ಚುನಾವಣೆ ಮಾಹಿತಿ ನೀಡುವ ಬೋಲ್ಸುಬೊಲ್‌ ಅಪ್ಲಿಕೇಶನ್‌ ಲಾಂಚ್‌!

|

ಭಾರತದಲ್ಲಿ ರಾಜಕೀಯ ಸುದ್ದಿ, ಚುನಾವಣೆ ಅಂದ್ರೆ ಸಾಕು ಎಲ್ಲರ ಕಣ್ಣು ಅರಳುತ್ತೆ. ಚುಣಾವಣೆಯ ಪಲಿತಾಂಶ ಅಮದರೆ ಸಾಕು ಎಲ್ಲರ ಕಿವಿ ನೆಟ್ಟಗಾಗುತ್ತೆ. ಗೆದ್ದಿದ್ದೂ ಯಾರು, ಸೋತಿದ್ದು ಯಾರೂ ಎಂದು ತಿಳಿದುಕೊಳ್ಳುವುದಕ್ಕಾಗಿ ಸುದ್ದಿ ಮಾಧ್ಯಮಗಳನ್ನು ನೋಡುತ್ತಾರೆ. ಅಷ್ಟೇ ಅಲ್ಲ ಕೆಲವರು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಚೆಕ್‌ ಮಾಡುತ್ತಿರುತ್ತಾರೆ. ಆದರೆ ಇನ್ಮುಂದೆ ಚುನಾವಣೆ ಮಾಹಿತಿ, ಮತದಾನದ ಅಂಕಿ ಅಂಶಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಹೊಸ ಆಪ್‌ ಲಾಂಚ್‌ ಆಗಿದೆ.

ಸ್ಟಾರ್ಟ್‌ಆಪ್

ಹೌದು, ಸ್ಟಾರ್ಟ್‌ಆಪ್‌ -ಡೆಮೋಕ್ರಟಿಕಾ ಬೋಲ್ಸುಬೊಲ್‌ ಎಂಬ ಅಪ್ಲಿಕೇಶನ್‌ ಅನ್ನು ಪ್ರಾರಂಭಿಸಿದೆ. ಇದು ಭಾರತದ ಎಲ್ಲಾ ಕ್ಷೇತ್ರಗಳ ಬಗ್ಗೆ ಆರ್ಥಿಕ ಮತ್ತು ರಾಜಕೀಯ ಮಾಹಿತಿಯನ್ನು ನೀಡಲಿದೆ. ಸದ್ಯ ಈ ಘೋಷಣೆ ಆಗಿರುವ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿಧಾನಸಭಾ ಚುನಾವಣೆ ಮಾಹಿತಿ, ಮುಂಬರುವ ಚುನಾವಣೆ ಮಾಹಿತಿ, ಮತದಾನದ ಅಂಕಿಅಂಶಗಳು ಮತ್ತು ದೇಶದ ಆರ್ಥಿಕತೆಯ ಮಾಹಿತಿಯನ್ನು ತಿಳಿಸಲಿದೆ. ಹಾಗಾದ್ರೆ ಈ ಅಪ್ಲಿಕೇಶನ್‌ ಮೂಲಕ ಯಾವೆಲ್ಲಾ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೋಲ್ಸುಬೊಲ್

ಸ್ಟಾರ್ಟ್ಅಪ್ - ಡೆಮೋಕ್ರಟಿಕಾ ಪರಿಚಯಿಸಿದ ಬೋಲ್ಸುಬೊಲ್ ಅಪ್ಲಿಕೇಶನ್ ಭಾರತದ ಎಲ್ಲಾ ಕ್ಷೇತ್ರಗಳ ಬಗ್ಗೆ ಆರ್ಥಿಕ ಮತ್ತು ರಾಜಕೀಯ ಮಾಹಿತಿಯನ್ನು ನೀಡಲಿದೆ. ಇದರಲ್ಲಿ ಸರಾಸರಿ 60 ವರ್ಷಗಳ ರಾಜಕೀಯ ಮಾಹಿತಿ ಕೂಡ ದೊರೆಯಲಿದೆ ಎಂದು ಹೇಳಲಾಗಿದೆ. ಅಲ್ಲದೆ ಮತದಾರರು ತಮ್ಮ ಫ್ರ್ಯಾಂಚೈಸ್ ಅನ್ನು ಬಳಸುವ ಮೊದಲು ಸತ್ಯ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. "ಚುನಾವಣಾ ಆಯೋಗದ ಪ್ರಯತ್ನಗಳನ್ನು ಹೊರತುಪಡಿಸಿ, ಮತದಾರರನ್ನು ಸಬಲೀಕರಣಗೊಳಿಸಲು ರಾಜಕೀಯ ಪಕ್ಷಗಳು ಹೆಚ್ಚಿನದನ್ನು ಮಾಡುವಂತೆ ತೋರುತ್ತಿಲ್ಲ. ಆದ್ದರಿಂದ, ಈ ಆಪ್‌ ಅನ್ನು ಲಾಂಚ್‌ ಮಾಡಲಾಗಿದೆ. ಇದು ಪ್ರಬಲ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಆಗಿರಲಿದೆ ಎಂದು ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾದ ರಿತೇಶ್ ವರ್ಮಾ ಹೇಳಿದ್ದಾರೆ.

ಸಾಮಾಜಿಕ

ಇನ್ನು ಚುನಾವಣೆ ಮಾಹಿತಿಗೆ ಸಂಬಂಧಿಸಿದ ಹೆಚ್ಚಿನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್‌ಗಳಾಗಿವೆ. ಇವು ಮತದಾರರಿಗೆ ಸತ್ಯ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವುದಿಲ್ಲ. ಆದರೆ ಬೋಲ್ಸುಬೊಲ್‌ ಅಪ್ಲಿಕೇಶನ್‌ ಸತ್ಯ ಆಧಾರಿತ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಲಿದೆ ಎನ್ನಲಾಗಿದೆ. ಜೊತೆಗೆ ಚುನಾವಣೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಜನರಿಗೆ ತಿಳಿಸುವುದಲ್ಲದೆ ಚುನಾವಣೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಿದೆ ಎಂದು ಸಂಸ್ಥೆಯ ನಿರ್ದೇಶಕ ಶೇಷಗಿರಿ ಆನೆಗೊಂಡಿ ಹೇಳಿದ್ದಾರೆ.

ಚುನಾವಣಾ

ಇದರಲ್ಲಿ ಬಳಕೆದಾರರು ಆಡಬಹುದಾದ ಚುನಾವಣಾ ಜ್ಞಾನ ನೀಡುವ ಗೇಮ್‌ಗಳಿವೆ. ಇನ್ನು ಮೊಬೈಲ್ ಅಪ್ಲಿಕೇಶನ್‌ನ ಕೆಲವು ಫೀಚರ್ಸ್‌ಗಳಿಗೆ ಬಳಕೆದಾರರು ಹಣ ಪಾವತಿಸಬೇಕಾಗುತ್ತದೆ. ಸದ್ಯ ಏಪ್ರಿಲ್ 6 ರಂದು ತಮಿಳುನಾಡು, ಕೇರಳ ಮತ್ತು ಪುದುಚೇರಿ ಚುನಾವಣೆ ನಡೆಯಲಿದೆ. ಹಾಗೆಯೇ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಮೂರು ಹಂತಗಳಲ್ಲಿ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದ ಮತದಾನ ಮಾರ್ಚ್ 27 ಮತ್ತು ಏಪ್ರಿಲ್ 29 ರ ನಡುವೆ ನಡೆಯಲಿದೆ. ಈ ಎಲ್ಲಾ ಚುನಾವಣೆಗಳ ಮಾಹಿತಿಯನ್ನು ನೀವು ಬೋಲ್ಸುಬೊಲ್‌ ಅಪ್ಲಿಕೇಶನ್‌ನಲ್ಲಿ ತಿಳಿದುಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Startup Demokratika launched the application BolSubol.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X