Subscribe to Gizbot

13 ಅಂಕಿಗಳ ಮೊಬೈಲ್‌ ಸಂಖ್ಯೆ ವದಂತಿ ಹುಟ್ಟಿದ್ದೇಕೆ?.13 ಸಂಖ್ಯೆ ಸಿಮ್ ಉಪಯೋಗ ಏನು ಗೊತ್ತಾ?!

Written By:

ದೇಶದ ಎಲ್ಲಾ ಮೊಬೈಲ್ ಬಳಕೆದಾರರ ಮೊಬೈಲ್‌ ಸಂಖ್ಯೆಗಳು ಜುಲೈ 1ರಿಂದ 13 ಅಂಕೆಗಳಾಗಿ ಬದಲಾಗುತ್ತವೆ ಎಂಬ ವದಂತಿಗಳಿಗೆ ಈಗಾಗಲೇ ಬ್ರೇಕ್ ಬಿದ್ದಿದೆ.! ಈಗ ಬಳಸುತ್ತಿರುವ ಮೊಬೈಲ್‌ ಸಂಖ್ಯೆಗಳು ಹಾಗೇ ಉಳಿಯಲಿವೆ ಎಂದು ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಗಳಾದ ಭಾರ್ತಿ ಏರ್‌ಟೆಲ್‌, ರಿಲಯನ್ಸ್ ಜಿಯೋ ಸ್ಪಷ್ಟಪಡಿಸಿವೆ.!!

13 ಅಂಕಿಗಳ ಮೊಬೈಲ್‌ ಸಂಖ್ಯೆ ವದಂತಿ ಹುಟ್ಟಿದ್ದೇಕೆ?.13 ಸಂಖ್ಯೆ ಸಿಮ್ ಉಪಯೋಗ ಏನು?

ಕೆಲವು ಮಾಧ್ಯಮಗಳು ದೂರ ಸಂಪರ್ಕ ಇಲಾಖೆಯ (ಡಿಓಟಿ) ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಇಂತಹ ವರದಿ ಮಾಡಿದ್ದು, ಡಿಓಟಿ ಆದೇಶ ಕೇವಲ ಎಂ2ಎಂ (ಮೆಷಿನ್‌ ಟು ಮೆಷಿನ್‌) ಗಳಿಗೆ ಮಾತ್ರ 13 ನಂಬರ್ ನೀಡಲು ಸೀಮಿತವಾಗಿದೆ. ಹಾಗಾದರೆ, 13 ಅಂಕಿಗಳನ್ನು ಏಕೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಎಂ2ಎಂ ನಂಬರ್?

ಏನಿದು ಎಂ2ಎಂ ನಂಬರ್?

ವೈರ್‌ಲೆಸ್‌ ಮೂಲಕ ಎರಡು ಗ್ಯಾಜೆಟ್‌ಗಳನ್ನು ಕೆಲಸಕ್ಕಾಗಿ ಜೋಡಿಸುವ ತಂತ್ರಜ್ಞಾನಕ್ಕೆ ಎಂ2ಎಂ(mtm) ಎಂದು ಕರೆಯಲಾಗುತ್ತದೆ. ಸ್ಮಾರ್ಟ್‌ ವಿದ್ಯುತ್‌ ಮೀಟರ್‌, ವಾಹನ ಟ್ರ್ಯಾಕಿಂಗ್‌ ಮತ್ತು ಇಂಧನ ತಪಾಸಣಾ ವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆ ಸಾಧನಗಳಿಗೆ ಸಿಮ್ ಆಧಾರಿತ ಎಂ2ಎಂ ಸೇವೆಯನ್ನು ಟೆಲಿಕಾಂ ಕಂಪನಿಗಳು ನೀಡುತ್ತಿವೆ.!!

ಎಂ2ಎಂ ಸೇವೆಗೆ 13 ಸಂಖ್ಯೆಗಳೇಕೆ?

ಎಂ2ಎಂ ಸೇವೆಗೆ 13 ಸಂಖ್ಯೆಗಳೇಕೆ?

ಸ್ವೈಪಿಂಗ್ ಯಂತ್ರಗಳು, ಕಾರುಗಳು ಮತ್ತು ವಿದ್ಯುತ್‌ ಮೀಟರ್‌ಗಳಲ್ಲಿ ಬಳಸುವ ಸಿಮ್‌ಗಳಿಗೆ ನೀಡುವ ನಂಬರ್‌ಗಳನ್ನು ಸಾಮಾನ್ಯ ನಂಬರ್‌ಗಿಂತ ಭಿನ್ನವಾಗಿ ನೀಡಲು ದೂರಸಂಪರ್ಕ ಇಲಾಖೆ ಮುಂದಾಗಿತ್ತು. ಹಾಗಾಗಿ, ಎಂ2ಎಂ ಮೆಷಿನ್‌ಗಳಲ್ಲಿ 13 ಅಂಕಿಗಳ ಸಿಮ್ ನೀಡುವಂತೆ ಈ ತಿಂಗಳ ಆರಂಭದಲ್ಲಿ ದೂರಸಂಪರ್ಕ ಇಲಾಖೆ ಟೆಲಿಕಾಂ ನಿರ್ವಾಹಕರಿಗೆ ನಿರ್ದೇಶನ ನೀಡಿತ್ತು.!!

ಇಂಟರ್‌ನೆಟ್‌ ಆಫ್‌ ಥಿಂಗ್ಸ್!!

ಇಂಟರ್‌ನೆಟ್‌ ಆಫ್‌ ಥಿಂಗ್ಸ್!!

ಇಂಟರ್‌ನೆಟ್‌ ಆಫ್‌ ಥಿಂಗ್ಸ್ ವಿಶ್ವದಲ್ಲಿಯೇ ಅತಿ ಶೀಘ್ರವಾಗಿ ಬೆಳೆಯುವ ಉದ್ಯಮ ಎಂಬುದನ್ನು ಸರಕಾರ ಗುರುತಿಸಿದೆ. ಮನೆಯಲ್ಲಿನ ಫ್ರಿಡ್ಜ್, ಟಿವಿಯಿಂದ ಹಿಡಿದು ಟ್ರಾಫಿಕ್‌ ಸಿಗ್ನಲ್‌, ಕಾರು, ಬೈಕು ಎಲ್ಲಾ ವ್ಯವಸ್ಥೆಯ ನಿಯಂತ್ರಣದಂತಹ ಸೇವೆಗಳು ಈ ಜಾಲದ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ, 13 ಅಂಕೆಗಳ ಸಿಮ್ ಅನ್ನು ಅವುಗಳಿಗೆ ನೀಡಲಾಗುತ್ತಿದೆ.!!

ಭವಿಷ್ಯದ ಕಾರ್ಯಯೋಜನೆ!!

ಭವಿಷ್ಯದ ಕಾರ್ಯಯೋಜನೆ!!

ವೈರ್‌ಲೆಸ್‌ ಮೂಲಕ ಎರಡು ಗ್ಯಾಜೆಟ್‌ಗಳನ್ನು ಕೆಲಸಕ್ಕಾಗಿ ಜೋಡಿಸುವ ತಂತ್ರಜ್ಞಾನಕ್ಕೆ 13 ಅಂಕಿಗಳ ಸಿಮ್ ನೀಡುತ್ತಿರುವುದು ಭವಿಷ್ಯದ ಕಾರ್ಯಯೋಜನೆಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಬೇರೂರಿರುವ ತಂತ್ರಜ್ಞಾನ ಇನ್ನು ಕೆಲವೇ ವರ್ಷಗಳಲ್ಲಿ ಭಾರತದಲ್ಲಿಯೂ ನಿಧಾನವಾಗಿ ಬೇರೂರುತ್ತಿರುವುದು ಈ ಯೋಜನೆಯ ಪ್ರಮುಖ ವಿಷಯವಾಗಿದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಡಿಓಟಿ ನಿರ್ದೇಶನ ಏನಿತ್ತು.!!

ಡಿಓಟಿ ನಿರ್ದೇಶನ ಏನಿತ್ತು.!!

ಎಂ2ಎಂ ಸಿಮ್‌ಗಳಿಗೆ ನಿಗದಿಪಡಿಸಿದ ದಿನಾಂಕದಿಂದ 13 ಅಂಕಿಗಳ ಸಂಖ್ಯೆ ನೀಡಲು ಅನುಕೂಲವಾಗುವಂತೆ ತಾಂತ್ರಿಕ ಉನ್ನತೀಕರಣ ಮಾಡಿಕೊಳ್ಳಲು ಟೆಲಿಕಾಂ ಸಂಸ್ಥೆಗಳಿಗೆ ಡಿಓಟಿ ನಿರ್ದೇಶನ ನೀಡಿತ್ತು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಗ್ರಾಹಕರ ನಂಬರ್ 13 ಅಂಕೆಗೆ ಬದಲಾಗಲಿದೆ ಎಂಬ ಸುದ್ದಿ ವೈರೆಲ್ ಆಗಿತ್ತು.!!

ಓದಿರಿ:ಲ್ಯಾಪ್‌ಟಾಪ್ ಖರೀದಿಗೆ ಮುನ್ನ ತಿಳಿಯಲೇಬೇಕಾದ ಸಂಗತಿಗಳಿವು !!..ಯಾವುವು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Existing users' numbers will be ported to 13-digits starting from October 1, 2018. The deadline for completion of the same has been set for December 31, 2018.TO KNOW MORE VISIT to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot