ಆಂಕರ್ ಕಂಪೆನಿಯಿಂದ ಸೌಂಡ್‌ಕೋರ್ ಲೈಫ್ ಡಾಟ್ 2 ಇಯರ್‌ಬಡ್ಸ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಶಾಲವಾದಷ್ಟು ಇಯರ್‌ಫೋನ್‌ಗಳ ಮಾರುಕಟ್ಟೆ ಕೂಡ ಸಾಕಷ್ಟು ಪ್ರಗತಿಯನ್ನ ಸಾಧಿಸಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಹಲವು ಕಂಪೆನಿಗಳು ತಮ್ಮ ಭಿನ್ನ ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿವೆ. ಆದರೂ ಗ್ರಾಹಕರೂ ತಮ್ಮ ನೆಚ್ಚಿನ ಬ್ರಾಂಡ್‌ಗಳ ಇಯರ್‌ಫೋನ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಆಂಕರ್‌ ಕಂಪೆನಿಯು ಸಹ ಒಂದಾಗಿದೆ. ಸದ್ಯ ಆಂಕರ್‌ ಕಂಪೆನಿ ತನ್ನ ಹಲವು ಇಯರ್‌ಫೋನ್‌ಗಳ ಮೂಲಕ ಸೈ ಎನಿಸಿಕೊಂಡಿದ್ದು, ಇದೀಗ ಮತ್ತೊಂದು ಹೊಸ ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿದೆ.

ಆಂಕರ್

ಹೌದು, ಆಂಕರ್ ಕಂಪೆನಿ ತನ್ನ ಹೊಸ ಸೌಂಡ್‌ಕೋರ್ ಲೈಫ್ ಡಾಟ್ 2 ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಬಡ್ಸ್‌ಗಳು ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದ್ದು, ಉತ್ತಮ ವಿನ್ಯಾಸವನ್ನ ಹೊಂದಿವೆ ಎಂದು ಹೇಳಲಾಗ್ತಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಹೊಸ ಮಾದರಿಯ ವಿನ್ಯಾಸವಲ್ಲದೆ ಬ್ಲ್ಯಾಕ್‌ ಫಿನಿಶ್‌ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದ್ದು, ಇದು 100-ಗಂಟೆಗಳ ಪ್ಲೇಟೈಮ್ ಸೇರಿದಂತೆ ಸಾಕಷ್ಟು ಪವರ್‌ ಫುಲ್‌ ಫೀಚರ್ಸ್‌ಗಳನ್ನ ಹೊಂದಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಕರ್‌

ಆಂಕರ್‌ ಕಂಪೆನಿ ಬಿಡುಗಡೆ ಮಾಡಿರುವ ಸೌಂಡ್‌ಕೋರ್ ಲೈಫ್ ಡಾಟ್ 2 ಇಯರ್‌ಬಡ್ಸ್‌ TWS ಪುಶ್ ಮತ್ತು ಗೋ ಟೆಕ್ನಾಲಜಿಯೊಂದಿಗೆ ಬರಲಿದೆ. ಇದು ಚಾರ್ಜಿಂಗ್ ಕೇಸ್‌ನಿಂದ ಹೊರತೆಗೆದಾಗ ಕೊನೆಯ ಜೋಡಿಯಾಗಿರುವ ಡಿವೈಸ್‌ನೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಒಂದು ಅಥವಾ ಎರಡೂ ಇಯರ್‌ಬಡ್‌ಗಳನ್ನು ಬಳಸಲಾಗಿದೆಯೆ ಎಂಬುದನ್ನು ಅವಲಂಬಿಸಿ ಅವು ಸ್ವಯಂಚಾಲಿತವಾಗಿ ಮೊನೊ ಮತ್ತು ಸ್ಟಿರಿಯೊ ಮೋಡ್‌ಗಳ ನಡುವೆ ಬದಲಾಯಿಸಬಹುದಾಗಿದೆ.

ಸೌಂಡ್‌ಕೋರ್‌

ಇನ್ನು ಸೌಂಡ್‌ಕೋರ್‌ ಲೈಫ್‌ ಡಾಟ್‌ 2 ಇಯರ್‌ಬಡ್ಸ್‌ ಡಬ್ಲ್ಯೂಎಸ್ 8mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಅಲ್ಲದೆ ಇದು IPX 5 ವಾಟರ್ ರೆಸಿಸ್ಟೆನ್ಸ್ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಾಗಿ ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸಲಿದೆ. ಅಲ್ಲದೆ ಇದು ಏರ್ ವಿಂಗ್ಸ್ ವಿನ್ಯಾಸವನ್ನು ಹೊಂದಿದ್ದು ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕವಾದ ಫಿಟ್ ಅನ್ನು ನೀಡುತ್ತದೆ. ಇದಲ್ಲದೆ ಇದು ಅಲ್ಟ್ರಾ-ಸಾಫ್ಟ್ ಸಿಲಿಕೋನ್ ಅನ್ನು ಹೊಂದಿದ್ದು,ಇದು ಯಾವುದೇ ಕಿವಿಗೆ ಸರಿಹೊಂದುವಂತೆ ಮಾಡುತ್ತದೆ ಎಂದು ಆಂಕರ್ ಕಂಪೆನಿ ಹೇಳಿದೆ.

ಸೌಂಡ್‌ಕೋರ್

ಇದಲ್ಲದೆ ಈ ಸೌಂಡ್‌ಕೋರ್ ಲೈಫ್ ಡಾಟ್ 2 ಟಿಡಬ್ಲ್ಯೂಎಸ್ ಒಂದೇ ಚಾರ್ಜ್‌ನಲ್ಲಿ 8 ಗಂಟೆಗಳ ಕಾಲ ರನ್‌ಮಾಡಬಹುದಾಗಿದೆ. ಇದರ ಚಾರ್ಜಿಂಗ್ ಕೇಸ್‌ ಒಟ್ಟು 100 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದ್ದು, ಹೆಚ್ಚುವರಿಯಾಗಿ, ಚಾರ್ಜಿಂಗ್ ಪ್ರಕರಣವು ಯುಎಸ್ಬಿ ಟೈಪ್-ಸಿ ಪೋರ್ಟ್ ಮೂಲಕ ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನ ಒಳಗೊಂಡಿದೆ. ಇನ್ನು ಇದು 90 ನಿಮಿಷಗಳ ಪ್ಲೇಟೈಮ್ ಅನ್ನು 10 ನಿಮಿಷಗಳ ಚಾರ್ಜ್‌ನೊಂದಿಗೆ ನೀಡಲಿದ್ದು,ಈ ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳನ್ನು 1.5 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.

ಆಂಕರ್

ಇನ್ನು ಆಂಕರ್ ಸೌಂಡ್‌ಕೋರ್ ಲೈಫ್ ಡಾಟ್ 2 ಟಿಡಬ್ಲ್ಯೂಎಸ್ ಬೆಲೆ 3,499.ರೂ. ಆಗಿದ್ದು, ಇದು ಕಪ್ಪು ಬಣ್ಣದ ರೂಪಾಂತರದಲ್ಲಿ ಲಭ್ಯವಾಗಲಿದೆ. ಸದ್ಯ ಇದನ್ನು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ.

Most Read Articles
Best Mobiles in India

Read more about:
English summary
Soundcore Life Dot 2 by Anker come with fast charging technology that gives 90 minutes of playtime with 10 minutes of charging.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X