ಸೌಂಡ್‌ಕೋರ್ ಲೈಫ್ U2 ನೆಕ್‌ಬ್ಯಾಂಡ್ ಇಯರ್‌ಫೋನ್‌ ಬಿಡುಗಡೆ!

|

ಸ್ಮಾರ್ಟ್‌ಫೋನ್‌ ಮೂಲಕ ಮ್ಯೂಸಿಕ್‌ ಕೇಳುತ್ತಾ ಸಮಯ ಕೇಳುವುದು ಎಲ್ಲರಿಗೂ ಇಷ್ಟವಾದ ಸಂಗತಿಯಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಮೂಲಕ ಇಯರ್‌ಫೋನ್‌ ಧರಿಸಿಕೊಂಡು ನೆಚ್ಚಿನ ಹಾಡುಗಳನ್ನು ಗುನುಗುವುದು ಮತ್ತಷ್ಟು ಖುಷಿ ನೀಡುತ್ತದೆ. ಸದ್ಯ ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಇಯರ್‌ಫೋನ್‌ಗಳನ್ನ ಹಲವು ಕಂಪೆನಿಗಳು ಪರಿಚಯಿಸಿವೆ. ಇದೀಗ ಆಕ್ಸೆಸರೀಸ್ ಕಂಪನಿಯು ತನ್ನ ಹೊಸ ಸೌಂಡ್‌ಕೋರ್ ಲೈಫ್ U2 ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಸೌಂಡ್‌ಕೋರ್‌ ಲೈಫ್‌ U2 ಇಯರ್‌ಫೋನ್

ಹೌದು, ಆಕ್ಸೆಸರೀಸ್‌ ಕಂಪೆನಿಯು ತನ್ನ ಹೊಸ ಸೌಂಡ್‌ಕೋರ್‌ ಲೈಫ್‌ U2 ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ ನೆಕ್‌ಬ್ಯಾಂಡ್ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಈ ಸೌಂಡ್‌ಕೋರ್ ಲೈಫ್ U2 ಇಯರ್‌ಫೋನ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಚಾರ್ಜಿಂಗ್‌ ಅನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಫೋನ್‌ 24 ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಇಯರ್‌ಫೋನ್‌ಗಳು 10mm ಆಡಿಯೋ ಡ್ರೈವರ್‌ಗಳೊಂದಿಗೆ ಬರಲಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೌಂಡ್‌ಕೋರ್ ಲೈಫ್ U2 ಇಯರ್‌ಫೋನ್‌

ಸೌಂಡ್‌ಕೋರ್ ಲೈಫ್ U2 ಇಯರ್‌ಫೋನ್‌ಗಳು 10mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಅಲ್ಲದೆ ಇದು ಸಾಮಾನ್ಯ ಇಯರ್‌ಫೋನ್‌ಗಳಿಗಿಂತ ಶೇಕಡಾ 20 ರಷ್ಟು ದೊಡ್ಡದಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಇಯರ್‌ಫೋನ್‌ನಲ್ಲಿ ಹೊಸ ಬಾಸ್ಅಪ್ ಮೋಡ್ ಇದೆ, ಅದು ಸಾಮಾನ್ಯ ಇಯರ್‌ಫೋನ್‌ಗಳಿಗಿಂತ 70 ಪ್ರತಿಶತ ಹೆಚ್ಚು ಬಾಸ್ ಅನ್ನು ನೀಡಲಿದೆ. ಇನ್ನು ಈ ಇಯರ್‌ಫೋನ್‌ಗಳು ಸಿಂಗಲ್‌ ಚಾರ್ಜಿಂಗ್‌ನಲ್ಲಿ 24 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದೆ. ಅಲ್ಲದೆ ಇದು ಫುಲ್‌ ಚಾರ್ಜಿಂಗ್‌ಗಾಗಿ ಎರಡು ಗಂಟೆಗಳ ಸಮಯವನ್ನು ತೆಗೆದುಕೊಳ್ಳಲಿದೆ.

ಸೌಂಡ್‌ಕೋರ್ ಲೈಫ್ U2 ನೆಕ್‌ಬ್ಯಾಂಡ್

ಇನ್ನು ಈ ಸೌಂಡ್‌ಕೋರ್ ಲೈಫ್ U2 ನೆಕ್‌ಬ್ಯಾಂಡ್ ನಲ್ಲಿ ಹೊಸ CVC 8.0 ನಾಯ್ಸ್‌ ಕ್ಯಾನ್ಸಲೇಶನ್‌ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇದು ಉತ್ತಮ ಕರೆ ಗುಣಮಟ್ಟಕ್ಕಾಗಿ ಸುತ್ತುವರಿದ ಶಬ್ದವನ್ನು ನಿರ್ಬಂಧಿಸುತ್ತದೆ. ಅಲ್ಲದೆ ಇದು ವಾಟರ್‌ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, IPX 7 ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಜೊತೆಗೆ ಇದು ಬ್ಲೂಟೂತ್ V5 ಅನ್ನು ಬೆಂಬಲಿಸಲಿದ್ದು, 20 ಮೀಟರ್ ಆಪರೇಟಿಂಗ್ ಶ್ರೇಣಿಯನ್ನು ಒಳಗೊಂಡಿದೆ. ಇದಲ್ಲದೆ ಬಾಸ್ಅಪ್ ಮೋಡ್‌ ಹೊಂದಿದ್ದು, ಇದರಿಂದ ಹೆಚ್ಚುವರಿ ಬಾಸ್‌ ಲಭ್ಯವಾಗಲಿದೆ.

ಸೌಂಡ್‌ಕೋರ್ ಲೈಫ್ U2

ಸೌಂಡ್‌ಕೋರ್ ಲೈಫ್ U2 ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳ ಬೆಲೆ ಭಾರತದಲ್ಲಿ 2,899.ರೂ. ಆಗಿದೆ. ಇನ್ನು ಈ ಇಯರ್‌ಫೋನ್‌ಗಳು ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಲು ಲಭ್ಯವಿದೆ. ಅಲ್ಲದೆ ಇದು ಕೇವಲ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಲಾಂಚ್‌ ಆಫರ್‌ನಲ್ಲಿ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 5% ಅನಿಯಮಿತ ಕ್ಯಾಶ್‌ಬ್ಯಾಕ್‌ ನೀಡಲಿದೆ. ಜೊತೆಗೆ ನೋ ಕಾಸ್ಟ್‌ EMI ಮೂಲಕ ಸಹ ಇವುಗಳನ್ನ ಖರೀದಿಸಲು ಅವಕಾಶವಿದೆ.

Most Read Articles
Best Mobiles in India

English summary
Soundcore Life U2 has a BassUp mode to enable beats to sound deeper and more immersive.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X