"ಎಲಿವೇಟ್ 2018': ರಾಜ್ಯ ಸರ್ಕಾರದ ಅನುದಾನಕ್ಕೆ 77 ಸ್ಟಾರ್ಟ್ಆಪ್‌ಗಳು ಆಯ್ಕೆ!
ಉದ್ಯಮಶೀಲತೆ, ಉದ್ಯೋಗಾವಕಾಶ ಹೆಚ್ಚಿಸಲು ಆದ್ಯತೆ ನೀಡುವ ಸಲುವಾಗಿ ರಾಜ್ಯ ಸರ್ಕಾರ ಆರಂಭಿಸಿರುವ "ಎಲಿವೇಟ್ 2018' ಕಾರ್ಯಕ್ರಮದಡಿ 77 ಕ್ರಿಯಾಶೀಲ ಸ್ಟಾರ್ಟ್‌ಅಪ್‌ಗಳು ಅನುದಾನಕ್ಕೆ ಆಯ್ಕೆಯಾಗಿವೆ. ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆ ಬೆಳವಣಿಗೆಗೆ ಸಹಕಾರಿ ಎನಿಸಿರುವ ನವೋದ್ಯಮಗಳಿಗೆ ಸರ್ಕಾರ ಉತ್ತೇಜನ ನೀಡಲು ಮುಂದಾಗಿದೆ.
ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ "ಎಲಿವೇಟ್- 2018'ರಡಿ ಪ್ರಾಥಮಿಕ ಹಂತದಲ್ಲಿ 500 ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 74 ಸ್ಟಾರ್ಟ್‌ಆಪ್ಗಳನ್ನು ಆಯ್ಕೆ ಸಮಿತಿ ಅಂತಿಮಗೊಳಿಸಿ ಉತ್ತಮ ಅಂಕ ಗಳಿಸಿದ 3 ಮೂರು ಸ್ಟಾರ್ಟ್‌ಅಪ್‌ಗಳು ಅನುದಾನಕ್ಕೆ ಪರಿಗಣಿಸಲಾಯಿತು.
ಸರ್ಕಾರದಿಂದ ಅನುದಾನಕ್ಕಾಗಿ ಸುಮಾರು 600ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಅರ್ಜಿ ಸಲ್ಲಿಸಿದ್ದವು. ಇವುಗಳಲ್ಲಿ ಮೊದಲು 250 ಸ್ಟಾರ್ಟ್‌ಅಪ್‌ಗಳನ್ನು ಅಂತಿಮ ಸುತ್ತಿಗೆ ಪರಿಗಣಿಸಲಾಗಿದ್ದು, ಇದರಲ್ಲಿ 246 ಸ್ಟಾರ್ಟ್‌ಅಪ್‌ಗಳ ಪರಿಕಲ್ಪನೆ, ಯೋಜನೆಗಳ ಪರಿಚಯ ಪಡೆಯಲಾಗಿದೆ. ಇನ್ನು ಆಯ್ಕೆ ಸಮಿತಿ ಶಿಫಾರಸು ಮಾಡಿದ ಸ್ಟಾರ್ಟ್‌ಆಪ್‌ಗಳನ್ನು ಅನುದಾನಕ್ಕೆ ಪರಿಗಣಿಸಲಾಗಿದೆ.

ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳಿಗೆ 50 ಲಕ್ಷ ರೂ. ವರೆಗೆ ಅನುದಾನ ನೀಡಲಾಗುವುದು ಎಂದು ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಹೇಳಿದ್ದು, ಸ್ಟಾರ್ಟ್‌ಅಪ್‌ಗಳು ಸಲ್ಲಿಸುವ ಯೋಜನಾ ವಿವರಕ್ಕೆ ಪೂರಕವಾಗಿ ಅನುದಾನ ಪ್ರಮಾಣ ನಿಗದಿಪಡಿಸಿ 2- 3 ಹಂತಗಳಲ್ಲಿ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು..
ರಾಜ್ಯ ಸರ್ಕಾರದ ಈ ಯೋಜನೆಯಲ್ಲಿ ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳಲ್ಲಿ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಸಿಂಹಪಾಲು ಪಡೆದಿದ್ದು, ಮೈಸೂರು, ಉಡುಪಿ, ಉತ್ತರ ಕನ್ನಡ, ಧಾರವಾಡದ ಸ್ಟಾರ್ಟ್‌ಅಪ್‌ಗಳು ಆಯ್ಕೆಯಾಗಿವೆ. ಹೈದರಾಬಾದ್ ಕರ್ನಾಟಕ ಭಾಗದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು 2 ಕೋಟಿ ರೂ. ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

ಜನವರಿಯಲ್ಲಿ ಮತ್ತೆ ಅನುದಾನಕ್ಕೆ ಸ್ಟಾರ್ಟ್‌ಆಪ್‌ಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ ಗೌರವ್ ಗುಪ್ತಾ ಅವರು, ಅಂತಿಮ ಸುತ್ತಿನಲ್ಲಿ ಅನುದಾನಕ್ಕೆ ಆಯ್ಕೆ ಮಾಡಲಾದ 77 ಸ್ಟಾರ್ಟ್‌ಅಪ್‌ಗಳಲ್ಲಿ ಶೇ.90ರಷ್ಟು ಸ್ಟಾರ್ಟ್‌ಅಪ್ ಗಳಲ್ಲಿ ಮಹಿಳೆಯರೇ ಸಿಇಒಗಳಾಗಿರುವುದು ವಿಶೇಷವಾಗಿತ್ತು ಎಂದು ಹೇಳಿ ಮಹಿಳಾ ಸಬಲೀಕರದ ಬಗ್ಗೆ ಕೂಡ ಮಾತನಾಡಿದರು.


Click it and Unblock the Notifications








