ಸ್ಪಾಟಿಫೈ ಅಪ್ಲಿಕೇಶನ್‌ನಿಂದ ಹೊಸದಾಗಿ ಭಾರತದ 12 ಭಾಷೆಗಳಿಗೆ ಬೆಂಬಲ!

|

ಪ್ರಸ್ತುತ ದಿನಗಳಲ್ಲಿ ಮ್ಯೂಸಿಕ್‌ ಕೇಳಲು ಅನೇಕ ಆನ್‌ಲೈನ್‌ ಆಪ್‌ಗಳು ಸಿಗುತ್ತವೆ. ಈ ಅಪ್ಲಿಕೇಶನ್‌ಗಳ ಮೂಲಕ ನೀವು ನಿಮ್ಮ ನೆಚ್ಚಿನ ಹಾಡುಗಳು, ಜನಪ್ರಿಯ ಹಾಡುಗಳನ್ನು ಯಾವಾಗ ಬೇಕಾದರೂ ಕೇಳಲು ಸಾಧ್ಯವಿದೆ. ಇದೇ ಕಾರಣಕ್ಕೆ ಮ್ಯೂಸಿಕ್‌ ಪ್ರಿಯರು ಕೂಡ ಮ್ಯೂಸಿಕ್‌ ಆಪ್‌ಗಳ ಕಡೆಗೆ ಒಲವನ್ನು ತೋರುತ್ತಿದ್ದಾರೆ. ಸದ್ಯ ಭಾರತೀಯ ಮ್ಯೂಸಿಕ್ ಮಾರುಕಟ್ಟೆಯಲ್ಲಿ 'ಸ್ಪಾಟಿಫೈ' ಮ್ಯೂಸಿಕ್ ಸಂಸ್ಥೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಬಳಕೆದಾರರ ನೆಚ್ಚಿನ ಮ್ಯೂಸಿಕ್‌ ಆಪ್‌ ಆಗಿ ಗುರುತಿಸಿಕೊಂಡಿದೆ. ಸ್ಪಾಟಿಫೈ ಸಂಸ್ಥೆಯು ಇದೀಗ ದೇಶಿಯ ಮ್ಯೂಸಿಕ್ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದೆ.

ಸ್ಪಾಟಿಫೈ

ಹೌದು, ಸ್ವೀಡಿಷ್‌ ಮೂಲದ ಸ್ಪಾಟಿಫೈ ಸಂಸ್ಥೆ ಇತ್ತೀಚಿಗಷ್ಟೇ 36 ಹೊಸ ಭಾಷೆಗಳನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿತ್ತು. ಇದೀಗ ಭಾರತದ 12 ಭಾರತೀಯ ಭಾಷೆಗಳನ್ನು ಒಳಗೊಂಡಿರುವ ಹೊಸ ಭಾಷೆಗಳಿಗೆ ಅಧಿಕೃತ ಬೆಂಬಲವನ್ನು ಪ್ರಾರಂಭಿಸಿದೆ. ಈ ಹೊಸ ಭಾಷೆಗಳು ಹೆಚ್ಚು ಭಾರತೀಯ ಬಳಕೆದಾರರಿಗೆ ಸ್ಪಾಟಿಫೈಗೆ ಪ್ರವೇಶವನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗಾದ್ರೆ ಸ್ಪಾಟಿಫೈ ಹೊಸದಾಗಿ ಯಾವೆಲ್ಲಾ ಭಾಷೆಗಳಿಗೆ ಬೆಂಬಲ ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕನ್ನಡ

ಸ್ಪಾಟಿಫೈ ಸಂಸ್ಥೆ ಹೊಸದಾಗಿ 12 ಭಾರತೀಯ ಭಾಷೆಗಳಿಗೆ ಬೆಂಬಲಿಸಲಿದೆ. ಈ ಮೂಲಕ ಭಾರತದ ಸ್ಥಳೀಯ ಭಾಷೆ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿದೆ. ಸದ್ಯ ಹೊಸದಾಗಿ ಸೇರಿಸಲಾದ 12 ಭಾರತೀಯ ಭಾಷೆಗಳಲ್ಲಿ ಹಿಂದಿ, ಗುಜರಾತಿ, ಭೋಜ್‌ಪುರಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಮತ್ತು ಬಂಗಾಳಿ ಸೇರಿವೆ. ಭಾರತದಲ್ಲಿನ ನಮ್ಮ ಬಳಕೆದಾರರಿಗೆ ಉತ್ತಮವಾದ ಆಡಿಯೊ ವಿಷಯವನ್ನು ನೀಡುವುದಕ್ಕೆ ನಾವು ಬದ್ಧರಾಗಿದ್ದೇವೆ.ಇದೇ ಕಾರಣಕ್ಕೆ ನಮ್ಮ ಬಳಕೆದಾರರು ಮಾತನಾಡುವ ಭಾಷೆಗಳಲ್ಲಿ ನಮ್ಮ ಸೇವೆಯನ್ನು ನೀಡಲು ನಾವು ಮುಂದಾಗಿದ್ದೇವೆ ಎಂದು ಸ್ಪಾಟಿಫೈ ಸಂಸ್ಥೆ ಹೇಳಿಕೊಂಡಿದೆ.

ಬೆಂಬಲದಲ್ಲಿ

ಭಾಷೆಗಳ ಬೆಂಬಲದಲ್ಲಿ ಹೊಸ ವಿಸ್ತರಣೆಯು ನಮ್ಮ ಬಳಕೆದಾರರಿಗೆ ಇನ್ನಷ್ಟು ಸ್ಥಳೀಯ ಅನುಭವವನ್ನು ಅನ್ಲಾಕ್ ಮಾಡುತ್ತದೆ. ಹೆಚ್ಚಿನ ಕೇಳುಗರಿಗೆ ತಮ್ಮ ಮಾತೃಭಾಷೆಯಲ್ಲಿ ಸ್ಪಾಟಿಫೈ ಮ್ಯೂಸಿಕ್‌ ಅನ್ನು ಅನುಭವಿಸಲು ಸಾಧ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಭಾರತದ ಸ್ಥಳೀಯ ಭಾಷೆಗಳನ್ನು ಬೆಂಬಲಿಸುವುದರಿಂದ, ಆ ಭಾಷೆಯ ಮ್ಯೂಸಿಕ್‌ ಅನ್ನು ಕೇಳುವುದಕ್ಕೆ ಅವಕಾಶ ದೊರೆಯಲಿದೆ. ಸದ್ಯ ವಿಶ್ವದಲ್ಲಿಯೇ ಹೆಚ್ಚಿನ ಜನಪ್ರಿಯ ಮ್ಯೂಸಿಕ್‌ ಆಪ್‌ ಆಗಿರುವ ಸ್ಪಾಟಿಫೈ ಮಾರುಕಟ್ಟೆಯಲ್ಲಿನ ಸ್ಫರ್ಧೆಯನ್ನು ಎದುರಸಿವುದಕ್ಕಾಗಿ ಬಳಕೆದಾರರಿಗೆ ಇನ್ನು ಹತ್ತಿರವಾಗುವ ಪ್ರಯತ್ನ ಮಾಡುತ್ತಿದೆ.

ಸ್ಪಾಟಿಫೈ

ಸದ್ಯ 12 ಹೊಸ ಭಾಷೆಗಳ ಸೇರ್ಪಡೆಯೊಂದಿಗೆ, ಸ್ಪಾಟಿಫೈ ಈಗ ಜಾಗತಿಕವಾಗಿ 62 ಭಾಷೆಗಳಲ್ಲಿ ಬಳಕೆದಾರರಿಗೆ ಲಭ್ಯವಿದೆ. ಇದು ಹಲವಾರು ವಿದೇಶಿ ಭಾಷೆಗಳನ್ನು ಒಳಗೊಂಡಿದೆ. ವಿದೇಶಿ ಭಾಷೆಗಳಿಗೂ ಅಪ್ಲಿಕೇಶನ್ ಬೆಂಬಲವನ್ನು ನೀಡುತ್ತಿದೆ. ರೊಮೇನಿಯನ್, ಸ್ವಹಿಲಿ, ಸ್ಲೊವೇನಿಯನ್, ಫಿಲಿಪಿನೋ, ಸರಳೀಕೃತ ಚೈನೀಸ್ ಮತ್ತು ಪೋರ್ಚುಗೀಸ್ ಬಳಕೆದಾರರು ಕೂಡ ಸ್ಪಾಟಿಫೈ ಅನ್ನು ಪ್ರವೇಶಿಸಬಹುದಾಗಿದೆ. ಅಷ್ಟೇ ಅಲ್ಲ ಸ್ಪಾಟಿಫೈ ಈ ಹಿಂದೆ ಆಫ್ರಿಕಾನ್ಸ್, ಅಂಹರಿಕ್, ಅಜೆರ್ಬೈಜಾನಿ, ಬಲ್ಗೇರಿಯನ್, ಕ್ರೊಯೇಷಿಯನ್, ಡ್ಯಾನಿಶ್, ಎಸ್ಟೋನಿಯನ್, ಐಸ್ಲ್ಯಾಂಡಿಕ್, ಲಾಟ್ವಿಯನ್, ಲಿಥುವೇನಿಯನ್, ನೇಪಾಳಿ, ಪರ್ಷಿಯನ್, ಪೂರ್ವ ಪಂಜಾಬಿ, ಪಶ್ಚಿಮ ಪಂಜಾಬಿ, ಸರ್ಬಿಯನ್, ಸ್ಲೋವಾಕ್, ಉಕ್ರೇನಿಯನ್ ಮತ್ತು ಜುಲು ಭಾಷೆಗಳಲ್ಲೂ ಕೂಡ ಲಭ್ಯವಿತ್ತು.

Most Read Articles
Best Mobiles in India

Read more about:
English summary
With the new languages, Spotify is now available in a total of 62 languages globally.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X