Home
ಸುದ್ದಿಜಾಲ

ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಕಿಟ್ ಬೆಲೆ ಎಷ್ಟು ಗೊತ್ತಾ?..ಈ ವರದಿ ನೋಡಿ

ಸ್ಯಾಟಲೈಟ್‌ಗಳ ಮೂಲಕ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಸ್ಟಾರ್‌ಲಿಂಕ್ ಸಂಸ್ಥೆ ಭಾರತದಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಇತ್ತೀಚಿಗಷ್ಟೇ ದೂರಸಂಪರ್ಕ ಇಲಾಖೆಯಿಂದ (DoT) ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ (GMPCS) ಪರವಾನಗಿಯನ್ನು ಪಡೆದ ನಂತರ, ಶೀಘ್ರವೇ ಸ್ಟಾರ್‌ಲಿಂಕ್ ಭಾರತದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ, ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಸಂವಹನ ಸೇವೆಗಳಿಗಾಗಿ ಅಗತ್ಯವಿರುವ ಸೆಟಪ್ ಕಿಟ್‌ನ ಬೆಲೆ 33,000 ರೂ. ಎಂದು ವರದಿಯಾಗಿದೆ. ಜೊತೆಗೆ ಅನಿಯಮಿತ ಡೇಟಾ ಯೋಜನೆಗಳಿಗೆ ಮಾಸಿಕ ಚಂದಾದಾರಿಕೆ ಶುಲ್ಕ 3,000 ರೂ.ನಿಂದ 4,000 ರೂ.ವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.!

ಹೌದು, ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿರುವ ಪ್ರಕಾರ, ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಬೆಲೆ ನೀತಿಯನ್ನು ರೂಪಿಸುವಾಗ ದೇಶದ ದೊಡ್ಡ ಮಾರುಕಟ್ಟೆ ಗಾತ್ರವನ್ನು ಪರಿಗಣಿಸಿಲ್ಲ. ಬದಲಾಗಿ, ಜಾಗತಿಕ ವೆಚ್ಚಗಳು ಮತ್ತು ಸೇವೆಗಳ ಲಭ್ಯತೆಯ ನಿರ್ಬಂಧಗಳನ್ನು ಅವಲಂಬಿಸಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶ ಮತ್ತು ಭೂತಾನ್‌ನಂತಹ ನೆರೆಯ ರಾಷ್ಟ್ರಗಳಲ್ಲಿನ ಬೆಲೆಗಳಿಗೆ ಅನುಗುಣವಾಗಿ ಭಾರತದಲ್ಲೂ ದರಗಳು ನಿಗದಿಯಾಗುವ ಸಾಧ್ಯತೆಯಿದೆ ಎಂದು ವರದಿಯು ಹೇಳಿದೆ. ಇದರಿಂದ ಭಾರತದಲ್ಲಿ ಈ ಸೇವೆ ಹೆಚ್ಚಿನ ಬೆಲೆಗೆ ಲಭ್ಯವಾಗಬಹುದು ಎಂಬುದನ್ನು ಸೂಚಿಸುತ್ತದೆ, ಏಕೆಂದರೆ ಹಿಂದೆ ತಿಂಗಳಿಗೆ 850 ರೂ. (ಸುಮಾರು $10) ದರದಲ್ಲಿ ಯೋಜನೆಗಳು ಲಭ್ಯವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈ ಹೊಸ ವರದಿಯು ಈ ಸುದ್ದಿಗೆ ಬ್ರೇಕ್ ಬಿದ್ದಿದೆ.

ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯಂತೆ, ಸ್ಟಾರ್‌ಲಿಂಕ್‌ನ ಸ್ಟ್ಯಾಂಡರ್ಡ್ ಕಿಟ್‌ನ ಬೆಲೆ ಸುಮಾರು 33,000 ರೂ. ಆಗಬಹುದು. ಈ ಕಿಟ್ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ಬಳಸಲು ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ಒಳಗೊಂಡಿದೆ. ಇದರಲ್ಲಿ ಸ್ಟಾರ್‌ಲಿಂಕ್ ಡಿಶ್, ಕಿಕ್‌ಸ್ಟ್ಯಾಂಡ್, ಜೆನೆರೇಶನ್ 3 ರೂಟರ್, ಸ್ಟಾರ್‌ಲಿಂಕ್ ಕೇಬಲ್, ಎಸಿ ಕೇಬಲ್ ಮತ್ತು ವಿದ್ಯುತ್ ಸರಬರಾಜು ಇವೆ. ಈ ಕಿಟ್ ಮುಖ್ಯವಾಗಿ ವಸತಿ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಮತ್ತು ಸ್ಟ್ರೀಮಿಂಗ್, ವೀಡಿಯೊ ಕರೆಗಳು ಮತ್ತು ಆನ್‌ಲೈನ್ ಗೇಮಿಂಗ್‌ನಂತಹ ದೈನಂದಿನ ಇಂಟರ್ನೆಟ್ ಬಳಕೆಗೆ ಸೂಕ್ತವಾಗಿದೆ ಎಂದು ತಿಳಿಸಲಾಗಿದೆ.

ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಕಿಟ್ ಬೆಲೆ ಎಷ್ಟು ಗೊತ್ತಾ?..ಈ ವರದಿ ನೋಡಿ

ಇಷ್ಟೇ ಅಲ್ಲದೆ, ಸ್ಟಾರ್‌ಲಿಂಕ್ ಒದಗಿಸುವ ಮಾಸಿಕ ಚಂದಾದಾರಿಕೆ ಶುಲ್ಕಗಳು ಅನಿಯಮಿತ ಡೇಟಾ ಯೋಜನೆಗಳಿಗೆ 3,000 ರೂ.ನಿಂದ 4,200 ರೂ.ವರೆಗೆ ಇರಬಹುದು. ಈ ದರಗಳು ಭಾರತೀಯ ಮಾರುಕಟ್ಟೆಗೆ ತುಲನಾತ್ಮಕವಾಗಿ ಹೆಚ್ಚಾಗಿವೆ. ಆದಾಗ್ಯೂ, ಸ್ಟಾರ್‌ಲಿಂಕ್ ಕಡಿಮೆ ಡೇಟಾ ಕ್ಯಾಪ್ ಹೊಂದಿರುವ ಯೋಜನೆಗಳನ್ನು ಕಡಿಮೆ ಬೆಲೆಗೆ ನೀಡುವ ಸಾಧ್ಯತೆಯಿದೆ, ಇದು ಹೆಚ್ಚು ಕೈಗೆಟುಕುವ ಆಯ್ಕೆಗಳನ್ನು ಬಯಸುವ ಬಳಕೆದಾರರಿಗೆ ಅನುಕೂಲಕರವಾಗಬಹುದು ಎಂದು ವರದಿಯು ಹೇಳಿದೆ.

ಮಾರ್ಚ್‌ನಲ್ಲಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋದೊಂದಿಗೆ ಮಾಡಿಕೊಂಡಿರುವ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ, ಗ್ರಾಹಕರು ಈ ಟೆಲಿಕಾಂ ಆಪರೇಟರ್‌ಗಳ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸ್ಟಾರ್‌ಲಿಂಕ್ ಹಾರ್ಡ್‌ವೇರ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ. ಈ ಪಾಲುದಾರಿಕೆಯು ಸ್ಟಾರ್‌ಲಿಂಕ್ ಸೇವೆಗಳನ್ನು ದೇಶದ ಮೂಲೆಮೂಲೆಗೆ ತಲುಪಿಸಲು ಸಹಾಯ ಮಾಡುತ್ತದೆ. ಏರ್‌ಟೆಲ್ ಮತ್ತು ಜಿಯೋ ಎರಡೂ ಸ್ಪೇಸ್‌ಎಕ್ಸ್ ಒಡೆತನದ ಸ್ಟಾರ್‌ಲಿಂಕ್‌ನ ಬೃಹತ್ ಕಡಿಮೆ-ಭೂಮಿಯ ಕಕ್ಷೆಯ ಉಪಗ್ರಹ ಜಾಲವನ್ನು ಬಳಸಿಕೊಂಡು ಸವಾಲಿನ ಪ್ರದೇಶಗಳಲ್ಲಿ ವೇಗದ ಮತ್ತು ಕೈಗೆಟುಕುವ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

ಪ್ರಸ್ತುತ, ಸ್ಟಾರ್‌ಲಿಂಕ್ ಸುಮಾರು 7,000 ಸಕ್ರಿಯ ಉಪಗ್ರಹಗಳ ಜಾಲವನ್ನು ಹೊಂದಿದ್ದು, ಇದು ವಿಶ್ವದ ಕೆಲವು ದೂರದ ಪ್ರದೇಶಗಳಿಗೆ ಕಡಿಮೆ-ಲೇಟೆನ್ಸಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿದೆ. ಭಾರತದಲ್ಲಿ ಈ ಸೇವೆಗಳು ಪ್ರಾರಂಭವಾದ ನಂತರ, ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಪ್ರವೇಶಕ್ಕೆ ದೊಡ್ಡ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು? ಸ್ಟಾರ್‌ಲಿಂಕ್ ಇಂಟರ್‌ನೆಟ್ ಭಾರತದಲ್ಲಿ ಯಶಸ್ವಿಯಾಗಲು ಸಾಧ್ಯವೇ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Take a Poll

Best Mobiles in India

English summary
According to Business Standard, Starlink's pricing strategy in India will focus on capacity constraints and global costs rather than the country's large market size.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+