Home
ಸುದ್ದಿಜಾಲ

ಸ್ಪೀಕರ್, ಇಯರ್‌ಫೋನ್‌, ಡಿಜಿಟಲ್ ವಾಚ್‌ಗಳು ಪೇಟಿಎಂ ಮಾಲ್‌ನಲ್ಲಿ ಭಾಗಶಃ ಉಚಿತ ..!

By Avinash

ಇತ್ತೀಚೆಗೆ ತಾನೇ ಅಮೆಜಾನ್ ಪ್ರೈಮ್ ಡೇ ಸೇಲ್, ಫ್ಲಿಪ್‌ಕಾರ್ಟ್‌ ಬಿಗ್‌ ಶಾಪಿಂಗ್‌ ಡೇ ಸೇಲ್ ಸೇರಿದಂತೆ ಅನೇಕ ಇ-ಕಾಮರ್ಸ್‌ ಕಂಪನಿಗಳು ಗ್ರಾಹಕರಿಗೆ ಸೀಮಿತ ಅವಧಿಯಲ್ಲಿ ಆಫರ್‌ಗಳ ಸುರಿಮಳೆಯನ್ನೆ ಸುರಿಸಿದ್ದವು. ಸದ್ಯ ಗ್ರಾಹಕರಿಗೆ ಸಂತಸದ ಸುದ್ದಿ ನೀಡುತ್ತಿರುವುದು ಪೇಟಿಎಂ ಮಾಲ್‌. ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಅನೇಕ ಟೆಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಹೌದು, ಇಂಪೋರ್ಟೆಡ್ ಸ್ಟೀಲ್‌ ಡೀಲ್ಸ್‌ ಎಂಬ ಶಾಪಿಂಗ್ ಆರಂಭಿಸಿರುವ ಪೇಟಿಎಂ ಮಾಲ್ ಡೀಲ್ ಜತೆಗೆ ಕ್ಯಾಶ್‌ಬ್ಯಾಕ್‌ ತರ ಅನೇಕ ಆಫರ್‌ಗಳನ್ನು ನೀಡುತ್ತಿದೆ. ಪೇಟಿಎಂ ಮಾಲ್ ಈ ಡೀಲ್‌ನ್ನು ಒಂದಿಷ್ಟು ಅವಧಿಗೆ ಸೀಮಿತಗೊಳಿಸಿಲ್ಲವಾದ್ದರಿಂದ ಯಾವಾಗ ಬೇಕಾದರೂ ತೆಗೆದುಕೊಳ್ಳುವ ಆಯ್ಕೆ ಗ್ರಾಹಕರಿಗೆ ಇದೆ.

ಸ್ಪೀಕರ್, ಇಯರ್‌ಫೋನ್‌, ಡಿಜಿಟಲ್ ವಾಚ್‌ಗಳು ಪೇಟಿಎಂ ಮಾಲ್‌ನಲ್ಲಿ ಭಾಗಶಃ ಉಚಿತ ..!

ಇಲ್ಲಿ ಹೆಡ್‌ಫೋನ್, ಬ್ಲೂಟೂತ್‌ ಸ್ಪೀಕರ್, ಫೀಟ್‌ನೆಸ್‌ ಟ್ರಾಕರ್ಸ್ ಹಾಗೂ ಇನ್ನು ಅನೇಕ ಗ್ಯಾಜೆಟ್‌ಗಳನ್ನು ಕಡಿಮೆ ದರದಲ್ಲಿ ಕೊಡುವುದಲ್ಲದೇ 100% ಕ್ಯಾಶ್‌ಬ್ಯಾಕ್ ಆಫರ್ ಸಹ ನೀಡಿದೆ. ಆಗಿದ್ರೆ ಯಾವ ಯಾವ ಉಪಯುಕ್ತ ಉತ್ಪನ್ನ ಪೇಟಿಎಂ ಮಾಲ್‌ನ ಇಂಪೋರ್ಟೆಡ್ ಸ್ಟೀಲ್‌ ಡೀಲ್ಸ್‌ನಲ್ಲಿ ಎಷ್ಟಕ್ಕೆ ಸಿಗುತ್ತೆ ಎಂಬುದನ್ನು ಮುಂದೆ ನೋಡೋಣ..!

1. ಎಕ್ಸ್‌ಕ್ಲೂಸಿವ್‌ ಪ್ಲಸ್‌ ಹೈ ಕ್ವಾಲಿಟಿ ಯುಎಸ್‌ಬಿ ಕೇಬಲ್‌

1. ಎಕ್ಸ್‌ಕ್ಲೂಸಿವ್‌ ಪ್ಲಸ್‌ ಹೈ ಕ್ವಾಲಿಟಿ ಯುಎಸ್‌ಬಿ ಕೇಬಲ್‌

ಪೇಟಿಎಂ ಮಾಲ್‌ನಲ್ಲಿ ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಕೇಬಲ್‌ನ್ನು ಕೇವಲ ₹ 12ಕ್ಕೆ ಮಾರಲಾಗುತ್ತಿದೆ. ಅದಲ್ಲದೇ ಪೇಟಿಎಂ ಮಾಲ್‌ನಲ್ಲಿ ಮೊದಲಬಾರಿಗೆ ಖರೀದಿ ಮಾಡುವವರಿಗೆ ಶೇ.100ರಷ್ಟು ಕ್ಯಾಶ್‌ಬ್ಯಾಕ್ ಇದ್ದು, FIRSTTIMELUCKY ಎಂಬ ಪ್ರೋಮೋ ಕೋಡ್ ಹಾಕಿದರೆ ನಿಮ್ಮ ಪೇಟಿಎಂ ವ್ಯಾಲೆಟ್‌ಗೆ ₹ 12 ಬಂದಿರುತ್ತೆ.

2. ಎಕ್ಸ್‌ಕ್ಲೂಸಿವ್‌ ಪ್ಲಸ್‌ ಆಡಿಯೋ ಸ್ಪ್ಲಿಟ್ಟರ್ ಕೇಬಲ್

2. ಎಕ್ಸ್‌ಕ್ಲೂಸಿವ್‌ ಪ್ಲಸ್‌ ಆಡಿಯೋ ಸ್ಪ್ಲಿಟ್ಟರ್ ಕೇಬಲ್

ಆಡಿಯೋ ಸ್ಪ್ಲಿಟ್ಟರ್ ಕೇಬಲ್ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೇ ಉತ್ತಮ ಮ್ಯೂಸಿಕ್‌ನ್ನು ನೀಡುತ್ತದೆ. ಈ ಮೊಬೈಲ್ ಅಕ್ಸೆಸರಿಯು ಎರಡು 3.5mm ಆಡಿಯೋ ಜಾಕ್ ಹೊಂದಿದೆ. ಇದರಿಂದ ಒಂದೇ ಸಮಯಕ್ಕೆ 2 ಇಯರ್‌ಫೋನ್‌ಗಳಲ್ಲಿ ಸಂಗೀತ ಕೇಳಬಹುದು. ಇದರ ಬೆಲೆ ಪೇಟಿಎಂ ಮಾಲ್‌ನಲ್ಲಿ ಕೇವಲ ₹ 37 ಎಂದರೆ ನಂಬಲೇಬೇಖು. ಇದಕ್ಕೂ ಸಹ ಶೇ.100ರಷ್ಟು ಕ್ಯಾಶ್‌ಬ್ಯಾಕ್ ಆಫರ್ ನಿಮಗೋಸ್ಕರ ಕಾಯ್ತಿದೆ.

3. ಸ್ಪೋರ್ಟ್ಸ್ ಬ್ಲೂಟೂಥ್ ಹೆಡ್‌ಸೆಟ್‌

3. ಸ್ಪೋರ್ಟ್ಸ್ ಬ್ಲೂಟೂಥ್ ಹೆಡ್‌ಸೆಟ್‌

ಆನ್‌ಲೈನ್‌ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಬ್ಲೂಟೂಥ್ ಹೆಡ್‌ಸೆಟ್ ಸಿಗುತ್ತೆ ಎಂದರೆ ಅದು ಪೇಟಿಎಂ ಮಾಲ್‌ನಲ್ಲಿ ಮಾತ್ರ. ಹೌದು, ಸ್ಪೋರ್ಟ್ಸ್ ಬ್ಲೂಟೂಥ್ ಹೆಡ್‌ಸೆಟ್‌ ಕೇವಲ ₹ 136ಕ್ಕೆ ದೊರೆಯುತ್ತಿದ್ದು, ಕ್ಯಾಶ್‌ಬ್ಯಾಕ್ ಆಫರ್ ಅನುಮತಿಸಿದರೆ ₹ 102 ಕ್ಯಾಶ್‌ಬ್ಯಾಕ್ ದೊರೆತು ಹೆಡ್‌ಸೆಟ್‌ ಬೆಲೆ ಕೇವಲ ₹ 34 ಅಗುತ್ತದೆ. ಇದಕ್ಕಿಂತ ಆಫರ್ ಬೇಕಾ..? ಈ ಕ್ಯಾಶ್‌ಬ್ಯಾಕ್ ಪಡೆಯಲು ಪೇಮೆಂಟ್ ಸಮಯದಲ್ಲಿ IMPORTED ಎಂಬ ಪ್ರೋಮೋ ಕೋಡ್ ಹಾಕಿದರೆ ಸಾಕು.

4. ಯುನಿವರ್ಸಲ್ ಹೆಡ್‌ಸೆಟ್‌ ವಿಥ್ ಮೈಕ್

4. ಯುನಿವರ್ಸಲ್ ಹೆಡ್‌ಸೆಟ್‌ ವಿಥ್ ಮೈಕ್

ಪೇಟಿಎಂ ಮಾಲ್‌ನಲ್ಲಿ ಯುನಿವರ್ಸಲ್ ಹೆಡ್‌ಸೆಟ್‌ ವಿಥ್ ಮೈಕ್ ಕೇವಲ ₹ 107ಕ್ಕೆ ದೊರೆಯುತ್ತಿದೆ. ಆದರೂ ನೀವು ಇದನ್ನು ಕೇವಲ ₹ 27ಕ್ಕೆ ಪಡೆಯಬಹುದಾಗಿದ್ದು, ₹ 80 ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕ್ಯಾಶ್‌ಬ್ಯಾಕ್ ಪಡೆಯಲು IMPORTED ಎಂಬ ಪ್ರೋಮೋ ಕೋಡ್ ಬಳಸಬೇಕು ಅಷ್ಟೇ.

5. ಯುಎಸ್‌ಬಿ ಡಾಟಾ ಕೇಬಲ್ ವಿ8

5. ಯುಎಸ್‌ಬಿ ಡಾಟಾ ಕೇಬಲ್ ವಿ8

ಮೈಕ್ರೋ ಯುಎಸ್‌ಬಿ ಡಾಟಾ ಕೇಬಲ್ ಪೇಟಿಎಂ ಮಾಲ್‌ನಲ್ಲಿ ಕೇವಲ ₹ 19ಕ್ಕೆ ದೊರೆಯುತ್ತಿದೆ. ಇಲ್ಲೂ ಸಹ ₹ 2 ಕ್ಯಾಶ್‌ಬ್ಯಾಕ್ ಪಡೆಯಬಹುದು. ಕ್ಯಾಶ್‌ಬ್ಯಾಕ್ ಪಡೆಯಲು MOBILEACC10 ಪ್ರೋಮೋ ಕೋಡ್ ಬಳಸಿ. ಇಲ್ಲಿ ಶೇ.10 ಕ್ಯಾಶ್‌ಬ್ಯಾಕ್ ಇದೆ.

6. ಹಿಗಾಡ್‌ಜೆಟ್‌ ಮಿನಿ ಪೋರ್ಟೆಬಲ್ ಪ್ಯಾನ್‌

6. ಹಿಗಾಡ್‌ಜೆಟ್‌ ಮಿನಿ ಪೋರ್ಟೆಬಲ್ ಪ್ಯಾನ್‌

ಕೂಲ್ ಮಿನಿ ಪೋರ್ಟೆಬಲ್ ಪ್ಯಾನ್‌ ಪೇಟಿಎಂ ಮಾಲ್‌ನ ಇಂಪೋರ್ಟೆಡ್ ಸ್ಟಿಲ್‌ ಡೀಲ್ಸ್‌ನಲ್ಲಿ ಕೇವಲ ₹ 37ಕ್ಕೆ ದೊರೆಯುತ್ತಿದೆ. ಆದರೂ ನೀವು ಇದನ್ನು ಉಚಿತವಾಗಿ ಪಡೆಯುವ ಆಯ್ಕೆ ಇದೆ. ಶೇ.100ರಷ್ಟು ಕ್ಯಾಶ್‌ಬ್ಯಾಕ್ ಪಡೆಯುವ ಆಯ್ಕೆ ಇದ್ದು, ಪ್ರೋಮೋ ಕೋಡ್ ಬಳಸಿದರೆ ಮಿನಿ ಪೋರ್ಟೆಬಲ್ ಪ್ಯಾನ್‌ ಉಚಿತವಾಗಿಯೇ ಸಿಗುತ್ತದೆ.

7. ಬ್ಲೂಟೂಥ್ ಸ್ಪೀಕರ್

7. ಬ್ಲೂಟೂಥ್ ಸ್ಪೀಕರ್

ಪೇಟಿಎಂ ಮಾಲ್‌ನಲ್ಲಿ ಬ್ಲೂಟೂಥ್ ಸ್ಪೀಕರ್ ಕೇವಲ ₹ 165ಕ್ಕೆ ದೊರೆಯುತ್ತಿದೆ. ಆದರೆ ನೀವು ಈ ಬ್ಲೂಟೂಥ್‌ ಸ್ಪೀಕರ್‌ನ್ನು ಕೇವಲ ₹ 41ಕ್ಕೆ ಪಡೆಯಬಹುದು. ಇನ್ನು ₹ 124 ನಿಮಗೆ ಕ್ಯಾಶ್‌ಬ್ಯಾಕ್ ರೂಪದಲ್ಲಿ ಸಿಗುತ್ತದೆ. ಇದಕ್ಕೆ ಪ್ರೋಮೋ ಕೋಡ್‌ ಬಳಸಿ ಆಫರ್ ಪಡೆಯಿರಿ.

8. ಬ್ಲೂಟೂಥ್ ಇಯರ್‌ಫೋನ್ ವಿಥ್ ಮೈಕ್

8. ಬ್ಲೂಟೂಥ್ ಇಯರ್‌ಫೋನ್ ವಿಥ್ ಮೈಕ್

ಬ್ಲೂಟೂಥ್ ಇಯರ್‌ಫೋನ್ ಪೇಟಿಎಂ ಮಾಲ್‌ನಲ್ಲಿ ₹ 272ಕ್ಕೆ ದೊರೆಯುತ್ತಿದೆ. ಆದರೆ ನೀವು ಇದನ್ನು ₹ 38ಕ್ಕೆ ಪಡೆಯಬಹುದು. ಪೇಮೆಂಟ್ ಮಾಡುವ ಸಮಯದಲ್ಲಿ ಕ್ಯಾಶ್‌ಬ್ಯಾಕ್ ಪ್ರೋಮೋ ಕೋಡ್ ಅಪ್ಲೇ ಮಾಡಿ. ಅತಿ ಕಡಿಮೆ ಬೆಲೆಯಲ್ಲಿಯೇ ಬ್ಲೂಟೂಥ್ ಇಯರ್‌ಫೋನ್ ನಿಮಗೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

9. ವೇಗದ ಚಾರ್ಜಿಂಗ್‌ ಯುಎಸ್‌ಬಿ ಡಾಟಾ ಕೇಬಲ್

9. ವೇಗದ ಚಾರ್ಜಿಂಗ್‌ ಯುಎಸ್‌ಬಿ ಡಾಟಾ ಕೇಬಲ್

ಯುಎಸ್‌ಬಿ ವೇಗದ ಚಾರ್ಜ್ ಕೇಬಲ್ ನಿಮಗೆ ಉಚಿತವಾಗಿಯೇ ಸಿಗುತ್ತದೆ. ಪೇಟಿಎಂ ಮಾಲ್‌ನಲ್ಲಿ ಈ ಯುಎಸ್‌ಬಿ ಕೇಬಲ್ ಬೆಲೆ ಕೇವಲ ₹ 63 ಆಗಿದೆ. ನೀವು ಈ ₹ 63ನ್ನು ಕ್ಯಾಶ್‌ಬ್ಯಾಕ್ ಮೂಲಕ ಪಡೆಯಬಹುದು. ಜಸ್ಟ್‌ ಪ್ರೋಮೋ ಕೋಡ್ ಹಾಕಿ ಈ ಪಾಸ್ಟ್‌ ಚಾರ್ಜಿಂಗ್ ಕೇಬಲ ಉಚಿತವಾಗಿ ಪಡೆಯಿರಿ.

10. ಎಕ್ಸ್‌ಕ್ಲೂಸಿವ್ ಪ್ಲಸ್, ಟೈಪ್‌ ಸಿ ಡಾಟಾ ಕೇಬಲ್

10. ಎಕ್ಸ್‌ಕ್ಲೂಸಿವ್ ಪ್ಲಸ್, ಟೈಪ್‌ ಸಿ ಡಾಟಾ ಕೇಬಲ್

ಪೇಟಿಎಂ ಮಾಲ್‌ನಲ್ಲಿ ಎಕ್ಸ್‌ಕ್ಲೂಸಿವ್ ಪ್ಲಸ್, ಟೈಪ್‌ ಸಿ ಡಾಟಾ ಕೇಬಲ್ ಕೇವಲ ₹ 18ಕ್ಕೆ ಸಿಗಲಿದೆ. ಅದಲ್ಲದೇ ಈ ಕೇಬಲ್ ಮೇಲೆ ಶೇ.100ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಪ್ರೋಮೋ ಕೋಡ್ ಹಾಕಿ ಟೈಪ್‌ ಸಿ ಡಾಟಾ ಕೇಬಲ್‌ನ್ನು ಉಚಿತವಾಗಿ ಪಡೆಯಬಹುದು.

11. ಡಿಜಿಟಲ್ ವಾಚ್‌ ಮತ್ತು ಫಿಟ್‌ನೆಸ್ ಟ್ರಾಕರ್

11. ಡಿಜಿಟಲ್ ವಾಚ್‌ ಮತ್ತು ಫಿಟ್‌ನೆಸ್ ಟ್ರಾಕರ್

ಡಿಜಿಟಲ್ ವಾಚ್‌ ಮತ್ತು ಫಿಟ್‌ನೆಸ್ ಟ್ರಾಕರ್ ಪೇಟಿಎಂ ಮಾಲ್‌ನಲ್ಲಿ ₹ 193ಕ್ಕೆ ದೊರೆಯುತ್ತಿದೆ. ಅದಲ್ಲದೇ ಡಿಜಿಟಲ್ ವಾಚ್‌ಗೆ ಶೇ.100ರಷ್ಟು ಕ್ಯಾಶ್‌ಬ್ಯಾಕ್ ಪಡೆದು ಉಚಿತವಾಗಿ ಪಡೆಯುವ ಆಯ್ಕೆ ಗ್ರಾಹಕರಿಗೆ ಇದೆ. ಜಸ್ಟ್‌ ಪ್ರೋಮೋ ಕೋಡ್ ಅಪ್ಲೇ ಮಾಡಿ ಡಿಜಿಟಲ್ ವಾಚ್‌ ಕಟ್ಕೋಳಿ.

12. ಸ್ಮಾರ್ಟ್‌ ಸೆನ್ಸಾರ್ ನೈಟ್‌ ಲೈಟ್

12. ಸ್ಮಾರ್ಟ್‌ ಸೆನ್ಸಾರ್ ನೈಟ್‌ ಲೈಟ್

ಪೇಟಿಎಂ ಮಾಲ್‌ನ ಇಂಪೋರ್ಟೆಡ್ ಸ್ಟೀಲ್‌ ಡೀಲ್‌ನಲ್ಲಿ ಕೇವಲ ₹ 199ಕ್ಕೆ ಸ್ಮಾರ್ಟ್‌ ಸೆನ್ಸಾರ್ ನೈಟ್‌ ಲೈಟ್ ದೊರೆಯುತ್ತಿದೆ. ಈ ಉತ್ಪನ್ನದ ಮೇಲೂ ಶೇ.100ರಷ್ಟು ಕ್ಯಾಶ್‌ಬ್ಯಾಕ್ ಇದ್ದು, ಗ್ರಾಹಕರಿಗಂತೂ ಬಂಪರ್‌ ದೊರೆತಿದೆ. ಆದರೆ, ಈ ಉತ್ಪನ್ನಗಳಿಗೆ ಕನಿಷ್ಠ ಡೆಲಿವೆರಿ ಚಾರ್ಜ್‌ ಕೊಡಬೇಕಾದ ನಿಯಮವನ್ನು ಪೇಟಿಎಂ ಮಾಲ್ ವಿಧಿಸಿದೆ.

Best Mobiles in India

English summary
Speakers, fitness tracker, earphones and more gadgets you can buy in less than Rs 69. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+