ಭೀಮ್ ಆಪ್‌ನಲ್ಲಿ ಜಿಎಸ್‌ಟಿ ಪಾವತಿಸಿದರೆ ಶೇ.20ರಷ್ಟು ಕ್ಯಾಶ್‌ಬ್ಯಾಕ್‌!!

|

ಭೀಮ್, ರುಪೇ ಕಾರ್ಡ್‌ ಮೂಲಕವೇ ಹಣ ಪಾವತಿಗೆ ಪ್ರೋತ್ಸಾಹದ ಜೊತೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆಗೆ ಮುಂದಾಗಿರುವ ಜಿಎಸ್‌ಟಿ ಮಂಡಳಿ, ಆನ್‌ಲೈನ್‌ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ. ಡಿಜಿಟಲ್‌ ಉತ್ತೇಜನಕ್ಕೆ ಮಹತ್ವದ ನಿರ್ಧಾರ ಕೈಗೊಂಡು ಶೇ.20ರಷ್ಟು ಕ್ಯಾಶ್‌ಬ್ಯಾಕ್‌ ನೀಡಲಿದೆ.

ಹೌದು, ಭೀಮ್ ಆಪ್‌, ರುಪೇ ಕಾರ್ಡ್‌ ಮತ್ತು ಯುಪಿಐ ಪಾವತಿ ವಿಧಾನದ ಮೂಲಕ ವಹಿವಾಟು ಮಾಡಿದಲ್ಲಿ ಶೇ.20ರಷ್ಟು ಕ್ಯಾಶ್‌ಬ್ಯಾಕ್‌ ನೀಡುವ ಕುರಿತಂತೆ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ 29ನೇ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಾಗಿ, ಇನ್ಮುಂದೆ ಆನ್‌ಲೈನ್‌ ಮೂಲಕ ಜಿಎಸ್‌ಟಿ ವಹಿವಾಟು ಮಾಡುವ ವರ್ತಕರಿಗೆ ಬಂಪರ್ ‌ಕೊಡುಗೆ ಸಿಗಲಿದೆ.

ಭೀಮ್ ಆಪ್‌ನಲ್ಲಿ ಜಿಎಸ್‌ಟಿ ಪಾವತಿಸಿದರೆ ಶೇ.20ರಷ್ಟು ಕ್ಯಾಶ್‌ಬ್ಯಾಕ್‌!!

ಭೀಮ್ ಆಪ್‌, ರುಪೇ ಕಾರ್ಡ್‌ ಮತ್ತು ಯುಪಿಐ ಪಾವತಿ ವಿಧಾನಗಳಲ್ಲಿ ಆನ್‌ಲೈನ್ ಪಾವತಿ ಮೂಲಕ ಜಿಎಸ್‌ಟಿ ಪಾವತಿಸಿದರೆ, ನೂತನ ಯೋಜನೆ ಅಡಿಯಲ್ಲಿ ಒಟ್ಟಾರೆ ಜಿಎಸ್‌ಟಿ ಪಾವತಿಯ ಶೇ.20 ರಷ್ಟು ಅಥವಾ ಗರಿಷ್ಠ 100 ರೂಪಾಯಿಗಳ ವರೆಗೆ ಕ್ಯಾಷ್‌ಬ್ಯಾಕ್‌ ಉತ್ತೇಜನ ಸಿಗಲಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಪಿಯೂಶ್ ಗೋಯಲ್ ಹೇಳಿದ್ದಾರೆ.

ಆನ್‌ಲೈನ್ ಪಾವತಿಗಳಿಗೆ ಶೇ.20ರಷ್ಟು ಕ್ಯಾಶ್‌ಬ್ಯಾಕ್‌ ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಮುಂದಾಗಿರುವ ಮಂಡಳಿ, ಯಾವ ರಾಜ್ಯಗಳು ಆಸಕ್ತಿ ವಹಿಸಿ ಮುಂದೆ ಬರುತ್ತವೆಯೋ, ಅವುಗಳಿಗೆ ನೀಡಲಾಗುತ್ತದೆ ಎಂದು ಹೇಳಿದೆ. ಯೋಜನೆಯ ಲಾಭ ಮತ್ತು ನಷ್ಟದ ಬಗ್ಗೆ ಪರಾಮರ್ಶಿಸಿ ನಂತರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

ಭೀಮ್ ಆಪ್‌ನಲ್ಲಿ ಜಿಎಸ್‌ಟಿ ಪಾವತಿಸಿದರೆ ಶೇ.20ರಷ್ಟು ಕ್ಯಾಶ್‌ಬ್ಯಾಕ್‌!!

ಹಣಕಾಸು ಇಲಾಖೆಯ ಪ್ರಧಾನ ಸಲಹೆಗಾರ ಸಂಜೀವ್ ಸನ್ಯಾಲ್ ಅವರು ಮುಂದಿನ ದಿನಗಳಲ್ಲಿ ಮೂರು ಹಂತದ ಜಿಎಸ್‌ಟಿ ಮಾತ್ರ ತರುವ ಬಗ್ಗೆ ತಿಳಿಸಿದ್ದಾರೆ. ಶೇ.5, ಶೇ.15 ಮತ್ತು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈಗಾಗಲೇ ಶೇ.5ರ ಹಂತವಿದ್ದು, ಮುಂದೆ ಶೇ.12 ಮತ್ತು ಶೇ.18 ವಿಲೀನಗೊಳಿಸಿ, ಶೇ.15ರ ಹಂತ ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Best Mobiles in India

English summary
States to offer GST cashbacks to consumers for cashless paymentsto know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X