ಉದ್ಯೋಗಿ ಸತ್ತರೆ ಸಂಗಾತಿಗೆ ಸಂಬಳ ಕೊಡಲಿದೆ ಗೂಗಲ್!

Posted By: Varun
ಉದ್ಯೋಗಿ ಸತ್ತರೆ ಸಂಗಾತಿಗೆ ಸಂಬಳ ಕೊಡಲಿದೆ ಗೂಗಲ್!
ಗೂಗಲ್ ಮಾಡೋದೆಲ್ಲ ಡಿಫರೆಂಟ್ ಆಗಿಯೇ ಇರುತ್ತದೆ. ಕಂಪನಿ ಹೊರ ತರೋ ಫೀಚರುಗಳು, ಉತ್ಪನ್ನಗಳು, ಅಷ್ಟೇ ಏಕೆ ಗೂಗಲ್ ತನ್ನ ಉದ್ಯೋಗಿಗಳನ್ನು ನೋಡಿಕೊಳ್ಳೋ ರೀತಿಯೇ ಬೇರೆ ಕಂಪನಿಗಳಿಗಿಂತ ವಿಭಿನ್ನ ಹಾಗು ವಿಶೇಷವಾಗಿರುತ್ತದೆ.

ಸುಮಾರು ವರ್ಷಗಳಿಂದ "best place to ವರ್ಕ್" ಎಂಬ ಪ್ರಶಸ್ತಿಯನ್ನು ಪಡೆಯುತ್ತಿರುವ ಗೂಗಲ್, ಉದ್ಯೋಗಿಗಳು ತಮ್ಮ ಮನೆಯನ್ನೇ ಮರೆಯುವಂಥಾ ಸೌಲಭ್ಯವನ್ನು ಕೆಲಸದ ಜಾಗದಲ್ಲಿ ಒದಗಿಸುತ್ತದೆ. ಹಾಗಾಗಿ ಎಷ್ಟೋ ಜನ ಗೂಗಲ್ ನಲ್ಲಿ ಕೆಲಸ ಮಾಡುವ ಮಹತ್ತರ ಕನಸ್ಸನ್ನು ಕಟ್ಟುತ್ತಾರೆ.

ಈಗ ಗೂಗಲ್ ಮತ್ತೊಂದು ರೀತಿಯ ಪ್ಯಾಕೇಜ್ ಅನ್ನು ತನ್ನ ಉದ್ಯೋಗಿಗಳಿಗೆ ಪ್ರಕಟಿಸಿದ್ದು ಹಲವರ ಹುಬ್ಬೇರುವಂತೆ ಮಾಡಿದೆ. ಅದೇನೆಂದರೆ 2011 ನಂತರ ಕೆಲಸ ಪಡೆದ ಉದ್ಯೊಗಿ ಏನಾದರೂ ಸತ್ತರೆ ಅವರ ಸಂಗಾತಿಗೆ, ಸತ್ತ ಉದ್ಯೋಗಿ ಪಡೆಯುತ್ತಿದ್ದ ಅರ್ಧಸಂಬಳವನ್ನು 10 ವರ್ಷಗಳ ಕಾಲ ಕೊಡಲಿದೆ ಎಂದು ಘೋಷಿಸಿದೆ!

ಇದಷ್ಟೇ ಅಲ್ಲದೆ ಸತ್ತ ಉದ್ಯೋಗಿಯ ಮಕ್ಕಳಿಗೆ ಪ್ರತಿ ತಿಂಗಳು ಸಾವಿರ ಡಾಲರ್ ಕೂಡ ಕೊಡಲಿದೆಯಂತೆ. ಈ ಸೌಲಭ್ಯವನ್ನು ಗೂಗಲ್ ಇಂಡಿಯಾದ ಉದ್ಯೋಗಿಗಳಿಗೂ ಕೊಡುವ ಯೋಚನೆಯಲ್ಲಿದೆಯಂತೆ ಗೂಗಲ್.

ಅಂತೂ ಗೂಗಲ್ ಈ ರೀತಿ ಮಾಡುತ್ತಿರುವುದರಿಂದ ಬೇರೆ ಕಂಪನಿಗಳ ಉದ್ಯೋಗಿಗಳು ಅದೆಷ್ಟು ಹೊಟ್ಟೆ ಉರಿ ಪಟ್ಟುಕೊಳ್ಳಬಹುದು ಎಂಬುದನ್ನು ಅಂದಾಜು ಮಾಡಿಕೊಳ್ಳಿ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot