ಮೆಟ್ರೋ ಟಿಕೇಟ್‌ಗೆ ಕ್ಯೂ ನಿಲ್ಲೋದು ಬೇಕಿಲ್ಲ..! ಟಿಕೇಟ್‌ ಖರೀದಿ‌ಗೆ ಬಂತು ಹೊಸ ತಂತ್ರಜ್ಞಾನ..!

  ಇನ್ನು ಕೆಲವೇ ದಿನದಲ್ಲಿ ನಮ್ಮ ಮೆಟ್ರೋ ಟ್ರೈನ್ ಗಾಗಿ ಟಿಕೆಟ್ ತೆಗೆದುಕೊಳ್ಳುವುದಕ್ಕೆ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ನಿಮ್ಮ ಮೊಬೈಲಿನಲ್ಲೇ ನಮ್ಮ ಮೆಟ್ರೋ ಟಿಕೆಟ್ ಮಾಡಿಕೊಳ್ಳಬಹುದಾದ ಅವಕಾಶವನ್ನು ನೀಡಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ನಮ್ಮ ಮೆಟ್ರೋದಲ್ಲಿ ಕ್ಯೂಆರ್ ಬೇಸ್ಡ್ ಟಿಕೆಟ್:

  ಬಿಎಂಆರ್ ಸಿಎಲ್ ಕ್ಯೂಆರ್ ಬೇಸ್ಡ್ ಆಧಾರಿತ ಟಿಕೆಟ್ ನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿದ್ದು ಇನ್ನು ಮುಂದೆ ನಮ್ಮ ಮೆಟ್ರೋ ಪ್ರಯಾಣಿಕರು ತಮ್ಮ ಮೊಬೈಲ್ ಆಪ್ ಮೂಲಕ ತಾವು ಟ್ರೈನ್ ಹತ್ತಲಿರುವ ಸ್ಥಳ, ಇಳಿಯಬೇಕಾಗಿರುವ ಸ್ಥಳ ಮತ್ತು ಎಷ್ಟು ಮಂದಿಗೆ ಟಿಕೆಟ್ ಬೇಕಾಗಿದೆ ಎಂಬುದನ್ನು ಆಯ್ಕೆ ಮಾಡಿ ಟಿಕೆಟ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಿದೆ.ಆಪ್ ನಲ್ಲಿ ಕ್ಯೂಆರ್ ಕೋಡ್ ಡಿಸ್ಪ್ಲೇ ಆಗುತ್ತದೆ. ಅದನ್ನು ಅವರು ಗೇಟ್ ನಲ್ಲಿ ತೋರಿಸಬೇಕು.

  ಮೆಟ್ರೋ ಸ್ಟೇಷನ್ ನ ಗೇಟ್ ನಲ್ಲೇ ಟಿಕೆಟ್ ಮಾಡಲು ಅವಕಾಶ:

  ಆಪ್ ನಲ್ಲಿ ಕ್ಯೂಆರ್ ಕೋಡ್ ಡಿಸ್ಪ್ಲೇ ಆಗುತ್ತದೆ. ಇದನ್ನು ಟ್ಯಾಪ್ ಮಾಡಿದಾಗ ಕ್ಯೂಆರ್ ಅನೇಬಲ್ ಆಗಿರುವ ಆಟೋಮ್ಯಾಟಿಕ್ ಫೇರ್ ಕಲೆಕ್ಷನ್(ಎಎಫ್ ಸಿ) ಮಾಡಬಹುದು. ಇದು ಮೆಟ್ರೋ ಸ್ಟೇಷನ್ ಗಳ ಗೇಟ್ ಗಳಲ್ಲಿ ನಡೆಯುತ್ತದೆ.

  ಪ್ಲಾಸ್ಟಿಕ್ ಸ್ಮಾರ್ಟ್ ಕಾರ್ಡ್ ಗಳ ಅಗತ್ಯವಿರುವುದಿಲ್ಲ:

  ದೊಡ್ಡ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸಿ ಮತ್ತು ಪ್ಲಾಸ್ಟಿಕ್ ಟಿಕೆಟ್ ಕಾರ್ಡ್ ಗಳನ್ನು ಹಿಡಿದುಕೊಂಡು ಹೋಗುವ ಅಗತ್ಯ ಇನ್ನು ಮುಂದೆ ಇರುವುದಿಲ್ಲ. ಟಿಕೆಟ್ಸ್, ಟೋಕನ್ಸ್, ಮರುಟಿಕೆಟ್, ಟಾಪ್ ಅಪ್ ಇತ್ಯಾದಿಗಳಿಗಾಗಿ ಪರದಾಡುವ ಅಗತ್ಯವಿರುವುದಿಲ್ಲ.

  ಯಾವಾಗ ಬಳಕೆಗೆ ಲಭ್ಯವಾಗುತ್ತದೆ?

  ಈ ಹೊಸ ಸಿಸ್ಟಮ್ ಇನ್ನು ಒಂದು ವರ್ಷದಲ್ಲಿ ಅಪ್ ಗ್ರೇಡ್ ಆಗಲಿದೆ. ಆ ಮೂಲಕ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ ಮೂಲಕವೇ ಟಿಕೆಟ್ ಖರೀದಿ ಮಾಡಬಹುದು ಎಂದು ಬಿಎಂಆರ್ ಸಿಎಲ್ ನ ಎಂಡಿ ಅಜಯ್ ಸೇತ್ ತಿಳಿಸಿದ್ದಾರೆ. ಸ್ಟೇಷನ್ ನ ಎಎಫ್ ಸಿ ಗೇಟ್ ಗಳಲ್ಲೇ ಟಿಕೆಟ್ ವ್ಯವಸ್ಥೆ ಮಾಡುವ ಬಗ್ಗೆ 2015 ರಲ್ಲೇ ಮೆಟ್ರೋ ಪ್ರೊಜೆಕ್ಟ್ ನಲ್ಲಿ ಸೇರಿಸಲಾಗಿತ್ತು. ಆದರೆ ಕ್ಯೂಆರ್ ಟಿಕೆಟ್ಸ್ ನ ವಿಚಾರದಲ್ಲಿ ಕೆಲವು ಹಣಕಾಸಿನ ಅವ್ಯವಸ್ಥೆಯನ್ನು ಸಾಫ್ಟ್ ವೇರ್ ಗಳು ಎದುರಿಸುತ್ತಿದ್ದವು. ಅದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇದನ್ನು ಬಳಕೆಗೆ ಬರುವಂತೆ ಮಾಡಲಾಗುತ್ತದೆ.

  ದೆಹಲಿ ಮೆಟ್ರೋದಲ್ಲಿ ಈಗಾಗಲೇ ಇರುವ ಸೌಲಭ್ಯ:

  ದೆಹಲಿ ಮೆಟ್ರೋದಲ್ಲಿ ಮೊಬೈಲ್ ಟಿಕೆಟಿಂಗ್ ವ್ಯವಸ್ಥೆಯನ್ನು ಏರ್ ಪೋರ್ಟ್ ಲೈನ್ ನಲ್ಲಿ ಈಗಾಗಲೇ ಪರಿಚಯಿಸಲಾಗಿದೆ. ಫೇಸ್ 2 ಪ್ರೊಜೆಕ್ಟ್ ನಲ್ಲಿರುವ ಸ್ಟೇಷನ್ ಗಳಲ್ಲಿ ಅಡ್ವಾನ್ಸ್ಡ್ ಎಎಫ್ ಸಿ ಗೇಟ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಗಳನ್ನು ಪಡೆಯುವ ಜೊತೆಗೆ ಓಪನ್ ಲೂಪ್ ಕಾರ್ಡ್ ಗಳನ್ನು ಪಡೆಯುವ ಫೆಸಿಲಿಟಿ ಇರಲಿದೆ.ಈಗಾಗಲೇ ಇರುವ ಎಎಫ್ ಸಿ ಗೇಟ್ ಗಳಲ್ಲಿ ಇದನ್ನು ಅಪ್ ಗ್ರೇಡ್ ಮಾಡಲು ಟೆಂಡರ್ ನೀಡಲಾಗುತ್ತದೆ.ಈಗಾಗಲೇ ಕೊಚ್ಚಿ, ದೆಹಲಿ, ಮುಂಬೈ ಗಳಲ್ಲಿ ಡಿಜಿಟಲ್ ವ್ಯಾಲೆಟ್ ಜೊತೆಗೆ ಮೆಟ್ರೋ ಕೈಜೋಡಿಸಿದೆ. ಅಂದರೆ ಪೇಟಿಎಂ, Ridlr ಗಳು ಮೊಬೈಲ್ ಫೋನ್ ಬಳಸಿ ಟಿಕೆಟ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

  ಸಾಮಾನ್ಯ ಮೊಬಿಲಿಟಿ ಕಾರ್ಡ್ ಇನ್ನು ಬಂದಿಲ್ಲ

  ಬೆಂಗಳೂರಿಗರ ಕನಸಾಗಿರುವ ಬೇರೆಬೇರೆ ಪ್ರಯಾಣಕ್ಕೆ ಸಾಮಾನ್ಯ ಮೊಬಿಲಿಟಿ ಕಾರ್ಡ್ ಬಳಸಬಹುದಾಗಿರುವ ಆಯ್ಕೆ ಇದುವರೆಗೂ ಕಾಗದದಲ್ಲೇ ಉಳಿದಿದೆ. ಬಿಎಂಟಿಸಿ, ಬಿಎಂಆರ್ ಸಿಎಲ್ ಎರಡಕ್ಕೂ ಒಂದೇ ಪಾಸ್ ಅಥವಾ ಟಿಕೆಟ್ ಬಳಸುವ ಆಯ್ಕೆ ಬೆಂಗಳೂರಿಗರಿಗೆ ಇದ್ದರೆ ಖಂಡಿತ ಅದು ಪ್ರಯೋಜನಕಾರಿ. ಆದರೆ ಇದುವರೆಗೂ ಆ ಆಯ್ಕೆ ಇಲ್ಲವಾಗಿರುವುದು ಜನಸಾಮಾನ್ಯರಿಗೆ ನಿರಾಸೆ ಉಂಟು ಮಾಡಿದೆ.

  ಮೊಬೈಲ್ ಟಿಕೆಟಿಂಗ್ :

  * ಡಿಜಿಟಲ್ ವ್ಯಾಲೆಟ್/ ಮೊಬೈಲ್ ಟಿಕೆಟಿಂಗ್ / ಕ್ಯೂಆರ್ ಕೋಡ್ ಬಳಸಿ ಪಾವತಿ ಆಯ್ಕೆಗೆ ಲಾಗಿನ್ ಆಗಿ.

  * ಆರಂಭಿಕ ಸ್ಥಳ ಮತ್ತು ತಲುಪಬೇಕಾಗಿರುವ ಸ್ಥಳ ಮತ್ತು ಎಷ್ಟು ಜನ ಪ್ರಯಾಣಿಕರು ಎಂಬುದನ್ನು ಆಯ್ಕೆ ಮಾಡಿ.

  *ಮೊತ್ತವನ್ನು ಎಂಟರ್ ಮಾಡಿ (ಟೋಕನ್ ವ್ಯಾಲ್ಯೂ, ಸ್ಮಾರ್ಟ್ ಕಾರ್ಡ್ ವ್ಯಾಲ್ಯೂ) ಮತ್ತು ಕನ್ಫರ್ಮ್ ಮಾಡಿ.ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಿ.

  *ಆಪ್ ನಿಮ್ಮ ಪ್ರಯಾಣಕ್ಕಾಗಿ ಕ್ಯೂಆರ್ ಕೋಡ್ ನ್ನು ಜನರೇಟ್ ಮಾಡುತ್ತದೆ. ಕ್ಯೂಆರ್ ಅನೇಬಲ್ ಆಗಿರುವ ಸ್ಟೇಷನ್ನಿನ ಎಎಫ್ ಸಿ ಗೇಟ್ ಗಳಲ್ಲಿ ಟ್ಯಾಪ್ ಮಾಡಿ. ನಂತರ ಕ್ಯೂಆರ್ ಕೋಡ್ ನ್ನು ಹೊರಗಡೆ ಹೋಗುವ ಗೇಟ್ ಗಳಲ್ಲಿ ಮತ್ತೆ ಟ್ಯಾಪ್ ಮಾಡಿ.

  *ಮೆಟ್ರೋ ಆಪರೇಷನಲ್ ಟೈಮ್ ನಲ್ಲಿ ಈ ಫೆಸಿಲಿಟಿ ಲಭ್ಯವಾಗಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Soon, use your smartphone to book QR-based Metro tickets in Bengaluru. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more