Home
ಸುದ್ದಿಜಾಲ

ಭಾರತದಲ್ಲಿ Starlink ಇಂಟರ್‌ನೆಟ್‌ನ ಅಧಿಕೃತ ಬೆಲೆ ಪ್ರಕಟ: ಸಂಪೂರ್ಣ ವಿವರ!

ವಿಶ್ವದ ಶ್ರೀಮಂತ ವ್ಯಕ್ತಿ ಎಲನ್ ಮಸ್ಕ್ ನೇತೃತ್ವದ SpaceX ಸಬ್‌ಬ್ರ್ಯಾಂಡ್ Starlink ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸಲು ಅಂತಿಮ ಹಂತಕ್ಕೆ ಬಂದಿದೆ. ನೆಟ್‌ವರ್ಕ್ ಇಂಟರ್‌ನೆಟ್ ಸೇವೆ ಇರದ ಪ್ರದೇಶಗಳು ಮತ್ತು ಭಾಗಶಃ ಸಂಪರ್ಕ ಇರುವ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ತಲುಪಿಸುವ ಗುರಿಯೊಂದಿಗೆ, ಸಂಸ್ಥೆಯು ಈಗ ಅಧಿಕೃತವಾಗಿ ಭಾರತದಲ್ಲಿ ತನ್ನ ಮಾಸಿಕ ಸಬ್ಸ್ಕ್ರಿಪ್ಷನ್ ದರ ಮತ್ತು ಸೇವಾ ವಿವರಗಳನ್ನು ಪ್ರಕಟಿಸಿದ್ದು, ದೇಶದಲ್ಲಿ Starlink ಉಪಗ್ರಹ ಇಂಟರ್‌ನೆಟ್ ಯೋಜನೆಗಳ ಕುರಿತು ಆರಂಭಿಕ ಮಾಹಿತಿ ದೊರೆತಿದೆ.

ಭಾರತದಲ್ಲಿ Starlink ಇಂಟರ್‌ನೆಟ್: ಮಾಸಿಕ ₹8,600 ರೂ. ನಿಗದಿ!
Starlink ಸಂಸ್ಥೆಯ ಭಾರತದ ವೆಬ್‌ಸೈಟ್‌ನ್ನು ನವೀಕರಿಸಲಾಗಿದ್ದು, ದೇಶದಲ್ಲಿ ಮಾಸಿಕ ₹8,600 ರೂ.ಗಳಿಗೆ ಇಂಟರ್‌ನೆಟ್ ಸೇವೆಯು ದೊರೆಯಲಿದೆ. ಜೊತೆಗೆ, Starlink ಸಂಪರ್ಕಕ್ಕೆ ಅಗತ್ಯವಿರುವ ವಿಶೇಷ ಹಾರ್ಡ್‌ವೇರ್ ಕಿಟ್‌ಗಾಗಿ ₹34,000 ದರವನ್ನು ನಿಗದಿಪಡಿಸಲಾಗಿದೆ. ಈ ಉಪಕರಣದ ಸಹಾಯದಿಂದ ಬಳಕೆದಾರರು ನೇರವಾಗಿ SpaceX ಸ್ಯಾಟಲೈಟ್‌ಗಳಿಗೆ ಸಂಪರ್ಕ ಸಾಧಿಸಬಹುದು. ಸಾಂಪ್ರದಾಯಿಕ ಬ್ರಾಡ್‌ಬ್ಯಾಂಡ್‌ಗಾಗಿ ಕೇಬಲ್ ಅಥವಾ ಫೈಬರ್ ಕೇಬಲ್ ಅಗತ್ಯ. ಆದರೆ, Starlink ಸಂಪರ್ಕ ಪಡೆಯಲು ಇವುಗಳ ಅವಶ್ಯಕತೆ ಇದೀಗ ಇಲ್ಲದಂತಾಗುತ್ತದೆ.

ಅನಿಯಮಿತ ಡೇಟಾ ಬಳಕೆ ಮತ್ತು 30 ದಿನಗಳ ಟ್ರಯಲ್ ಅವಧಿ!
Starlink ದೇಶದಲ್ಲಿ ತನ್ನ ಮಾಸಿಕ ಫ್ಲಾನ್ ಜೊತೆಗೆ ದೊರೆಯಲಿರುವ ಸೇವೆಗಳನ್ನು ಪ್ರಕಟಿಸಿದೆ. ಇದರಲ್ಲಿ ನಿರೀಕ್ಷೆಯಂತೆಯೇ, ಗ್ರಾಹಕರಿಗೆ ಅನಿಯಮಿತ ಡೇಟಾ ಬಳಕೆ ಲಭ್ಯವಾಗಲಿದೆ. Starlink ತನ್ನ ಸೇವೆ ಯಾವುದೇ ಹವಾಮಾನದಲ್ಲೂ ಸ್ಥಿರವಾಗಿರುತ್ತದೆ ಎಂದು ಹೇಳಿದೆ. ಮಳೆಗಾಲ, ಮೋಡ, ಗಾಳಿ ಮೊದಲಾದ ಸಂದರ್ಭಗಳಲ್ಲಿಯೂ ಸಂಪರ್ಕ ತೊಂದರೆಯಾಗದಂತೆ 99.9 ಶೇಕಡಾ ಅಪ್‌ಟೈಮ್ ಭರವಸೆ ನೀಡಲಾಗುತ್ತದೆ. ಬಳಕೆದಾರರು ಕಿಟ್ ಅನ್ನು ಜೋಡಿಸಿದ ತಕ್ಷಣ ಸೇವೆಯನ್ನು ಬಳಸಲು ಸಾಧ್ಯವಾಗುವ 'Plug-and-Play' ವ್ಯವಸ್ಥೆಯೂ ಗ್ರಾಹಕರಿಗೆ ಲಭ್ಯವಾಗುತ್ತದೆ.

ಭಾರತದಲ್ಲಿ Starlink ಇಂಟರ್‌ನೆಟ್‌ನ ಅಧಿಕೃತ ಬೆಲೆ ಪ್ರಕಟ: ಸಂಪೂರ್ಣ ವಿವರ!

30 ದಿನಗಳ ಟ್ರಯಲ್ ಅವಧಿ ಮತ್ತು Business ಗ್ರಾಹಕರು ಕಾಯಬೇಕು.
ಭಾರತೀಯ ಗ್ರಾಹಕರು Starlink ಇಂಟರ್‌ನೆಟ್ ಸೇವೆಯನ್ನು ಪಡೆದ ನಂತರ 30 ದಿನಗಳ ಪ್ರಾಯೋಗಿಕ ಅವಧಿಯೊಂದಿಗೆ ಅನಿಯಮಿತ ಡೇಟಾವನ್ನು ಬಳಸಬಹುದಾದ 30 ದಿನಗಳ ಟ್ರಯಲ್ ಅವಧಿಯನ್ನು ನೀಡಲಿದೆ. ಈ ಸೇವೆಯ ಅನುಭವದ ಆಧಾರದ ಮೇಲೆ ಗ್ರಾಹಕರು ಇಂಟರ್‌ನೆಟ್ ಅನ್ನು ಮುಂದುವರೆಸಲು ಅವಕಾಶವಿದೆ ಎಂದು ಹೇಳಲಾಗಿದೆ. (ಇದು ಸಂಪೂರ್ಣ ಉಚಿತವೇ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.). ಇನ್ನು ಈ ಪ್ಲ್ಯಾನ್ ವಸತಿ ಚಂದಾದಾರಿಕೆಗೆ ಮಾತ್ರ ಲಭ್ಯವಾಗಲಿದೆ. Business ಗ್ರಾಹಕರಿಗೆ ಶೀಘ್ರವೇ ಪ್ಲ್ಯಾನ್‌ಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.

Starlink ಸಂಸ್ಥೆಗೆ ನೇಮಕಾತಿ ಆರಂಭವಾಗಿದೆ!
ಭಾರತದಲ್ಲಿ ಸೇವೆ ವಿಸ್ತರಿಸಲು Starlink ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅಕ್ಟೋಬರ್ ತಿಂಗಳಲ್ಲಿ ಕಂಪನಿಯು ತನ್ನ ಬೆಂಗಳೂರು ಕಚೇರಿಗೆ Payments Manager, Accounting Manager, Senior Treasury Analyst ಮತ್ತು Tax Manager ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ನೀಡಿತ್ತು. ಕಂಪನಿಯ ಪ್ರಕಾರ, ಇದು Starlink ತನ್ನ ಜಾಗತಿಕ ಸೇವಾ ವಿಸ್ತರಣೆಯ ಭಾಗವಾಗಿದ್ದು, ಭಾರತ ಅದರ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಭಾರತದಲ್ಲಿ Starlink ಇಂಟರ್‌ನೆಟ್‌ನ ಅಧಿಕೃತ ಬೆಲೆ ಪ್ರಕಟ: ಸಂಪೂರ್ಣ ವಿವರ!

ಭಾರತದಲ್ಲಿ ಭೂಮಿಯ ಗೇಟ್ವೇ ಸ್ಟೇಷನ್‌ಗಳು
Starlink ಭಾರತದಲ್ಲಿ ಭೂಮಿಯ ಗೇಟ್ವೇ ಸ್ಟೇಷನ್‌ಗಳನ್ನು ನಿರ್ಮಿಸಲು ಯೋಜಿಸಿದೆ. ಇವು SpaceX ಸ್ಯಾಟಲೈಟ್ಗಳು ಮತ್ತು ಭಾರತದಲ್ಲಿನ Starlink ಬಳಸುವ ಬಳಕೆದಾರರ ನಡುವೆ ಸಂಪರ್ಕವನ್ನು ಮಧ್ಯಸ್ಥಿಕೆ ಮಾಡುವ ಪ್ರಮುಖ ಕೇಂದ್ರಗಳಾಗಿವೆ. ವರದಿಗಳ ಪ್ರಕಾರ, ಚಂಡೀಗಢ, ಹೈದರಾಬಾದ್, ಕೊಲ್ಕತ್ತಾ, ಲಖ್ನೌ, ಮುಂಬೈ ಮತ್ತು ನೊಯ್ಡಾ ನಗರಗಳು ಈ ಗೇಟ್ವೇ ಹಬ್‌ಗಳಿಗೆ ಸಾಧ್ಯತೆಯ ಸ್ಥಳಗಳಾಗಿವೆ. ಈ ಕೇಂದ್ರಗಳ ಮೂಲಕ Starlink ದೇಶಾದ್ಯಂತ ವೇಗ, ಸ್ಥಿರತೆ ಮತ್ತು ಕಡಿಮೆ ವಿಳಂಬದ ಸಂಪರ್ಕವನ್ನು ಒದಗಿಸಲು ಪ್ರಯತ್ನಿಸುತ್ತದೆ.

ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸೇವೆಗೆ ಹೊಸ ಅಧ್ಯಾಯ?
ಈ ಮೇಲಿನ ಎಲ್ಲಾ ಕ್ರಮಗಳಿಗೆ ಬೆಂಬಲವಾಗಿ, 2024ರ ಜುಲೈನಲ್ಲಿ ಭಾರತದ ದೂರಸಂಪರ್ಕ ಇಲಾಖೆ (DoT) Starlink ಗೆ ಐದು ವರ್ಷದ ಮಾನ್ಯತೆಯ ಪ್ರಮುಖ ಪರವಾನಗಿ ನೀಡಿತ್ತು. ಈ ಪರವಾನಗಿಯೊಂದಿಗೆ Starlink ಈಗ ಭಾರತದಲ್ಲಿ ತಮ್ಮ ವಾಣಿಜ್ಯ ಸೇವೆಗಳನ್ನು ಅಧಿಕೃತವಾಗಿ ಪ್ರಾರಂಭಿಸಲು ಪೂರ್ಣ ಹಕ್ಕು ಪಡೆದಿದೆ. ಇದರಿಂದ ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸೇವೆಗೆ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆಯಿದೆ.

ದೂರದ ಪ್ರದೇಶಗಳಿಗೂ ವೇಗವಾದ ಇಂಟರ್ನೆಟ್ ತಲುಪಿಸುವ ಗುರಿಯೊಂದಿಗೆ Starlink ಭಾರತವನ್ನು ತನ್ನ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದೆಂದು ನೋಡುತ್ತಿದೆ. ಮಾಸಿಕ ದರಗಳು ಬಹಿರಂಗಗೊಂಡಿರುವುದರಿಂದ ಮತ್ತು ನಿರ್ಮಾಣ ಕಾರ್ಯಗಳು ಆರಂಭವಾಗುತ್ತಿರುವುದರಿಂದ, ಭಾರತದ ಗ್ರಾಮೀಣ ಇಂಟರ್ನೆಟ್ ಪರಿಸ್ಥಿತಿಯಲ್ಲಿ Starlink ದೊಡ್ಡ ಬದಲಾವಣೆ ತರುವ ಶಕ್ತಿ ಹೊಂದಿದೆ ಎಂದು ತೋರುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Starlink's India website has been updated to offer internet service in the country for ₹8,600 per month. In addition, the special hardware kit required for Starlink connectivity has been priced at ₹34,000. With the help of this equipment, users can connect directly to SpaceX satellites.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+