Home
ಸುದ್ದಿಜಾಲ

ಇನ್ಮುಂದೆ ಮೊಬೈಲ್ ನಂಬರ್ ಮೂಲಕ ವಿಮಾನದ ಟಿಕೆಟ್ ಬುಕ್ ಮಾಡಿ!!

ಮೊಬೈಲ್ ನಂಬರ್ ಮೂಲಕ ವಿಮಾನ ಟಿಕೆಟ್ ಬುಕ್ ಮಾಡುವ ಆಯ್ಕೆಯನ್ನು ವಿಮಾನಯಾನ ಇಲಾಖೆ ನೀಡುತ್ತಿದೆ.!!

By Bhaskar N J

ವಿಮಾನ ಪ್ರಯಾಣಕ್ಕೆ ಆಧಾರ್ ಅನ್ನು ದಾಖಲೆಯನ್ನಾಗಿ ಮಾಡಲು ಚಿಂತಿಸಿದ್ದ ವಿಮಾನಯಾನ ಇಲಾಖೆ ಇದೀಗ ಮತ್ತೊಂದು ಹಜ್ಜೆ ಮುಂದೆ ಹೋಗಿದ್ದು, ಮೊಬೈಲ್ ನಂಬರ್ ಮೂಲಕವೇ ಪ್ರಯಾಣಿಕರು ವಿಮಾನ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ನೀಡುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ.!!

ಪ್ರಯಾಣಿಕರ ಬಯೋಮೆಟ್ರಿಕ್ ಮಾಹಿತಿಯನ್ನು ಒಮ್ಮೆ ಸಂಗ್ರಹಿಸಿ, ಆ ಮಾಹಿತಿ ಮೂಲಕ ಕೇವಲ ಮೊಬೈಲ್ ನಂಬರ್ ಮೂಲಕ ವಿಮಾನ ಟಿಕೆಟ್ ಬುಕ್ ಮಾಡುವ ಆಯ್ಕೆಯನ್ನು ವಿಮಾನಯಾನ ಇಲಾಖೆ ನೀಡುತ್ತಿದೆ.!! ಹಾಗಾದರೆ, ಏನಿದು ಯೋಜನೆ? ಹೇಗೆ ಉಪಯೋಗವಾಗಲಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಎಲ್ಲವೂ ಬಯೋಮೆಟ್ರಿಕ್!!

ಎಲ್ಲವೂ ಬಯೋಮೆಟ್ರಿಕ್!!

ಪ್ರಯಾಣಿಕರ ಆಧಾರ್ ಕಾರ್ಡ್ ಸಂಖ್ಯೆ, ಪಾಸ್ ಪೋರ್ಟ್ ಸಂಖ್ಯೆ ಮತ್ತು ಇತರ ದಾಖಲೆಗಳ ಜೊತೆಯಲ್ಲಿ ಅವರ ಮೊಬೈಲ್ ಸಂಖ್ಯೆಯನ್ನು ಪಡೆಯುವ ವಿಮಾನಯಾನ ಇಲಾಖೆ ಪ್ರಯಾಣಿಕರ ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಬಯೋಮೆಟ್ರಿಕ್ ಮಾಹಿತಿಯಿಂದ ಬಹಳ ಸುಲಭವಾಗಿ ವಿಮಾನದ ಟಿಕೆಟ್ ಬಹುಕ್ ಮಾಡಬಹುದಾಗಿದೆ.!!

ಯಾವುದೇ ವಿಮಾನವನ್ನು ಕಾಯ್ದಿರಿಸಬಹುದು!!

ಯಾವುದೇ ವಿಮಾನವನ್ನು ಕಾಯ್ದಿರಿಸಬಹುದು!!

ಪ್ರಯಾಣಿಕರ ಬಯೋಮೆಟ್ರಿಕ್ ಮಾಹಿತಿಯನ್ನು ವಿಮಾನಯಾನ ಇಲಾಖೆ ಸಂಗ್ರಹಿಸಿ ಆ ಮಾಹಿತಿಯನ್ನು ದೇಶದಲ್ಲಿ ವೈಮಾನಿಕ ಸೇವೆ ನೀಡುವ ಎಲ್ಲಾ ಸಂಸ್ಥೆಗಳ ನಡುವೆ ವಿನಿಮಯ ಮಾಡುತ್ತದೆ. ಹಾಗಾಗಿ, ನಿಮ್ಮ ಮೊಬೈಲ್ ನಂಬರ್ ಮೂಲಕ ಯಾವುದೇ ಕಂಪೆನಿಯ ವಿಮಾನವನ್ನು ಫೋನ್‌ನಂಬರ್ ಮೂಲಕ ಕಾಯ್ದಿಸಿಸಬಹುದು.!!

ಆಧಾರ್‌ನಂತೆ ಒಮ್ಮೆ ಮಾಹಿತಿ!!

ಆಧಾರ್‌ನಂತೆ ಒಮ್ಮೆ ಮಾಹಿತಿ!!

ನೀವು ಆಧಾರ್ ಕಾರ್ಡ್ ಮಾಡಿಸಿದ ಹಾಗೆಯೇ ದೇಶದ ಯಾವುದೇ ಏರ್‌ಪೋರ್ಟ್‌ನಲ್ಲಿ ಬಯೋಮೆಟ್ರಿಕ್ ನಡೆಸಲಾಗುವ ಕೌಂಟರಿಗೆ ತೆರಳಿ ತಮ್ಮ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪಾಸ್ ಪೋರ್ಟ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ಪರೀಕ್ಷೆಗೆ ತಮ್ಮ ಒಗ್ಗಿಕೊಂಡರಾಯ್ತು.!! ನಂತರ ಮೊಬೈಲ್ ನಂಬರ್ ಮೂಲಕ ಟಿಕೆಟ್ ಬುಕ್ ಮಾಡಬಹುದು.!!

ಎಲ್ಲಾ ಮಾಹಿತಿಗಳೂ ರವಾನೆ!!

ಎಲ್ಲಾ ಮಾಹಿತಿಗಳೂ ರವಾನೆ!!

ನೀವು ಒಮ್ಮೆ ನಿಮ್ಮೆಲ್ಲಾ ಮಾಹಿತಿಯನ್ನು ನೀಡಿದ ನಂತರ ಮೊಬೈಲ್ ನಂಬರ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ನಿಮ್ಮ ಮೊಬೈಲ್ ನಂಬರ್ ನಿಮಗೆ ಹೊಂದಾಣಿಕೆ ಆದರೆ ಪ್ರಯಾಣಿಸಬೇಕಾದ ವಿಮಾನ, ಆಸನ ಸಂಖ್ಯೆ ಸೇರಿದಂತೆ ಇತರ ಎಲ್ಲಾ ಮಾಹಿತಿಗಳೂ ರವಾನೆಯಾಗುತ್ತವೆ. ಮತ್ತು ದೈನಂದಿಕ ಕಾರ್ಯಗಳು ಮತ್ತಷ್ಟು ಸರಳವಾಗುತ್ತವೆ.!!

Best Mobiles in India

English summary
The aviation ministry is undertaking a process in which the databases of airlines and airports will be linked with passengers' IDs such as Aadhaar and passport number. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+