ಎರಡೇ ನಿಮಿಷದಲ್ಲಿ ವೈಫಲ್ಯ ಕಂಡ ರಾಕೆಟ್ ವಿಡಿಯೋ ವೈರಲ್..! ಆಗಸದಲ್ಲಿ ಏನಾಯ್ತು ಗೊತ್ತಾ..?
ರಷ್ಯಾದ ಸ್ಪೇಸ್ ಏಜೇನ್ಸಿ ರೋಸ್ಕೊಮೊಸ್ ಅಕ್ಟೋಬರ್ 11ರಂದು ಗಗನಯಾತ್ರಿಗಳನ್ನು ಹೊತ್ತು ನಭಕ್ಕೆ ಜಿಗಿದಿದ್ದ ಸೊಯುಜ್-FG ರಾಕೆಟ್ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆಯೇ ಕೆಟ್ಟು ಹೋಗಿದ್ದ ಘಟನೆ ಎಲ್ಲರಿಗೆ ನೆನಪಿರುತ್ತೆ. ಈಗ ಆ ಘಟನೆಯ ದೃಶ್ಯಾವಳಿಗಳನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದ್ದು, ಆಕಾಶದಲ್ಲಿ ಅಂದು ಏನೆಲ್ಲಾ ಆಯ್ತು ಎಂಬುದಕ್ಕೆ ಉತ್ತರ ಸಿಕ್ಕಿದೆ.
ಹೌದು, ಗುರುವಾರ ರೋಸ್ಕೊಮಸ್ ಬಿಡುಗಡೆ ಮಾಡಿರುವ ಆನ್‌ಬೋರ್ಡ್ ಕ್ಯಾಮೆರಾದ ದೃಶ್ಯಾವಳಿಗಳಲ್ಲಿ ರಾಕೆಟ್ ಮೊದಲ ಮತ್ತು ಎರಡನೇ ಹಂತಗಳು ಪ್ರತ್ಯೇಕಗೊಳ್ಳುವಾಗ ಡಿಟೆಕ್ಟರ್‌ನಲ್ಲಿ ಉಂಟಾದ ಅಸಮರ್ಪಕ ಕಾರ್ಯಾಚರಣೆಯಿಂದ ಮಧ್ಯ-ಗಾಳಿಯ ವೈಫಲ್ಯದಿಂದ ರಾಕೆಟ್ ವಿಫಲತೆಯನ್ನು ಕಂಡಿದೆ ಎಂದು ರಷ್ಯಾ ತಿಳಿಸಿದೆ. ಸೊಯುಜ್-FG ರಾಕೆಟ್ ಉಡಾವಣೆಗೊಂದು ಕೇವಲ ಎರಡೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು.

ಗಗನಯಾತ್ರಿಗಳನ್ನು ಹೊತ್ತು ರಷ್ಯಾದ 'ಬೈಕೊನುರ್ ಕಾಸ್ಮೋಡ್ರೋಮ್' ಅಂತರಿಕ್ಷ ನೌಕಾ ನೆಲೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆಗೊಂಡಿದ್ದ ಸೋಯುಜ್-FG ಉಡಾವಣಾ ವಾಹನ ಸೋಯುಜ್ MS-10 ಬಾಹ್ಯಾಕಾಶ ನೌಕೆಯನ್ನು ತಲುಪಲು ವಿಫಲವಾಯಿತು. ಈ ನೌಕೆಯಲ್ಲಿ ರಷ್ಯಾದ ಗಗನಯಾತ್ರಿ ಅಲೆಕ್ಸೆ ಒವ್ಚಿನಿನ್ ಮತ್ತು ಅಮೇರಿಕಾದ ಗಗನಯಾತ್ರಿ ನಿಕ್ ಹೇಗ್ ಇದ್ದರು. ಗಗನಯಾತ್ರಿಗಳು ತುರ್ತು ಲ್ಯಾಂಡಿಂಗ್ ಬಳಸಿ ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದ್ದರು. ಈ ವೈಫಲ್ಯವು ರಷ್ಯಾದ ಇತ್ತೀಚಿನ ದಶಕಗಳಲ್ಲಿ ಮಾನವಸಹಿತ ಗಗನಯಾನ ಯೋಜನೆಗಳಲ್ಲಿ ಮೊದಲನೆಯದಾಗಿತ್ತು.


Click it and Unblock the Notifications








