ಸೌಂಡ್‌ಕೋರ್‌ ಆಂಕರ್‌ನ ಲಿಬರ್ಟಿ ಏರ್‌ಎಕ್ಸ್ ಇಯರ್‌ಬಡ್ಸ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಶುರುವಾದ ನಂತರ ಇಯರ್‌ಫೋನ್‌ಗಳನ್ನ ಫೋನ್‌ ಜೊತೆಗೆ ಬರುವುದು ಸ್ಟಾಪ್‌ ಆಗಿದೆ. ಈಗಾಗಲೇ ತಮಗಿಷ್ಟವಾದ ಇಯರ್‌ಫೋನ್‌ಗಳನ್ನ ಆಯ್ಕೆ ಮಾಡಿಕೊಂಡು ತೆಗೆದುಕೊಳ್ಳುವುದಕ್ಕೆ ಗ್ರಾಹಕರು ಶುರುಮಾಡಿದ್ದಾರೆ. ಇದೇ ಕಾರಣಕ್ಕೆ ಟೆಕ್‌ ಮಾರುಕಟ್ಟೆಯಲ್ಲಿ ಇಯರ್‌ಬಡ್ಸ್‌ಗಳ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಇನ್ನು ಹಲವು ಇಯರ್‌ಬಡ್ಸ್‌ ಕಂಪೆನಿಗಳಲ್ಲಿ ಸೌಂಡ್‌ಕೋರ್‌ ಸಂಸ್ಥೆಕೂಡ ಒಮದಾಗಿದ್ದು, ಇದು ಆಂಕರ್‌ ಬ್ರ್ಯಾಂಡ್‌ ಹೆಸರಿನಲ್ಲಿ ಇಯರ್‌ಬಡ್ಸ್‌ಗಳನ್ನ ಪರಿಚಯಿಸುತ್ತಿದೆ. ಸದ್ಯ ಇದೀಗ ತನ್ನ ಹೊಸ ಇಯರ್‌ಬಡ್ಸ್‌ ಅನ್ನು ಪರಿಚಯಿಸಿದೆ.

ಸೌಂಡ್‌ಕೋರ್‌

ಹೌದು, ಸೌಂಡ್‌ಕೋರ್‌ ಒಡೆತನದ ಆಂಕರ್‌ ಕಂಪೆನಿ ತನ್ನ ಹೊಸ ಲಿಬರ್ಟಿ ಏರ್‌ಏಕ್ಸ್‌ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಿದೆ. ಈ ಇಯರ್‌ಬಡ್ಸ್‌ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಉತ್ತಮ ಆಡಿಯೊ ಅನುಭವವನ್ನು ನೀಡಲಿದೆ. ಇನ್ನು ಈ ಇಯರ್‌ಬಡ್ಸ್‌ ಉತ್ತಮ ಬ್ಯಾಟರಿ ಪ್ಯಾಕ್ಅಪ್‌ ಜೊತೆಗೆ ಸ್ಟಾಂಗ್‌ ಆಡಿಯೋ ಸಿಸ್ಟಂ ಅನ್ನು ಒಳಗೊಂಡಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ಬ್ಲೂಟೂತ್ v 5.0 ಅನ್ನು ಬೆಂಬಲಿಸಲಿದೆ. ಅಲ್ಲದೆ ಇದು ಯಾವುದೇ ಹೊಂದಾಣಿಕೆಯ ಡಿವೈಸ್‌ಗೆ ಇನ್ಸಟಾಂಟ್‌ ಕನೆಕ್ಟಿವಿಟಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ಈ ಇಯರ್‌ಬಡ್ಸ್‌ ಉತ್ತಮ ಶ್ರೇಣಿ ಮತ್ತು ಸಂಪರ್ಕ ಸ್ಥಿರತೆಯನ್ನು ಸಹ ಸುಧಾರಿಸಿದೆ. ಇನ್ನು ಸೌಂಡ್‌ಕೋರ್ ಲಿಬರ್ಟಿ ಏರ್‌ಎಕ್ಸ್‌ ನ ವಿನ್ಯಾಸವು ಸುರಕ್ಷಿತವಾದ ಫಿಟ್ ಅನ್ನು ಹೊಮದಿದ್ದು, 18 ತಿಂಗಳ ವಾರೆಂಟಿಯನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ.

ಲಿಬರ್ಟಿ

ಇದಲ್ಲದೆ ಸೌಂಡ್‌ಕೋರ್ ನ ಲಿಬರ್ಟಿ ಏರ್ಎಕ್ಸ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ CVC 8.0 ನಾಯಿಸ್‌ ರಿಡಕ್ಷನ್‌ ಟೆಕ್ನಾಲಜಿಯನ್ನು ಹೊಂದಿದೆ. ಇವುಗಳ ಪ್ರತಿ ಇಯರ್‌ಬಡ್‌ನಲ್ಲಿ ಮೈಕ್ರೊಫೋನ್ ಅಳವಡಿಸಲಾಗಿದ್ದು ಇದು ವಾಯಿಸ್‌ ಅನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಅಲ್ಲದೆ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಅನ್ನು ಕಡಿಮೆಗೊಳಿಸುತ್ತದೆ. ಇದರಿಂದ ಕರೆಗಳ ಸ್ವೀಕಾರದಲ್ಲಿ ಉತ್ತಮ ಧ್ವನಿ ಸ್ಪಷ್ಟತೆ ಸಿಗಲಿದೆ. ಅಲ್ಲದೆ ಈ ಇಯರ್‌ಬಡ್‌ಗಳನ್ನು ಪರಿಣಿತ ಟ್ಯೂನ್ಡ್ ಗ್ರ್ಯಾಫೀನ್ ಡ್ರೈವರ್‌ಗಳ ಮೂಲಕ ವಿನ್ಯಾಸಗೊಳಿಸಲಾಗಿದೆ.

ಡ್ಯುಯಲ್

ಇನ್ನು ಈ ಇಯರ್‌ಬಡ್ಸ್‌ಗಳಲ್ಲಿ ಡ್ಯುಯಲ್-ಮೈಕ್ರೊಫೋನ್‌ಗಳನ್ನ ನೀಡಲಾಗಿದ್ದು, ಇದರಿಂದ ಬಾಹ್ಯ ಶಬ್ದವಿಲ್ಲದೆ ಸ್ಫಟಿಕ-ಸ್ಪಷ್ಟ ಸಂಭಾಷಣೆಗಳಿಗಾಗಿ ಸ್ಟಿರಿಯೊ ಗುಣಮಟ್ಟದ ಆಡಿಯೊವನ್ನು ನೀಡಲಿದೆ. ಅಲ್ಲದೆ ಈ ಇಯರ್‌ಬಡ್‌ಗಳು ಬ್ಯಾಟರಿ ಬಾಳಿಕೆಯಲ್ಲಿ ಬಾರಿ ಸುಧಾರಣೆಯನ್ನು ಹೊಂದಿದೆ. ಇದರ ಬಡ್‌ಗಳನ್ನ ಒಮ್ಮೆ ಮಾತ್ರ ಚಾರ್ಜ್‌ ಮಾಡಬಹುದಾಗಿದೆ. ಒಂದೇ ಚಾರ್ಜ್‌ನಲ್ಲಿ 7 ಗಂಟೆಗಳ ಕಾಲ ಬಾಳಿಕೆ ಬರಲಿದೆ. ಅಲ್ಲದೆ ಈ ಸಂದರ್ಭದಲ್ಲಿ, ಒಟ್ಟು 28 ಗಂಟೆಗಳ ಪ್ಲೇಟೈಮ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇಂಟಿಗ್ರೇಟೆಡ್

ಜೊತೆಗೆ ಈ ಇಯರ್‌ಬಡ್ಸ್‌ನಲ್ಲಿ ಇಂಟಿಗ್ರೇಟೆಡ್ ಟಚ್ ಕಂಟ್ರೋಲ್ ಸಿಸ್ಟಮ್ ಅನ್ನು ನೀಡಲಾಗಿದ್ದು, ಬಳಕೆದಾರರು ಇಯರ್‌ಬಡ್‌ಗಳನ್ನು ಟಚ್‌ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಅಲ್ಲದೆ ಮ್ಯೂಸಿಕ್‌ ಅನ್ನು ಪ್ಲೇ ಮಾಡಲು ಅಥವಾ ಸ್ಟಾಪ್‌ ಮಾಡಲು ಮ್ಯೂಸಿಕ್‌ ಟ್ರ್ಯಾಕ್‌ ಚೇಂಜ್‌ ಮಾಡಲು ಮತ್ತು ಫೋನ್ ಕರೆಗಳನ್ನು ಸ್ವಿಕರಿಸಲು ಮತ್ತು ಕರೆ ಕಡಿತ ಗೊಳಿಸಲು ಅನುವು ಮಾಡಿಕೊಡುತ್ತದೆ. ಇನ್ನು ಇ ಇಯರ್‌ ಬಡ್ಸ್‌ 7,999 ರೂ ಬೆಲೆಯನ್ನ ಹೊಂದಿದ್ದು, ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ.

Most Read Articles
Best Mobiles in India

Read more about:
English summary
The Soundcore Liberty AirX truly wireless earbuds are claimed to offer a battery life of up to 7 hours on a single charge, and up to 28 hours with the case.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X