ವೆಬ್ ಬ್ರೌಸಿಂಗ್‌ನಲ್ಲೇ ಫೈರ್‌ಫಾಕ್ಸ್‌ಗೆ ಸೋಲುಣ್ಣಿಸುವ ಬ್ರೌಸರ್‌ಗಳು
ವೆಬ್ ಬ್ರೌಸಿಂಗ್ ವಿಷಯಕ್ಕೆ ಬಂದಾಗ, ಹೆಚ್ಚಿನ ವಿಂಡೋಸ್ ಬಳಕೆದಾರರು ಮೂರು ಆಯ್ಕೆಗಳನ್ನು ತಮ್ಮ ಮುಂದಿಟ್ಟುಕೊಂಡಿರುತ್ತಾರೆ: ಅದುವೇ ಫೈರ್‌ಫಾಕ್ಸ್, ಗೂಗಲ್ ಕ್ರೋಮ್ ಮತ್ತು ಇಂಟರ್ನೆಟ್ ಎಕ್ಸ್‌ಪ್ಲೋರರ್. ಆದರೆ ಇವಿಷ್ಟೇ ಆಯ್ಕೆಗಳಲ್ಲದೆ ಇನ್ನಷ್ಟು ಪರಿಣಾಮಕಾರಿ ಬ್ರೌಸರ್‌ಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.
ಮೇಲೆ ನಾವು ತಿಳಿಸಿದ ಬ್ರೌಸರ್‌ಗಳಲ್ಲದೆ ನಿಮ್ಮ ಇಂಟರ್ನೆಟ್ ಹುಡುಕಾಟವನ್ನು ಇನ್ನಷ್ಟು ನೇರವಾಗಿಸುವ ಕೆಲವೊಂದು ಬ್ರೌಸರ್‌ಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಕವೋನ್
ಗೇಮರ್ಸ್‌ಗಾಗಿ ವಿನ್ಯಾಸಗೊಳಿಸಿದ ಬ್ರೌಸರ್ ಆಗಿದೆ ಕವೋನ್. ಇದು ವೆಬ್ ಆಧಾರಿತ ಗೇಮ್‌ಗಳನ್ನು ಕೂಡ ಬಳಕೆದಾರರಿಗೆ ಒದಗಿಸುತ್ತದೆ.

ಟೋರ್ಚ್
ಮ್ಯೂಸಿಕ್ ಮತ್ತು ಗೇಮ್‌ಗಳಿಗಾಗಿ ಫೀಚರ್‌ಗಳೊಂದಿಗೆ ಇದು ಬಂದಿದ್ದು ಮೀಡಿಯಾಕ್ಕಾಗಿ ಇದನ್ನು ಬಳಸಬಹುದಾಗಿದೆ. ಯೂಟ್ಯೂಬ್ ಆಧಾರಿತ ಸ್ಟ್ರೀಮಿಂಗ್ ಸೇವೆ ಟಾರ್ಚ್ ಮ್ಯೂಸಿಕ್ ಇದರಲ್ಲಿದೆ.

ಲೂನಾ ಸ್ಕೇಪ್
ಯಾವ ಬ್ರೌಸರ್ ಇಷ್ಟ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲದವರಿಗೆ ಲೂನಾ ಸ್ಕೇಪ್ ಆಸಕ್ತಿಕರ ಆಯ್ಕೆಯಾಗಿದೆ.

ಕೊಮೊಡೊ ಐಸ್ ಡ್ರ್ಯಾಗನ್
ಭದ್ರತಾ ಅಂಶಗಳನ್ನು ಹೊಂದಿರುವ ಕೊಮೊಡೊ ಐಸ್ ಡ್ರ್ಯಾಗನ್ ಭದ್ರತೆಯನ್ನು ಒದಗಿಸುವ ಬ್ರೌಸರ್ ಆಗಿದೆ. ಮಾಲ್‌ವೇರ್‌ಗಾಗಿ ವೆಬ್ ಪೇಜ್ ಭದ್ರತಾ ಸ್ಕ್ಯಾನ್ ಅನ್ನು ಇದು ಒಳಗೊಂಡಿದೆ.

ವಿವಾಲ್ಡಿ
ಕ್ರೋಮಿಯಮ್ ಆಧಾರಿತ ಬ್ರೌಸರ್ ಇದಾಗಿದ್ದು ಹಾರ್ಡ್ ಕೋರ್ ಪವರ್ ಬಳಕೆದಾರರಿಗೆ ಇದು ಸೂಕ್ತ. ಇದು ಅತ್ಯಂತ ಸರಳ ಬ್ರೌಸರ್ ಕೂಡ ಆಗಿದೆ.

ಸೀಮಂಕಿ
ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬ್ರೌಸರ್ ಇದಾಗಿದೆ. ಒಂದೇ ಪ್ಯಾಕೇಜ್‌ನಲ್ಲಿ ನಿಮಗೆ ಎಲ್ಲವೂ ಇರಬೇಕು ಎಂದು ಬಯಸುವ ಹಾರ್ಡ್‌ಕೋರ್ ವೆಬ್ ಬಳಕೆದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಮೈಡೋರಿ
ಲಿನಕ್ಸ್ ಸಿಸ್ಟಮ್‌ಗೆ ಇದು ಉತ್ತಮ ಆಯ್ಕೆಯಾಗಿದ್ದು ಒಂದು ಜನಪ್ರಿಯ ಆಯ್ಕೆ ಎಂದೆನಿಸಿದೆ. ಹಗುರ ಬ್ರೌಸರ್ ಬಳಸುವ ವಿಂಡೋಸ್ ಆವೃತ್ತಿಗೆ ಕೂಡ ಈ ಬ್ರೌಸರ್ ಇದೆ.


Click it and Unblock the Notifications








