ಎಟಿಎಂನಲ್ಲಿ ಮುಂದೊಂದು ದಿನ ದುಡ್ಡೇ ಇರುವುದಿಲ್ಲ!

|

ಇನ್ನು ಕೆಲವೇ ದಿನಗಳಲ್ಲಿ ಎಟಿಎಂಗಳಲ್ಲಿ ದುಡ್ಡೇ ಇರುವುದಿಲ್ಲ. ಹಾಗಂತ ನಾವು ಹೇಳುತ್ತಿರುವುದು ಕ್ಯಾಷ್ ಖಾಲಿ ಆಗಿದೆ ಅನ್ನೋ ಬೋರ್ಡ್ ಎಟಿಎಂ ಬಾಗಿಲಿಗೆ ನೇತು ಬಿದ್ದಿರುವ ಬಗ್ಗೆ ಎಂದು ಅಂದುಕೊಳ್ಳಬೇಡಿ. ಎಟಿಎಂನಲ್ಲಿ ನಿಮ್ಮ ಹಣದ ಟ್ರಾನ್ಸ್ಯಾಕ್ಷನ್ ಮಾಡುವುದಕ್ಕೆ ಅವಕಾಶವಿರುತ್ತದೆ. ಆದರೆ ಹಣ ಡ್ರಾ ಮಾಡಿಕೊಂಡು, ಪೇಪರ್ ನೋಟ್ ಗಳನ್ನು ಹಿಡಿದುಕೊಂಡು ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಹೌದು ಇನ್ನು ಮುಂದೆ ಎಟಿಎಂನಲ್ಲಿ ಕಾಗದದ ದುಡ್ಡು ಇರುವುದಿಲ್ಲ. ಹಾಗಾದ್ರೆ ಏನಿರುತ್ತೆ ? ಹಣ ಪಾವತಿ ಮಾಡುವುದಾದರೂ ಹೇಗೆ ಎಂಬುದು ನಿಮ್ಮ ಪ್ರಶ್ನೆಯಾದರೆ ಮುಂದೆ ಓದಿ.

ಹಣ ಡ್ರಾ ಮಾಡಲು ಕ್ಯೂಆರ್ ಕೋಡ್:

ಹಣ ಡ್ರಾ ಮಾಡಲು ಕ್ಯೂಆರ್ ಕೋಡ್:

ಬ್ಯಾಂಕ್ ನ ಖಾತೆದಾರರು ಇನ್ನು ಮುಂದೆ ಎಟಿಎಂ ನಲ್ಲಿ ಹಣ ತೆಗೆಯಲು ಮಷೀನ್ ಸ್ಕ್ರೀನ್ ನಲ್ಲಿ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಬೇಕಾಗುವ ಸಮಯ ಸದ್ಯದಲ್ಲೇ ಬರಲಿದೆ. ಬ್ಯಾಂಕ್ ಗಳಿಗೆ ಎಟಿಎಂ ಸೇವೆಗಳನ್ನು ಒದಗಿಸುವ ಎಜಿಎಸ್ ಟ್ರಾನ್ಸ್ಯಾಕ್ಟ್ ಟೆಕ್ನಾಲಜೀಸ್ ಸಂಸ್ಥೆ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ನ್ನು ಅನೇಬಲ್ ಮಾಡುತ್ತಿದ್ದು ಹಣ ವಿತ್ ಡ್ರಾ ಮಾಡಲು ಇದು ಅನುಕೂಲ ಮಾಡಿಕೊಡಲಿದೆ.

ಹೊಸ ಆಪ್ ಬೇಕಾಗಿಲ್ಲ:

ಹೊಸ ಆಪ್ ಬೇಕಾಗಿಲ್ಲ:

ಯುಪಿಐ ಕ್ಯಾಷ್ ಸೇವೆಯು ಯಾವುದೇ ಹೊಸ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕಾಗಲೀ ಅಥವಾ ಹೊಸ ಸೇವೆಗೆ ಸೈನ್ ಇನ್ ಆಗುವುದಕ್ಕಾಗಲೀ ಹೇಳುವುದಿಲ್ಲ. ಖಾತೆಯ ಮಾಲೀಕರು ಯುಪಿಐ ಅನೇಬಲ್ ಆಗಿರುವ ಮೊಬೈಲ್ ಅಪ್ಲಿಕೇಷನ್ ಈ ರೀತಿ ಪಾವತಿಯನ್ನು ಪಡೆಯಲು ಚಂದಾದಾರಿಕೆ ಹೊಂದಿದ್ದರೆ ಸಾಕು.

ಎಟಿಎಂನಲ್ಲಿ ಟ್ರಾನ್ಸ್ಯಾಕ್ಷನ್ ಗೆ ಅವಕಾಶ:

ಎಟಿಎಂನಲ್ಲಿ ಟ್ರಾನ್ಸ್ಯಾಕ್ಷನ್ ಗೆ ಅವಕಾಶ:

ಒಂದು ವೇಳೆ ಗ್ರಾಹಕರು ಯುಪಿಐ ಪೇಮೆಂಟ್ ಮಾಡಲು ಇಚ್ಚಿಸುತ್ತಾರಾದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು.ಆದರೆ, ಸರಕು ಮತ್ತು ಸಾಮಾನುಗಳಿಗೆ ನೀವು ಹಣವನ್ನು ಡ್ರಾ ಮಾಡಿ ಅದನ್ನು ಪಾವತಿ ಮಾಡುವ ಬದಲು ಎಟಿಎಂ ಮೂಲಕವೇ ಸಂಬಂಧಪಟ್ಟವರಿಗೆ ಕ್ಯಾಷ್ ಮಷೀನ್ ಟ್ರಾನ್ಸ್ ಫರ್ ಮಾಡುತ್ತದೆ.

ಬ್ಯಾಂಕ್ ಗಳಿಂದ ಒಪ್ಪಿಗೆ:

ಬ್ಯಾಂಕ್ ಗಳಿಂದ ಒಪ್ಪಿಗೆ:

ಎಜಿಎಸ್ ಟ್ರಾನ್ಸ್ಯಾಕ್ಟ್ ಟೆಕ್ನಾಲಜೀಸ್ ನ ಸಿಎಂಡಿ ಆಗಿರುವ ರವಿ ಬಿ ಘೋಯಲ್ ಅವರು ಹೇಳುವ ಪ್ರಕಾರ ಕಂಪೆನಿಯು ಈಗಾಗಲೇ ಇದರ ಪ್ರೂಫ್ ನ್ನು ಎಲ್ಲಾ ಬ್ಯಾಂಕ್ ಗಳಿಗೂ ಡೆಮೋ ನೀಡಿದ್ದು ಎಲ್ಲಾ ಬ್ಯಾಂಕ್ ಗಳು ಕೂಡ ಈ ರೀತಿಯ ಎಟಿಎಂಗಾಗಿ ಕಾತುರರಾಗಿದ್ದಾರೆ ಎಂದಿದ್ದಾರೆ.

ಪಿಸಿಐ ಅನುಮೋದನೆ ಬೇಕು:

ಪಿಸಿಐ ಅನುಮೋದನೆ ಬೇಕು:

ಸದ್ಯ ಈ ಸೇವೆಯು ಎನ್ ಪಿಸಿಐ(ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ)ದ ಟೇಬಲ್ ಮೇಲಿದೆ. ಇದು ಎಟಿಎಂ ನೆಟ್ ವರ್ಕ್ ಮತ್ತು ಯುಪಿಐ ಫ್ಲ್ಯಾಟ್ ಫಾರ್ಮ್ ಎರಡನ್ನೂ ಕಂಟ್ರೋಲ್ ಮಾಡುವ ಸಂಸ್ಥೆಯಾಗಿದ್ದು ಇಲ್ಲಿ ಅನುಮೋದನೆ ಸಿಕ್ಕಿದ ಕೂಡಲೇ ಈ ಸೇವೆ ಆರಂಭವಾಗಲಿದೆ.

ಯುಪಿಐ ಮತ್ತು ಎಟಿಎಂ ಎರಡೂ ಕೂಡ ಒಂದೇ ಹಣಕಾಸಿನ ಸ್ವಿಚ್ ನಲ್ಲಿ ಸಾಗುತ್ತಿದೆ ಮತ್ತು ಯುಪಿಐ ಇದೀಗ ಸೆಕ್ಯೂರ್ ಆಗಿರುವ ಟ್ರ್ಯಾನ್ಸ್ಯಾಕ್ಷನ್ ಫ್ಲಾಟ್ ಫಾರ್ಮ್ ಎಂದು ಗುರುತಿಸಲ್ಪಟ್ಟಿದೆ ಹಾಗಾಗಿ ಭವಿಷ್ಯದ ಇಂತಹ ಟ್ರಾನ್ಸ್ಯಾಕ್ಷನ್ ಗಳ ಅಗತ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ ಘೋಯಲ್.

ಹೂಡಿಕೆ ಬೇಕಾಗಿಲ್ಲ, ಸಾಫ್ಟ್ ವೇರ್ ಬದಲಾವಣೆಯಿಂದ ಸಾಧ್ಯ:

ಹೂಡಿಕೆ ಬೇಕಾಗಿಲ್ಲ, ಸಾಫ್ಟ್ ವೇರ್ ಬದಲಾವಣೆಯಿಂದ ಸಾಧ್ಯ:

ಬ್ಯಾಂಕ್ ಗಳಿಗೂ ಕೂಡ ಈ ರೀತಿಯ ಎಟಿಎಂ ನೆಟ್ ವರ್ಕ್ ಗಳನ್ನು ಹಾಕುವುದಕ್ಕಾಗಿ ಹೆಚ್ಚು ಹಣ ಹೂಡುವ ಅಗತ್ಯವಿಲ್ಲ. ಯಾವುದೇ ರೀತಿಯ ಹಾರ್ಡ್ ವೇರ್ ಗಳನ್ನು ಬದಲಾಯಿಸಬೇಕಾಗಿರುವ ಅಗತ್ಯವಿಲ್ಲ.ಇದು ಕೇವಲ ಎಟಿಎಂನಲ್ಲಿ ಸಣ್ಣದೊಂದು ಸಾಫ್ಟ್ ವೇರ್ ಬದಲಾವಣೆಯ ಮೂಲಕ ಸಾಧಿಸಬಹುದು ಮತ್ತು ಕಾರ್ಡ್ ಲೆಸ್ ಎಟಿಎಂ ಟ್ರಾನ್ಸ್ಯಾಕ್ಷನ್ ನ ಅಗತ್ಯತೆ ಇರುವುದರಿಂದ ಇದು ಭವಿಷ್ಯಕ್ಕೆ ಬೇಕಾಗಿದೆ ಎಂದು ಎಜಿಎಸ್ ಟ್ರಾನ್ಸ್ಯಾಕ್ಟ್ ಟೆಕ್ನಾಲಜೀಸ್ ಗ್ರೂಪ್ ನ ಟೆಕ್ನಾಲಜಿ ಚೀಫ್ ಆಗಿರುವ ಮಹೇಶ್ ಪಾಟೀಲ್ ಅವರು ಹೇಳುತ್ತಾರೆ.

ಬ್ಯಾಂಕ್ ಗಳಿಗೆ ಎಟಿಎಂಗಳನ್ನು ಹಿಂಪಡೆಯುವುದಕ್ಕೆ ಯುಪಿಐ ಅನ್ನು ಬಳಸುವಿಕೆ ಸುಲಭಗೊಳಿಸುತ್ತದೆ. ಇದೀಗ ಎರಡನೇ ಪೀಳಿಕೆಯ ವರ್ಷನ್ ಫ್ಲ್ಯಾಟ್ ಫಾರ್ಮ್ ಯುಪಿಐ 2.0 ಕ್ರೆಡಿಟ್ ಕಾರ್ಡ್ ಪೇಮೆಂಟ್ ಗಳಲ್ಲಿರುವಂತೆ ಮರ್ಚಂಟ್ ಕೋಡ್ ಗಳ ವಿರುದ್ಧ ಸ್ವೀಕರಿಸುವವರ ವರ್ಗಿಕರಣವನ್ನು ಇದು ಒಳಗೊಂಡಿರುತ್ತದೆ.

ಎಟಿಎಂಗಳನ್ನು ಈಗಾಗಲೇ ಮರ್ಚಂಟ್ ಕೆಟಗರಿಯಲ್ಲಿ ಲಿಸ್ಟ್ ಮಾಡಲಾಗಿದ್ದು, ಎಟಿಎಂನ್ನು ನಿಯೋಜಿಸುವ ಬ್ಯಾಂಕ್ ಗಳು ನೆಟ್ವರ್ಕ್ ನ ಬಳಕೆದಾರರ ಬ್ಯಾಂಕ್ ನಿಂದ ಇಂಟರ್ ಚೇಂಜ್ ಶುಲ್ಕವನ್ನು ಮರಳಿ ಪಡೆಯಲು ಅನುಕೂಲವಾಗುತ್ತದೆ.

ಸದ್ಯ ಯುಪಿಐ ಫ್ಲ್ಯಾಟ್ ಫಾರ್ಮ್ ನಲ್ಲಿ ದೊಡ್ಡ ಮೊತ್ತ ಪಾವತಿಗಳು ನಡೆಯುತ್ತಿದೆ. 2018 ನವೆಂಬರ್ ತಿಂಗಳ ಒಳಗೆ 52 ಕೋಟಿ ಟ್ರಾನ್ಸ್ಯಾಕ್ಷನ್ ಗಳು ನಡೆದಿದ್ದು ಅದರ ಒಟ್ಟು ಮೊತ್ತವು 82,232 ಕೋಟಿ ರುಪಾಯಿಗಳಾಗಿದೆ.

Best Mobiles in India

Read more about:
English summary
Soon, get cash from ATMs using UPI app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X