  https://sarathi.nic.in ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್ ಮಾಡಿ ನಂತರ ತೆರೆಯುವ ಆನ್‌ಲೈನ್‌ ಅಪ್ಲಿಕೇಶನ್ ತುಂಬಿರಿ. ಎಲ್ಲಾ ಸರಿಯಾದೆ ಮಾಹಿತಿಗಳನ್ನು ತುಂಬಿದ ನಂತರ ಸಬ್‌ಮಿಟ್ ಕೊಡಿ. ನಂತರ ನಿಮ್ಮ ಅರ್ಜಿ ಕ್ರಿಯೇಟ್ ಆಗುತ್ತದೆ.

  #3 ಡಿಜಿಟಲ್ ಸಹಿ!!

  ಈ ಮೊದಲು ಅರ್ಜಿ ಕ್ರಿಯೇಟ್ ಆದ ನಂತರ ಸಹಿಹಾಕಲು ಆರ್‌ಟಿಒ ಕಚೇರಿಗೆ ಹೋಗಬೆಕಿತ್ತು. ಆದರೆ ಈಗ ಕೇವಲ ಡಿಜಿಟಲ್ ಸಹಿ ಮೂಲಕ ಅರ್ಜಿಯನ್ನು ಪೂರ್ಣಗೊಳಿಸಬಹುದು. ಹಾಗಾಗಿ, ಆನ್‌ಲೈನ್‌ನಲ್ಲಿಯೇ ಡಿಜಿಟಲ್ ಸಹಿಯನ್ನು ಅಪ್‌ಲೋಡ್ ಮಾಡಿ.!!

  #4 ಸಲ್ಲಿಸಬೇಕಾಗಿರುವ ಅರ್ಜಿ ಮತ್ತು ದಾಖಲೆಗಳು

  ಆನ್‌ಲೈನ್ ಅರ್ಜಿ ತುಂಬಿದ ನಂತರ ವಯಸ್ಸಿನ ಪುರಾವೆ ವಿಳಾಸ ಪುರಾವೆ ಮತ್ತು ಭಾವಚಿತ್ರ ವಯಸ್ಸಿನ ಲೆಕ್ಕ ಮಿತಿಯಿಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಡಿಎಲ್ ಪಡೆಯಲು ಸಾಧ್ಯವಿಲ್ಲಾ. ಹಾಗಾಗಿ, ಆನ್‌ಲೈನ್‌ನಲ್ಲಿಯೇ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ.

  #5 ಶುಲ್ಕ ಎಷ್ಟು?

  ಸರ್ಕಾರ ಇತ್ತೀಚಿಗೆ ಡಿಲ್‌ ಶುಲ್ಕವನ್ನು ಹೆಚ್ಚಿಸುವುದಾಗಿ ಹೇಳಿಕೊಂಡಿತ್ತು. ಆದರೆ, Rule 32 of CMV Rules 1989 ಹಳೆಯ ಕಾನೂನಿನ ಪ್ರಕಾರ ಡಿಎಲ್‌ ಮಾಡಿಸಲು ನಿಗದಿತ ಶುಲ್ಕ ರೂ.30/- ಶುಲ್ಕವನ್ನು ಪಾವತಿಸಬೇಕು. ಇದನ್ನು ಆನ್‌ಲೈನ್‌ನಲ್ಲಿಯೇ ಪಾವತಿ ಮಾಡಬೇಕು.

  #6 18 ವರ್ಷ ತುಂಬಿದ ಮತ್ತು ಮೇಲ್ಪಟ್ಟ ಅರ್ಜಿದಾರ

  ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾನಪತ್ರ ಸಲ್ಲಿಸುವವರು ಗೇರ್ ಮತ್ತು ಗೇರ್ ಇಲ್ಲದೆ ಇರುವ ವಾಹನಗಳು, ಲಘು ಮೋಟಾರು ವಾಹನಗಳು ಮತ್ತು ಇತರ ನಿರ್ದಿಷ್ಟ ವಾಹನಗಳ ಡಿಎಲ್‌ ಪಡೆಯಲು 18 ವರ್ಷ ತುಂಬಿದ ಮತ್ತು ಮೇಲ್ಪಟ್ಟ ಅರ್ಜಿದಾರರು ಅರ್ಹರಾಗಿರುತ್ತಾರೆ.

  #7 ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ ಇತರ ಅವಶ್ಯಕ ಮಾಹಿತಿ.

  • ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಪಡೆಯಲು ಕನಿಷ್ಠ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು.
  • ಅರ್ಜಿ ಪರಿಶೀಲನೆಗಾಗಿ ಮೂಲ ದಾಖಲೆಗಳೊಂದಿಗೆ ಅರ್ಜಿದಾರರು ಚಾಲನಾ ಅನುಜ್ಞಾ ಪ್ರಾಧಿಕಾರದ ಮುಂದೆ ಖುದ್ದಾಗಿ ಹಾಜರಾಗಬೇಕು.

  8# ಪ್ರಾಥಮಿಕ ಪರೀಕ್ಷೆ

  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರು ಲಿಖಿತ ಮತ್ತು ಮೌಖಿಕ ಪರೀಕ್ಷೆಯನ್ನು ಎದುರಿಸಬೇಕು. ಇದರಲ್ಲಿ ಉತ್ತಿರ್ಣವಾದ ನಂತರ ವಾಹನ ಚಾಲನೆ ಪರೀಕ್ಷೆಯನ್ನು ಎದುರಿಸಬೇಕು. ಇನ್ನು ಈಗಾಗಲೇ ಕಲಿಕಾ ಚಾಲನಾ ಅನುಜ್ಞಾ ಪತ್ರ / ಚಾಲನಾ ಅನುಜ್ಞಾ ಪತ್ರ ಹೊಂದಿರುವವರಿಗೆ ಪ್ರಾಥಮಿಕ ಪರೀಕ್ಷೆಯಿಂದ(ಲಿಖಿತ / ಮೌಖಿಕ) ವಿನಾಯಿತಿ ನೀಡಲಾಗಿದೆ. ಇದು ಇತರ ಹೊಸ ವರ್ಗ ವಾಹನಗಳಿಗೆ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸುತ್ತದೆ

  #9 ಪ್ರಾಧಮಿಕ ಪರೀಕ್ಷೆಯ ವಿಷಯಗಳು:

  ಸಂಚಾರಿ ಚಿನ್ನೆಗಳು ಮತ್ತು ಸಿಗ್ನಲ್ ಗಳು, ಮೋಟಾರು ವಾಹನ ಕಾಯ್ದೆ 1989ರ ಅಧಿನಿಯಮ 118ರಲ್ಲಿ ನಮೂದಿಸಿರುವ ಸಂಚಾರಿ ನಿಯಂತ್ರಣ ನಿಯಮಗಳೂ ವಾಹನವನ್ನು ಅಪಘಾತಕ್ಕೆ ಈಡಾಗಿದಾಗ ಅದರಿಂದ ಸಂಭವಿಸುವ ಪ್ರಾಣಾಪಾಯ ಹಾಗೂ ಗಾಯಗೊಳ್ಳುವಿಕೆ ಅಥವಾ ರಸ್ತೆಅಪಘಾತದ ಸಮಯದಲ್ಲಿ ವಾಹನ ಚಾಲಕ ನಿರ್ವಹಿಸಬೇಕಾದ ಕರ್ತವ್ಯಗಳು.
  ಮಾನವ ರಹಿತ ರೈಲ್ವೇ ಕ್ರಾಸಿಂಗ್ ಗಳಲ್ಲಿ ವಾಹನ ಚಲಿಸುವಾಗ ಚಾಲಕರು ಕೈಗೊಳ್ಳಬೇಕಾದ ಪೂರ್ವ ಜಾಗರುಕತೆ ಬಗ್ಗೆ. ವಾಹನ ಚಾಲನೆ ಸಮಯದಲ್ಲಿ ವಾಹನದಲ್ಲಿ ಕಡ್ಡಾಯವಾಗಿ ಇಡಬೇಕಾಗಿರುವ ದಾಖಲೆಗಳ ಬಗ್ಗೆ.

  #10 ತೇರ್ಗಡೆಯಾದ ನಂತರ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಎಲ್ಲಿ ಪಡೆಯಬೇಕು?

  ತೇರ್ಗಡೆಯಾದ ಅರ್ಜಿದಾರರು ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು 7 ದಿನಗಳೊಳಗಾಗಿ ಕಛೇರಿಯಲ್ಲಿ ಪಡೆಯಬಹುದು. ಡಿಲ್ ಮತ್ತು ಎಲ್‌ಎಲ್‌ಆರ್ ವಿತರಣೆಯ ಸಮಯ ಸಂಜೆ 4.30 ರಿಂದ 5.30ರ ಒಳಗಾಗಿರುತ್ತದೆ.

  #11 ಪರೀಕ್ಷೆಯಲ್ಲಿ ಅನುರ್ತ್ತೀಣರಾದರೆ ಏನು ಮಾಡಬೇಕು?

  ಪರೀಕ್ಷೆಯಲ್ಲಿ ಅನುರ್ತ್ತೀಣರಾದ ಅಭ್ಯರ್ಥಿಗಳಿಗೆ ಅರ್ಜಿಯನ್ನು ಹಿಂದಿರುಗಿಸಲಾಗುವುದು. ನಂತರ ಅರ್ಜಿದಾರರು ಕಛೇರಿ ಕೆಲಸ ವೇಳೆಯಲ್ಲಿ ಪರೀಕ್ಷೆಗೆ ಮರುದಿನ ಹಾಜರಾಗಬಹುದು.

  #12 ಕಲಿಕಾ ಚಾಲನಾ ಪತ್ರದ ಅವಧಿ

  ಕಲಿಕಾ ಚಾಲನಾ ಪತ್ರದ ಅವಧಿ 6 ತಿಂಗಳು ಮಾತ್ರ ಇರುತ್ತದೆ ಮತ್ತು ಇದನ್ನು ಮುಂದಿನ ಅವಧಿಗೆ ನವೀಕರಲು ಆಗುವುದಿಲ್ಲ ಹಾಗೂ ಹೊಸದಾಗಿ ಪಡೆಯಬೇಕು. ಇದು ಭಾರತದ್ಯಾದಂತ ಸಿಂಧುತ್ವವನ್ನು ಹೊಂದಿರುತ್ತದೆ. ಈ ಎಲ್ಲಾ ಮಾಹಿತಿಗಳನ್ನು ಶೇರ್ ಮಾಡಿ. ಬೇರೆಯವರಿಗೂ ಸಹಾಯವಾಗುವಂತೆ ಮಾಡಿ.

  ಓದಿರಿ:3000ರೂ.ಬೆಲೆಯ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಉಚಿತವಾಗಿ ಲಭ್ಯ!!..ಹೇಗೆ ಗೊತ್ತಾ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Youths, mostly students, form the bulk of those applying for learner’s licences every year.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more