ಪೈರಸಿ ಸಿನಿಮಾ ಡೌನ್‌ಲೋಡ್ ಮಾಡಿದರೆ 3 ವರ್ಷ ಜೈಲು!..ಸರ್ಕಾರದಿಂದ ಬಿಗ್ ಶಾಕ್!!

|

ಪೈರಸಿ ಸಿನಿಮಾ ನೋಡುವ ಮುನ್ನ ಅಥವಾ ಡೌನ್‌ಲೋಡ್ ಮಾಡುವ ಮುನ್ನ ಇನ್ಮುಂದೆ ಎಚ್ಚರವಾಗಿರಿ. ಪೈರಸಿ ಕಾಪಿಗಳನ್ನು ಡೌನ್‌ಲೋಡ್ ಮಾಡುವುದು ಅಪರಾಧ ಎನ್ನುವುದು ಗೊತ್ತಿದ್ದರೂ ಸಹ ಅದರ ಬಗ್ಗೆ ತಲೆಕೆಡಿಸಿಕೊಳ್ಳದವರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಪೈರಸಿ ಸಿನಿಮಾಗಳನ್ನು ಡೌನ್‌ಲೋಡ್ ಮಾಡುವವರಿಗೆ ಜೈಲು ಶಿಕ್ಷೆ ವಿಧಿಸಲು ಮುಂದಾಗಿದೆ.

ಹೌದು, ಪೈರಸಿ ಕಾಪಿಗಳನ್ನು ಡೌನ್‌ಲೋಡ್ ಮಾಡುವುದು ಅಪರಾಧ ಎನ್ನುವುದು ಗೊತ್ತಿದ್ದರೂ ಸಹ ಜನರು ಸಿನಿಮಾ ಬಿಡುಗಡೆಯಾದ ಕೆಲಹೊತ್ತಿನಲ್ಲೇ ಜನರು ಪೈರಸಿ ಮೂಲಕ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಇದು ಸಿನಿಮ ಕ್ಷೇತ್ರಕ್ಕೆ ಪೈರಸಿ ದೊಡ್ಡ ಕಂಟಕವಾಗಿರುವುದರಿಂದ ಸರ್ಕಾರ ನೂತನ ಕ್ರಮವನ್ನು ತರಲು ಮುಂದಾಗಿದೆ ಎನ್ನಲಾಗಿದೆ.

ಪೈರಸಿ ಸಿನಿಮಾ ಡೌನ್‌ಲೋಡ್ ಮಾಡಿದರೆ 3 ವರ್ಷ ಜೈಲು!..ಸರ್ಕಾರದಿಂದ ಬಿಗ್ ಶಾಕ್!!

ಸಿನಿಮಾಟೋಗ್ರಫಿ ಕಾಯ್ದೆ, 1952ಕ್ಕೆ ತಿದ್ದುಪಡಿ ತಂದು ಅದರ ಮೂಲಕ ಪೈರಸಿ ಸಿನಿಮಾ ಡೌನ್‌ಲೋಡ್ ಅನ್ನು ಅಪರಾಧ ಎಂದು, ಆ ಅಪರಾಧಕ್ಕೆ 10 ಲಕ್ಷ ರೂ. ದಂಡದ ಜತೆಗೆ 3 ವರ್ಷ ಕಠಿಣ ಜೈಲು ಶಿಕ್ಷೆ ನೀಡುವ ಕುರಿತು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಆನ್‌ಲೈನ್ ಪೈರಸಿ ತಡೆಗಟ್ಟಲು ಸರಕಾರ ಕ್ರಮಕ್ಕೆ ಮುಂದಾಗಿದ್ದು, ತಿದ್ದುಪಡಿಗೆ ಅನುಮೋದನೆ ದೊರೆಯಲಿದೆ.

ಪ್ರಸ್ತಾವಿತ ತಿದ್ದುಪಡಿ ಪ್ರಕಾರ, ಯಾವುದೇ ರೀತಿಯ ಅನುಮತಿಯಿಲ್ಲದೆ ಕಾಪಿರೈಟ್ ಮತ್ತು ಪೈರಸಿ ಕಾಯ್ದೆ ತಿದ್ದುಪಡಿ ಪ್ರಕಾರ ನಡೆಸಿದ ಅಪರಾಧಕ್ಕೆ ಸೂಕ್ತ ಶಿಕ್ಷೆ ದೊರೆಯಲಿದೆ. ತಂತ್ರಜ್ಞಾನ ವನ್ನು ದುರುಪಯೋಗ ಮಾಡಿಕೊಂಡು, ಅದರ ಮೂಲಕ ಉದ್ಯಮಕ್ಕೆ ನಷ್ಟ ಉಂಟುಮಾಡುವವರಿಗೆ ತಕ್ಕ ಶಾಸ್ತಿಯಾಗಲಿದ್ದು, ಭಾರೀ ದಂಡದ ಜೊತೆ ಜೈಲು ಶಿಕ್ಷೆ ಕೂಡ ಖಾತ್ರಿಯಾಗಲಿದೆ.

ಪೈರಸಿ ಸಿನಿಮಾ ಡೌನ್‌ಲೋಡ್ ಮಾಡಿದರೆ 3 ವರ್ಷ ಜೈಲು!..ಸರ್ಕಾರದಿಂದ ಬಿಗ್ ಶಾಕ್!!

ಸಿನಿಮಾ ಮತ್ತು ಮನರಂಜನೆ ಕ್ಷೇತ್ರಕ್ಕೆ ಈ ಪೈರಸಿ ಎಂಬುದು ದೊಡ್ಡ ಕಂಟಕವಾಗಿದ್ದು, ಹೊಸ ಸಿನಿಮಾ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ನ ವಿವಿಧ ಪೈರಸಿ ತಾಣಗಳಲ್ಲಿ ಸಿನಿಮಾ ಪ್ರತಿ ಲಭ್ಯವಾಗುತ್ತದೆ. ಆದರೆ, ಪೈರಸಿ ಮಾಡುವವರ ಹೆಡೆಮುರಿ ಕಟ್ಟುವುದನ್ನು ಬಿಟ್ಟು ಸಾರ್ವಜನಿಕರಿಗೆ ಈ ರೀತಿಯ ನಿಷೇಧವನ್ನು ಹೇರುವುದು ಎಷ್ಟುಸರಿ ಎಂದು ಹೇಳಲಾಗುತ್ತಿದೆ.

Best Mobiles in India

English summary
Soon Downloading Pirated Movies Could Land You Behind The Bars For 3 Years, Fine Of Rs. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X