Just In
Don't Miss
- News
Karnataka Budget 2021 Live Updates; ಬಜೆಟ್ ಮಂಡಿಸಲಿದ್ದಾರೆ ಯಡಿಯೂರಪ್ಪ
- Movies
ಬಿಗ್ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗ್ಲೋಬಲ್ ಇಂಟರ್ನೆಟ್ ಗಾಗಿ 60 ಕ್ಕೂ ಹೆಚ್ಚು ಮಿನಿ ಸ್ಯಾಟಲೈಟ್ ಬಿಡುಗಡೆಗೊಳಿಸಿದ ಸ್ಪೇಸ್ ಎಕ್ಸ್
ಖಾಸಗಿ ಸ್ಪೇಸ್ ಎಕ್ಸ್ ಸಂಸ್ಥೆ ಎರಡನೇ ಗುಂಪಿನ ಕಿರು ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇದು ಜಗತ್ತಿನಾದ್ಯಂತ ಇಂಟರ್ನೆಟ್ ಆಕ್ಸಿಸ್ ನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದು ಸಣ್ಣ ಪರಿಭ್ರಮಿಸುವ ಸಾಧನಗಳ ಬೃಹತ್ ಸಮೂಹವನ್ನು ಹೊಂದಿದೆ.

ಇತರೆ ಉಪಗ್ರಹಗಳನ್ನು ಸೇರಿಕೊಂಡ ಮಿನಿ ಉಪಗ್ರಹಗಳು:
ಇದೀಗ ಫ್ಲೋರಿಡಾದ ಕೇಪ್ ಕೆನವೆರಲ್ ನಿಂದ ಉಡಾವಣೆಯಾದ ಫಾಲ್ಕನ್-9 ರಾಕೆಟ್ 60 ಮಿನಿ ಉಪಗ್ರಹಗಳನ್ನು ಕಕ್ಷೆಯಲ್ಲಿ ಇರಿಸಿ, ಮೇ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಇತರೆಯನ್ನು ಸೇರಿಕೊಂಡಿದೆ.

ವಿಜ್ಞಾನಿಗಳಿಗೆ ಆತಂಕ:
ಅಮೇರಿಕಾದ ಸ್ಟಾರ್ ಲಿಂಕ್ ಕಂಪೆನಿಯು ಒಂದು ದಿನಕ್ಕೆ ಒಟ್ಟು 42,000 ಸ್ಯಾಟಲೈಟ್ ಗಳನ್ನು ಮಾಡಬಲ್ಲದು. ಇದು ಕೆಲವು ವಿಜ್ಞಾನಿಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಹೀಗೆ ಸ್ಯಾಟಲೈಟ್ ನಿರ್ಮಿಸಿದರೆ ಆಕಾಶದ ಸ್ಥಿತಿ ಏನಾಗಬೇಡ ಎಂಬುದು ಅವರ ಚಿಂತೆ. ಆಕಾಶವು ಕಿಕ್ಕಿರಿಯುತ್ತದೆ ಎಂದು ಕೆಲವು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಉಡಾವಣೆಯ ದೃಶ್ಯ ಬಿಡುಗಡೆ:
ಉಡಾವಣೆಯ ದೃಷ್ಯಗಳನ್ನು ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕರೂ ಆಗಿರುವ ಉದ್ಯಮಿ ಎಲೋನ್ ಮಸ್ಕ್ ರಚಿಸಿದ ಸ್ಪೇಸ್ ಎಕ್ಸ್ ಕಂಪೆನಿಯು ನೇರಪ್ರಸಾರವನ್ನು ಕೂಡ ಮಾಡಿದೆ. ಈ ಮೂಲಕ ಸ್ಪೇಸ್ ಹೊಂದಿರುವ ಗುರಿ ಏನೆಂದರೆ ಭವಿಷ್ಯದ ಇಂಟರ್ನೆಟ್ ಮಾರುಕಟ್ಟೆಯ ದೊಡ್ಡ ಪಾಲನ್ನು ಬಾಹ್ಯಾಕಾಶದಿಂದ ನಿಯಂತ್ರಿಸುವುದಾಗಿದೆ.

ಇತರೆ ಸಂಸ್ಥೆಗಳಿಗೂ ಇದೇ ಗುರಿ:
ಆದರೆ ಇದೇ ಮಹತ್ವಾಕಾಂಕ್ಷೆಯನ್ನು ಹಲವು ಪ್ರತಿಸ್ಪರ್ಧಿ ಸಂಸ್ಥೆಗಳು ಹೊಂದಿವೆ.ಅದರಲ್ಲಿ ಲಂಡನ್ ಮೂಲದ ಸ್ಟಾರ್ಟ್ ಅಪ್ ಒನ್ ವೆಬ್ ಮತ್ತು ಯುಎಸ್ ಚಿಲ್ಲರೆ ದೈತ್ಯ ಅಮೇಜಾನ್ ಕೂಡ ಸೇರಿವೆ.ಆದರೆ ಅವರ ಪ್ರೊಜೆಕ್ಟ್ ಬಹಳ ಹಿಂದುಳಿದಿದೆ.

ಗಳಿಸುವಿಕೆಯಲ್ಲಿ 10 ಪಟ್ಟು ಅಧಿಕ:
ಮಸ್ಕ್ ಜಾಗತಿಕ ಅಂತರ್ಜಾಲ ಮಾರುಕಟ್ಟೆಯ 3 ರಿಂದ 5 ಶೇಕಡಾವನ್ನು ನಿಯಂತ್ರಿಸಬೇಕು ಎಂದು ಆಶಿಸುತ್ತಾರೆ. ವರ್ಷಕ್ಕೆ ಅಂದಾಜು 30 ಬಿಲಿಯನ್( ಅಂದಾಜು 2,15,000 ಕೋಟಿ) ಶೇರ್ ಮೊತ್ತ ಇದೆ. ಅಂದರೆ ಸ್ಪೇಸ್ ಎಕ್ಸ್ ಈ ಉಡಾವಣೆಯಿಂದ ಒಟ್ಟಾರೆ ಗಳಿಸುವಿಕೆಯನ್ನು 10 ಪಟ್ಟು ಹೆಚ್ಚಿಸಿಕೊಳ್ಳಲಿದೆ. ಆ ಮೂಲಕ ಬಾಹ್ಯಾಕಾಶ ನೌಕೆಗಳು ಮತ್ತು ರಾಕೆಟ್ ಗಳ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದು ಮಸ್ಕ್ ಅವರ ಮುಂದಿನ ಗುರಿಯಾಗಿದೆ.

ಮಂಗಳನ ಅಂಗಳಕ್ಕೆ ಕಾಲಿಡುವ ಗುರಿ:
ಮಂಗಳ ಗ್ರಹವನ್ನು ತಲುಪುವ ಮಹತ್ವದ ಕನಸನ್ನು ಸ್ಪೇಸ್ ಎಕ್ಸ್ ನ ಮುಖ್ಯಸ್ಥರು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಅವರ ಕ್ಯಾಲಿಫೋರ್ನಿಯಾ ಮೂಲದ ಕಂಪೆನಿಯು ಈವರೆಗೆ 12,000 ಉಪಗ್ರಹಗಳನ್ನು ವಿಭಿನ್ನ ಕಕ್ಷೆಗಳಲ್ಲಿ ಉಡಾಯಿಸುವುದಕ್ಕೆ ಯುಎಸ್ ಅಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಂಡಿದೆ ಮತ್ತು 30,000 ಕ್ಕೂ ಅಧಿಕ ಉಡಾವಣೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ ಎಂಬ ಮಾಹಿತಿ ಇದೆ.

ವೇಗದ ಇಂಟರ್ನೆಟ್ ಸೇವೆ ಒದಗಿಸಲಾಗುತ್ತದೆ:
ಭೂಮಿಗೆ ಅತ್ಯಂತ ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸ್ಟಾರ್ ಲಿಂಕ್ ನ್ನು ಡಿಸೈನ್ ಮಾಡಲಾಗಿದೆ. ಇದರ ಮಿನಿ ಸ್ಯಾಟಲೈಟ್ ಹೋಲಿಕೆಯಲ್ಲಿ ಕಡಿಮೆ ಎತ್ತರದಲ್ಲಿ(550 ಕಿಲೋಮೀಟರ್ ಅಥವಾ 340 ಮೈಲಿ, ಮೊದಲನೆಯದಕ್ಕಿಂತ) ಪರಿಭ್ರಮಿಸುತ್ತದೆ.ಇದು ವೇಗದ ಪ್ರಸರಣ ಸಮಯವನ್ನು ಅನುಮತಿಸುತ್ತದೆ.

ಕೆನಡಾ ಮತ್ತು ಯುಎಸ್ ನಲ್ಲಿ ಕಾರ್ಯ:
ಕೆನಡಾ ಮತ್ತು ಉತ್ತರ ಯುಎಸ್ ಗೆ ಮುಂದಿನ ವರ್ಷದಿಂದ ತನ್ನ ಉಪಗ್ರಹವು ಸಂಗ್ರಹವು ಕಾರ್ಯರೂಪಕ್ಕೆ ಬರುತ್ತದೆ ಎಂದು ಸ್ಪೇಸ್ ಎಕ್ಸ್ ತಿಳಿಸಿದೆ. ಸಂಪೂರ್ಣ ಜಗತ್ತನ್ನು ಕವರ್ ಮಾಡುವುದಕ್ಕಾಗಿ ಇನ್ನೂ 24 ಉಡಾವಣೆಯ ಅಗತ್ಯತೆ ಇದೆ ಎಂದು ಅದು ತಿಳಿಸಿದೆ
ಸಕ್ರಿಯ ಉಪಗ್ರಹಗಳು ಎಷ್ಟು ಗೊತ್ತಾ?.
ಸದ್ಯ ಭೂಮಿಯ ಕಕ್ಷೆಯ ಸುತ್ತ 2,100 ಸಕ್ರಿಯ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. 42,000 ಹೆಚ್ಚಿನ ಉಪಗ್ರಹವನ್ನು ಸೇರಿಸುವುದರ ಬಗ್ಗೆ ವಿಜ್ಞಾನಿಗಳು ಚಿಂತಿತರಾಗಿದ್ದಾರೆ.
ರಾತ್ರಿಯ ನೋಟಕ್ಕೆ ಧಕ್ಕೆ- ವಿಜ್ಞಾನಿಗಳಿಗೆ ಭಯ:
ಈ ರೀತಿ ಪ್ರಕಾಶಮಾನವಾದ ಲೋಹೀಯ ಉಪಗ್ರಹಗಳ ಪ್ರಸರಣವು ರಾತ್ರಿಯ ನೋಟವನ್ನು ಹಾಳು ಮಾಡುವ ಸಾಧ್ಯತೆ ಇದೆ ಮತ್ತು ಬಾಹ್ಯಾಕಾಶದಲ್ಲಿ ತರಬೇತಿ ಪಡೆದಿರುವ ಉಪಗ್ರಹಗಳೊಂದಿಗೆ ಹಸ್ತಕ್ಷೇಪ ಮಾಡುತ್ತವೆ ಎಂದು ಖಗೋಳಶಾಸ್ತ್ರಜ್ಞರು ಚಿಂತೆಗೆ ಒಳಗಾಗಿದ್ದಾರೆ. ಈ ರೀತಿಯ ಉಪಗ್ರಹಗಳ ಕಿಕ್ಕಿರಿಸುವಿಕೆ ದುಬಾರಿ ಘರ್ಷಣೆಗೆ ಕಾರಣವಾಗುತ್ತದೆ ಎಂದು ಅವರು ಭಯಪಡುತ್ತಾರೆ. ಒಟ್ಟಾರೆ ಅಂತರ್ಜಾಲದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆ ನಿಟ್ಟಿನಲ್ಲಿ ಉಪಗ್ರಹಗಳ ಉಡಾವಣೆ ಅಧಿಕವಾಗಿದೆ. ಇದು ಯಾವ ಪರಿಣಾಮ ಉಂಟುಮಾಡುತ್ತದೆ ಕಾದುನೋಡಬೇಕಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190