ಈ ಅತಿ ವೇಗದ ಇಂಟರ್‌ನೆಟ್‌ ಹೊಂದಲಿದೆ ಭಾರತ!!

|

ರಿಲಾಯನ್ಸ್ ಜಿಯೋ ಇಂಟರ್‌ನೆಟ್‌ ಲೋಕದಲ್ಲಿ ವೇಗದ ಸೇವೆ ತಂದು ಕ್ರಾಂತಿ ಎಬ್ಬಿಸಿದೆ. ನೀವು ಜಿಯೋ ಬಳಕೆದಾರರಾಗಿದ್ದರೆ, ನಮ್ಮದೇ ಸ್ಪೀಡ್‌ ಇಂಟರ್‌ನೆಟ್‌ ಎಂದು ಬೀಗುತ್ತಿರಿ. ಯೋಚನೆ ಮಾಡಿ ನೀವು ಸದ್ಯ ಬಳಸುತ್ತಿರುವ ಇಂಟರ್‌ನೆಟ್‌ ವೇಗ 24.56 Mbps. ಆದರೆ, ಈ ವೇಗ ನೂರು ಪಟ್ಟು ಹೆಚ್ಚಾದರೆ ಹೇಗಿರುತ್ತೆ ಯೋಚಿಸಿ.! ಹೌದು, ನೀವು ಇನ್ನೇನು ಕೆಲವೇ ದಿನಗಳಲ್ಲಿ ಇಂತಹದೊಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದ್ದೀರಾ.!

ಈ ಅತಿ ವೇಗದ ಇಂಟರ್‌ನೆಟ್‌ ಹೊಂದಲಿದೆ ಭಾರತ!!

ಹೌದು, ಈ ನಿಮ್ಮ ಯೋಚನೆ ಮುಂದಿನ ವರ್ಷದಲ್ಲಿ ಸಾಕಾರಗೊಳ್ಳಲಿದ್ದು, ಭಾರತ ಅತಿ ವೇಗದ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಹೊಂದಲಿದೆ. ಇದಕ್ಕೆಲ್ಲಾ ಇಸ್ರೋ ವೇದಿಕೆಯನ್ನು ರೂಪಿಸಿದ್ದು, ಈ ವರ್ಷ ನಿಮಗೆ '100GBps' ವೇಗದಲ್ಲಿ ಇಂಟರ್‌ನೆಟ್‌ ದೊರೆಯಲಿದೆ ಎಂದು ಇಸ್ರೋ ತಿಳಿಸಿದೆ. ಈ ವರ್ಷದಲ್ಲಿ ಮತ್ತಷ್ಟು ಪ್ರಮುಖ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದ್ದು, ಅವುಗಳಿಂದ ಭಾರತದಲ್ಲಿನ ಇಂಟರ್‌ನೆಟ್‌ ವೇಗದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ ಎಂದಿದ್ದಾರೆ.

ಈಗ 76ನೇ ಸ್ಥಾನದಲ್ಲಿದೆ ಭಾರತ.

ಈಗ 76ನೇ ಸ್ಥಾನದಲ್ಲಿದೆ ಭಾರತ.

ಇಂಟರ್‌ನೆಟ್‌ ವೇಗದಲ್ಲಿ ಸದ್ಯ ಭಾರತ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ. ಪ್ರಸ್ತುತ ಭಾರತ 76ನೇ ಸ್ಥಾನವನ್ನು ಹೊಂದಿದೆ. 24.56 Mbps ಡೌನ್‌ಲೋಡಿಂಗ್‌ ಬ್ರಾಡ್‌ಬ್ಯಾಂಡ್‌ ಸ್ಪೀಡ್‌ ಹೊಂದಿದೆ. ಅಮೇರಿಕಾ 70.75 Mbps ಡೌನ್‌ಲೋಡ್‌ ಸ್ಪೀಡ್‌ ಹೊಂದಿದ್ದು, ಅಪ್‌ಲೋಡಿಂಗ್‌ ಸ್ಪೀಡ್‌ 27.64 Mbps ಇದೆ. ಆದರೆ, ಇದೇ ವರ್ಷದಲ್ಲಿ ಭಾರತ ಇಂಟರ್‌ನೆಟ್‌ ವೇಗದಲ್ಲಿ ನಂ.1 ಆಗುವ ನಿರೀಕ್ಷೆಯನ್ನು ಸಹ ಹೊಂದಲಾಗಿದೆ. ಇಸ್ರೋ ಇದಕ್ಕೆ ಮುನ್ನುಡಿ ಇಟ್ಟಿದೆ.

 ಬಳಕೆದಾರರಲ್ಲಿ ಎರಡನೇ ಸ್ಥಾನದಲ್ಲಿ ಭಾರತ

ಬಳಕೆದಾರರಲ್ಲಿ ಎರಡನೇ ಸ್ಥಾನದಲ್ಲಿ ಭಾರತ

ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್‌ ವೇಗದಲ್ಲಿ ಭಾರತ ವಿಶ್ವದಲ್ಲಿ 76ನೇ ಸ್ಥಾನವನ್ನು ಹೊಂದಿದೆ. ಆದರೆ, ಇಂಟರ್‌ನೆಟ್‌ ಬಳಕೆದಾರರ ಆಧಾರದಲ್ಲಿ ಭಾರತ ವಿಶ್ವದಲ್ಲಿಯೇ ಎರಡನೇ ಸ್ಥಾನವನ್ನು ಹೊಂದಿರುವುದರಿಂದ ವೇಗದ ಸಂಪರ್ಕ ಈಗ ಬೇಕಾಗಿದೆ. ಹಾಗಾಗಿ ಈ ವರ್ಷ ಇಸ್ರೊವಿನ ಹಲವು ಸಂಪರ್ಕ ಉಪಗ್ರಹಗಳು ನಭಕ್ಕೆ ಹಾರುತ್ತಿದ್ದು, ಭಾರತದ ಇಂಟರ್‌ನೆಟ್‌ ಲೋಕ ಮಹತ್ತರ ಬದಲಾವಣೆಯನ್ನು ತರುವುದು ಖಚಿತವಾಗಿದೆ.

ಸಂಪರ್ಕ ಕ್ಷೇತ್ರಕ್ಕೆ ಹೆಚ್ಚು ಮಹತ್ವ

ಸಂಪರ್ಕ ಕ್ಷೇತ್ರಕ್ಕೆ ಹೆಚ್ಚು ಮಹತ್ವ

2018ರಲ್ಲಿ ಒಟ್ಟು ಏಳು ಉಡಾವಣೆಗಳನ್ನು ನಡೆಸಿರುವ ಇಸ್ರೊ, ಸಂಪರ್ಕ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಿದೆ. 2018ರಲ್ಲಿ ಕೇವಲ 35 ದಿನಗಳಲ್ಲಿ ಇಸ್ರೊದ ಮೂರನೇ ಯಶಸ್ವಿ ಕಾರ್ಯಾಚರಣೆ ನಡೆಸಿ ಸಂಪರ್ಕ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಲು ತಯಾರಾಗಿದೆ. ಇಸ್ರೋದ GSAT-19, GSAT-29, GSAT-11 ಮತ್ತು GSAT-20 ಉಪಗ್ರಹಗಳು ಭಾರತದ ಬ್ರಾಡ್‌ಬ್ಯಾಂಡ್‌ ಸಂಪರ್ಕದ ವೇಗವನ್ನು 100GBpsಗೆ ಏರಿಸಲು ಈಗಾಗಲೇ ತಯಾರಾಗಿ ನಿಂತಿವೆ.

30 ಸಾವಿರ ಕೋಟಿ ವ್ಯಯ

30 ಸಾವಿರ ಕೋಟಿ ವ್ಯಯ

ಕೇಂದ್ರ ಸರ್ಕಾರ 30 PSLV (Polar Satellite Launch Vehicle)ಗಳನ್ನು ಲಾಂಚ್‌ ಮಾಡಲು 10,900 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅದಲ್ಲದೇ GSLV Mk-3 ಉಡಾವಣಾ ವಾಹನಗಳನ್ನು 2022ರೊಳಗೆ ಲಾಂಚ್‌ ಮಾಡಲು ಇಸ್ರೋ ನಿರ್ಧರಿಸಿದೆ. ಇಸ್ರೋದ GSAT-19, GSAT-29, GSAT-11 ಮತ್ತು GSAT-20 ಉಪಗ್ರಹಗಳು ಭಾರತದ ಬ್ರಾಡ್‌ಬ್ಯಾಂಡ್‌ ಸಂಪರ್ಕದ ವೇಗವನ್ನು 100GBpsಗೆ ಏರಿಸಿ ದೇಶದಾದ್ಯಂತ ಇರುವ ಡಿಜಿಟಲ್‌ ಅಂತರವನ್ನು ಕಡಿಮೆಗೊಳಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

2020ರ ಹೊತ್ತಿಗೆ ಸಂಪೂರ್ಣ 5G

2020ರ ಹೊತ್ತಿಗೆ ಸಂಪೂರ್ಣ 5G

ಭಾರತ ಕೂಡ 2020ರ ಹೊತ್ತಿಗೆ ಸಂಪೂರ್ಣವಾಗಿ 5G ಸೇವೆಯನ್ನು ಅಳವಡಿಸಿಕೊಳ್ಳಲಿದೆ. ಜಪಾನ್, ಅಮೆರಿಕಾ ಚೀನಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಮೊದಲು ಸಂಪೂರ್ಣ 5G ಸೇವೆಯನ್ನು ಲಾಂಚ್ ಮಾಡಲು ಆಪರೇಟರ್‌ಗಳು ನಿರ್ಧರಿಸಿದ್ದು, ಇದೇ ವರ್ಷ 5G ಲಾಂಚ್‌ ಆಗುವ ಸಾಧ್ಯತೆ ಬಹಳಷ್ಟಿದೆ. ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಸಹ 2019ರ ನಡುವೆಯೇ ಭಾರತದಲ್ಲಿ 5G ಸೇವೆಯನ್ನು ನೀಡುವುದಾಗಿ ಘೋಷಿಸಿವೆ.

ಟೆಲಿಕಾಂನಲ್ಲಿ ಭಾರೀ ಬದಲಾವಣೆ

ಟೆಲಿಕಾಂನಲ್ಲಿ ಭಾರೀ ಬದಲಾವಣೆ

ಭಾರತದಲ್ಲಿ 5G ನೆಟ್‌ವರ್ಕ್‌ ಭಾರತದಲ್ಲಿ ಆರಂಭವಾದರೆ, ಟೆಲಿಕಾಂನಲ್ಲಿ ಭಾರೀ ಬದಲಾವಣೆ ಕಾಣಬಹುದಾಗಿದೆ. ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಡ್‌ ರಿಯಾಲಿಟಿ ಮತ್ತು 4K ವಿಡಿಯೋಗಳಂತಹ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ. 5G ನೆಟ್‌ವರ್ಕ್‌ ಆರಂಭವಾದರೆ ಬಳಕೆದಾರರಿಗೆ ಕೇವಲ ಲಕ್ಸುರಿ ಇಂಟರ್‌ನೆಟ್‌ ಸೇವೆ ಮಾತ್ರ ಸಿಗದೆ ಟೆಲಿಕಾಂ ಆಪರೇಟರ್‌ಗಳಿಗೆ ದೊಡ್ಡ ಆದಾಯವನ್ನು ಸೃಷ್ಟಿಸಲಿದೆ.

Best Mobiles in India

English summary
Soon, India to enjoy more than 100 Gbps internet speed: 100 Gbps by 2019!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X