3 ಡಿ ಗ್ಲಾಸ್ ಇಲ್ಲದೆಯೇ ಸಿನಿಮಾ ವೀಕ್ಷಿಸಿ
ಗ್ಲಾಸ್‌ಗಳನ್ನು ಧರಿಸಿಕೊಂಡು 3 ಡಿ ಚಲನ ಚಿತ್ರ ವೀಕ್ಷಿಸುವ ಅಭ್ಯಾಸದಿಂದ ನೀವು ಬೇಸರ ಹೊಂದಿದ್ದೀರಿ ಎಂದಾದಲ್ಲಿ, ಇಲ್ಲಿದೆ ನಿಮಗೊಂದು ಶುಭ ಸುದ್ದಿ. ಮ್ಯಸಾಚುಸೆಟ್ಸ್ ವಿದ್ಯಾಲಯದ ವಿದ್ಯಾರ್ಥಿಗಳು ಡಿಸ್‌ಪ್ಲೇಯನ್ನು ಅಭಿವೃದ್ಧಿಗೊಳಿಸಿದ್ದು ಇದು ನಿಮಗೆ 3 ಡಿ ಗ್ಲಾಸ್ ಬಳಸದೆಯೇ ಚಲನ ಚಿತ್ರ ವೀಕ್ಷಿಸುವ ಅವಕಾಶವನ್ನು ಒದಗಿಸಲಿದೆ.

ಇದು ಒಂದು ರೀತಿಯ ಲೆನ್ಸ್‌ಗಳನ್ನು ಬಳಸಿಕೊಳ್ಳುತ್ತಿದ್ದು ಸಿನಿಮಾ 3ಡಿ ಎಂಬ ಹೆಸರನ್ನು ಇದಕ್ಕೆ ನೀಡಲಾಗಿದೆ. ಇದರಿಂದಾಗಿ ವೀಕ್ಷಕರು ಥಿಯೇಟರ್‌ನಲ್ಲಿ ಎಲ್ಲಿಂದ ಬೇಕಾದರೂ ಗ್ಲಾಸ್ ಬಳಸದೆಯೇ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಈಗಾಗಲೇ ಇಂತಹ ಸೌಲಭ್ಯ ಚಾಲ್ತಿಯಲ್ಲಿದ್ದರೂ ಮಾರುಕಟ್ಟೆಗೆ ಇದು ಇನ್ನೂ ಕಾಲಿಡಬೇಕಾಗಿದೆ. ಗ್ಲಾಸ್ ಧರಿಸಿದಾಗ ಆ ಭಾಗದಲ್ಲಷ್ಟೇ ಚಿತ್ರವನ್ನು ವೀಕ್ಷಣೆ ಮಾಡಬಹುದಾಗಿದೆ. ಆದರೆ ಈ ಲೆನ್ಸ್ ನಿಮಗೆ ಆರಾಮದಾಯಕವಾಗಿ ಚಿತ್ರವನ್ನು ವೀಕ್ಷಿಸುವ ಸೌಲಭ್ಯವನ್ನು ಒದಗಿಸಲಿದೆ.


Click it and Unblock the Notifications








