ಚಂದ್ರನ ಸುತ್ತ ಪ್ರವಾಸಕ್ಕೆ ಹೋಗಲು ರೆಡಿಯಾಗಿ..! ಸ್ಪೇಸ್‌ ಎಕ್ಸ್‌ನಿಂದ ಹೊಸ ಯೋಜನೆ..!

|

ಪ್ರತಿಯೊಬ್ಬರಿಗೂ ವಿದೇಶಗಳಿಗೆ, ಹೊರ ರಾಜ್ಯಗಳಿಗೆ ಪ್ರವಾಸ ಹೋಗಬೇಕೆಂಬ ಆಸೆ ಇದ್ದೇ ಇರುತ್ತೇ. ಒಂದು ಚಾನ್ಸ್‌ ಸಿಕ್ಕರೆ ಅನ್ಯಗ್ರಹಕ್ಕೂ ಹೋಗಿ ಬರೋಣ ಎಂದು ಎಷ್ಟೋ ಜನ ಕನಸು ಕಟ್ಟಿಕೊಂಡಿರುತ್ತಾರೆ. ಶುಭ್ರ ಶ್ವೇತ ವರ್ಣದ ಚಂದ್ರನನ್ನೇ ನೋಡಿ ಬೆಳೆದ ನಮಗೆ ಚಂದ್ರನ ಸುತ್ತ ಪ್ರವಾಸ ಹೋಗೋಕೆ ಚಾನ್ಸ್‌ ಸಿಗುತ್ತೆ ಎಂದರೆ ಬಿಡುತ್ತೇವಾ..? ಅದೆಷ್ಟೇ ದುಡ್ಡು ಖರ್ಚಾಗಲಿ ಎಂದು ಹೋಗಿ ಬರುವವರು ಇದ್ದೇ ಇರುತ್ತಾರೆ. ಅಂತಹವರಿಗಾಗಿಯೇ ಒಂದು ಸಿಹಿ ಸುದ್ದಿಯಿದ್ದು, ಸ್ಪೇಸ್‌ ಎಕ್ಸ್‌ ಎಂಬ ಸಂಸ್ಥೆ ಚಂದ್ರನ ಸುತ್ತಲಿನ ಪ್ರವಾಸದ ಆಯ್ಕೆಯನ್ನು ಜನರಿಗೆ ತೆರೆದಿಟ್ಟಿದೆ.

ಚಂದ್ರನ ಸುತ್ತ ಪ್ರವಾಸಕ್ಕೆ ಹೋಗಲು ರೆಡಿಯಾಗಿ..! ಸ್ಪೇಸ್‌ ಎಕ್ಸ್‌ನಿಂದ ಹೊಸ ಯೋಜನೆ

ಅಮೇರಿಕಾದ ಖಾಸಗಿ ಏರೋಸ್ಪೇಸ್ ಉತ್ಪಾದಕ ಕಂಪನಿಯಾಗಿರುವ ಸ್ಪೇಸ್‌ ಎಕ್ಸ್‌ ಗುರುವಾರ ಹೊಸ ಯೋಜನೆಯೊಂದನ್ನು ಘೋಷಿಸಿದ್ದು, ತನ್ನ ಬಿಗ್‌ ಫಾಲ್ಕನ್‌ ರಾಕೆಟ್‌ ಬಳಸಿಕೊಂಡು ಚಂದ್ರನ ಸುತ್ತಲಿನ ಪ್ರದೇಶದಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆಯಾಗಿದೆ. ಬಿಗ್‌ ಫಾಲ್ಕನ್‌ ರಾಕೆಟ್‌ ಭಾರೀ ಉಡಾವಣೆ ವಾಹನವಾಗಿದ್ದು, ಜನರನ್ನು ಬಾಹ್ಯಾಕಾಶಕ್ಕೆ ಸಾಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಕುರಿತು ಸ್ಪೇಸ್‌ ಎಕ್ಸ್‌ ಕಂಪನಿ ತನ್ನ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಪ್ರಕಟಿಸಿದ್ದು, ಚಂದ್ರನತ್ತಿರ ಹೋಗುವ ಕನಸುಗಳಿಗೆ ರೆಕ್ಕೆಯನ್ನು ಹಚ್ಚಿದೆ.

ಟ್ವೀಟ್‌ನಲ್ಲಿ ಏನೀದೆ..?

ಟ್ವೀಟ್‌ನಲ್ಲಿ ಏನೀದೆ..?

ವಿಶ್ವದಲ್ಲಿ ಮೊದಲ ಬಾರಿಗೆ ಖಾಸಗಿ ಪ್ರಯಾಣಿಕರನ್ನು ಚಂದ್ರನ ಸುತ್ತ ಬಿಗ್‌ ಫಾಲ್ಕನ್‌ ರಾಕೆಟ್‌ನಲ್ಲಿ ಕರೆದೊಯ್ಯಲು ಸ್ಪೇಸ್‌ ಎಕ್ಸ್‌ ಒಪ್ಪಂದ ಮಾಡಿಕೊಂಡಿದ್ದು, ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಕನಸನ್ನು ಪ್ರತಿದಿನ ಕಾಣುವ ಜನರಿಗೆ ಬಾಹ್ಯಾಕಾಶ ಪ್ರವೇಶ ಕಲ್ಪಿಸುವ ಕಡೆ ಪ್ರಮುಖ ಹೆಜ್ಜೆ ಹಾಕುತ್ತಿದ್ದೇವೆ ಎಂದು ಸ್ಪೇಸ್‌ ಎಕ್ಸ್‌ ತನ್ನ ಟ್ವೀಟ್‌ನಲ್ಲಿ ಹೇಳಿದೆ. ಆದರೆ, ಈ ಯೋಜನೆಯ ಬಗ್ಗೆ ಮತ್ತಷ್ಟು ವಿವರಗಳನ್ನು ಸ್ಪೇಸ್‌ ಎಕ್ಸ್‌ ಇನ್ನು ಬಿಡುಗಡೆಯಾಗಿಲ್ಲ. ಸೋಮವಾರದೊತ್ತಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.

ಇದೇ ಮೊದಲಲ್ಲ..!

ಇದೇ ಮೊದಲಲ್ಲ..!

ಚಂದ್ರನ ಸುತ್ತ ಪ್ರವಾಸ ಹೋಗುವ ಯೋಜನೆ ಇದೇ ಮೊದಲಲ್ಲ. ಹೀಗಾಗಲೇ ಇಂಟರ್‌ನೆಟ್ ಉದ್ಯಮಿ ಮತ್ತು ಟೆಸ್ಲಾ ಎಲೆಕ್ಟ್ರಿಕ್ ಕಾರ್ ಸಿಇಒ ಎಲಾನ್ ಮಸ್ಕ್ ನೇತೃತ್ವದ ಕ್ಯಾಲಿಫೋರ್ನಿಯಾ ಮೂಲದ ಕಂಪೆನಿ ಸ್ಪೇಸ್‌ ಎಕ್ಸ್‌ ಪ್ರವಾಸಿಗರನ್ನು ಚಂದ್ರನ ಸುತ್ತ ಕಳುಹಿಸುವ ಯೋಜನೆಯನ್ನು ಪ್ರಕಟಿಸಿತ್ತು. 2017ರ ಫೆಬ್ರವರಿಯಲ್ಲಿ ಸ್ಪೇಸ್‌ ಎಕ್ಸ್‌ ಘೋಷಿಸಿದಂತೆ 2018ರ ಅಂತ್ಯದಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಚಂದ್ರನ ಸುತ್ತಲೂ ಇಬ್ಬರು ಬಾಹ್ಯಾಕಾಶ ಪ್ರವಾಸಿಗರನ್ನು ಕಳುಹಿಸುತ್ತೇವೆಂದು ಘೋಷಿಸಿತ್ತು.

ರೈಡ್‌ ಆನ್‌ ಎ ಡ್ರಾಗನ್ ಕ್ರ್ಯೂ ವೆಹಿಕಲ್‌

ರೈಡ್‌ ಆನ್‌ ಎ ಡ್ರಾಗನ್ ಕ್ರ್ಯೂ ವೆಹಿಕಲ್‌

ಸ್ಪೇಸ್‌ ಎಕ್ಸ್‌ನ ಹೊಸ ಯೋಜನೆಗೆ ರೈಡ್‌ ಆನ್‌ ಎ ಡ್ರಾಗನ್ ಕ್ರ್ಯೂ ವೆಹಿಕಲ್‌ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಸರಕು ಸಾಗಣೆ ಹಡಗಿನಂತೆ ಕಾರ್ಯನಿರ್ವಹಿಸುವ ಯೋಜನೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸಿಗರನ್ನು ಕಳುಹಿಸುವ ಸಾಧ್ಯತೆಯಿದ್ದು, ಅಲ್ಲಿಂದ ಫಾಲ್ಕನ್ ಹೆವಿ ರಾಕೆಟ್ ವಾಹನದ ಮೂಲಕ ಚಂದ್ರನ ಸುತ್ತಲ್ಲೂ ಸುತ್ತಾಡುವ ಸಾಧ್ಯತೆಯನ್ನು ಯೋಜನೆ ಹೊಂದಿದೆ. ಆದರೆ, ಯೋಜನೆಯ ಕಾರ್ಯನಿರ್ವಹಣೆ ಮಾಹಿತಿ ಇನ್ನು ಖಚಿತವಾಗಿಲ್ಲ.

ಮೊದಲ ಪ್ರವಾಸಿಗರು ಯಾರು..?

ಮೊದಲ ಪ್ರವಾಸಿಗರು ಯಾರು..?

ಈ ವರ್ಷದ ಕೊನೆಯಲ್ಲಿ ಉದ್ದೇಶಿತ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಉದ್ದೇಶಿತ ಯೋಜನೆಯಲ್ಲಿ ಚಂದ್ರನ ಸುತ್ತ ಸುತ್ತಾಡುವ ಇಬ್ಬರು ಪ್ರವಾಸಿಗರ ಹೆಸರು ಹಾಗೂ ಗುರುತುಗಳನ್ನು ಸ್ಪೇಸ್‌ ಎಕ್ಸ್‌ ಬಹಿರಂಗಪಡಿಸಿಲ್ಲ. ಮತ್ತು ಪ್ರವಾಸಕ್ಕೆ ಅವರಿಗೆ ವಿಧಿಸಲು ಉದ್ದೇಶಿಸಿರುವ ಮೊತ್ತದ ಬಗ್ಗೆಯು ಸ್ಪೇಸ್‌ ಎಕ್ಸ್‌ ಕಂಪನಿ ಹೇಳಿಲ್ಲ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸ್ಪೇಸ್‌ ಎಕ್ಸ್‌ ಸೋಮವಾರ ಸಂಜೆ 5:30 ರಿಂದ 7:00 ಗಂಟೆಯ ನಡುವೆ ತಿಳಿಸಲಿದೆ ಎಂದು ಹೇಳಿದೆ.

ಚಂದ್ರನ ಮೇಲೆ ಮಾನವ

ಚಂದ್ರನ ಮೇಲೆ ಮಾನವ

1972ರ ಅಂತಿಮ ಅಪೋಲೋ ಯೋಜನೆಯ ನಂತರ ಚಂದ್ರನ ಮೇಲೆ ಮಾನವನ್ನು ಯಾವೊಂದು ರಾಷ್ಟ್ರ ಕಳಿಸಿಲ್ಲ. 1969ರಲ್ಲಿ ಅಮೆರಿಕಾದ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಝ್ ಅಲ್ಡ್ರೀನ್‌ ಚಂದ್ರನ ಮೇಲೆ ಮೊದಲು ಇಳಿದಿದ್ದರು. ಮನುಷ್ಯನಿಗೆ ಒಂದು ಸಣ್ಣ ಹೆಜ್ಜೆ, ಮನುಕುಲಕ್ಕೆ ದೈತ್ಯ ಎಂದು ಆರ್ಮ್‌ಸ್ಟ್ರಾಂಗ್‌ ಹೇಳಿದಾಗ ಇಡೀ ವಿಶ್ವವೇ ಬೆರಗಾಗಿತ್ತು. ಇಲ್ಲಿಯವರೆಗೂ ಚಂದ್ರಯಾನ ಮಾಡಿದವರು ಕೇವಲ 24 ಜನ ಮಾತ್ರ ಎಂದರೆ ನಂಬಲೇಬೇಕು.

ಟ್ರಂಪ್‌ ಉತ್ಸುಕತೆ

ಟ್ರಂಪ್‌ ಉತ್ಸುಕತೆ

ಯುಎಸ್ನ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತೊಮ್ಮೆ ಚಂದ್ರನ ಮೇಲೆ ಮಾನವನ ಕಾಲಿರಿಸಲು ಉತ್ಸುಕವಾಗಿದ್ದಾರೆ. ಈ ಉತ್ಸುಕತೆಯ ಭಾಗವಾಗಿ NASA ಹೀಗಾಗಲೇ ಲುನಾರ್ ಗೇಟ್‌ವೆ ನಿರ್ಮಿಸುವ ಕೆಲಸವನ್ನು ಮಾಡುತ್ತಿದೆ. ಇದು ಆಸ್ಟೆರಾಯ್ಡ್ಸ್‌ ಅಥವಾ ಮಂಗಳನಂತಹ ಡೀಪ್‌ ಸ್ಪೇಸ್‌ಗೆ ಹೋಗುವ ಕಾರ್ಯಗಳಿಗೆ ಲಾಂಚಿಂಗ್‌ ಪಾಯಿಂಟ್‌ ಆಗಿ ಕಾರ್ಯನಿರ್ವಹಿಸಲಿದೆ.

ನಾಸಾದ ಪ್ರಮುಖ ವಾಣಿಜ್ಯ ಪಾಲುದಾರ

ನಾಸಾದ ಪ್ರಮುಖ ವಾಣಿಜ್ಯ ಪಾಲುದಾರ

ಸ್ಪೇಸ್ಎಕ್ಸ್‌ ಕಂಪನಿ ನಾಸಾಗೆ ಪ್ರಮುಖ ವಾಣಿಜ್ಯ ಪಾಲುದಾರನಾಗಿದ್ದು, ಮುಂದಿನ ವರ್ಷ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮೊದಲ ಹಾರಾಟ ಮಾಡುವ ವಿಮಾನ ತಯಾರಿಸುವ ಕಾರ್ಯವನ್ನು ಮಾಡುತ್ತಿದೆ. 2011ರಲ್ಲಿ ಸ್ಪೇಸ್ ಶಟಲ್‌ ಪ್ರೋಗ್ರಾಮ್‌ ತನ್ನ 30 ವರ್ಷಗಳ ಕಾರ್ಯನಿರ್ವಹಣೆಯನ್ನು ಅಂತ್ಯಗೊಳಿಸಿದೆ ನಂತರ ಮೊದಲ ಬಾರಿಗೆ ಯುಎಸ್‌ನಿಂದ ಬಾಹ್ಯಾಕಾಶಕ್ಕೆ ಪುನಃ ನೆಗೆಯುತ್ತಿದೆ. ಬೋಯಿಂಗ್ ಕೂಡ ಕ್ರ್ಯೂ ವೆಹಿಕಲ್ ನಿರ್ಮಿಸುವ ಕೆಲಸದಲ್ಲಿ ಬಹಳಷ್ಟು ಶ್ರಮ ಪಡುತ್ತಿದ್ದು, 2019ಕ್ಕೆ ಮೊದಲ ಪ್ರವರ್ತಕ ವಿಮಾನಯಾನ ಯೋಜನೆಯನ್ನು ನಡೆಸುವ ಚಿಂತನೆ ನಡೆಸಿದೆ.

11,400 ಕೋಟಿ ಒಪ್ಪಂದ

11,400 ಕೋಟಿ ಒಪ್ಪಂದ

ಸ್ಪೇಸ್ಎಕ್ಸ್‌ ಕಂಪನಿಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾನಿಗಳನ್ನು ಕಳುಹಿಸಲು ನಾಸಾದೊಂದಿಗೆ 1.6 ಬಿಲಿಯನ್ ಡಾಲರ್‌ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದು, ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ 11,400 ಕೋಟಿ ರೂ. ಒಪ್ಪಂದವಾಗಲಿದೆ. ಈ ಒಪ್ಪಂದವು ಡ್ರಾಗನ್ ಸ್ಪೇಸ್‌ಶಿಪ್‌ನಲ್ಲಿ ನಿಯಮಿತ ಸರಕು ಪ್ರಯಾಣದ ಮೂಲಕ ಗಗನಯಾತ್ರಿಗಳನ್ನು ಸಾಗಿಸಲು, ಫಾಲ್ಕನ್ 9 ರಾಕೆಟ್‌ನಲ್ಲಿ ಚಂದ್ರನ ಬಳಿ ಕಳುಹಿಸುವ ಅಂಶಗಳನ್ನು ಒಳಗೊಂಡಿದೆ.

ಏನೀದು ಬಿಎಫ್‌ಆರ್‌ ರಾಕೆಟ್‌..?

ಏನೀದು ಬಿಎಫ್‌ಆರ್‌ ರಾಕೆಟ್‌..?

ಬಿಎಫ್‌ಆರ್‌ ಎಂಬುದು ಸ್ಪೇಸ್‌ ಎಕ್ಸ್‌ನ ಬಿಗ್‌ ಫಾಲ್ಕನ್‌ ರಾಕೆಟ್‌ ಆಗಿದೆ. ಇದು 31 ಇಂಜಿನ್‌ಗಳೊಂದಿಗೆ ಕಾರ್ಯನಿರ್ವಹಿಸುವ ಶಕ್ತಿಶಾಲಿ ಉಡಾವಣಾ ವಾಹನವಾಗಿದ್ದು, 150 ಟನ್‌ ಭಾರವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಮಾತನಾಡಿದ್ದ ಇಲಾನ್ ಮಸ್ಕ್‌, 2022ರ ವೇಳೆಗೆ ಬಿಗ್‌ ಫಾಲ್ಕನ್‌ ರಾಕೆಟ್‌ ಮಂಗಳನಲ್ಲಿ ಎರಡು ಕಾರ್ಗೋ ಶಿಫ್‌ಗಳನ್ನು ಇಳಿಸುವ ಸಾಮರ್ಥ್ಯ ಹೊಂದಲಿದೆ ಎಂದು ಭರವಸೆ ನೀಡಿದ್ದರು. ನಾವು ಮುಂದಿನ 5 ವರ್ಷಗಳಲ್ಲಿ ಸ್ಪೇಸ್‌ ಶಿಪ್‌ ಪೂರ್ಣಗೊಳಿಸಿ ಲಾಂಚ್‌ ಮಾಡುವ ವಿಶ್ವಾಸ ಇದೆ ಎಂದು ಮಸ್ಕ್‌ ಹೇಳಿದ್ದರು.

Best Mobiles in India

English summary
SpaceX Announces New Plan to Send Tourist Around Moon. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X