Home
ಸುದ್ದಿಜಾಲ

ಭಾರತದಲ್ಲಿ ಸೌಂಡ್‌ಕೋರ್‌ ಲೈಫ್ ಕ್ಯೂ 20 ಹೆಡ್‌ಫೋನ್‌ ಲಾಂಚ್‌!

ಆಂಕರ್‌ ಒಡೆತನದ ಸೌಂಡ್‌ಕೋರ್‌ ಕಂಪೆನಿ ತನ್ನ ಗುಣಮಟ್ಟದ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ವೈವಿಧ್ಯಮಯ ಹೆಡ್‌ಫೋನ್‌ಗಳನ್ನ ಪರಿಚಯಿಸಿರುವ ಸೌಂಡ್‌ಕೋರ್‌ ಸದ್ಯ ಇದೀಗ ತನ್ನ ಹೊಸ ಲೈಫ್ ಕ್ಯೂ 20 ವಾಯರ್‌ಲೆಸ್ ಹೆಡ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನೀವು ಬಯಸಿದಾಗ ಔಟ್ ಎಕ್ಸ್‌ಟರ್ನಲ್ ಸೌಂಡ್ಸ್ ಟ್ಯೂನ್ ಮಾಡಲು ಈ ಹೆಡ್‌ಫೋನ್‌ನಲ್ಲಿ ಹೈಬ್ರಿಡ್ ಆಕ್ಟಿವ್ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ನೀಡಲಾಗಿದೆ.

ಸೌಂಡ್‌ಕೋರ್

ಹೌದು, ಸೌಂಡ್‌ಕೋರ್ ಸಂಸ್ಥೆ ತನ್ನ ಹೊಸ ಲೈಫ್ ಕ್ಯೂ 20 ಹೆಡ್‌ಫೋನ್‌ ಅನ್ನು ಭಾರತದಲ್ಲಿ ಪರಿಚಯಿಸಿದೆ. ಈ ಹೆಡ್‌ಫೋನ್‌ಗಳು ಹೈ-ರೆಸ್ ಆಡಿಯೊವನ್ನು ಬೆಂಬಲಿಸುತ್ತವೆ ಮತ್ತು ಆಡಿಯೊ ಅನುಭವವನ್ನು ಹೆಚ್ಚಿಸಲು 40 mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿವೆ. ಇನ್ನು ಈ ಹೆಡ್‌ಫೋನ್‌ಗಳು ವಿಶಿಷ್ಟವಾದ ಬಾಸ್ಅಪ್ ಮೋಡ್‌ನೊಂದಿಗೆ ಬರುತ್ತವೆ, ಇದು ಬಾಸ್ ಅನ್ನು ಶೇಕಡಾ 100 ಕ್ಕಿಂತ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಸೌಂಡ್‌ಕೋರ್ ಲೈಫ್ ಕ್ಯೂ 20 ವಾಯರ್‌ಲೆಸ್ ಹೆಡ್‌ಫೋನ್‌ಗಳನ್ನು 18 ತಿಂಗಳ ಖಾತರಿಯೊಂದಿಗೆ ಸಂಯೋಜಿಸಲಾಗಿದೆ. ಇನ್ನುಳಿದಂತೆ ಈ ಹೆಡ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೌಂಡ್‌ಕೋರ್

ಸೌಂಡ್‌ಕೋರ್ ಲೈಫ್ ಕ್ಯೂ 20 ವಾಯರ್‌ಲೆಸ್ ಹೆಡ್‌ಫೋನ್‌ಗಳು ಹೈಬ್ರಿಡ್ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಬೆಂಬಲವನ್ನು ಹೊಂದಿವೆ. ಇದರ ನಾಲ್ಕು ಇಂಟರ್‌ಬಿಲ್ಟ್‌ ಹೈ-ಸೆನ್ಸಿಟಿವಿಟಿ ANC ಮೈಕ್ರೊಫೋನ್‌ಗಳಿಂದ ಸಕ್ರಿಯಗೊಳಿಸಲಾಗಿದೆ. ಇವು ಕಾರುಗಳು ಮತ್ತು ವಿಮಾನಗಳಂತಹ ಎಲ್ಲಾ ಕಡೆ ಎಕ್ಸ್‌ಟರ್ನಲ್ ಸೌಂಡ್ಸ್ 90% ಕಡಿಮೆ ಮಾಡಬಹುದಾಗಿದೆ. ಇನ್ನು ಈ ಲೈಫ್ ಕ್ಯೂ 20 ಹೆಡ್‌ಫೋನ್‌ಗಳು ಹೊಂದಾಣಿಕೆ ಮಾಡಬಹುದಾದ ಪ್ಯಾಡ್ಡ್ ಹೆಡ್‌ಬ್ಯಾಂಡ್ ಅನ್ನು ಹೊಂದಿದ್ದು, ಫೋಲ್ಡಬಲ್ ಇಯರ್‌ಕಪ್‌ಗಳನ್ನು ಹೊಂದಿದೆ. ಇದು 90% ಗಳವರೆಗೆ ತಿರುಗುತ್ತದೆ.

ಹೆಡ್‌ಫೋನ್‌

ಇನ್ನು ಈ ಹೆಡ್‌ಫೋನ್‌ಗಳನ್ನು ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಯಾವುದೇ ನೋವು ಅಥವಾ ಅಸ್ವಸ್ಥತೆ ಇಲ್ಲದೆ, ಕಿವಿಗಳ ಸುತ್ತ ಇಯರ್‌ಕಪ್‌ಗಳು ಆರಾಮವಾಗಿ ಹೊಂದಿಕೊಳ್ಳುತ್ತವೆ. ಅಲ್ಲದೆ ಹೆಡ್‌ಫೋನ್‌ಗಳು ಉತ್ತಮ ಆಡಿಯೊ ಗುಣಮಟ್ಟಕ್ಕಾಗಿ 40mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಹೈ-ರೆಸ್ ಆಡಿಯೊವನ್ನು ಬೆಂಬಲಿಸುತ್ತವೆ. ಸೌಂಡ್‌ಕೋರ್ ಲೈಫ್ ಕ್ಯೂ 20 ವಾಯರ್‌ ಲೆಸ್ ಹೆಡ್‌ಫೋನ್‌ಗಳು ಬಾಸ್ಅಪ್ ತಂತ್ರಜ್ಞಾನವನ್ನು ಬೆಂಬಲಿಸುತ್ತವೆ. ಇದು ಬಾಸ್ ಅನ್ನು ಶೇಕಡಾ 100 ರಷ್ಟು ಹೆಚ್ಚಿಸುತ್ತದೆ ಎಂದು ಹೇಳುತ್ತದೆ.

ಹೆಡ್‌ಫೋನ್‌

ಇದಲ್ಲದೆ ಈ ಹೆಡ್‌ಫೋನ್‌ ಪ್ಲೇ ಬಟನ್ ಅನ್ನು ಎರಡು ಬಾರಿ ಒತ್ತುವ ಮೂಲಕ ಬಳಕೆದಾರರು ಈ ಬಾಸ್ಅಪ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು ಮತ್ತು ಧ್ವನಿಯಲ್ಲಿ ವರ್ಧಿತ ವ್ಯತ್ಯಾಸವನ್ನು ತಕ್ಷಣ ಕೇಳಬಹುದು. ಸೌಂಡ್‌ಕೋರ್ ಲೈಫ್ ಕ್ಯೂ 20 ಹೆಡ್‌ಫೋನ್‌ಗಳು ಎಎನ್‌ಸಿ ಮೋಡ್‌ನಲ್ಲಿ 30 ಗಂಟೆಗಳ ವೈರ್‌ಲೆಸ್ ಪ್ಲೇಬ್ಯಾಕ್ ಸಮಯವನ್ನು ಮತ್ತು ಸ್ಟ್ಯಾಂಡರ್ಡ್ ಮೋಡ್‌ನಲ್ಲಿ 60 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ. ಜೊತೆಗೆ ಲೈಫ್ ಕ್ಯೂ 20 ಹೆಡ್‌ಫೋನ್‌ಗಳು ತ್ವರಿತ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ ಎಂದು ಸೌಂಡ್‌ಕೋರ್ ಹೇಳಿಕೊಂಡಿದ್ದು, ಐದು ನಿಮಿಷಗಳ ಚಾರ್ಜ್ ನಾಲ್ಕು ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ 5.0 ಹೊಂದಾಣಿಕೆ ಸೇರಿದೆ. ವೈರ್ಡ್ ಪ್ಲೇಬ್ಯಾಕ್ ಅಗತ್ಯವಿದ್ದಾಗ ಬಾಕ್ಸ್ 3.5 ಎಂಎಂ ಆಕ್ಸ್ ಕೇಬಲ್ ಅನ್ನು ಸಹ ಒಳಗೊಂಡಿದೆ.

ಸೌಂಡ್‌ಕೋರ್

ಸೌಂಡ್‌ಕೋರ್ ಲೈಫ್ ಕ್ಯೂ 20 ವಾಯರ್‌ಲೆಸ್‌ ಹೆಡ್‌ಫೋನ್‌ ಬೆಲೆ ಭಾರತದಲ್ಲಿ 9,999 ರೂ.ಆಗಿದ್ದು, ಇವು ಒಂದೇ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಸದ್ಯ ಈ ಹೆಡ್‌ಫೋನ್‌ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಐದು ಪ್ರತಿಶತ ಅನಿಯಮಿತ ಕ್ಯಾಶ್‌ಬ್ಯಾಕ್,ದೊರೆಯಲಿದೆ.

Best Mobiles in India

English summary
Soundcore by Anker has launched its new Life Q20 wireless headphones in India. The headphones come with hybrid active noise cancellation (ANC) for tuning out external sounds when you want to.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+