ಶ್ರೀರಾಮ ಸೇನೆ ವೆಬ್ಸೈಟ್ ಹ್ಯಾಕ್ ?

By Varun
|
ಶ್ರೀರಾಮ ಸೇನೆ ವೆಬ್ಸೈಟ್ ಹ್ಯಾಕ್ ?

ಹಿಂದೂ ಧರ್ಮ ರಕ್ಷಕ ಸಂಘಟನೆಯಾದ "ಶ್ರೀರಾಮಸೇನೆಯ" ವೆಬ್ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆಯೇ? ನೊ ಛಾನ್ಸ್.ಆದರೆ ಇದೆ ರೀತಿಯ ಹೆಸರಿನನಕಲಿ ವೆಬ್ಸೈಟ್ ಒಂದನ್ನು ಅಂತರ್ಜಾಲದಲ್ಲಿ ಕಿಡಿಗೇಡಿಗಳು ಸೃಷ್ಟಿಸಿ ಹ್ಯಾಕ್ ಮಾಡಿ ಸುದ್ದಿ ಮಾಡಿದ್ದಾರೆ.

ಶ್ರೀರಾಮಸೇನೆಯ ವೆಬ್ಸೈಟ್ ಅನ್ನು ನಾವು ಪರೀಕ್ಷಿಸಿದಾಗ ಅದು ಸರಿಯಾಗಿದ್ದು, ಪ್ರಮೋದ್ ಮುತಾಲಿಕ್ ಮುಖಂಡತ್ವದ ನೈಜ ಶ್ರೀರಾಮ ಸೇನೆ ವೆಬ್ಸೈಟ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ- (http://www.sriramasena.org/)

ಆದರೆ, ಇದೇ ಹೆಸರಿನ ನಕಲಿ ವೆಬ್ಸೈಟ್ (http://www.shreeramsena.com)ಅನ್ನು ಕುಚೇಷ್ಟೆ ಮಾಡಲು ಸೃಷ್ಟಿಸಿದ್ದು, ಈ ನಕಲಿ ವೆಬ್ಸೈಟ್ ಅನ್ನೇ ಹ್ಯಾಕ್ ಮಾಡಿ ಸುದ್ದಿ ಮಾಡಿದ್ದಾರೆ. ಅಜೆರ್ಬೈಜಾನ್ (Azerbaijan) ದೇಶದ Mexfi.org ಎಂಬ ಹ್ಯಾಕರುಗಳ ಗುಂಪೊಂದುನಕಲಿ ವೆಬ್ಸೈಟ್ಅನ್ನು ಹ್ಯಾಕ್ ಮಾಡಿದ್ದು, ವೆಬ್ಸೈಟ್ ಸಂಪೂರ್ಣ ಬಂದ್ ಆಗಿದೆ.

Esgerov Reshadet ಎಂಬುವವನ ಒಡೆತನದಲ್ಲಿರುವ Mexfi.org, C~V~D ಎಂಬ ವಿಚಿತ್ರ ಹೆಸರನ್ನು ಇಟ್ಟುಕೊಂಡಿರುವ ಈ ಹ್ಯಾಕರುಗಳ ತಂಡ ಕಳೆದ ಒಂದು ವರ್ಷದಿಂದ ಸಕ್ರಿಯವಾಗಿದ್ದು, ಅಮೇರಿಕಾ, ಫ್ರಾನ್ಸ್ ಹಾಗು ರಷಿಯಾ ದೇಶಗಳ ಮೇಲೆ ದ್ವೇಷ ಸಾಧಿಸುತ್ತಿರುವ ಇದು ಯಾಕೆ ಈ ವೆಬ್ಸೈಟ್ ಅನ್ನು ಹ್ಯಾಕ್ಮಾಡುತ್ತೆ ಅಂತ ಯೋಚಿಸಿದರೆ ಸಾಕು, ಇದು ಯಾರೋ ತರಲೆ ಮಾಡಲು ಈ ರೀತಿ ಮಾಡಿದ್ದಾರೆ ಎಂದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X