ವಿಶ್ವದಲ್ಲೇ ಮೊದಲ ಸೆರೆಮನೆ ರೋಬೋಟ್ ಎಲ್ಲಿದೆ

Posted By: Varun
ವಿಶ್ವದಲ್ಲೇ ಮೊದಲ ಸೆರೆಮನೆ ರೋಬೋಟ್ ಎಲ್ಲಿದೆ

ಬೆಳಗ್ಗೆ ತಾನೇ ರೋಬೋಟ್, ಲೈಂಗಿಕ ಕಾರ್ಯಕರ್ತರನ್ನು ಮೀರಿಸಲಿದೆ ಎಂಬ ಸುದ್ದಿ ಪ್ರಕಟಿಸಿದ್ದೆವು. ಈಗ ಮತ್ತೊಂದು ರೋಬೋಟ್ ಸುದ್ದಿ ಬಂದಿದೆ. ಅದೇನೆಂದರೆ ದಕ್ಷಿಣ ಕೊರಿಯಾದ ಪೋಹಾಂಗ್ ಎಂಬ ನಗರದಲ್ಲಿ ವಿಶ್ವದಲ್ಲೇ ಮೊದಲಬಾರಿಗೆ ಸೆರೆಮನೆ ಕಾಯಲು ರೋಬೋಟ್ ಬಳಸಿದ ಕೀರ್ತಿಗೆ ಪಾತ್ರವಾಗಿದೆ.

ಏಶಿಯನ್ ಫೋರಮ್ ಆಫ್ ಕರೆಕ್ಷನ್ಸ್ ಹಾಗು SMEC ಜಂಟಿಯಾಗಿ ಸೃಷ್ಟಿಸಿರುವ 5 ಅಡಿ ಎತ್ತರದ ರೋಬೋಟ್ ನಲ್ಲಿ 3D ಕ್ಯಾಮರಾ, ವಯರ್ಲೆಸ್ ಸಾಧನ, ಮನುಷ್ಯರ ನಡವಳಿಕೆಯನ್ನು ಹಾಗು ಭಾವನೆಗಳನ್ನು ಗಮನಿಸಲು ತಂತ್ರಾಂಶವನ್ನು ಕೂಡ ಅಳವಡಿಸಲಾಗಿದೆ. ಈ ರೋಬಟ್ ನ 3D ಕ್ಯಾಮರಾದ ಮೂಲಕ ಸೆರೆಮನೆಯಲ್ಲಿ ಖೈದಿಗಳ ನಡವಳಿಕೆ ಹಾಗು ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಉನ್ನತ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ.

ರಾಯ್ಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಈ ರೋಬಟ್ ಪರಿಣಾಮಕಾರಿಯಾಗಿದೆ ಎಂದು ಕಂಡು ಬಂದಲ್ಲಿ ಇನ್ನು ಮುಂದೆ ಎಲ್ಲಾ ಕಾರಾಗೃಹಗಳಿಗೂ ಇವುಗಳನ್ನು ಬಳಸಿಕೊಂಡು ವೆಚ್ಚ ಕಡಿಮೆ ಮಾಡಬಹುದು ಎಂದು ಯೋಜಿಸಲಾಗಿದೆಯಂತೆ.

ನಮ್ಮ ಪರಪ್ಪನ ಅಗ್ರಹಾರಕ್ಕೆ ಈ ಥರದ ಒಂದು ರೋಬೋಟ್ ಅನ್ನು ಅಸೋಕಣ್ಣ ತರಿಸಿದರೆ, ಜೈಲಿನಲ್ಲಿ ಖೈದಿಗಳು ಅಂದರ್ ಬಹಾರ್ ಆಡುವುದನ್ನು ತಪ್ಪಿಸಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot