Home
ಸುದ್ದಿಜಾಲ

ಸೌಂಡ್‌ಕೋರ್‌ ಲಿಬರ್ಟಿ ಏರ್ 2 ವಾಯರ್‌ಲೆಸ್ ಇಯರ್‌ಬಡ್ಸ್ ಲಾಂಚ್‌!

ಜನಪ್ರಿಯ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಸೌಂಡ್‌ಕೋರ್ ಸಂಸ್ಥೆ ತನ್ನ ಹೊಸ ಲಿಬರ್ಟಿ ಏರ್ 2 ವಾಯರ್‌ಲೆಸ್ ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್‌ಗಳು ಉತ್ತಮ ಧ್ವನಿ ಮತ್ತು ಕರೆ ಗುಣಮಟ್ಟಕ್ಕಾಗಿ ಡೈಮಂಡ್-ಪ್ರೇರಿತ ಡ್ರೈವರ್‌ಗಳು ಮತ್ತು ನಾಲ್ಕು ಮೈಕ್ರೊಫೋನ್‌ಗಳನ್ನು ಹೊಂದಿವೆ. ಇನ್ನು ಈ ಇಯರ್‌ಬಡ್ಸ್‌ 28 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಮತ್ತು ಅಪ್‌ಲಿಂಕ್ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ನೀಡುತ್ತವೆ.

ಸೌಂಡ್‌ಕೋರ್ ಲಿಬರ್ಟಿ ಏರ್ 2 ಇಯರ್‌ಬಡ್ಸ್

ಹೌದು, ಸೌಂಡ್‌ಕೋರ್‌ ಆಂಕರ್‌ ತನ್ನ ಹೊಸ ಸೌಂಡ್‌ಕೋರ್ ಲಿಬರ್ಟಿ ಏರ್ 2 ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಟಚ್‌ ಕಂಟ್ರೂಲ್‌ ಅನ್ನು ಹೊಂದಿದೆ. ಜೊತೆಗೆ ವಾಯರ್‌ಲೆಸ್‌ ಚಾರ್ಜರ್‌ ಮೂಲಕ 3.5 ಗಂಟೆಗಳಲ್ಲಿ ಚಾರ್ಜಿಂಗ್‌ ಮಾಡಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ CVC 8.0 ನಾಯ್ಸ್‌ ರೆಡ್ಯೂಕ್ಷನ್ ಟೆಕ್ನಾಲಜಿ ಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಇಯರ್‌ಬಡ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೌಂಡ್‌ಕೋರ್‌ ಲಿಬರ್ಟಿ ಏರ್ 2

ಸೌಂಡ್‌ಕೋರ್‌ ಲಿಬರ್ಟಿ ಏರ್ 2 ಡೈಮಂಡ್-ಕೋಟೆಡ್ ಡ್ರೈವರ್ಸ್ ಹೊಂದಿದೆ. ಅಲ್ಲದೆ ಇದು CVC 8.0 ನಾಯ್ಸ್‌ ರೆಡ್ಯೂಕ್ಷನ್ ಟೆಕ್ನಾಲಜಿಯನ್ನು ಒಳಗೊಂಡಿರುವ ನಾಲ್ಕು ಇಂಟರ್‌ಬಿಲ್ಟ್‌ ಮೈಕ್ರೊಫೋನ್‌ಗಳೊಂದಿಗೆ ಬರುತ್ತದೆ. ಇವೆಲ್ಲವೂ ಸುತ್ತುವರಿದ ಶಬ್ದವನ್ನು ಕಡಿಮೆ ಮಾಡುತ್ತದೆ ಮತ್ತು ಕರೆ ಗುಣಮಟ್ಟವನ್ನು ಸುಧಾರಿಸುತ್ತದೆ. ಇನ್ನು ಸೌಂಡ್‌ಕೋರ್ ಲಿಬರ್ಟಿ ಏರ್ 2 22EQ ಸೆಟ್ಟಿಂಗ್ಸ್‌ ಅನ್ನು ಹೊಂದಿದೆ. ಅಲ್ಲದೆ ಇವುಗಳನ್ನು ಸೌಂಡ್‌ಕೋರ್ ಅಪ್ಲಿಕೇಶನ್ ಮೂಲಕ ಕಸ್ಟಮೈಸ್ ಸಹ ಮಾಡಬಹುದಾಗಿದೆ.

ಸೌಂಡ್‌ಕೋರ್ ಲಿಬರ್ಟಿ ಏರ್ 2

ಇನ್ನು ಸೌಂಡ್‌ಕೋರ್ ಲಿಬರ್ಟಿ ಏರ್ 2 10 ಮೀಟರ್ ಆಪರೇಟಿಂಗ್‌ ಡಿಸ್ಟೆನ್ಸ್‌ ಅನ್ನು ಹೊಂದಿದ್ದು, ಇದು ಟಚ್‌ ಕಂಟ್ರೋಲ್‌ ಅನ್ನು ಹೊಂದಿದೆ. ಇದಲ್ಲದೆ ಇದು ಮ್ಯೂಸಿಕ್‌, ಕಾಲ್‌ ಮತ್ತು ವಾಯ್ಸ್‌ ಅಸಿಸ್ಟೆಟಂಅ್‌ ಅನ್ನು ಟಚ್‌ ಕಂಟ್ರೋಲ್‌ ಮೂಲಕ ಸಕ್ರಿಯಗೊಳಿಸಬಹುದು. ಇನ್ನು ವಾಯರ್‌ಲೆಸ್‌ ಕನೆಕ್ಟಿವಿಟಿಗಾಗಿ ಈ ಇಯರ್‌ಬಡ್‌ಗಳು ಬ್ಲೂಟೂತ್ V5.0 ಅನ್ನು ಬೆಂಬಲಿಸುತ್ತವೆ. ಜೊತೆಗೆ ಈ ಇಯರ್‌ಬಡ್‌ಗಳು ಮೊನೊ ಮತ್ತು ಸ್ಟಿರಿಯೊ ಮೋಡ್‌ನೊಂದಿಗೆ ಬರುತ್ತವೆ ಮತ್ತು ಐಪಿಎಕ್ಸ್ 5 ವಾಟರ್‌ ರೆಸಿಸ್ಟೆನ್ಸ್‌ ಅನ್ನು ಹೊಂದಿದೆ.

ಸೌಂಡ್‌ಕೋರ್ ಲಿಬರ್ಟಿ ಏರ್ 2

ಸೌಂಡ್‌ಕೋರ್ ಲಿಬರ್ಟಿ ಏರ್ 2 ಚಾರ್ಜಿಂಗ್ ಕೇಸ್‌ ಜೊತೆಗೆ ಒಟ್ಟು 28 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಎರಡು ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ನೀಡಲು ಸರಳವಾದ 10 ನಿಮಿಷಗಳ ಚಾರ್ಜ್‌ ಅನ್ನು ನೀಡಲಾಗುತ್ತದೆ. ಈ ಇಯರ್‌ಬಡ್ಸ್‌ಗಳು ವೈರ್ಡ್ ವಿಧಾನದ ಮೂಲಕ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಎರಡು ಗಂಟೆ ಮತ್ತು ವಾಯರ್‌ ಲೆಸ್‌ ಚಾರ್ಜರ್ ಮೂಲಕ 3.5 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ. ಇನ್ನು ಸೌಂಡ್‌ಕೋರ್ ಲಿಬರ್ಟಿ ಏರ್ 2 ಸುಧಾರಿತ ಧ್ವನಿಗಾಗಿ ಕ್ವಾಲ್ಕಾಮ್ ಆಪ್ಟಿಎಕ್ಸ್ ಟೆಕ್ನಾಲಜಿ ಮತ್ತು ಹಿಯರ್ಐಡಿ ವೈಯಕ್ತಿಕಗೊಳಿಸಿದ ಧ್ವನಿಯನ್ನು ಹೊಂದಿದೆ.

ಸೌಂಡ್‌ಕೋರ್ ಲಿಬರ್ಟಿ ಏರ್ 2

ಇನ್ನು ಈ ಹೊಸ ಸೌಂಡ್‌ಕೋರ್ ಲಿಬರ್ಟಿ ಏರ್ 2 ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಭಾರತದಲ್ಲಿ 7,999 ರೂ.ಬೆಲೆಯನ್ನು ಹೊಂದಿದೆ. ಇವು ಫ್ಲಿಪ್‌ಕಾರ್ಟ್ ಮತ್ತು ದೇಶಾದ್ಯಂತದ ಇತರ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿದೆ. ಕ್ಲಾಸಿ ವೈಟ್ ಮತ್ತು ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಇಯರ್‌ಬಡ್ಸ್‌ ಲಭ್ಯವಾಗಲಿದೆ.

Best Mobiles in India

English summary
Soundcore Liberty Air 2 wireless earbuds have been launched by Soundcore by Anker, expanding its portfolio in the Indian market.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+