Home
ಸುದ್ದಿಜಾಲ

ಸ್ಪಾಟಿಫೈ ಬಳಕೆದಾರರ ಸಂಖ್ಯೆ ಹೆಚ್ಚಳ!..ಆಪಲ್‌ನ ಹಿಂದಿಕ್ಕಿದ ಸ್ಪಾಟಿಫೈ!

ಸಂಗೀತ ಅನ್ನೊ ಮಾಂತ್ರಿಕತೆಗೆ ಮನಸೋಲದವರೇ ಇಲ್ಲ. ಮ್ಯೂಸಿಕ್‌ ಕೇಳುತ್ತಾ ಸಮಯ ಕಳೆಯೋದು ಅಂದರೆ ಅದೇನೋ ಒಂದು ರೀತಿಯ ಆರಾಮದಾಯಕ ಅನುಭವ. ಸದ್ಯ ಮ್ಯೂಸಿಕ್‌ ಕೇಳುವುದಕ್ಕೆ ಮೊದಲಿನಂತೆ ಸಾಂಗ್ಸ್‌ ಡೌನ್‌ಲೋಡ್‌ ಮಾಡುತ್ತ ಕೂರುವ ಅವಶ್ಯಕತೆ ಇಲ್ಲ. ನಿಮಗೆ ಗೊತ್ತಿರುವಂತೆ ಟೆಕ್‌ ಲೋಕದಲ್ಲಿ ಈಗಾಗ್ಲೆ ಮ್ಯೂಸಿಕ್‌ ಸ್ಟ್ರೀಮಿಂಗ್ ಸೇವೆ ನೀಡುವ ಆಪ್‌ಗಳು ಲಭ್ಯವಿದೆ. ಅದರಲ್ಲೂ ಸ್ವೀಡಿಷ್‌ ಮೂಲದ ಸ್ಪಾಟಿಫೈ ಮ್ಯೂಸಿಕ್‌ ಪ್ರಿಯರ ನೆಚ್ಚಿನ ಆಪ್‌ಗಳಲ್ಲಿ ಒಂದಾಗಿದೆ.

ಹೌದು

ಹೌದು, ಸ್ವೀಡಿಷ್‌ ಮೂಲದ ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್‌ ಸ್ಪಾಟಿಫೈ ಮ್ಯೂಸಿಕ್‌ ಪ್ರಿಯರ ನೆಚ್ಚಿನ ಆಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ ಬಳಕೆದಾರರನ್ನ ಸೆಳೆಯುವುದಕ್ಕಾಗಿ ವೈವಿಧ್ಯ ಬಗೆಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದಲ್ಲದೆ ವಾರ್ಷಿಕ ಪ್ರೀಮಿಯಂ ದರ, ಮಾಸಿಕ ಪ್ರಿಮೀಯಂ ದರ, ಸಕ್ರಿಯ ಚಂಧದಾರಿಕೆ ಹೀಗೆ ಹಲವು ಮಾದರಿಯ ಸೇವೆಗಳನ್ನ ನೀಡುತ್ತ ಗ್ರಾಹಕರನ್ನ ಸೆಳೆದಿದೆ. ಅಷ್ಟೇ ಅಲ್ಲ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನ ಪಡೆದುಕೊಂಡಿದೆ. ಆದರೂ 2019ರ ಕೊನೆಯ ತ್ರೈ ಮಾಸಿಕದಲ್ಲಿ ಈ ಕಂಪೆನಿ ನಷ್ಟ ಅನುಭವಿಸಿದೆ ಎಂದು ಹೇಳಲಾಗ್ತಿದೆ.

ಎಲ್ಲ ಭಾಷೆಯ ಹಾಡು ಲಭ್ಯ

ಎಲ್ಲ ಭಾಷೆಯ ಹಾಡು ಲಭ್ಯ

ಸ್ಪಾಟಿಫೈ ಮ್ಯೂಸಿಕ್‌ ಆಪ್‌ನಲ್ಲಿ ಎಲ್ಲಾ ಮಾದರಿಯ ಹಾಡುಗಳನ್ನ ಆಲಿಸಬಹುದಾಗಿದ್ದು, ಎಲ್ಲಾ ಭಾಷೆಯ ಹಾಡುಗಳು ಸಹ ಲಭ್ಯವಾಗಲಿದೆ. ಒಂದೇ ಆಪ್‌ನಲ್ಲಿ ಎಲ್ಲಾ ಹಾಡುಗಳು ಲಭ್ಯವಿರೊದ್ರಿಂದ ಮ್ಯೂಸಿಕ್‌ ಪ್ರಿಯರ ನೆಚ್ಚಿನ ಆಪ್‌ ಆಗಿ ಸ್ಪಾಟಿಫೈ ಗುರ್ತಿಸಿಕೊಂಡಿದೆ. ಸದ್ಯ ಸ್ಪಾಟಿಫೈ ಬಳಕೆದಾರರಿಗೆ ಚಂಧದಾರಿಕೆಯನ್ನ ಪಡೆಯುವುದರ ಮೂಲಕ ತನ್ನ ಸೇವೆಯನ್ನ ನೀಡುತ್ತದೆ. ಚಂಧದಾರಿಕೆಯನ್ನ ಪಾವತಿಸಿದ ನಂತರ ನಿಮಗಿಷ್ಟವಾದ ಭಾಷೆಯ ಹಾಡುಗಳನ್ನ ಆಲಿಸಬಹುದಾಗಿದೆ.

ಬಳಕೆದಾರರ ನೆಚ್ಚಿನ ಮ್ಯೂಸಿಕ್‌ ಆಪ್‌

ಬಳಕೆದಾರರ ನೆಚ್ಚಿನ ಮ್ಯೂಸಿಕ್‌ ಆಪ್‌

ಜಾಗತಿಕವಾಗಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆರುವ ಸ್ಪಾಟಿಫೈ, 2019 ರ ಕೊನೆಯಲ್ಲಿ ಸ್ಪಾಟಿಫೈನ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 271 ಮಿಲಿಯನ್‌ಗೆ ಏರಿದೆ, ಇದು ಹಿಂದಿನ ವರ್ಷಕ್ಕಿಂತ 31 ಶೇಕಡಾ ಹೆಚ್ಚಾಗಿದೆ. ಪ್ರೀಮಿಯಂ ಚಂದಾದಾರರ ಸಂಖ್ಯೆ ಶೇಕಡಾ 29 ರಷ್ಟು ಏರಿಕೆಯಾಗಿ 124 ಮಿಲಿಯನ್‌ಗೆ ತಲುಪಿದೆ. ಮಾಧ್ಯಮ ಸಂಶೋಧನಾ ಸಂಸ್ಥೆ ಮಿಡಿಯಾ ಪ್ರಕಾರ, ಪಾವತಿಸಿದ ಸಂಗೀತ ಚಂದಾದಾರಿಕೆಗಳ ವಿಷಯದಲ್ಲಿ ಸ್ಪಾಟಿಫೈ ಪ್ರಮುಖ ಕಂಪನಿಯಾಗಿದ್ದು, 2019 ರ ಕೊನೆಯಲ್ಲಿ ಶೇಕಡಾ 35 ಕ್ಕಿಂತ ಹೆಚ್ಚು ಮಾರುಕಟ್ಟೆಯನ್ನು ಹೊಂದಿದೆ. ಇದನ್ನ ಬಿಟ್ಟರೆ ಯುಎಸ್ ಟೆಕ್ ದೈತ್ಯ ಸಂಸ್ಥೆಗಳಾದ ಆಪಲ್ ಮತ್ತು ಅಮೆಜಾನ್ ನಂತರದ ಸ್ಥಾನವನ್ನ ಪಡೆದುಕೊಂಡಿವೆ.

ಸ್ಪಾಟಿಫೈ ಎಷ್ಟು ನಷ್ಟ ಅನುಭವಿಸಿದೆ

ಸ್ಪಾಟಿಫೈ ಎಷ್ಟು ನಷ್ಟ ಅನುಭವಿಸಿದೆ

ಸ್ಪಾಟಿಫೈ ಸ್ಟ್ರೀಮಿಂಗ್ ದೈತ್ಯ ಎನಿಸಿಕೊಂಡಿದೆ. ಪಾಡ್‌ಕಾಸ್ಟ್‌ಗಳಿಗೆ ಬಂದಾಗ ಇದು ಊಹಿಸಲಾರದ ರೀತಿಯಲ್ಲಿ ತನ್ನ ಬೆಳವಣಿಗೆಯನ್ನು ಕಂಡಿದೆ. ಅಲ್ಲದೆ ಸ್ಟ್ರೀಮ್ ಮಾಡಿದ ಸಮಯವು ವರ್ಷದಿಂದ ವರ್ಷಕ್ಕೆ ಸುಮಾರು 200 ಪ್ರತಿಶತದಷ್ಟು ಹೆಚ್ಚಾಗಿದೆ. ಆದರೆ ಸಂಶೋಧನೆ ಮತ್ತು ಮಾರುಕಟ್ಟೆ ಎರಡರಲ್ಲೂ ಆಕ್ರಮಣಕಾರಿ ಹೂಡಿಕೆಯನ್ನು ಸ್ಪಾಟಿಫೈ ಮಾಡಿರುವುದರಿಂದ 2019 ರಲ್ಲಿ 186 ಮಿಲಿಯನ್ ಯುರೋ (ಅಂದಾಜು 14,597.69 ರೂ) ನಿವ್ವಳ ನಷ್ಟವನ್ನು ಅನುಭವಿಸಿದೆ, ಇದು ಹಿಂದಿನ ವರ್ಷ ಕಂಪನಿಯು ಅನುಭವಿಸಿದ್ದ 78 ಮಿಲಿಯನ್ ನಷ್ಟಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

ನಷ್ಟ ಅನುಭವಿಸಲು ಕಾರಣವೇನು?

ನಷ್ಟ ಅನುಭವಿಸಲು ಕಾರಣವೇನು?

ಸ್ಪಾಟಿಫೈ ತನ್ನ ಗ್ರಾಹಕರನ್ನ ಸೆಳೆಯಲು ವೈವಿಧ್ಯ ಬಗೆಯ ಪ್ರೀಮಿಯಂ ಸೇವೆಗಳನ್ನ ಉಚಿತವಾಗಿ ನೀಡುತ್ತಿದೆ. ಅಲ್ಲದೆ ವೆಚ್ಚದ ದೃಷ್ಟಿಯಿಂದ, ಪಾಡ್‌ಕ್ಯಾಸ್ಟ್ ಮತ್ತು ತಂತ್ರಜ್ಞಾನದ ಖರ್ಚಿನಲ್ಲಿ ನಮ್ಮ ಹೂಡಿಕೆಯನ್ನ ಹೆಚ್ಚು ಮಾಡಿದೆ. ಅಲ್ಲದೆ 2020 ರ ವರ್ಷಾಂತ್ಯದ ವೇಳೆಗೆ 328 ರಿಂದ 348 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದುವ ನಿರೀಕ್ಷೆಯಿದೆ. ಹೀಗಾಗಿ 150 ರಿಂದ 250 ಮಿಲಿಯನ್ ಯುರೋಗಳ ನಷ್ಟವನ್ನು ನಿರೀಕ್ಷಿಸಲಾಗಿದೆ. ಆದರೂ ಮುಂದಿನ ದಿನಗಳಲ್ಲಿ ನಷ್ಟವನ್ನು ಸರಿದೂಗಿಸಿ ಲಾಭಗಳಿಸುತ್ತೇವೆ ಅನ್ನೊದನ್ನ ಕಂಪೆನಿ ಹೇಳಿದೆ. ಸದ್ಯ ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದಲ್ಲಿ ಸ್ಪಾಟಿಫೈನಲ್ಲಿನ ಷೇರುಗಳು ನಾಲ್ಕು ಪ್ರತಿಶತದಷ್ಟು ಕುಸಿದಿದೆ. ಮುಂದಿನ ದಿನಗಳಲ್ಲಿ ಸ್ಪಾಟಿಫೈ ನಷ್ಟ ಅನುಭವಿಸುತ್ತಾ ಇಲ್ಲ ಲಾಭ ಗಳಿಸುತ್ತಾ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

English summary
Spotify also said it had seen exponential growth when it came to podcasts and the hours streamed had increased by around 200 percent year-on-year.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+