ಆಂಡ್ರಾಯ್ಡ್ ಫೋನ್ ಸ್ಪೈಸ್ ಸ್ಟೆಲ್ಲರ್ ರೂ 5,499

Written By:

ತನ್ನ ಸ್ಟೆಲ್ಲರ್ ಸಿರೀಸ್ ಪಟ್ಟಿಯಲ್ಲಿ ಇನ್ನೊಂದು ಫೋನ್ ಅನ್ನು ಸ್ಪೈಸ್ ಲಾಂಚ್ ಮಾಡಿದೆ. ಸ್ಟೆಲ್ಲರ್ 362 ತನ್ನ ಲಕ್ಷ್ಯದ ಗ್ರಾಹಕರತ್ತ ಕೇಂದ್ರೀಕರಿಸಿದ್ದು ಫೋನ್ ಆಂಡ್ರಾಯ್ಡ್ 4.4 ಅನ್ನು ಚಾಲನೆ ಮಾಡುತ್ತಿದೆ. ಇದು 3.5 ಇಂಚಿನ ಎಚ್‌ವಿಜಿಎ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಹೊಂದಿದೆ.

3 ಜಿ ಸಕ್ರಿಯಗೊಂಡಿರುವ ಸ್ಟೆಲ್ಲರ್ 362, 1 GHZ ಡ್ಯುಯಲ್ ಕೋರ್ ಪ್ರೊಸೆಸರ್ ಅನ್ನು ಮತ್ತು 1300 mAh ಬ್ಯಾಟರಿಯನ್ನು ಫೋನ್ ಹೊಂದಿದೆ. ಇದು 2 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು 1.3 ಎಮ್‌ಪಿ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ. ಇನ್ನು ಮೆಮೊರಿಯನ್ನು ನೋಡುವುದಾದರೆ, ಇದು 2 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಇದರ RAM ಸಾಮರ್ಥ್ಯ 256 ಎಮ್‌ಬಿಯಾಗಿದೆ. ಫೋನ್ ಬೆಲೆ ರೂ 5,499 ಆಗಿದೆ.

ಕಿಟ್‌ಕ್ಯಾಟ್ ಚಾಲನೆಯ ಸ್ಪೈಸ್ ರೂ 5,499 ಕ್ಕೆ

ಫೋನ್ ವಿಶೇಷತೆಗಳು
3.5 ಇಂಚಿನ, ಎಚ್‌ವಿಜಿಎ ಡಿಸ್‌ಪ್ಲೇ
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಆಪರೇಟಿಂಗ್ ಸಿಸ್ಟಮ್
1 GHZ ಡ್ಯುಯಲ್ ಕೋರ್ ಪ್ರೊಸೆಸರ್
256 ಎಮ್‌ಬಿ RAM
2 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಎಮ್‌ಪಿ ರಿಯರ್ ಕ್ಯಾಮೆರಾ 1.3 ಎಮ್‌ಪಿ ಮುಂಭಾಗ
1300 mAh ಬ್ಯಾಟರಿ

English summary
This article tells about Spice Stellar 362 Android KitKat smartphone at Rs 5,499.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot